ಕೆನಡಾದ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿದೆ 5 ಕಾರಣಗಳು!

ಇಡೀ ಜಗತ್ತಿನಲ್ಲಿರುವ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಕೆನಡಾ, ವಿಶ್ವದ ಅತ್ಯುತ್ತಮ ದೇಶಗಳಲ್ಲಿ ಕೂಡಾ ಒಂದಾಗಿದೆ. ಅದಕ್ಕೆ ಕಾರಣ ಹಲವಾರು. 

  • ಮಾನವ ಅಭಿವೃದ್ಧಿ ಸೂಚ್ಯಂಕದ ಅನುಸಾರ ಕೆನಡಾ ದೇಶ 6ನೇ ಸ್ಥಾನವನ್ನು ಅಲಂಕರಿಸಿದ್ದು,  ಇದು ಕೆನಡಾದ ಸಾಮಾನ್ಯ ಯೋಗಕ್ಷೇಮ ಮತ್ತು ಜೀವನಮಟ್ಟದ ಅಳತೆಯಾಗಿದೆ.
  • ಕೆನಡಾ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದು, ಅಲ್ಲಿನ ದೀರ್ಘಾವಧಿಯ ಜೀವಿತಾವಧಿಯು  ಕೆನಡಾವನ್ನು ಅತ್ಯಂತ ಸ್ವತಂತ್ರ ದೇಶಗಳಲ್ಲಿ ಒಂದನ್ನಾಗಿ ಮಾಡಿದೆ.
  • ಕೆನಡಾದ ಬಹುತೇಕ ಸರ್ಕಾರಿ ವ್ಯವಸ್ಥೆಗಳು ಬಲವಾದ ಮತ್ತು ಸದೃಢವಾದ ಅಡಿಪಾಯವನ್ನು ಹೊಂದಿದೆ.
  • ಕೆನಡಾದ ಹವಾಮಾನ ಮತ್ತು ಜೀವನಶೈಲಿಯು ಈ ದೇಶದಲ್ಲಿ ವಾಸಿಸುವವರಿಗೆ ಪೂರಕವಾಗಿದ್ದು, ಉದ್ಯೋಗಿಗಳಿಗೆ ಸೂಕ್ತವಾಗಿದೆ.

ಈ ಎಲ್ಲಾ ಕಾರಣಗಳೂ ಕೆನಡಾದಲ್ಲಿ ಉದ್ಯೋಗ ಹುಡಕಿಕೊಂಡು ಬರುವವರಿಗೆ ಸಹಕಾರಿಯಾಗಿದೆ. ಅದರೊಂದಿಗೆ, ಕೆನಡಾದಲ ಉದ್ಯೋಗ ಹುಡುಕುವುದು ಕಷ್ಟದ ಕೆಲಸವೇನೂ ಅಲ್ಲ. ಅದಕ್ಕೆ ಪೂರಕವೆಂಬಂತೆ ಕೆನಡಾದ ವಲಸೆ ಆಯೋಜನೆ ಪರದೇಶದವರಿಗೆ ಸೂಕ್ತ ಅವಕಾಶಗಳನ್ನು ಒದಗಿಸುತ್ತದೆ. ಇಂತಹ ಆಯೋಜನೆಯ ಕಾರಣದಿಂದ ವಲಸಿಗರಿಗೆ ಕೆನಡಾದ ಪ್ರಜೆಯಾಗುವ ಸೌಲಭ್ಯ ಸುಲಭವಾಗಿ ದೊರಕುತ್ತದೆ. ಇದೇ ಕಾರಣದಿಂದಾಗಿಯೇ ಕೆನಡಾ ದೇಶವು ಇನ್ನಿತರ ದೇಶಗಳಿಗಿಂತ ಭಿನ್ನ ಮತ್ತು ವಿಶೇಷವಾಗಿದೆ.

ಕೆನಡಾದ ಜೀವನಶೈಲಿ ತುಂಬಾ ವಿಭಿನ್ನ ಹಾಗೂ ಉನ್ನತವಾಗಿದೆ. ವಿಶೇಷವೆಂದರೆ, ಈ ದೇಶ ಅಭಿವೃದ್ಧಿಶೀಲ ರಾಷ್ಟ್ರಗಳ ಜನರಿಗೆ ಸಹ ಒಂದು ರೀತಿಯ ಸ್ವರ್ಗವಾಗಿ ಕಾಣುತ್ತದೆ.

ಎಲ್ಲಿ ವಾಸಿಸಬೇಕು ಮತ್ತು ಕೆಲಸ ಮಾಡಬೇಕು ಎಂದು ನಿರ್ಧರಿಸುವಾಗ ಕೆನಡಾ ಅನೇಕರಿಗೆ ಪ್ರಥಮ ಆಯ್ಕೆಯಾಗಿದೆ. ಕೆನಡಾದಲ್ಲಿ ಉದ್ಯೋಗ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಜೀವನದಲ್ಲಿ ಅನುಭವಿಸಬಹುದು. ಅದರೊಂದಿಗೆ, ವೃತ್ತಿಪರ ಜೀವನದ ಬೆಳವಣಿಗೆಯ ಅವಕಾಶಗಳು ಸಹ ಇಲ್ಲಿ ಹೆಚ್ಚುತ್ತವೆ.

ಉದ್ಯೋಗ ಮತ್ತು ವೈಯಕ್ತಿಕ ಬೆಳವಣಿಗೆ, ಉತ್ತಮ ಮತ್ತು ಸುಖಕರ ಜೀವನ, ಮತ್ತು ಉತ್ತಮ ಗುಣಮಟ್ಟದ ಕೆಲಸವನ್ನು ಬಯಸುವವರಿಗೆ ಕೆನಡಾ ಒಂದು ಉತ್ತಮ  ರಾಷ್ಟ್ರವಾಗಿದೆ. ಕೆನಡಾದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕಲು ಕಾರಣ ಹಲವಾರು. ಅಂತಹ ವಿಸ್ತಾರವಾದ ಪಟ್ಟಿಯಲ್ಲಿ, ಐದು ಪ್ರಮುಖ ಕಾರಣಗಳನ್ನು ಇಲ್ಲಿ ನೀಡಿದ್ದೇವೆ. ಕೆನಡಾದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಪ್ರಮುಖ ಕಾರಣಗಳನ್ನು ನಾವು ಈ ಕೆಳಗೆ ನೀಡಿದ್ದೇವೆ.

1. ಉದ್ಯೋಗ ಮತ್ತು ವಿಮೆ 

ಕೆನಡಾದ ಉದ್ಯೋಗ ವಿಮೆಯಲ್ಲಿ ಉದ್ಯೋಗಗಳನ್ನು ಹುಡುಕಲು ಅನುಕೂಲ, ಕುಟುಂಬಕ್ಕೆ ಮೀಸಲಾದ ಪ್ರಯೋಜನಗಳು, ಅನಾರೋಗ್ಯದ ಕಾರಣದಿಂದಾಗಿ ನೀವು ಕೆಲಸ ಮಾಡಲು ಅಸಮರ್ಥರಾಗಿದ್ದರೆ – ಅಂತಹವರಿಗೆ ಪ್ರಯೋಜನಗಳು, ಸ್ವಯಂ ಉದ್ಯೋಗಿಗಳಿಗೆ ಪ್ರಯೋಜನಗಳು, ಮತ್ತು ನೌಕರರ ಮಗುವಿನ ಆರೋಗ್ಯ, ಶಿಕ್ಷಣ ಮತ್ತು ಸುರಕ್ಷತೆಗೆ ಪ್ರಯೋಜನಗಳು, ಇತ್ಯಾದಿ ಒಳಗೊಂಡಿದೆ.

ನೀವು ಅರ್ಹರಾಗಿದ್ದರೆ, ನಿಮ್ಮಿಂದ ಯಾವುದೇ ತಪ್ಪು ನಡೆಯದೇ  ನಿಮ್ಮ ಕೆಲಸವನ್ನು ಕಳೆದುಕೊಂಡಿದ್ದರೆ ಮತ್ತು ನೀವು ಕೆಲಸ ಮಾಡಲು ಸಮರ್ಥರಾಗಿದ್ದು ಯಾವುದೇ ಉದ್ಯೋಗಗಳನ್ನು  ಪಡೆಯದಿದ್ದರೂ, ನೀವು ವಿಮೆಯ ಕೆಲವು ಪ್ರಯೋಜನಗಳನ್ನು ಪಡೆಯಬಹುದು.

ಕೆನಡಾದ ನಿರುದ್ಯೋಗದ ಮಟ್ಟ ಸುಮಾರು 7 ಶೇಕಡವಿದ್ದು, ಇದು ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಅತೀ ಕಡಿಮೆಯಾಗಿದೆ. ಮೇಲೆ ಉಲ್ಲೇಖಿಸಿದಂತೆ ನಿರುದ್ಯೋಗಿಗಳಿಗೆ ಉದ್ಯೋಗ ಹುಡುಕಲು ಮತ್ತು ಆಯ್ದುಕೊಳ್ಳಲು ಅನುಕೂಲವಾಗುವಂತಹ ಅನೇಕ ನೀತಿಗಳು ಮತ್ತು ಸೇವೆಗಳು ಕೆನಡಾದಲ್ಲಿವೆ.

ನೀವು ಕೆಲಸದ ಪರವಾನಗಿಯನ್ನು ಹೊಂದಿದ್ದರೆ, ನಿಮ್ಮ ಸಂಗಾತಿ ಅಥವಾ ಸಾಮಾನ್ಯ ಕಾನೂನು ಪಾಲುದಾರರು ಸಹ ಕೆನಡಾದಲ್ಲಿ ಕೆಲಸ ಮಾಡಬಹುದು. ಅವರು ತಮ್ಮದೇ ಆದ ಕೆಲಸದ ಪರವಾನಗಿಯನ್ನು ಪಡೆಯಬೇಕಾಗುತ್ತದೆ. ಆದರೆ ಉದ್ಯೋಗದ ಆಫರ್ ಅಗತ್ಯವಿರುವುದಿಲ್ಲ. ಅದರೊಂದಿಗೆ, ಕೆನಡಾದಲ್ಲಿ ಯಾವುದೇ ಉದ್ಯೋಗದ ಆಫರ್ ಅನ್ನು ಸಹ ಸ್ವೀಕರಿಸಬಹುದು.

ಜೂನ್ 1, 2019 ರಿಂದ, ಉದ್ಯೋಗ ಮಾನದಂಡಗಳ ಕಾಯ್ದೆಯ  (ಬ್ರಿಟಿಷ್ ಕೊಲಂಬಿಯಾ) ಅಡಿಯಲ್ಲಿ ಕನಿಷ್ಠ ವೇತನ ಗಂಟೆಗೆ $ 12.65 ರಿಂದ $ 13.85 ಕ್ಕೆ  ಏರಿಕೆಯಾಗಿದೆ. ಅದರೊಂದಿಗೆ ಮುಂದಿನ ವರ್ಷ (2020) ಕೆನಡಾದ ಕನಿಷ್ಠ ವೇತನ $14.06 ಕ್ಕೆ ಏರುವ ಸಾಧ್ಯತೆ ಇದೆ.

ಕೆನಡಾದಲ್ಲಿ ಉದ್ಯೋಗ ಮಾಡುವವರಿಗೆ ಸಂತೋಷದ ವಿಷಯವೆಂದರೆ ಅವರು ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ನಡುವಿನ ಸಾಮರಸ್ಯದ ಸಮತೋಲನವನ್ನು ಸಮಂಜಸವಾಗಿ ನಿರ್ವಹಿಸಬಹುದು. ಕೆನಡಿಯನ್ನರು ತಮ್ಮ ಕೆಲಸದ ಜೀವನ ಮತ್ತು ವೈಯಕ್ತಿಕ ಜೀವನವನ್ನು ದೊಡ್ಡದಾದ, ದಪ್ಪ ರೇಖೆಯಿಂದ ಬೇರ್ಪಡಿಸುತ್ತಾರೆ. ಅದಕ್ಕೆ  ಸಾಕ್ಷ್ಯವಾಗಿ, ಕೆನಡಾದ ನಿಯಮಿತ ಕೆಲಸದ ಸಮಯವು ಸಾಮಾನ್ಯವಾಗಿ ದಿನಕ್ಕೆ 8 ಗಂಟೆಗಳು ಮತ್ತು ವಾರಕ್ಕೆ 40 ಗಂಟೆಗಳಿರುತ್ತದೆ. ಯಾವುದೇ ಹೆಚ್ಚುವರಿ ಸಮಯವನ್ನು ಅಧಿಕಾವಧಿ ಎಂದು ಪರಿಗಣಿಸಿ, ಅದನ್ನು ನಿಮ್ಮ ಲೆಕ್ಕದಲ್ಲಿ ಪಾವತಿಸಲಾಗುತ್ತದೆ. ತಡರಾತ್ರಿಯ ಕೆಲಸದ ಕುರಿತಾದ ಇಮೇಲ್ ಗಳನ್ನು ನಿಷೇಧಿಸುವಲ್ಲಿ ಕೆನಡಾ ಫ್ರಾನ್ಸ್ ಅನ್ನು ಅನುಸರಿಸುತ್ತದೆ. ಎಲ್ ಖೋಮ್ರಿ ಕಾನೂನಿನಡಿಯಲ್ಲಿ, ಫ್ರಾನ್ಸ್ ಕಾರ್ಮಿಕರಿಗೆ ಕಚೇರಿ ಸಮಯದ ನಂತರ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ನೀಡುತ್ತದೆ.

2. ಶಾಸನಬದ್ಧ ರಜಾದಿನಗಳು 

ಕೆನಡಾ ದೇಶಕ್ಕೆ ಸಂಬಂಧಿತ ವಿಶೇಷ ಕಾರ್ಯಕ್ರಮ, ದಿನಗಳು ಅಥವಾ ಸಂದರ್ಭಗಳನ್ನು ಗೌರವಿಸಲು ಮತ್ತು  ಆಚರಿಸಲು ಸರ್ಕಾರವು ಕೆಲವು ದಿನಗಳನ್ನು ಆಯ್ಕೆ ಮಾಡಿದೆ. ಇಂತಹ ದಿನಗಳನ್ನು ಕೆನಡಾದ ಸರ್ಕಾರ,  ಶಾಸನಬದ್ಧ ರಜಾ ದಿನಗಳೆಂದು ಘೋಷಿಸಿದೆ. ಇಂತಹ ದಿನಗಳನ್ನು ಕೆನಡಾದಲ್ಲಿ ನೆಲೆಸಿರುವ  ಎಲ್ಲರಿಗೂ ಲಭ್ಯವಿದೆ. ಅಂತಹ ದಿನಗಳಲ್ಲಿ ಕೆಲಸ ಮಾಡುವ ನೌಕರರು ತಾವು ಕೆಲಸ ಮಾಡಿದ ಸಮಯಕ್ಕೆ ಬೋನಸ್ ವೇತನವನ್ನು ಪಡೆಯಬಹುದು.

ಕೆನಡಾದಲ್ಲಿ, ಅರ್ಹ ಉದ್ಯೋಗಿಗಳಿಗೆ ಪ್ರತಿ ವರ್ಷದ ಉದ್ಯೋಗ ಪೂರ್ಣಗೊಂಡ ನಂತರ ಎರಡು ವಾರಗಳ ವಾರ್ಷಿಕ ರಜಾದಿನಗಳನ್ನು ವೇತನದೊಂದಿಗೆ ಮಂಜೂರು ಮಾಡಲಾಗುತ್ತದೆ. ಕೆಲವು ನ್ಯಾಯವ್ಯಾಪ್ತಿಯಲ್ಲಿ, ನಿರ್ದಿಷ್ಟ ಅವಧಿಯ ಸೇವೆಯನ್ನು ಪೂರ್ಣಗೊಳಿಸಿದ ನಂತರ ನೌಕರರಿಗೆ, ಅವರ ವೈಯಕ್ತಿಕ ಜೀವನವನ್ನು ಪೋಷಿಸಲು, ಹೆಚ್ಚುವರಿ ವಾರಗಳ ರಜೆ ನೀಡಲಾಗುತ್ತದೆ.

3. ಕುಟುಂಬ ಮತ್ತು ಸಮಾಜ ಕಲ್ಯಾಣ ಆಯೋಜನೆಗಳು

ಗರ್ಭಿಣಿ ಮಹಿಳೆಯರಿಗೆ ಪ್ರಯೋಜನಗಳು

ಕೆನಡಾ ಸರ್ಕಾರ ತನ್ನ ದೇಶದ ಜನ ಸಂಪನ್ಮೂಲವನ್ನು ಹೆಚ್ಚಿಸಲು ಎಲ್ಲಾ ಬಗೆಯ ಪ್ರಯತ್ನವನ್ನು ಮಾಡುತ್ತಿದೆ. ಅದಕ್ಕೆ ಸಾಕ್ಷ್ಯವಾಗಿ ಇರುವುದು ಈ ದೇಶ ಗರ್ಭಿಣಿ ಮಹಿಳೆಯರಿಗೆ ನೀಡುವ ಸೌಲಭ್ಯಗಳು. 

ಈ ದೇಶದಲ್ಲಿ ಮಹಿಳೆಯರಿಗೆ ಅರೋಗ್ಯ ಗರ್ಭಧಾರಣೆಯನ್ನು ಕಾಪಾಡಿಕೊಳ್ಳಲು ವಿವಿಧ ಬಗೆಯ ಆಯೋಜನೆಗಳು ಸಹಕಾರಿಯಾಗಿವೆ. 

ಗರ್ಭಿಣಿಯರು ಅಥವಾ ಇತ್ತೀಚೆಗೆ ಜನ್ಮ ನೀಡಿದ ತಾಯಂದಿರು ಅಥವಾ ಮಗುವನ್ನು ದತ್ತು ಪಡೆದ ಮಹಿಳೆಯರಿಗೆ ಪ್ರಯೋಜನಗಳು ಅಸಂಖ್ಯಾತ. ಅದರ ಕೆಲವು ಉದಾಹರಣೆಗಳು ಇಲ್ಲಿವೆ – ಕೆನಡಾದ ಅರೋಗ್ಯ ವ್ಯವಸ್ಥೆ ಮಹಿಳೆಯರಿಗೆ ಗರ್ಭಧಾರಣೆ ಸಂಬಂಧಿತ ಸಲಹೆಗಳು, ಉತ್ತಮ ಆರೋಗ್ಯ ಮತ್ತು ಪೋಷಣೆಯ ಸಲಹೆಗಳು, ಇತ್ಯಾದಿಗಳನ್ನು ನೀಡುತ್ತದೆ.

ಗರ್ಭಾವಸ್ಥೆಯಲ್ಲಿ ತಾಯಿಗೆ ಅಥವಾ ಮಗುವಿನ ಆರೋಗ್ಯಕ್ಕೆ ತೊಂದರೆ ಆಗಬಹುದಾದ ಯಾವುದೇ ತೊಂದರೆಗಳು ಕಂಡುಬಂದಲ್ಲಿ, ಕೆನಡಾ ಸರ್ಕಾರ ಅಂತಹ ತಾಯಂದಿರಿಗೆ ಪ್ರತ್ಯೇಕವಾದ ಮತ್ತು ವಿಶೇಷವಾದ ಕೆನಡಾದ ಪ್ರಸವಪೂರ್ವ ಪೋಷಣೆ ಕಾರ್ಯಕ್ರಮವನ್ನು ರಚಿಸಲಾಗಿದೆ. ಕಾರ್ಯಕ್ರಮವು ಪೌಷ್ಠಿಕಾಂಶ ಮಾರ್ಗದರ್ಶನ, ವಿವಿಧ ಆಹಾರ ಮತ್ತು ಅವುಗಳ ತಯಾರಿಕೆಯ ತರಬೇತಿ, ಪ್ರಸವಪೂರ್ವ ವಿಟಮಿನ್ ಪೂರಕತೆ, ಸ್ತನ್ಯಪಾನ ಶಿಕ್ಷಣ ಮತ್ತು ತಾಯಿಯ ಜೀವನಶೈಲಿ ಸಮಾಲೋಚನೆಯನ್ನು ಒಳಗೊಂಡಿದೆ.

ಮಗು ಜನಿಸಿದ ನಂತರವೂ ಕೆನಡಾ ಸರ್ಕಾರವು ನವಜಾತ ಶಿಶುವನ್ನು ಸ್ವಾಗತಿಸಲು ಮತ್ತು ಅದರ ಬೆಳವಣಿಗೆಗೆ ಪೂರಕವಾಗಲು ಅನೇಕ ಸೇವೆಗಳನ್ನು ಮತ್ತು ಕಾರ್ಯಕ್ರಮಗಳ ಸೌಲಭ್ಯವನ್ನು ನೀಡುತ್ತದೆ.

ಕೆನಡಾದ ಫೆಡರಲ್ ಸರ್ಕಾರವು ಹೊಸ ಪೋಷಕರು ಸಮಾನವಾಗಿ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು ಎನ್ನುವ ಕಾರಣದಿಂದ ಪೋಷಕರಿಗೆ ಕೆಲವು ಸೂಕ್ತ ಸೌಲಭ್ಯಗಳನ್ನು ನೀಡುವುದಷ್ಟೇ ಅಲ್ಲದೇ, ಪೋಷಕರನ್ನು ಸಮಾನ ಜವಾಬ್ದಾರಿ ತೆಗೆದುಕೊಳ್ಳಲು ಪ್ರೋತ್ಸಾಹಿಸಲು ಪ್ರಯತ್ನಿಸುತ್ತದೆ.

ಇತ್ತೀಚಿನ ಹೊಸ ಕ್ರಮದ ಅನುಸಾರ, ಕೆನಡಾ ಸರ್ಕಾರವು ಐದು ವಾರಗಳ ಹೆಚ್ಚಿನ ಉದ್ಯೋಗ ವಿಮೆ ಒದಗಿಸುವುದರೊಂದಿಗೆ ಪೋಷಕರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. 18 ತಿಂಗಳ ವಿಸ್ತೃತ ಪೋಷಕರ ರಜೆಯನ್ನು ಆಯ್ಕೆ ಮಾಡುವವರಿಗೆ ಮತ್ತು ಶಿಶುವಿನ ಕಾಳಜಿ ಮಾಡಲು ಸಮಯವನ್ನು ಹಂಚಿಕೊಳ್ಳುವ ದಂಪತಿಗಳಿಗೆ ಹೆಚ್ಚುವರಿ ಎಂಟು ವಾರಗಳ ಉದ್ಯೋಗ ವಿಮೆಯ ಪ್ರಯೋಜನಗಳನ್ನು ಸಹ  ನೀಡಲಾಗುತ್ತದೆ.

ಶಿಶುಪಾಲನಾ ಪ್ರಯೋಜನಗಳು

பெண்கள்

ನಿಮ್ಮ ಮಗುವಿನ ನೋಂದಾಯಿತ ಜನನ ಪ್ರಮಾಣ ಪತ್ರವಿದ್ದರೆ ಮತ್ತು ಕೆನಡಾ ಸರ್ಕಾರವು ನಿಮಗೆ ಒದಗಿಸುವ ಅನೇಕ ಪ್ರಯೋಜನಗಳಿಗಾಗಿ ನೀವು ಅರ್ಜಿ ಸಲ್ಲಿಸಿದ್ದರೆ, ನಿಮ್ಮ ಮಗುವು ಪಡೆಯುವ ಅನುಕೂಲಗಳ ಪಟ್ಟಿ ಇಲ್ಲಿದೆ. 

  • ಪ್ರೌಢ ಶಾಲೆಯ ನಂತರ ನಿಮ್ಮ ಮಗುವಿನ ಹೆಚ್ಚಿನ ಶಿಕ್ಷಣಕ್ಕಾಗಿ ನೀವು ಉಳಿತಾಯ ಖಾತೆಯನ್ನು ತೆರೆಯಬಹುದು. ಇದರಿಂದ ಅಗತ್ಯವಿದ್ದಾಗ ನಿಮ್ಮ ಮಗುವಿನ ಶಿಕ್ಷಣಕ್ಕೆ ಸಹಾಯವಾಗುತ್ತದೆ. 
  • 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಬೆಳೆಸುವ ವೆಚ್ಚದ ಸಹಾಯಕ್ಕಾಗಿ ತೆರಿಗೆ ಮುಕ್ತ ಮಾಸಿಕ ಪಾವತಿ
  • ಮಕ್ಕಳಿಗೆ ವಿವಿಧ ಬಗೆಯ ಆರೋಗ್ಯ ಸೌಲಭ್ಯ
  • ಮಕ್ಕಳ ಅಂಗವೈಕಲ್ಯ ಪ್ರಯೋಜನ
  • ಸುರಕ್ಷತೆ ಲಾಭ
ಕೌಟುಂಬಿಕ ಪ್ರಯೋಜನಗಳು

ನೀವು ಅರ್ಹರಾಗಿದ್ದರೆ ಮತ್ತು ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರಲ್ಲಿ ಯಾರಾದರೂ ಗಂಭೀರ ಅನಾರೋಗ್ಯದಿಂದ ಅಥವಾ ಸಾವಿನ ಅಪಾಯದಿಂದ ಬಳಲುತ್ತಿದ್ದರೆ, ನಿಮಗೆ ಕೆನಡಾ ಸರ್ಕಾರದ ಸಹಾನುಭೂತಿಯ ಆರೈಕೆ ಆಯೋಜನೆಗಳಿಂದ ಪ್ರಯೋಜನವಾಗುತ್ತದೆ. ಮತ್ತು ಅಂತಹ ಕುಟುಂಬ ಸದಸ್ಯರಿಗೆ ಬೆಂಬಲವನ್ನು ಒದಗಿಸಲು ಒಬ್ಬರು ಉದ್ಯೋಗ ಮಾಡದೆ ದೂರವಿರಬೇಕಾದ ಪರಿಸ್ಥಿತಿ ಬಂದಲ್ಲಿ, ಅಂತಹವರಿಗೆ ಕೆನಡಾ ಸರ್ಕಾರದ ಹಲವಾರು ನಿಯಮಗಳು ಮತ್ತು ಸೌಲಭ್ಯಗಳಿಂದ ತುಂಬಾ ಸಹಾಯವಾಗುತ್ತದೆ.

ನಿವೃತ್ತಿ ಪ್ರಯೋಜನಗಳು

 

ನಿವೃತ್ತಿ ಪ್ರಯೋಜನಗಳು ಮೂರು ಹಂತಗಳನ್ನು ಒಳಗೊಂಡಿದೆ. ಮೊದಲನೆಯದಾಗಿ ಸಾಮಾಜಿಕ ಪಿಂಚಣಿ, ದ್ವೀತೀಯವಾಗಿ ವೈಯಕ್ತಿಕ ಉಳಿತಾಯ ಮತ್ತು ತೃತೀಯವಾಗಿ ಉದ್ಯೋಗದಾತ ಪ್ರಾಯೋಜಿತ ಪಿಂಚಣಿ. ನಿವೃತ್ತಿಗೆ ಯಾವುದೇ ಕಡ್ಡಾಯ ವಯಸ್ಸು ಇಲ್ಲ. ಕೆನಡಾದ ಸಾಮಾಜಿಕ ಭದ್ರತೆಯ ಅನುಕೂಲಗಳ ಕಾರಣದಿಂದಾಗಿ ನಿವೃತ್ತಿ ಜೀವನ ಇಲ್ಲಿ ಅನುಕೂಲಕರವಾಗಿರುತ್ತದೆ..

4. ವಸತಿ ಮತ್ತು ವಲಸೆ ಸೇವೆಗಳು

ನೀವು ಉದ್ಯೋಗವನ್ನು ಹುಡುಕಿಕೊಂಡು ಕೆನಡಾಗೆ ವಲಸೆ ಹೋಗಿದ್ದರೇ, ಅಲ್ಲಿ ಹೊಸ ಮನೆಯನ್ನು ಖರೀದಿಸುವ ಅಥವಾ ಬಾಡಿಗೆಗೆ ಪಡೆಯುವವರೆಗೆ, ತಾತ್ಕಾಲಿಕ ವಸತಿ ಸೌಲಭ್ಯಗಳು ಕೆನಡಾದಲ್ಲಿ ಸಾಕಷ್ಟಿವೆ. ಉದಾಹರಣೆಗೆ ಸಾಕಷ್ಟು ಹೋಟೆಲ್‌ಗಳು ಮತ್ತು ಹಾಸ್ಟೆಲ್ ಗಳು. ಜಗತ್ತಿನ ಹಲವಾರು ದೇಶಗಳು ವಲಸಿಗರು ಅಥವಾ ಪರದೇಶದವರಿಗೆ ಸ್ವಂತ ಮನೆ ಖರೀದಿಸುವ ಅವಕಾಶ ಒದಗಿಸದಿದ್ದರೂ, ಕೆನಡಾ ಸರ್ಕಾರ ವಲಸಿಗರಿಗೆ ಪೂರಕವಾಗುವಂತೆ ಎಲ್ಲಾ ಬಗೆಯ ಅನುಕೂಲಗಳನ್ನು ಮಾಡುವ ಪ್ರಯತ್ನದಲ್ಲಿದೆ. ಕೆನಡಾ ಪರಕೀಯರು ತಮ್ಮ ದೇಶದಲ್ಲಿ ಮನೆ ಅಥವಾ ವಿವಿಧ ಬಗೆಯ ಆಸ್ತಿ ಮಾಡಿಕೊಳ್ಳಲು ಅನುಮತಿ ನೀಡಿದೆ.  

ನೀವು ಕೆನಡಾದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಅಲ್ಲಿಯ ಭಾಷೆ ಕಲಿಯಲು, ಫಾರ್ಮ್‌ಗಳನ್ನು ಭರ್ತಿ ಮಾಡಲು ಅಥವಾ ವಾಸಿಸಲು ಸ್ಥಳವನ್ನು ಪಡೆಯಲು ಯಾವುದೇ ಬಗೆಯ ಸಹಾಯವನ್ನು ಬಯಸಿದರೆ, ನಿಮ್ಮ ಅನುಕೂಲಕ್ಕಾಗಿ ವಿವಿಧ ಪ್ರದೇಶಗಳಲ್ಲಿರುವ ವಲಸೆ ಸೇವೆಗಳನ್ನು ಸಹಾಯಹಸ್ತ ನೀಡುತ್ತವೆ. ಇಂತಹ ಸೇವೆಗಳನ್ನು ಸಂಪರ್ಕಿಸುವುದರಿಂದ ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು. 

ನಿಮಗೆ ಮಕ್ಕಳಿದ್ದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳು ಉಚಿತವಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಕೆನಡಾದಲ್ಲಿ ಶಾಶ್ವತ ರೆಸಿಡೆನ್ಸಿಗೆ ಅರ್ಜಿ ಸಲ್ಲಿಸುವಾಗ ಈ ಎಲ್ಲಾ ಅಂಶಗಳು ನಿಮ್ಮ ಪರವಾಗಿ ಎಣಿಸಲ್ಪಡುತ್ತವೆ.

5. ಹೈಟೆಕ್ ಕೆನಡಾ

ಆಧುನಿಕ ತಂತ್ರಜ್ಞಾನಗಳಲ್ಲಿ ಕೆನಡಾ ಉನ್ನತ ಸ್ಥಾನದಲ್ಲಿದೆ. ಇದು ವೇಗವಾಗಿ ಮುನ್ನಡೆಯುತ್ತಿದೆ. ಐಟಿ ವೃತ್ತಿಪರರು ಮತ್ತು ಕಂಪ್ಯೂಟರ್ ತಂತ್ರಜ್ಞಾನಿಗಳಿಗೆ ಕೆನಡಾ ಅತ್ಯುತ್ತಮ ಸ್ಥಳವಾಗಿದೆ.

ಕೆನಡಾ ಅನೇಕ ಆವಿಷ್ಕಾರಗಳು ಮತ್ತು ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಳಿಗೆ ಕಾರಣವಾಗಿದೆ. ದೂರಸಂಪರ್ಕ ಅಥವಾ ಟೆಲಿಫೋನ್, ವೈದ್ಯಕೀಯ ಕ್ಷೇತ್ರ, ಏರೋಸ್ಪೇಸ್ ಮತ್ತು ಎಂಜಿನಿಯರಿಂಗ್ ಕೆನಡಾದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಹಲವಾರು ಕ್ಷೇತ್ರಗಳಲ್ಲಿ ಕೆಲವು ಕೈಗಾರಿಕೆಗಳಾಗಿವೆ. 

ಕೆನಡಾವು ಉನ್ನತ ಆರ್ಥಿಕತೆ, ಅತ್ಯಾಧುನಿಕ ಮಾರುಕಟ್ಟೆ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಹೊಸ ಉತ್ಪನ್ನಗಳು, ಸೇವೆಗಳು ಮತ್ತು ಪ್ರಕ್ರಿಯೆಗಳು, ಕೆನಡಾದ ಉದ್ಯಮದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿವೆ.

ಕೆನಡಾ ಸರ್ಕಾರವು ನೀಡುವ ಎಲ್ಲಾ ಅನುಕೂಲಗಳ ಪರಿಣಾಮವಾಗಿ, ಪ್ರಪಂಚದಾದ್ಯಂತದ ಅನೇಕ ಜನರು ಕೆನಡಾಕ್ಕೆ ವಲಸೆ ಹೋಗಲು ಪ್ರಾರಂಭಿಸುತ್ತಿದ್ದಾರೆ. ಕೆನಡಾ ಎಲ್ಲವನ್ನು ಮತ್ತು ಎಲ್ಲರನ್ನು ಸ್ವಾಗತಿಸುತ್ತದೆ ಮತ್ತು ಸ್ವೀಕರಿಸುತ್ತದೆ. ಕೆನಡಾದಲ್ಲಿ ಜನಸಂಖ್ಯೆಯ ವೈವಿಧ್ಯತೆಯು ಹೆಚ್ಚಾದಂತೆ, ಅಲ್ಲಿನ ಉದ್ಯೋಗ ಸಂಸ್ಕೃತಿ ಆ ವಿವಿಧತೆಗೆ ಪೂರಕವಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಅನೇಕ ಕಾರ್ಪೊರೇಷನ್‌ಗಳು ಪ್ರತಿ ವರ್ಷ ಮೌಲ್ಯಮಾಪನ  ಮಾಡುತ್ತವೆ. ಉದಾಹರೆಣೆಗೆ, ಕೆನಡಾ ಪ್ರತಿ ವರ್ಷ “ಅತ್ಯುತ್ತಮ ವೈವಿಧ್ಯತೆಯ ಉದ್ಯೋಗದಾತರು” ಎನ್ನುವ ಸ್ಪರ್ಧೆಯನ್ನು ನಡೆಸುತ್ತದೆ. ಈ ಸ್ಪರ್ಧೆಯನ್ನು ಕಳೆದ ಏಳು ವರ್ಷಗಳಿಂದ ನಡೆಸಲಾಗುತ್ತಿದೆ. ಕೆನಡಾದ ವೈವಿಧ್ಯತೆಗೆ ತಕ್ಕ ಅತ್ಯುತ್ತಮ ಕೆಲಸದ ಸ್ಥಳ ಮತ್ತು ಪರಿಸರವನ್ನು ತಮ್ಮ ಉದ್ಯೋಗಿಗಳಿಗೆ  ಒದಗಿಸುವ ಸಂಸ್ಥೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಸನ್ಮಾನಿಸುತ್ತದೆ.

ಇತರ ಕಾರಣಗಳು

ನುರಿತ ಕೆಲಸಗಾರರ ಕೊರತೆ:

ಕೆನಡಾದಲ್ಲಿ ನುರಿತ ಕೆಲಸಗಾರರ ಕೊರತೆ ಇದೆ. ಆದ್ದರಿಂದ ನೀವು ಅನುಭವಿ ವೃತ್ತಿಪರರಾಗಿದ್ದರೆ, ನೀವು ಕೆನಡಾದಲ್ಲಿ ಉತ್ತಮ ಉದ್ಯೋಗ ಮತ್ತು ಸೌಲಭ್ಯಗಳನ್ನು ಅನುಭವಿಸಬಹುದು. ಇದೇ ಕಾರಣದಿಂದಾಗಿ  ವೃತ್ತಿಪರ ವಲಸಿಗರು ಅಥವಾ ಉದ್ಯೋಗಾಕಾಂಕ್ಷಿಗಳನ್ನು ಕೆನಡಾ ಸರ್ಕಾರ ವಿಶೇಷವಾಗಿ ಸ್ವಾಗತಿಸಿ, ಆಲಂಗಿಸುತ್ತದೆ. ಕೆನಡಾದಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಟ್ರೈನಿಂಗ್ ಅಥವಾ ತರಬೇತಿ ಅವಕಾಶಗಳೆಂದರೆ – ಸಂದಾಯಿತ ಶೈಕ್ಷಣಿಕ ರಜೆಗಳು, ಅಪ್ರೆಂಟಿಸ್‌ಶಿಪ್, ವೃತ್ತಿಪರ ತರಬೇತಿಗಳು, ವೊಕೇಷನಲ್ ಟ್ರೈನಿಂಗ್ ಮತ್ತು ನಿರಂತರ ಕಲಿಕಾ ಯೋಜನೆ, ಇತ್ಯಾದಿ. ಇಂತಹ ತರಬೇತಿಗಳನ್ನು ನೀಡುವುದರೊಂದಿಗೆ ಕೆನಡಾ ತನ್ನ ದೇಶದ ವೃತ್ತಿಪರರ ಕೌಶಲ್ಯಗಳನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. 

ಕೆನಡಾದಲ್ಲಿ ಇದೀಗ ಹೆಚ್ಚು ಬೇಡಿಕೆಯಿರುವ ಹತ್ತು ವಿವಿಧ ಉದ್ಯೋಗಗಳ ಪಟ್ಟಿ ಇಲ್ಲಿದೆ:

1) ಕೌಶಲ್ಯದ ವಹಿವಾಟು: ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್ಸ್

2) ಸೇಲ್ಸ್ ಪ್ರತಿನಿಧಿಗಳು: ಬಿ 2 ಬಿ, ಬಿ 2 ಸಿ, ಸಂಪರ್ಕ ಕೇಂದ್ರ 

3) ಚಾಲಕರು: ಟ್ರಕ್ ವಿತರಣೆ, ನಿರ್ಮಾಣ, ಸಾಮೂಹಿಕ ಸಾರಿಗೆ 

4) ತಂತ್ರಜ್ಞರು: ಗುಣಮಟ್ಟದ ನಿಯಂತ್ರಕಗಳು, ತಾಂತ್ರಿಕ ಸಿಬ್ಬಂದಿ 

5)ಎಂಜಿನಿಯರ್‌ಗಳು: ರಾಸಾಯನಿಕ, ವಿದ್ಯುತ್, ನಾಗರಿಕ.

6) ಯಾಂತ್ರಿಕ: ಸೈಬರ್‌ ಸೆಕ್ಯುರಿಟಿ ತಜ್ಞರು, ನೆಟ್‌ವರ್ಕ್ ನಿರ್ವಾಹಕರು, ತಾಂತ್ರಿಕ ಬೆಂಬಲ ಕಛೇರಿ ಬೆಂಬಲ.

7) ಆಡಳಿತ ಸಹಾಯಕರು, ಪಿಎಗಳು, ಸ್ವಾಗತಕಾರರು

8) ಆರೋಗ್ಯ ವೃತ್ತಿಪರರು: ವೈದ್ಯರು, ದಾದಿಯರು, ಇತರ ಶುಶ್ರೂಷೆಯಲ್ಲದ ಆರೋಗ್ಯ ವೃತ್ತಿಗಳು.

9) ವೃತ್ತಿಪರರು: ಯೋಜನಾ ವ್ಯವಸ್ಥಾಪಕರು, ವಕೀಲರು, ಸಂಶೋಧಕರು. 

10) ಶಿಕ್ಷಕರು.

“ನಿಮ್ಮ ಅರ್ಹತೆಗಳು ಏನೇ ಇರಲಿ, ನೀವು ಎಂಜಿನಿಯರ್, ವಹಿವಾಟುಗಾರ ಅಥವಾ ಮಾರಾಟಗಾರ – ಏನೇ ಆಗಿದ್ದರೂ, ನಿಮ್ಮಲ್ಲಿ ಮೃದು ಕೌಶಲ್ಯಗಳು ಅಥವಾ ಸಾಫ್ಟ್ ಸ್ಕಿಲ್ಸ್ ಗಳ ಅಡಿಪಾಯವಿಲ್ಲದಿದ್ದರೆ, ನೀವು ಈ ದೇಶದಲ್ಲಿ ವಿಫಲರಾಗುವುದು ಖಚಿತ. ಏಕೆಂದರೆ ಈ ದೇಶದಲ್ಲಿ ವೃತ್ತಿ ಕೌಶಲ್ಯಗಳೊಂದಿಗೆ, ಸಾಫ್ಟ್ ಸ್ಕಿಲ್ಸ್ ಹೊಂದುವುದು ಅತ್ಯಂತ ಅಗತ್ಯವಾದ ವಿಷಯ.

ಜೀವನ ವೆಚ್ಚ:

ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಕೆನಡಾದಲ್ಲಿ ಜೀವನ ವೆಚ್ಚ ಬಹಳ ಕಡಿಮೆ ಆಗಿದೆ. ಈ ದೇಶದಲ್ಲಿನ ಜೀವನ ವೆಚ್ಚ ನೀವು ವಾಸಿಸಲು ಆಯ್ಕೆ ಮಾಡುವ ಪ್ರದೇಶದ ಮೇಲೆ ಅವಲಂಬಿತವಾಗಿದೆ. ಆದರೆ, ಯಾವುದೇ ಪ್ರದೇಶದಲ್ಲಿದ್ದರೂ, ಇತರ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಆಹಾರ, ಪೆಟ್ರೋಲ್, ಅನಿಲ, ಕಾರುಗಳು ಮತ್ತು ವಿದ್ಯುತ್ ಕೆನಡಾದಲ್ಲಿ ಅಗ್ಗವಾಗಿದೆ. ಆದ್ದರಿಂದ ಜೀವನ ವೆಚ್ಚ ಸಹಜವಾಗಿಯೇ ಕಡಿಮೆ. ಕೆಲವು ನಗರಗಳಲ್ಲಿ ಸಾರಿಗೆ ವೆಚ್ಚವು ಹೆಚ್ಚಿರಬಹುದು ಆದರೆ ಇತರ ಅಭಿವೃದ್ಧಿ ಹೊಂದಿದ ವಿಶ್ವದ ನಗರಗಳಿಗಿಂತ ಖಂಡಿತವಾಗಿಯೂ ಅಗ್ಗವಾಗಿದೆ.

ಮರ್ಸರ್ 2018 ರಲ್ಲಿ ಸಾಗರೋತ್ತರ ಕಾರ್ಮಿಕರಿಗಾಗಿ ವ್ಯಾಪಕವಾದ ಜೀವನ ವೆಚ್ಚ ಸಮೀಕ್ಷೆಯನ್ನು ನಡೆಸಿತು. ಈ ಸಮೀಕ್ಷೆಯು 209 ನಗರಗಳನ್ನು ಒಳಗೊಂಡಿತ್ತು. ಮತ್ತು ವಸತಿ, ಸಾರಿಗೆ, ಆಹಾರ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಮತ್ತು ಮನರಂಜನೆ ಸೇರಿದಂತೆ ಪ್ರತಿ ಸ್ಥಳದಲ್ಲಿ 200 ಕ್ಕೂ ಹೆಚ್ಚು ವಸ್ತುಗಳ ತುಲನಾತ್ಮಕ ವೆಚ್ಚವನ್ನು ಅಳೆಯಲಾಗಿದೆ. ಈ ಸಮೀಕ್ಷೆಯ ಅನುಸಾರ ಕೆನಡಾದ ಜೀವನ ಆ ದೇಶದ ನಿವಾಸಿಗಳಿಗೆ ಮತ್ತು ಈ ದೇಶಕ್ಕೆ ವಲಸೆ ಹೋಗುವವರಿಗೆ ಅತ್ಯುತ್ತಮವಾಗಿದೆ.

ಸಮೀಕ್ಷೆ ನಡೆಸಿದ 209 ನಗರಗಳಲ್ಲಿ ಕೆನಡಾದ ನಗರಗಳ ಶ್ರೇಯಾಂಕಗಳು ಇಲ್ಲಿವೆ: 
ಟೊರೊಂಟೊ ಮತ್ತು ವ್ಯಾಂಕೋವರ್ (ಜಂಟಿ 109 ನೇ) ಕೆನಡಾದಲ್ಲಿ ಅತಿ ಹೆಚ್ಚು ಜೀವನ ವೆಚ್ಚವನ್ನು ಹೊಂದಿದೆ, ನಂತರ ಮಾಂಟ್ರಿಯಲ್ (147 ನೇ), ಕ್ಯಾಲ್ಗರಿ (154 ನೇ) ಮತ್ತು ಒಟ್ಟಾವಾ (160 ನೇ).

ಅಂತಿಮವಾಗಿ, ಕೆನಡಾದ ನಗರಗಳು ಅಭಿವೃದ್ಧಿ ಹೊಂದಿದ ವಿಶ್ವದ ಇತರ ಸ್ಥಳಗಳಿಗಿಂತ ಕಡಿಮೆ ಜೀವನ ವೆಚ್ಚವನ್ನು ಹೊಂದಿವೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ಆದರೆ ಮುಂಚಿನ ಸಮೀಕ್ಷೆಗೆ ಹೋಲಿಸಿದರೆ ಕೆನಡಾ ಒಟ್ಟಾರೆಯಾಗಿ ಹತ್ತು ಸ್ಥಾನಗಳನ್ನು ನೆಗೆದಿದೆ. ಅಂದರೆ ಹಿಂದಿನ ವರ್ಷಕ್ಕಿಂತ ಈ ವರ್ಷ ಕೆನಡಾದ ಜೀವನ ವೆಚ್ಚ ಹೆಚ್ಚಾಗಿದೆ. ಇದಕ್ಕೆ ಕಾರಣ ವಲಸಿಗರ ವಸತಿ ಬಾಡಿಗೆ ವೆಚ್ಚ ಹೆಚ್ಚಳ.

ಕೆನಡಾ ದೇಶವು ಕಡಿಮೆ ಅಪರಾಧಗಳ ಪ್ರಮಾಣವನ್ನು ಹೊಂದಿದ್ದು, ಇದು ಇಡೀ ವಿಶ್ವದಲ್ಲಿ ವಾಸಿಸಲು ಸುರಕ್ಷಿತವಾಗಿರುವ ಸ್ಥಳಗಳಲ್ಲಿ ಒಂದಾಗಿದೆ.

ಕೆನಡಾವನ್ನು ಉನ್ನತ ಆರ್ಥಿಕತೆ ಮತ್ತು ಅತ್ಯಾಧುನಿಕ ಉದ್ಯೋಗ ಮಾರುಕಟ್ಟೆ ಹೊಂದಿರುವ ಅತ್ಯುತ್ತಮ ದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿರುವುದರಿಂದ, ಜನರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ  ಅಭಿವೃದ್ಧಿ ಹೊಂದಲು ಕೆನಡಾ ಸರಿಯಾದ ಸ್ಥಳವೆಂದು ನಾವು ನಂಬುತ್ತೇವೆ.

ಮೇಲೆ ನೀಡಿರುವ ಕಾರಣಗಳಷ್ಟೇ ಅಲ್ಲದೇ, ನೀವು ಕೆನಡಾದಲ್ಲಿ ಉದ್ಯೋಗ ಹುಡುಕುವುದನ್ನು ಉತ್ತೇಜಿಸಲು, ಹಲವಾರು ಕಾರಣಗಳಿವೆ. ಸುಂದರವಾದ ಭೂದೃಶ್ಯಗಳು, ವೈವಿಧ್ಯಮಯ ಮತ್ತು ಬಹುಸಾಂಸ್ಕೃತಿಕ ಜನಸಂಖ್ಯೆ, ನಾಗರಿಕ ಸ್ವಾತಂತ್ರ್ಯಗಳು ಮತ್ತು ಅಂತಿಮವಾಗಿ, ಸಾಕಷ್ಟು ಅವಕಾಶಗಳು ಈ ದೇಶದ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಇಷ್ಟೊಂದು ಅವಕಾಶಗಳನ್ನು ಮತ್ತು ಸೌಲಭ್ಯಗಳನ್ನು ಹೊಂದಿರುವ ದೇಶ ವಲಸಿಗರನ್ನು ಆತ್ಮೀಯತೆಯಿಂದ ಅಪ್ಪಿಕೊಳ್ಳುತ್ತದೆ ಮತ್ತು  ಒಪ್ಪಿಕೊಳ್ಳುತ್ತದೆ. ಹಾಗಾಗಿ, ನೀವು ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ವಿವಿಧ  ಅವಕಾಶಗಳನ್ನು ಹುಡುಕುತ್ತಿದ್ದರೆ, ಕೆನಡಾ ದೇಶಕ್ಕೆ ಪ್ರಾಮುಖ್ಯತೆ ನೀಡಲೇ ಬೇಕು. ಕೆನಡಾದಲ್ಲಿ ಉದ್ಯೋಗ ಸಿಕ್ಕರೆ, ನೀವು ಅದೃಷ್ಟಶಾಲಿಯೇ ಸರಿ!