ಉಚಿತವಾಗಿ ಉದ್ಯೋಗ ಪೋಸ್ಟ್ ಮಾಡುವ ವೈಖರಿಯನ್ನು ಕಂಪನಿಗಳು ಏಕೆ ಬಳಸಬೇಕು

ಉದ್ಯೋಗಗಳನ್ನು ಉಚಿತವಾಗಿ ಪೋಸ್ಟ್ ಮಾಡುವ ವೈಖರಿಯನ್ನು ಕಂಪನಿಗಳು ಏಕೆ ಬಳಸಬೇಕು

ಒಂದು ದೊಡ್ಡ ಸಂಸ್ಥೆ ನೌಕರರನ್ನು ನೇಮಿಸಿಕೊಳ್ಳುವಾಗ ಹಲವಾರು ಬಗೆಯ ಪರಿಷ್ಕರಣೆ ಮಾಡುತ್ತದೆ. ಆದರೆ, ಆ ಪರಿಷ್ಕರಣೆ ಪ್ರಾರಂಭಿಸುವ ಮೊದಲು ಉದ್ಯೋಗಾಕಾಂಕ್ಷಿಗಳಿಗೆ  ಸಂಸ್ಥೆಯಲ್ಲಿ ಲಭ್ಯವಿರುವ ಉದ್ಯೋಗ ಅವಕಾಶಗಳ ಬಗ್ಗೆ ತಿಳಿಸಬೇಕು. ಅದನ್ನು ಸಂಸ್ಥೆಗಳು ಹೇಗೆ ಮಾಡಬಹುದು? ಅದರ ಬಗ್ಗೆ ಅಗತ್ಯಾವಿರುವ ಎಲ್ಲಾ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

ಕಂಪನಿಗಳು ನೌಕರರನ್ನು ನೇಮಿಸಿಕೊಳ್ಳಲು,  ತಮ್ಮಲ್ಲಿರುವ ಅವಕಾಶಗಳನ್ನು ಜಾಬ್ ಪೋಸ್ಟಿಂಗ್ ಫೀಚರ್ ಅನ್ನು ಬಳಿಸುತ್ತವೆ. ಅಂದರೆ ಸಂಸ್ಥೆಯ ಉದ್ಯೋಗಾವಕಾಶಗಳನ್ನು ಜಾಹೀರಾತುಗಳ ಮೂಲಕ ವೃತ್ತಪತ್ರಿಕೆ, ಜಾಹೀರಾತು ಫಲಕಗಳು, ಜಾಬ್ ಪೋರ್ಟಲ್ ಗಳು, ಲಿಂಕ್ಡ್‌ಇನ್, ಇಂಡೀಡ್‌, ಮಾನ್ಸ್ಟರ್ ನಂತಹ ಹಲವಾರು ಮಾರ್ಗಗಳಲ್ಲಿ ಪ್ರಕಟಿಸಲಾಗುತ್ತದೆ. ನೀವು ವಿವಿಧ ಮಾರ್ಗಗಳಲ್ಲಿ  ಮತ್ತು ವಿವಿಧ ವೆಬ್ಸೈಟ್ ಗಳಲ್ಲಿ ನಿಮ್ಮ ಸಂಸ್ಥೆಯಲ್ಲಿ ಲಭ್ಯವಿರುವ ಉದ್ಯೋಗಗಳ ಬಗ್ಗೆ ಪ್ರಕಟಿಸುವುದರಿಂದ ಸಂಸ್ಥೆಗಳಿಗೆ ಸಲ್ಲುವ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತದೆ. ಮತ್ತು ಅದರಿಂದಾಗಿ, ದೊರಕುವ ನೌಕರರು ಹೆಚ್ಚಿನ ಪ್ರತಿಭಾವಂತರು ಮತ್ತು ಕೌಶಲ್ಯವಂತರಾಗುವ ಸಾಧ್ಯತೆಗಳು ಹೆಚ್ಚು. 

ಸಂಸ್ಥೆಗಳು ಉದ್ಯೋಗದ ಕುರಿತಾಗಿ ಜಾಹಿರಾತುಗಳನ್ನು ನೀಡುವ ಮೂಲಕ ಅಭ್ಯರ್ಥಿಗಳು ಸಂಸ್ಥೆಯಿಂದ ಏನನ್ನು ಪಡೆಯಬಹುದು ಮತ್ತು ಉದ್ಯೋಗದ ಕಾರ್ಯ ಜವಾಬ್ದಾರಿಗಳು ಏನು ಎನ್ನುವುದನ್ನು ತಿಳಿದುಕೊಳ್ಳಬಹುದು. ಜಾಹೀರಾತುಗಳಲ್ಲಿ ಸಂಸ್ಥೆಯವರು ಉದ್ಯೋಗಕ್ಕೆ  ಕೌಶಲ್ಯಗಳು ಮತ್ತು ಅನುಭವದ ಬಗ್ಗೆ ಸಹ ತಿಳಿಸಬಹುದು. ಇದರಿಂದಾಗಿ ಅನಗತ್ಯ ರೆಸ್ಯುಮೆ ಗಳು, ಪರಿಷ್ಕರಣಾ ಪ್ರಕ್ರಿಯೆಗೆ ಬರುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಅದರೊಂದಿಗೆ, ಸೂಕ್ತವಲ್ಲದ ಪ್ರೊಫೈಲ್ ಗಳನ್ನು ಪರಿಷ್ಕರಣಾ ಪ್ರಕ್ರಿಯೆಯಿಂದ ದೂರವಿಡಲು ಸಹಾಯವಾಗುತ್ತದೆ. ಇಂತಹವರನ್ನು ಸಂದರ್ಶನಕ್ಕೆ ಅವಶ್ಯಕತೆ ಇರುವುದಿಲ್ಲ. ಈ ರೀತಿಯ ಜಾಬ್ ಪೋಸ್ಟ್ ಗಳಿಂದ ಮುಂದಿನ ಪರಿಷ್ಕರಣಾ ಪ್ರಕ್ರಿಯೆಗೆ ಉತ್ತೀರ್ಣರಾಗುವವರು ಪ್ರತಿಭಾವಂತರು, ಮತ್ತು ಉದ್ಯೋಗಕ್ಕೆ ಸೂಕ್ತವಾಗುವ ಅರ್ಹತೆ ಹೊಂದಿರುವವರು ಎಂದು ಖಚಿತಗೊಳಿಸಿಕೊಳ್ಳಬಹುದು. 

ಫ್ರೀಲ್ಯಾನ್ಸಿನ್ಗ್ ಉದ್ಯೋಗಗಳನ್ನು ಜಾಹೀರಾತು ಮಾಡಲು, ಉಚಿತ ಉದ್ಯೋಗ ನೇಮಕಾತಿ ಸೇರಿದಂತೆ ವಿವಿಧ ಉದ್ಯೋಗ ನೇಮಕಾತಿ ವಿಧಾನಗಳನ್ನು ಬಳಸಬಹುದು. ಯಾವುದೇ  ಪೋರ್ಟಲ್ ಗಳಲ್ಲಿ ಅಥವಾ ವೆಬ್ಸೈಟ್ ಗಳಲ್ಲಿ ಪ್ರಕಟಿಸಿರುವ ಉದ್ಯೋಗ ಜಾಹೀರಾತು, ಉದ್ಯೋಗದ ಬಗ್ಗೆ ಅಗತ್ಯವಿರುವ ವಿವರಗಳನ್ನು ಒದಗಿಸುತ್ತದೆ. ಅದರೊಂದಿಗೆ  ಕಂಪನಿಯ ಸ್ಥಾನಮಾನ, ಲಭ್ಯವಿರುವ ಉದ್ಯೋಗಾವಕಾಶಗಳು, ಉದ್ಯೋಗಗಳ ಶೀರ್ಷಿಕೆ, ಉದ್ಯೋಗ ಸ್ಥಾನಕ್ಕೆ ಸಂಬಂಧಿಸಿದ ಜವಾಬ್ದಾರಿಗಳು ಮತ್ತು ಈ ಉದ್ಯೋಗವನ್ನು ಪಡೆಯಲು ಅಭ್ಯರ್ಹ್ತಿಯಲ್ಲಿ ಇರಬೇಕಾದ ಅರ್ಹತೆಗಳು, ಇತ್ಯಾದಿ ವಿಷಯಗಳನ್ನು ಜಾಹಿರಾತಿನಲ್ಲಿ ನೀಡಲಾಗಿರುತ್ತದೆ. 

ಅಗತ್ಯವಿರುವ, ಅರ್ಹ ಅಭ್ಯರ್ಥಿಗಳನ್ನು ಪಡೆಯುವುದು ಕಷ್ಟಸಾಧ್ಯವಾದ ಕೆಲಸ. ಅದರಲ್ಲೂ ಸಂಸ್ಥೆಯ ಮುಖ್ಯವಾದ ಉದ್ಯೋಗ ಸ್ಥಾನಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಪಡೆಯುವುದು ಪ್ರಯಾಸವಾದ ಕೆಲಸವೆಂದರೆ ತಪ್ಪಾಗಲಾರದು. ಆದರೆ, ಸಂಸ್ಥೆಗಳು ತಮ್ಮ ನಿರಂತರ ಪ್ರಯತ್ನವನ್ನು ಮಾಡುತ್ತಾರೆ.  ಅರ್ಹರಾದ ಮತ್ತು ಪ್ರತಿಭಾವಂತರಾದ ಉದ್ಯೋಗಾಕಾಂಕ್ಷಿಗಳನ್ನು ತಮ್ಮ ಸಂಸ್ಥೆಯಲ್ಲಿರುವ ಉದ್ಯೋಗಾವಕಾಶಗಳ ಕಡೆಗೆ ಸೆಳೆಯಲು, ವಿವಿಧ ಸಂಪರ್ಕ ಮಾರ್ಗದ ಮೂಲಕ ಪ್ರಕಟಿಸಬೇಕು. ಆದರೆ, ಈ ಸಂಪರ್ಕ ಮಾರ್ಗಗಳು ಅಗ್ಗವಾಗಿದ್ದರೆ ಸಂಸ್ಥೆಗಳಿಗೆ ತುಂಬಾ ಉಪಯೋಗಕಾರಿ. ಹಾಗಾಗಿಯೇ, ಇತ್ತೀಚಿನ  ದಿನಗಳಲ್ಲಿ ಅಗ್ಗವಾದ ಅಥವಾ ಸಂಪೂರ್ಣವಾಗಿ ಉಚಿತವಾದ ಉದ್ಯೋಗ ಅವಕಾಶಗಳನ್ನು ಪ್ರಕಟಿಸುವ ಪ್ಲಾಟ್ ಫಾರ್ಮ್ ಅಗತ್ಯವಿದೆ. 

ಇಂತಹ ಉಚಿತ ಉದ್ಯೋಗ ಜಾಹೀರಾತು ಪ್ರಕಟಿಸುವ ಹಲವಾರು ಜಾಲತಾಣಗಳು ಮತ್ತು ಇತರ ಮಾಧ್ಯಮಗಳಿವೆ. ಇವುಗಳಲ್ಲಿ ನೇಮಕಾತಿಗೆ ಯಾವುದೇ ಬಗೆಯ ಶುಲ್ಕ ನೀಡುವ ಅಗತ್ಯತೆ ಇಲ್ಲ. ಇಂತಹ ಸೌಲಭ್ಯಕ್ಕೆ ಉದಾಹರಣೆ ಎಂದರೆ ಹಲವಾರು ಸ್ಥಳೀಯ ಮತ್ತು ರಾಷ್ಟ್ರೀಯ ಪತ್ರಿಕೆಗಳು. ಹಲವಾರು  ಜಾಲತಾಣಗಳು ಸಹ ಉದ್ಯೋಗಗಳನ್ನು ಪ್ರಕಟಿಸಲು ಅಥವಾ ರವಾನೆ ಮಾಡಲು, ಯಾವುದೇ ಸೇವಾ ಶುಲ್ಕಗಳನ್ನು ಸ್ವೀಕರಿಸದೇ, ಅಭ್ಯರ್ಥಿಗಳು ತಮ್ಮ ಅರ್ಹತೆಗೆ ತಕ್ಕ ಸೂಕ್ತ ಉದ್ಯೋಗಗಳನ್ನು ಹುಡುಕಿಕೊಳ್ಳಲು ಮತ್ತು ಸಂಸ್ಥೆಗಳು ತಮ್ಮ ಅಗತ್ಯತೆಗೆ ತಕ್ಕ ಸೂಕ್ತ ಉದ್ಯೋಗಾಕಾಂಕ್ಷಿಗಳನ್ನು ಹುಡುಕಿಕೊಳ್ಳಲು ಸಹಾಯ ಮಾಡುತ್ತವೆ.

ವೆಬ್ಸೈಟ್ ಅಥವಾ ಬೇರೆ ಬಗೆಯ ಸುದ್ದಿ ಮಾಧ್ಯಮಗಳಲ್ಲಿ ಉಚಿತ ಉದ್ಯೋಗ ಜಾಹೀರಾತು ಪ್ರಕಟಿಸುವ ಅವಕಾಶ ನೀಡುವುದರಿಂದ ಪ್ರಮುಖ ಪ್ರಯೋಜನವೆಂದರೆ ವೆಬ್ಸೈಟ್ ಗೆ ಟ್ರಾಫಿಕ್ ಹೆಚ್ಚಿಸುವುದು ಅಥವಾ ಆ ನಿರ್ಧಿಷ್ಟ ಪತ್ರಿಕೆಯನ್ನು ಓದುವವರ ಸಂಖ್ಯೆ ಹೆಚ್ಚಿಸುವುದು. ಈ ರೀತಿ ಟ್ರಾಫಿಕ್ ಹೆಚ್ಚುವುದರಿಂದ, ವಿವಿಧ ಕ್ಷೇತ್ರದಲ್ಲಿರುವ ಸಂಸ್ಥೆಗಳಿಗೆ ಇಲ್ಲಿ ಉದ್ಯೋಗದ ಜಾಹೀರಾತು ನೀಡುವುದು ಉಪಯೋಗಕಾರಿ ಎನ್ನಿಸುವುದು ಸಾಮಾನ್ಯ

ಉದ್ಯೋಗ ಮೇಳಗಳು, ಉದ್ಯೋಗ ಅವಕಾಶಗಳನ್ನು ಶೋಧಿಸುವ ಸಾಫ್ಟ್ವೇರ್ ಗಳು ಮತ್ತು ಸಾಮಾಜಿಕ ಮಾಧ್ಯಮ ತಾಣಗಳು  ಲಭ್ಯವಿರುವ ಉದ್ಯೋಗಾವಕಾಶಗಳನ್ನು ಪ್ರಕಟಿಸುತ್ತದೆ. ಇದರಿಂದಾಗಿ ಲಕ್ಷಗಟ್ಟಲೇ ಸಂಭಾವ್ಯ ಅಭ್ಯರ್ಥಿಗಳಿಗೆ, ಸಂಸ್ಥೆಗಳಲ್ಲಿ ಲಭ್ಯವಿರುವ ಉದ್ಯೋಗ ಅವಕಾಶಗಳನ್ನು ತಿಳಿಸುವುದು ಅತ್ಯಂತ ಸುಲಭವಾಗಿದೆ. ಇದರಿಂದಾಗಿ ನಿಮ್ಮ ಸಂಸ್ಥೆ ಉದ್ಯೋಗ ಅವಕಾಶಗಳ ಜಾಹಿರಾತಿಗೆ ಖರ್ಚು ಮಾಡಲು ಮೀಸಲಿಟ್ಟಿರುವ ಹಣವನ್ನು ಉಳಿತಾಯ ಮಾಡಿಕೊಳ್ಳಬಹುದು. 

ಉದ್ಯೋಗ ಅವಕಾಶಗಳನ್ನು ಪ್ರಕಟಿಸುವ ವೆಬ್ಸೈಟ್ ಗಳು ಪ್ರಾಯಶಃ ಸಡಿಲವಾಗಿ ರೂಪಿಸಲಾದ ಉಚಿತ ಉದ್ಯೋಗ ಪಠ್ಯಕ್ರಮವಿದ್ದಂತೆ. ಸಂಸ್ಥೆಗಳು ಅಥವಾ ಉದ್ಯೋಗದಾತರು ಅನಿಯಮಿತ ಮತ್ತುಅಸಂಖ್ಯಾತ ಖಾಲಿ ಹುದ್ದೆಗಳ ಕುರಿತಾಗಿ ಈ ವೆಬ್ಸೈಟ್ ಗಳಲ್ಲಿ ಪ್ರಕಟಿಸಬಹುದು. ಇಂತಹ ವೆಬ್ಸೈಟ್ ಗಳಲ್ಲಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಸಕ್ರಿಯರಾಗಿರುತ್ತಾರೆ. ಇದರಿಂದಾಗಿ ಉದ್ಯೋಗದಾತರು ಸಂಭಾವ್ಯ ಅಭ್ಯರ್ಥಿಗಳ ಅರ್ಜಿಯನ್ನು ಉಚಿತವಾಗಿ ವೀಕ್ಷಿಸಬಹುದು.ಈ ಪ್ರಕ್ರಿಯೆಯೆಯಿಂದ ಉತ್ತಮ ಅಭ್ಯರ್ಥಿಗಳನ್ನು ಶೋಧಿಸಿ, ಅವರನ್ನು ಸಂದರ್ಶನಕ್ಕೆ ಕರೆಯಬಹುದು. 

ಆದರೆ ಸಂಸ್ಥೆಗಳು ಅಥವಾ ಕಂಪನಿಗಳು ಉಚಿತ ಉದ್ಯೋಗ ಪೋಸ್ಟ್ ಫೀಚರ್ ಗಳನ್ನು ಏಕೆ ಬಳಸಬೇಕು? ಅದಕ್ಕೆ ಪ್ರಮುಖ 5 ಕಾರಣಗಳನ್ನು ಕೆಳಗೆ ನೀಡಲಾಗಿದೆ:

1. ಹೆಚ್ಚಿನ ಪ್ರೇಕ್ಷಕರನ್ನು ಅಥವಾ ಸಂಭಾವ್ಯ ನೌಕರರಿಗೆ ತಿಳಿಸಲು

ಉದ್ಯೋಗ ಜಾಹಿರಾತುಗಳನ್ನು ಸಾರ್ವಜನಿಕರಿಗೆ ಅಥವಾ ಕಂಪನಿಯ ನೌಕರರಲ್ಲದ ಆದರೆ ಉದ್ಯೋಗದ ಹುಡುಕಾಟದಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ತಿಳಿಸಲು ಉಪಯೋಗಿಸಬಹುದು. ಸಾಮಾನ್ಯವಾಗಿ ಉದ್ಯೋಗದ ಜಾಹಿರಾತುಗಳನ್ನು ಆಯ್ದ ವಿಭಾಗಕ್ಕೆ ತಿಳಿಸಲು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಉದ್ಯೋಗ ಜಾಹಿರಾತುಗಳ ಸಂಪೂರ್ಣ ಪ್ರಯೋಜನ ಪಡೆಯಲು ಮತ್ತು ಅರ್ಹರಾದ ಅರ್ಜಿಗಳನ್ನು ಸ್ವೀಕರಿಸಲು, ನಿರ್ದಿಷ್ಟ ಕೈಗಾರಿಕೆ ಅಥವಾ ಉದ್ಯೋಗದ ಸ್ಥಳಕ್ಕೆ ಅನುಸಾರ ಅಲ್ಲಿನ ವಿಶೇಷ ಜಾಬ್ ಬೋರ್ಡ್ಗಳಲ್ಲಿ ಪೋಸ್ಟ್ ಮಾಡಿ. ಸಂಸ್ಥೆಯಲ್ಲಿ ವೃತ್ತಿ ನಿರ್ವಹಿಸುತ್ತಿರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸಲು ಅಥವಾ ಸಂಸ್ಥೆಯಲ್ಲಿ ಲಭ್ಯವಿರದ ಅನುಭವಿ ಉದ್ಯೋಗಿಗಳನ್ನು ಪಡೆಯಲು ಅಥವಾ ಪರಿಣಿತರನ್ನು ಮಜೂರಿ ಮಾಡಲು, ಸಂಸ್ಥೆಗಳು ಉದ್ಯೋಗ ಜಾಹಿರಾತುಗಳನ್ನು ಪ್ರಕಟಿಸುತ್ತವೆ. ಇಂದಿನ ಸಾಮಾಜಿಕ ಮತ್ತು ಮುದ್ರಣ ಮಾಧ್ಯಮಗಳ ವೈವಿಧ್ಯತೆಯ ಬಳಕೆಯಿಂದ, ಉದ್ಯೋಗ ಜಾಹೀರಾತುಗಳು ಹೆಚ್ಚಿನ ಪ್ರೇಕ್ಷಕರಿಗೆ ತಲುಪುತ್ತವೆ.

2. ಅರ್ಹ ಉದ್ಯೋಗಾಕಾಂಕ್ಷಿಗಳನ್ನು ಗುರುತಿಸಿ, ಆಕರ್ಷಿಸಲು ಸಹಾಯ ಮಾಡುತ್ತದೆ

ಉತ್ತಮ ಉದ್ಯೋಗ ಜಾಹಿರಾತು, ವಿವರಣೆಯಲ್ಲಿ ತಕ್ಕಮಟ್ಟಿಗೆ ಮಾರ್ಕೆಟಿಂಗ್, ಪಾತ್ರದ ವಾಸ್ತವತೆ, ಅಗತ್ಯ ಕೌಶಲ್ಯಗಳ ಮತ್ತು ಸಾಮರ್ಥ್ಯಗಳ ವಿವರ ಮತ್ತು ಸಂಸ್ಥೆಯ ಸಂಸ್ಕೃತಿಯ ಬಗೆಗಿನ ವಿವರಗಳನ್ನು ಹೊಂದಿರುತ್ತದೆ. ಈ ಎಲ್ಲಾ ವಿಷಯಗಳು  ಒಂದು ಉದ್ಯೋಗ ಅವಕಾಶವನ್ನು ಉದ್ಯೋಗಾಕಾಂಕ್ಷಿಗಳಿಗೆ ತಿಳಿಸುವಾಗ ಮುಖ್ಯ ಪಾತ್ರ ನಿರ್ವಹಿಸುತ್ತವೆ. ಯಾವುದೇ ಉದ್ಯೋಗ ಜಾಹಿರಾತುಗಳು ಮಹಿಳೆಯರು, ಉದ್ಯೋಗಾಕಾಂಕ್ಷಿಗಳ ಬಣ್ಣ, ವಿಭಿನ್ನ ಸಾಮರ್ಥ್ಯವುಳ್ಳವರು ಅಥವಾ ಸಲಿಂಗಕಾಮಿಗಳು ಎಂದು ಅವರನ್ನು  ದೂರವಿಡದೇ ಇರುವ ಕಾರಣ ಅರ್ಹವಾದ ಅರ್ಜಿಗಳನ್ನು ಪ್ರತಿ ಜಾಹಿರಾತು ಆಕರ್ಷಿಸುತ್ತದೆ. ಇಂದಿನ ಬೆಳೆಯುತ್ತಿರುವ ಜಗತ್ತಿನಂತೆಯೇ, ಇಲ್ಲಿರುವ ಜಾಹಿರಾತುಗಳು ಸಹ ಸುಂದರವಾಗಿ ಪ್ರಕಟವಾಗುತ್ತಿವೆ. ಇದು ಎಲ್ಲಾ ಬಗೆಯ ಜನರಿಗೂ ತಮ್ಮನ್ನು ತಾವು ಅಭಿವೃದ್ಧಿಪಡಿಸಲು ಮತ್ತು ಅವರ ಕನಸಿನ ಸ್ಥಳಗಳು / ಕಂಪನಿಗಳನ್ನು ತಲುಪಲು ಅನುವು ಮಾಡಿಕೊಡುತ್ತದೆ.

3. ಸಂವಹನದ ಉತ್ತಮ ಮಾರ್ಗ

ಉದ್ಯೋಗಾಕಾಂಕ್ಷಿಗಳನ್ನು ಸಂದರ್ಶನಕ್ಕೆ ಸ್ವಾಗತಿಸುವ ಮುನ್ನ ಅವರೊಂದಿಗೆ ಸಂವಹನ ನಡೆಸಲು, ಉದ್ಯೋಗ ಜಾಹಿರಾತುಗಳು ಉತ್ತಮ ಮಾರ್ಗವಾಗಿದೆ. ಉದಾಹರೆಣೆಗೆ ಉದ್ಯೋಗದಾತರು ತಮ್ಮ ಸಂಸ್ಥೆಯಲ್ಲಿ ಸಂದರ್ಶನಕ್ಕೆ ಸ್ವಾಗತಿಸುವ ಮುನ್ನ, ಅಭ್ಯರ್ಥಿಗಳನ್ನು ಪರೀಕ್ಷಿಸಲು ಯಾವುದಾದರೂ ಪ್ರಾಜೆಕ್ಟ್ ಪೂರ್ಣಗೊಳಿಸಲು ಅಥವಾ ಯಾವುದಾದರೂ ಪ್ರಪೋಸಲ್ ನೀಡಲು ಕೇಳಬಹುದು. ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅವರಿನ್ನು ಸಂದರ್ಶನಕ್ಕೆ ಕರೆಯಬಹುದು. ಇದು ನೇಮಕಾತಿ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಅವ್ಯವಸ್ಥೆಯನ್ನು ತಡೆಗಟ್ಟುತ್ತದೆ. ನೇಮಕಾತಿಯ ಮೂಲಭೂತ ಅಗತ್ಯಗಳನ್ನು ಲಿಖಿತ ಜಾಹೀರಾತುಗಳ ಮೂಲಕ ಹೆಚ್ಚು ಸಂಕೀರ್ಣತೆಯಿಲ್ಲದೆ ಸುಲಭವಾಗಿ ಸಂವಹನ ಮಾಡಬಹುದು .

4. ಇದು ಹೊಸತಾದ ಮಾರ್ಗ

ನಾವೀನ್ಯತೆಯು ಯಶಸ್ಸಿನ ಕೀಲಿಯಾಗಿದೆ. ಅದು ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವಲ್ಲಿ ಅಥವಾ ಕಂಪನಿಯನ್ನು ಬೆಳೆಸುವಲ್ಲಿ ಅಥವಾ ಉನ್ನತ ಮಟ್ಟಕ್ಕೆ ತಲುಪಲು ಸಹಕರಿಸುತ್ತದೆ.  ಕೇವಲ ಒಂದು ಚಿತ್ರವು ಸಾವಿರ ಪದಗಳ ಮೌಲ್ಯದ್ದಾಗಿದ್ದರೆ, ವೀಡಿಯೊದ ಮೌಲ್ಯವನ್ನು ಊಹಿಸಿ. ದುರದೃಷ್ಟವಶಾತ್, ಹೆಚ್ಚಿನ ಕಾರ್ಪೊರೇಟ್ ಬ್ರ್ಯಾಂಡಿಂಗ್ ವೀಡಿಯೊಗಳು ತನ್ನ ಬ್ರಾಂಡ್ ಗೆ ನ್ಯಾಯ ಒದಗಿಸುವುದಿಲ್ಲ. ಅಂದರೆ ನೂರಕ್ಕೆ ನೂರರಷ್ಟು ಮಾನವರಿಕೆಯಾಗುವುದಿಲ್ಲ. ಏಕೆಂದರೆ ಇವುಗಳು ಸ್ಪಷ್ಟವಾಗಿ ರಚಿಸಲ್ಪಟ್ಟಿರುವುದಿಲ್ಲ. 

ಆದರೆ ಬ್ರಾಂಡ್ ನ ವಿಡಿಯೋ ಅಗತ್ಯವಿರುವ ರೀತಿಯಲ್ಲಿ ಹೊರಹೊಮ್ಮಿದರೆ, ಅದು ಸಂಸ್ಥೆಯ ಸಂಸ್ಕಾರ, ಮತ್ತು ಇಲ್ಲಿ ಕೆಲಸ  ಮಾಡುವವರಲ್ಲಿರುವ ಉತ್ಸಾಹವನ್ನು ಸೂಚಿಸುತ್ತದೆ. ಇದು ಸಂಸ್ಥೆಯ ಅಧಿಕೃತ ಸಂದೇಶವನ್ನು ವ್ಯಕ್ತ ಪಡಿಸುವಲ್ಲಿಯೂ ಸಹಾಯ ಮಾಡುತ್ತದೆ. ಇಂತಹ ವಿಭಿನ್ನವಾದ, ಆದರೆ ಸ್ಪಷ್ಟವಾದ ಕಾರ್ಯತಂತ್ರ ಕಂಪನಿಗೆ ಅಗತ್ಯವಿರುವ ಸ್ಥಿರ, ಪ್ರತಿಭಾವಂತ  ಅಭ್ಯರ್ಥಿಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಇದರಿಂದ ಸಂಸ್ಥೆಗೆ ಅಗತ್ಯವಿರುವ ಅಭ್ಯರ್ಥಿಯನ್ನು ನೇಮಿಸಿಕೊಳ್ಳಬಹುದು. 

5. ಉತ್ತಮ ನೇಮಕಾತಿ ತಂತ್ರಗಳು

ಅಗತ್ಯವಿರುವ ಅಭ್ಯರ್ಥಿ ಅರ್ಹತೆ ಅನುಸಾರ ತಂತ್ರಗಳನ್ನು ರಚಿಸುವ ಸಂಸ್ಥೆಗಳು, ಉದ್ಯೋಗ ಜಾಹಿರಾತನ್ನು ಪೋಸ್ಟ್ ಮಾಡುವ ಕಾಲಂಗಳಲ್ಲಿ ಹೆಚ್ಚಿನ ಲಾಭ ಪಡೆಯುತ್ತವೆ. ಏಕೆಂದರೆ ಇಂತಹ ಜಾಹಿರಾತುಗಳು ಉತ್ತಮ ಅಭ್ಯರ್ಥಿಗಳನ್ನು ತನ್ನೆಡೆ ಸೆಳೆಯುತ್ತದೆ. ಇಂದಿನ ಜಗತ್ತಿನಲ್ಲಿ, ಉದ್ಯೋಗದ ಮಾರುಕಟ್ಟೆ ಸ್ಪರ್ಧಾತ್ಮಕವಾಗಿದ್ದು, ಆಲೋಚಿತ ಮತ್ತು ಉತ್ತಮ ನೇಮಕಾತಿ ತಂತ್ರಗಳನ್ನು ಉಪಯೋಗಿಸುವುದು ಅತ್ಯಗತ್ಯ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಒಂದು ಮನೆಯನ್ನು ಕಲ್ಲಿನ ಮೇಲೆ ಕಟ್ಟುವುದಕ್ಕೂ ಮತ್ತು ಮರಳಿನ ಮೇಲೆ ಕಟ್ಟುವುದಕ್ಕೂ ಇರುವ ವ್ಯತ್ಯಾಸ ಏನಿದೆಯೋ, ಅದೇ   ವ್ಯತ್ಯಾಸ ನಿಮ್ಮ ಕಂಪನಿಯನ್ನು ಭವಿಷ್ಯದಲ್ಲಿ ಮುನ್ನಡೆಸುವ ಶ್ರೇಷ್ಠ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವುದಕ್ಕೂ ಮತ್ತು ಕಡಿಮೆ ಸಾಧನೆ ತೋರುವ ಮತ್ತು ಕಳಪೆ ಸಾಂಸ್ಕೃತಿಕ ಸಾಮರ್ಥ್ಯ ಹೊಂದಿರುವ ಸಬ್‌ಪಾರ್ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವುದಕ್ಕೂ ಇದೆ.

ಕೆಲವು ಉದ್ಯೋಗಗಳ ವೆಬ್ಸೈಟ್ ಗಳು: 

US National Labor Exchange/ಯುನೈಟೆಡ್ ಸ್ಟೇಟ್ಸ್ ಅಮೇರಿಕಾದ ನ್ಯಾಷನಲ್ ಲೇಬರ್ ಎಕ್ಸ್ಚೆಂಗ್: ಸಂಸ್ಥೆಯ ಉದ್ಯೋಗ ಅವಕಾಶಗಳನ್ನು ಪೋಸ್ಟ್ ಮಾಡಲು ಲಭ್ಯವಿರುವ ಹಲವಾರು ವೆಬ್ಸೈಟ್ ಗಳಲ್ಲಿ   ಯುನೈಟೆಡ್ ಸ್ಟೇಟ್ಸ್ ಅಮೇರಿಕಾದ ನ್ಯಾಷನಲ್ ಲೇಬರ್ ಎಕ್ಸ್ಚೆಂಗ್ ಕೂಡ ಒಂದು. ಇದು ಅಮೆರಿಕಾದ ಸ್ಥಳೀಯ ಕೆಲಸಗಳ ಬಗ್ಗೆ ಜಾಹಿರಾತುಗಳನ್ನು ಪ್ರಕಟಿಸುತ್ತದೆ. ಇದು ಒಂದು ಲಾಭ ರಹಿತ ಸಂಸ್ಥೆ ಆಗಿದೆ. ಈ ಸಂಸ್ಥೆ ನೇಮಕಾತಿದಾರರನ್ನು ತನ್ನ ವಿಸ್ತಾರವಾದ  ನೇಮಕಾತಿದಾರರ ಜಾಲಕ್ಕೆ ಆಹ್ವಾನಿಸುತ್ತದೆ. ಇದಕ್ಕೆ ಯಾವುದೇ ಬಗೆಯ ಶುಲ್ಕವಿಲ್ಲ. ಹೀಗೆ ಆಹ್ವಾನಿಸಿದ ನೇಮಕಾತಿದಾರರ ಉದ್ಯೋಗ ಅವಕಾಶಗಳನ್ನು ಅಥವಾ ಖಾಲಿ ಹುದ್ದೆಗಳನ್ನು ವಿವಿಧ ಜಾಬ್ ಪೋರ್ಟಲ್ ಅಥವಾ ಉದ್ಯೋಗ ತಾಣಗಳಲ್ಲಿ ಲಭ್ಯವಾಗುವಂತೆ ಮಾಡುತ್ತದೆ. ಅದರೊಂದಿಗೆ, ಇನ್ನಿತರ  ಸಾವಿರಾರು ಉದ್ಯೋಗ ಶೋಧನಾ ಸಾಫ್ಟ್ವೇರ್ ತಂತ್ರಾಂಶಗಳಿಗೂ ವಿತರಿಸಲಾಗುತ್ತದೆ. ಇಲ್ಲಿರುವ ಉದ್ಯೋಗಗಳು ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಗೆ, ವೈವಿಧ್ಯಮಯ ಜನತೆಗೆ, ಅಂಗವೈಕಲ್ಯತೆ ಹೊಂದಿರುವವರಿಗೆ, ಸೇನೆಯಲ್ಲಿ ಸೇವೆ ಸಲ್ಲಿಸಿರುವವರಿಗೆ ಮತ್ತು ವೃತ್ತಿಜೀವನ ಅನುಭವಿಸುತ್ತಿರುವವರಿಗೆ ಮತ್ತು ವಿವಿಧ ಉದ್ಯೋಗ ಸಂಬಂಧಿತ ವೆಬ್ಸೈಟ್ ಗಳಿಗೆ ಲಭ್ಯವಿರುತ್ತದೆ. ಈ ನೇಮಕಾತಿ ವೆಬ್ಸೈಟ್ ಸುಲಭವಾಗಿ ಲಭ್ಯವಿರುವ, ಆದರೆ ಅತ್ಯಂತ ಉಪಯೋಗಕಾರಿ ವೆಬ್ಸೈಟ್ ಗಳಲ್ಲಿ ಒಂದಾಗಿದೆ. ಈ ಸೇವೆಯನ್ನು ಉಚಿತವಾಗಿ ಅನುಭವಿಸಬಹುದು. 

ಉದ್ಯೋಗ ಜಾಲತಾಣಗಳು ಸಹಜವಾಗಿ ಎಲ್ಲಾ ನೇಮಕಾತಿದಾರರಿಗೆ ಉಚಿತವಾಗಿ ಉದ್ಯೋಗ ಪ್ರಕಟಿಸಲು ಅವಕಾಶ ನೀಡುತ್ತದೆ, ಆದರೆ ವೆಬ್ಸೈಟ್ ಗಳು ಸಾಮಾನ್ಯವಾಗಿ ಅಭ್ಯರ್ಥಿಗಳು, ಲಭ್ಯವಿರುವ ಖಾಲಿ ಹುದ್ದೆಗಳ ವೀಕ್ಷಣೆಗೆ ಮಿತಿ ಹೇರುತ್ತದೆ. ಅಂದರೆ ಪ್ರತಿದಿನ ಒಬ್ಬ ಅಭ್ಯರ್ಥಿ ನಿಶ್ಚಿತ  ಸಂಖ್ಯೆಯಷ್ಟು ಮಾತ್ರ ಉದ್ಯೋಗಾವಕಾಶಗಳನ್ನು ವೀಕ್ಷಿಸಬಹುದು ಮತ್ತು ಅವಗಳಿಗೆ ಅರ್ಜಿ ಸಲ್ಲಿಸಬಹುದು. ಇಂತಹ ವೆಬ್ಸೈಟ್ ಗಳಲ್ಲಿ ಪ್ರತಿ ವಾರ ಹೊಸ ಉದ್ಯೋಗಾಕಾಂಕ್ಷಿಗಳಿಂದ ಸಾವಿರಾರು ರೆಸ್ಯುಮೆಗಳನ್ನು ಪಡೆಯುತ್ತದೆ ಮತ್ತು ಶೋಧಿಕೆ ಮಾಪನಗಳನ್ನು ಬಳಸುವುದರ ಮೂಲಕ ಉತ್ತಮ ಅಭ್ಯರ್ಥಿಗಳನ್ನು ಗುರುತಿಸಲು ವ್ಯವಸ್ಥಾಪಕರನ್ನು ನೇಮಿಸಿಕೊಳ್ಳುತ್ತದೆ.

Loadjobs/ಲೋಡ್ ಜಾಬ್ಸ್: ಇದು ಇನ್ನೊಂದು ಬಗೆಯ ಉದ್ಯೋಗ ಅವಕಾಶಗಳ ಜಾಲತಾಣವಾಗಿದೆ. ಸರಿಯಾದ ಅಭ್ಯರ್ಥಿಗಳನ್ನು ಅವರು ಎಲ್ಲಿದ್ದರೂ ಪತ್ತೆಹಚ್ಚಲು ನಿಮಗೆ ಸಹಾಯ ಮಾಡುವುದಾಗಿ ಲೋಡ್‌ಜಾಬ್ಸ್ ಭರವಸೆ ನೀಡುತ್ತಾರೆ – ಇದರರ್ಥ ನಿಮ್ಮ ಉದ್ಯೋಗ ಪಟ್ಟಿಗಳಿಗೆ ಅರ್ಜಿ ಸಲ್ಲಿಸಲು ಅವರನ್ನು ನೇರವಾಗಿ ಆಹ್ವಾನಿಸುವುದು. ಈ ಜಾಲತಾಣದಲ್ಲಿ ಮೂರು ತಿಂಗಳ ಉಚಿತ ಪ್ರಯೋಗವನ್ನು ನೀಡುತ್ತದೆ, ಇದು ಉದ್ಯೋಗ ಮಂಡಳಿಯ ವೈಶಿಷ್ಟ್ಯಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಖಾಲಿ ಹುದ್ದೆಗಳನ್ನು ಪ್ರಕಟ ಮಾಡುವಂತಹ ಹೆಚ್ಚುವರಿ ಪ್ರಯೋಜನಗಳನ್ನು ನವೀಕರಿಸಲು ಯೋಗ್ಯವಾಗಿದೆಯೆ ಎಂದು ಉದ್ಯೋಗದಾತರು ನಿರ್ಧರಿಸಲು ಸಮಯ ನೀಡುತ್ತದೆ..

Glassdoor/ಗ್ಲಾಸ್‌ಡೋರ್: ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಉತ್ತಮ ಉದ್ಯೋಗ ತಾಣಗಳಲ್ಲಿ ಒಂದೆಂದು ಪರಿಗಣಿಸಲಾದ ಗ್ಲಾಸ್‌ಡೋರ್ ಸಹ ಪ್ರಬಲ ನೇಮಕ ಸಾಧನವಾಗಿದೆ. ಈ ಜಾಲತಾಣನ್ನು 65 ದಶ ಲಕ್ಷಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಬಳಸುತ್ತಿರುವುದರಿಂದ, ಗ್ಲಾಸ್‌ಡೋರ್‌ನ ಉಚಿತ ಪ್ರಯೋಗವು ವ್ಯವಸ್ಥಾಪಕರನ್ನು ನೇಮಕ ಮಾಡಿಕೊಳ್ಳಲು ತಮ್ಮ ಖಾಲಿ ಹುದ್ದೆಗಳನ್ನು ಏಳು ದಿನಗಳವರೆಗೆ ಜಾಹೀರಾತು ಮಾಡಲು ಅನುಮತಿಸುತ್ತದೆ. ಅವರ ನೇಮಕ ಪರಿಕರಗಳ ಮೇಲೆ, ಗ್ಲಾಸ್‌ಡೋರ್ ಉಚಿತ ನೇಮಕಾತಿ ಮಾಹಿತಿಯನ್ನು ಸಹ ಒದಗಿಸುತ್ತದೆ, ಅದು ಸಂಸ್ಥೆಗಳಿಗೆ ತಮ್ಮ ನೇಮಕಾತಿಗಳನ್ನು ಹೆಚ್ಚಿಸಲು ಸಹಾಯವಾಗುತ್ತದೆ.

ZipRecruiter/ಜಿಪ್ ರಿಕ್ರೂಟರ್: ಒಂದು ದಶಲಕ್ಷಕ್ಕೂ ಹೆಚ್ಚಿನ ಕಂಪನಿಗಳು ಉನ್ನತ ಪ್ರತಿಭೆಗಳಿಗೆ ಮೂಲವಾಗಿರಲು ಜಿಪ್‌ರೆಕ್ರೂಟರ್ ಅನ್ನು ಬಳಸುತ್ತವೆ. ಉಚಿತವಾಗಿ ಲಭ್ಯವಿರುವ ಈ ಜಾಲತಾಣದ ಸೇವೆಯನ್ನು ಉಪಯೋಗಿಸಿ, ನೇಮಕಾತಿದಾರರು ಮತ್ತು ನೇಮಕ ವ್ಯವಸ್ಥಾಪಕರು ಒಂದು ವಾರದವರೆಗೆ ಜಾಲತಾಣವನ್ನು ಪೂರ್ಣ-ಸೇವಾ ಕೊಡುಗೆಗಳನ್ನು ಬಳಸಬಹುದು. ಈ ಜಾಲತಾಣದ ಸೇವೆಯ ಅನುಸಾರ 100 ಕ್ಕೂ ಹೆಚ್ಚು ಉದ್ಯೋಗ ತಾಣಗಳಿಗೆ ಉದ್ಯೋಗ ಪ್ರಕಟಣೆ ಮತ್ತು ವಿತರಣೆಯನ್ನು ಮಾಡಬಹುದು.

MightyRecruiter/ಮೈಟಿರಿಕ್ರೂಟರ್: ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮೈಟಿರೆಕ್ರೂಟರ್ ವಿಶೇಷ ಸಮಿತಿಯನ್ನು ಬಳಸಿಕೊಳ್ಳುತ್ತದೆ. ನೇಮಕಾತಿದಾರರು ಅನಿಯಮಿತ ಸಂಖ್ಯೆಯ ಲಭ್ಯವಿರುವ ಉದ್ಯೋಗ ಪ್ರಕಟಣೆಯನ್ನು ರಚಿಸಲು ಸೌಲಭ್ಯವಿದೆ. ನಂತರ ಅದನ್ನು ಲಿಂಕ್ಡ್‌ಇನ್, ಕೆರಿಯರ್‌ಬ್ಯುಲ್ಡರ್, ನೆಕ್ಸ್‌ಕ್ಸ್ಟ್ ಮತ್ತು ಗ್ಲಾಸ್‌ಡೋರ್‌ನಂತಹ ಸೈಟ್‌ಗಳು ಸೇರಿದಂತೆ 29 ವಿವಿಧ ಉದ್ಯೋಗ ಫಲಕಗಳೊಂದಿಗೆ ಹಂಚಿಕೊಳ್ಳಬಹುದು.

Internships.com/ಇಂಟರ್ನಶಿಪ್ಸ್.ಕಾಮ್: ಕೆಳ ಹಂತದ ನೇಮಕಾತಿಯ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಇಂಟರ್ನಶಿಪ್ಸ್.ಕಾಮ್ ಪ್ರಸ್ತುತ ವಿದ್ಯಾರ್ಥಿಗಳು ಉದ್ಯೋಗ ಸಹಾಯವನ್ನು ಹುಡುಕುವ ವ್ಯವಹಾರಗಳಿಗೆ ಉಪಯುಕ್ತ ಸಂಪನ್ಮೂಲವಾಗಿದೆ. ಕೆಲವೊಂದು ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಲು ಇಂಟರ್ನ್‌ಶಿಪ್ ಅಗ್ಗದ ಮಾರ್ಗವಾಗಿದೆ. ಇಂಟರ್ನಶಿಪ್ಸ್.ಕಾಮ್ ಪ್ರಕಾರ, 70% ಕಂಪನಿಗಳು ಅಭ್ಯರ್ಥಿಗಳಿಗೆ ಪೂರ್ಣ ಅವಧಿಯ ಉದ್ಯೋಗ ಕೊಡುಗೆಗಳನ್ನು ನೀಡುತ್ತವೆ.

Monster.com/ಮಾನ್ಸ್ಟರ್.ಕಾಮ್: ಮೊದಲ ಸಾರ್ವಜನಿಕ ಉದ್ಯೋಗ ಹುಡುಕಾಟದ ಜಾಲತಾಣ, ಮಾನ್ಸ್ಟರ್.ಕಾಮ್, 23 ಮಿಲಿಯನ್ ಅಭ್ಯರ್ಥಿಗಳ ಜಾಲವನ್ನು ಹೊಂದಿದೆ. ಮಾನ್ಸ್ಟರ್‌ನ ಉಚಿತ ಸೇವೆಯು ಉದ್ಯೋಗದಾತರಿಗೆ ತಮ್ಮ ಉದ್ಯೋಗಗಳನ್ನು ರಚಿಸಲು, ಸಂಪಾದಿಸಲು ಮತ್ತು ಪ್ರಕಟ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ.

ಇತರ ಆಯ್ಕೆಗಳ ಪೈಕಿ, ಮಾನ್ಸ್ಟರ್‌ನ ಪಾವತಿಸಿದ ಪರಿಕರಗಳು ಹುಡುಕಬಹುದಾದ ರೆಸ್ಯುಮೆ ಡಾಟಾಬೇಸ್ ಒಳಗೊಂಡಿರುತ್ತವೆ, ಇದು ಅಗತ್ಯವಿರುವಷ್ಟು ಉದ್ಯೋಗಾವಕಾಶಗಳನ್ನು ಪ್ರಕಟ ಮಾಡಲು ವಾರ್ಷಿಕ ಚಂದಾದಾರಿಕೆಗಳನ್ನು ನೀಡುತ್ತದೆ. ವೈವಿಧ್ಯಮಯ, ಅಂಗವಿಕಲ ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಗುರಿಯಾಗಿಸುವ ವಿಶೇಷ ಜಾಲತಾಣಗಳು ಸೇರಿದಂತೆ ಎಲ್ಲಾ ಮಾನ್ಸ್ಟರ್ ಅಭ್ಯರ್ಥಿ ಗುಂಪು ಮತ್ತು ಜಾಲತಾಣದ ಜಾಲದ ಪ್ರವೇಶವನ್ನು ಒದಗಿಸುವ  ವೈಶಿಷ್ಟ್ಯವನ್ನು ಇದು ನೀಡುತ್ತದೆ.

LinkedIn/ಲಿಂಕ್ಡ್‌ಇನ್‌: ಎಲ್ಲಾ ವ್ಯವಹಾರಗಳಿಗೆ ಲಿಂಕ್ಡ್‌ಇನ್ ಅತ್ಯಗತ್ಯ ಜಾಲತಾಣದ ಸಾಧನವಾಗಿದೆ. ಲಿಂಕ್ಡ್‌ಇನ್‌ನ ಜಾಲವು 130 ವಿವಿಧ ಕೈಗಾರಿಕೆಗಳ ವೃತ್ತಿಪರರನ್ನು ಒಳಗೊಂಡಿದೆ ಮತ್ತು 100,000 ಕ್ಕೂ ಹೆಚ್ಚು ನೇಮಕಾತಿದಾರರನ್ನು ಒಳಗೊಂಡಿದೆ. ಈ ಜಾಲತಾಣದಲ್ಲಿ ಸಾಮಾನ್ಯವಾಗಿ ಉತ್ತಮ ಗುಣ ಮಟ್ಟದ ವೃತ್ತಿಪರರನ್ನು ಗುರುತಿಸಬಹುದು. ಇದು ಉಲ್ಲೇಖಿತರಿಗೆ ಉತ್ತಮ ಸಂಪನ್ಮೂಲ ಮತ್ತು ಅರ್ಹ ಅಭ್ಯರ್ಥಿಗಳನ್ನು ಹುಡುಕುವ ಅಮೂಲ್ಯ ಮೂಲವಾಗಿದೆ

ಉದ್ಯೋಗ ಜಾಲತಾಣಗಳಿಂದ ಹಲವಾರು ಉಪಯೋಗಗಳಿದ್ದರೂ, ನಿಮ್ಮ ಸಂಸ್ಥೆಯ ಸಂತುಷ್ಟ ಉದ್ಯೋಗಿಗಳ ನೈಜ ಕಥೆಗಳು, ನಿಮ್ಮ ಸಂಸ್ಥೆಯ ಬ್ರಾಂಡ್ ಅನ್ನು ಉನ್ನತವಾಗಿ ನಿರ್ಮಿಸುತ್ತದೆ. ಏಕೆಂದರೆ ಮಾರ್ಕೆಟಿಂಗ್ ಸಂದೇಶ ಕಳುಹಿಸುವಿಕೆಯೊಂದಿಗೆ ವೃತ್ತಿಜೀವನದ ಪುಟ ಮತ್ತು ನಿಜವಾದ ಜನರಿಂದ ಅಧಿಕೃತ ಪ್ರಶಂಸಾಪತ್ರಗಳ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಈ ಪ್ರಯೋಜನಗಳನ್ನು ನಿಮ್ಮ ಸಂಸ್ಥೆ ಪಡೆದುಕೊಳ್ಳಲು, ನಿಮ್ಮ ಸಂಸ್ಥೆಯಲ್ಲಿ ಉದ್ಯೋಗಿಗಳಿಗಾಗಿ ಪ್ರೋತ್ಸಾಹಕ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವುದು ಒಳ್ಳೆಯದು. ಇಂತಹ ಕಾರ್ಯಕ್ರಮಗಳು ನಿಮ್ಮ ಸಂಸ್ಥೆಯ ನೌಕರರು ತಮ್ಮ ಆಲೋಚನೆಗಳು ಮತ್ತು ವೈಯಕ್ತಿಕ ಕಥೆಗಳನ್ನು ಹಂಚಿಕೊಳ್ಳಲು ಉತ್ತೇಜಿಸುತ್ತದೆ. ಇವುಗಳನ್ನು ವಿವಿಧ ಜಾಲತಾಣಗಳಲ್ಲಿ ಹಂಚುವುದರಿಂದ ನಿಮ್ಮಸಂಸ್ಥೆಗೆ ಅಗತ್ಯವಿರುವ ಗರಿಮೆ ಮತ್ತು ಅರ್ಹ ನೌಕರರು – ಎರಡೂ ದೊರಕುತ್ತದೆ.