ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ೪ ಅತ್ಯುತ್ತಮ ವಿಧಾನಗಳು

ways to learn digital marketing bengali

ಇಂದಿನ ಕಾಲದಲ್ಲಿ, ಗೂಗಲ್ ನಮ್ಮ ಆತ್ಮೀಯ ಸ್ನೇಹಿತ. ಫೇಸ್ಬುಕ್ ನಮ್ಮ ಜೀವನದ ಕಿರುಚಿತ್ರ. ಟ್ವಿಟ್ಟರ್ ನಮ್ಮ ಅಭಿಪ್ರಾಯಗಳ ಧ್ವನಿ. ಹೀಗಿರುವಾಗ, ಅಮೇರಿಕಾದ ಸಂಶೋಧಕ ರೇ ಕುರ್ಜ್ವಿಲ್ ಅವರು ಹೇಳಿರುವಂತೆ “ಮೊಬೈಲ್ ಫೋನ್ ಗಳನ್ನು ತಪ್ಪಾಗಿ ಹೆಸರಿಸಲಾಗಿದೆ. ಅದನ್ನು ಜ್ಞಾನದ ಹೆಬ್ಬಾಗಿಲು ಎಂದು ಕರೆಯಬೇಕು” ಎನ್ನುವ ಮಾತನ್ನು ನಾವೆಲ್ಲರೂ ಸಹಮತದಿಂದ ಒಪ್ಪಿಕೊಳ್ಳಲೇಬೇಕು ಎಂದರೆ ತಪ್ಪಾಗಲಾರದು. 

ಇತ್ತೀಚಿನ ಕಾಲದಲ್ಲಿ ಎಳೆ ಕಂದಮ್ಮನಿಂದ ವಯಸ್ಸಾದ ಮುದುಕರವರೆಗೂ ಅಂತರ್ಜಾಲದ ಹುಚ್ಚು ಹೆಚ್ಚಿದೆ. ಏಕೆಂದರೆ ಅಂತರ್ಜಾಲದಲ್ಲಿರುವ ಫೇಸ್ಬುಕ್, ಇನ್ಸ್ಟಾಗ್ರಾಮ್ ತರಹದ ಸೋಶಿಯಲ್ ಮೀಡಿಯಾ, ವಿಕಿಪೀಡಿಯ, ಇ ಕಾಮೆರ್ಸ್ ಅಥವಾ ಗೂಗಲ್ ತರಹದ ಇತ್ಯಾದಿ ವೆಬ್ಸೈಟ್ ಗಳು ಪ್ರತಿಯೊಬ್ಬರಿಗೂ ಅಗತ್ಯವಿರುವ ಜ್ಞಾನ ಮತ್ತು ಮನೋರಂಜನೆಯ ನೀಡುತ್ತವೆ. ಅಂತರ್ಜಾಲವನ್ನು ಬಳಸುವ ಪ್ರತಿಯೊಬ್ಬರಿಗಾಗಿ, ಪ್ರತಿ ಸಂಸ್ಥೆಯೂ ತನ್ನ ಸೇವೆಗಳು ಮತ್ತು ಉತ್ಪನ್ನಗಳನ್ನು ಜಗತ್ತಿಗೆ ತಿಳಿಸಲು ಅಂತರ್ಜಾಲವನ್ನು ಆಯ್ದುಕೊಳ್ಳುತ್ತಿವೆ. ಈ ರೀತಿ ತಮ್ಮ ಉತ್ಪನ್ನಗಳ ಬಗ್ಗೆ ಅಥವಾ ಸೇವೆಗಳ ಬಗ್ಗೆ ಅಂತರ್ಜಾಲದ ಮೂಲಕ ಜಗತ್ತಿಗೆ ತಿಳಿಸುವುದಕ್ಕೆ ಡಿಜಿಟಲ್ ಮಾರ್ಕೆಟಿಂಗ್ ಎನ್ನುತ್ತಾರೆ. 

ಅರಿತರ್ಜಾಲದ ಬಳಕೆ ಅತ್ಯಂತ ಹೆಚ್ಚಿರುವ ಈ ಕಾಲದಲ್ಲಿ ಸಂಸ್ಥೆಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ಮಾಡುವ ಅಗತ್ಯತೆಯೂ ಹೆಚ್ಚಿದೆ. ಇದು ಅತ್ಯಂತ ಬೇಡಿಕೆಯ ಕ್ಷೇತ್ರವಾಗಿದೆ ಎಂದರೂ ತಪ್ಪಾಗಲಾರದು.

ಕೆಲವೇ ವರ್ಷಗಳ ಹಿಂದೆ ಮಾರ್ಕೆಟಿಂಗ್ ಎಂದರೆ ಸೇಲ್ಸ್ ಪರ್ಸನ್ ಅಥವಾ ಮಾರಾಟ ಮಾಡುವವರು ಮನೆ ಮನೆಗೆ ಹೋಗಿ ತಮ್ಮ ಉತ್ಪನ್ನಗಳ ಅಥವಾ ಸೇವೆಗಳನ್ನು ಜನರಿಗೆ ತಿಳಿಸಿ, ಅದನ್ನು ಕೊಂಡುಕೊಳ್ಳಲು ಗ್ರಾಹಕರ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಆದರೆ ಇಂದಿನ ಕಾಲ ಬದಲಾಗಿದೆ. ಗ್ರಾಹಕರು ಫೇಸ್ಬುಕ್, ವಾಟ್ಸಪ್ಪ್, ಟ್ವಿಟ್ಟರ್ ಮತ್ತು ಇನ್ನಿತರ ವೆಬ್ಸೈಟ್ ಗಳಲ್ಲಿ ಹೆಚ್ಚಿನ ಕಾಲ ಕಳೆಯುತ್ತಾರೆ. ಗ್ರಾಹಕರ ದೃಷ್ಟಿಕೋನ ಮತ್ತು ಕೊಂಡುಕೊಳ್ಳುವ ವಿಧಾನ ಬದಲಾಗಿದೆ. ಹಾಗಾಗಿ, ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸಲು ಮತ್ತು ಅವರಿಗೆ ತಿಳಿದುಕೊಳ್ಳಬೇಕಾದ ಮಾಹಿತಿ ನೀಡಲು ಡಿಜಿಟಲ್ ಮಾರ್ಕೆಟಿಂಗ್ ಸಹಾಯ ಮಾಡುತ್ತದೆ. ಈ ಬಗೆಯ  ಹಲವಾರು ಕಾರಣಗಳಿಂದಾಗಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರವೂ ಹೆಚ್ಚಿನ ಆಕರ್ಷಣೆಯನ್ನು ಪಡೆಯುತ್ತಿದೆ. ಹಾಗಿದ್ದರೆ ಡಿಜಿಟಲ್ ಮಾರ್ಕೆಟಿಂಗ್ ಎಂದರೇನು? ಇದನ್ನು ಕಲಿಯುವುದು ಹೇಗೆ? ನಿಮ್ಮ ಎಲ್ಲಾ ಪ್ರಶೆಗಳಿಗೆ ನಮ್ಮ ಈ ಲೇಖನ ಉತ್ತರ ನೀಡುತ್ತದೆ.

ಡಿಜಿಟಲ್ ಮಾರ್ಕೆಟಿಂಗ್ ಎಂದರೇನು?

ಡಿಜಿಟಲ್ ಮಾರ್ಕೆಟಿಂಗ್ ಎಂದರೆ ಸಂಸ್ಥೆಯ ಸೇವೆಗಳು ಅಥವಾ ಉತ್ಪನ್ನಗಳನ್ನು ಅಂತರ್ಜಾಲದಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ (ಅಂದರೆ ಮೊಬೈಲ್ ಫೋನ್ ಅಪ್ಪ್ಲಿಕೆಶನ್ಸ್ ಅಥವಾ ಪ್ರದರ್ಶನ ಜಾಹಿರಾತುಗಳು ಅಥವಾ ಫೇಸ್ಬುಕ್ ಅಥವಾ ಅಂತರಜಾಲದ ಇತ್ಯಾದಿ ಮಾಧ್ಯಮಗಳು) ಮೂಲಕ ಮಾರ್ಕೆಟಿಂಗ್ ಮಾಡುವುದು. 

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಎರಡು ಬಗೆಗಳು:

೧. ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್: ಸೋಶಿಯಲ್ ಮೀಡಿಯಾ ಅಂದರೆ ಫೇಸ್ಬುಕ್, ಟ್ವಿಟ್ಟರ್, ಯೌಟ್ಯೂಬ್, ಇನ್ಸ್ಟಾ ಗ್ರಾಂ, ಇತ್ಯಾದಿ ವೆಬ್ಸೈಟ್ ಗಳಲ್ಲಿ ಸಂಸ್ಥೆಯ ಉತ್ಪನ್ನಗಳು ಮತ್ತು ಸೇವೆಗಳನ್ನು ಕುರಿತು ಮಾರ್ಕೆಟಿಂಗ್ ಮಾಡುವುದಕ್ಕೆ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಎನ್ನುತ್ತಾರೆ. ಈ ಬಗೆಯ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಸಾಮಾನ್ಯವಾಗಿ ಉತ್ಪನ್ನಗಳು ಅಥವಾ ಸೇವೆಗಳು ಜನರ ಅಗತ್ಯತೆಗಳನ್ನು ಅನ್ವೇಷಿಸಿ, ಅರ್ಥೈಸಿಕೊಂಡು ಉತ್ಪನ್ನಗಳ/ಸೇವೆಗಳ ವಿವರಗಳನ್ನು ನೀಡಲಾಗುತ್ತದೆ. 

೨. ಸರ್ಚ್ ಎಂಜಿನ್ ಮಾರ್ಕೆಟಿಂಗ್:   ಈ ಬಗೆಯ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಗ್ರಾಹಕರು ತಮ್ಮ ಅಗತ್ಯತೆಗಳಿಗೆ  ತಕ್ಕಂತೆ ತಾವೇ ಸ್ವತಃ ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಹುಡುಕಿಕೊಳ್ಳುತ್ತಾರೆ. ಆದರೆ ಸಂಸ್ಥೆ ಗ್ರಾಹಕರ ನೀರಿಕ್ಷೆಗೆ ತಕ್ಕಂತೆ ಎಲ್ಲಾ ಬಗೆಯ ವಿವರಗಳನ್ನು ನೀಡಬೇಕು. 

ಡಿಜಿಟಲ್ ಮಾರ್ಕೆಟಿಂಗ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಸಂಸ್ಥೆಯು ಅಥವಾ ಸಂಸ್ಥೆಯ ಸಿಬ್ಬಂಧಿ ತಮ್ಮ ಉತ್ಪನ್ನಗಳು ಅಥವಾ ಸೇವೆಗಳ ಕುರಿತಾಗಿ ಆಸಕ್ತಿದಾಯಕವಾದ ಪೋಸ್ಟ್ ಗಳನ್ನು ರಚಿಸುತ್ತಾರೆ. ಅದನ್ನು ಸೋಶಿಯಲ್ ಮೀಡಿಯಾ ಅಥವಾ ಇತ್ಯಾದಿ ವೆಬ್ಸೈಟ್ ಗಳಲ್ಲಿ ಶೇರ್ ಮಾಡುತ್ತಾರೆ. ಅದರೊಂದಿಗೆ ತಮ್ಮ ಉತ್ಪನ್ನಗಳನ್ನು ಕೊಂಡುಕೊಳ್ಳಲು ಅಥವಾ ತಮ್ಮ ಸೇವೆಗಳನ್ನು ಖರೀದಿಸಲು ಅಗತ್ಯವಿರುವ ಆನ್ಲೈನ್ ಲಿಂಕ್ ಅನ್ನು ಆ ಪೋಸ್ಟ್ ನೀಡುತ್ತಾರೆ. ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಖರೀದಿಸಲು ಯಾವುದೇ ಬಗೆಯ ಲಿಂಕ್ ಇಲ್ಲದಿದ್ದರೇ, ಕನಿಷ್ಠ ಪಕ್ಷ ಸಂಸ್ಥೆಯ ವೆಬ್ಸೈಟ್ ವಿಳಾಸವನ್ನಾದರೂ ನೀಡುತ್ತಾರೆ. ಈ ಸಂಪೂರ್ಣ ಪ್ರಕ್ರಿಯೆಯ ಉದ್ದೇಶ ಕಂಪನಿ ಅಥವಾ ಸಂಸ್ಥೆಯ ಉತ್ಪನ್ನ ಮತ್ತು ಸೇವೆಗಳ ಬಗ್ಗೆ ಸಂಭಾವ್ಯ ಗ್ರಾಹಕರಿಗೆ ತಿಳಿಸಿ ಕೊಡುವುದು.

ಡಿಜಿಟಲ್ ಮಾರ್ಕೆಟಿಂಗ್ ಬೇರೆ ವಿಷಯಗಲಿಗಿಂತ ಹೇಗೆ ವಿಭಿನ್ನವಾಗಿದೆ?

ಬೇರೆ ಯಾವುದೇ ಅಥವಾ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡರೂ, ಎಲ್ಲವುಗಳಲ್ಲಿ ಅಭ್ಯಾಸಕ್ಕಿಂತ ಸಿದ್ಧಾಂತವೇ ಹೆಚ್ಚು. ಹಾಗಾಗಿ ಅವುಗಳನ್ನು ದೀರ್ಘವಾಗಿ ಅರಿತುಕೊಳ್ಳುವುದು ಕಷ್ಟ. ಉದಾಹರಣೆಗೆ: ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವುದನ್ನು ನಾವು ನೈಜವಾಗಿ ನೋಡಿದಾಗಲೇ, ಈ ವೃತ್ತಿ ಸತ್ಯಾಸತ್ಯತೆಗಳ ಅರಿವು ನಮಗೆ ಉಂಟಾಗುತ್ತದೆ. ಆದರೆ ಡಿಜಿಟಲ್ ಮಾರ್ಕೆಟಿಂಗ್ ಸಕ್ರಿಯ ಕ್ಷೇತ್ರ. ಇಲ್ಲಿ ಪ್ರತಿನಿತ್ಯ ಕಲಿಕೆ ಮತ್ತು ಅಭ್ಯಾಸ ಅತ್ಯಂತ ಮುಖ್ಯವಾಗುತ್ತದೆ.

ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ೪ ಅತ್ಯುತ್ತಮ  ಮಾರ್ಗಗಳು:

ಡಿಜಿಟಲ್ ಮಾರ್ಕೆಟಿಂಗ್ ನ ಉದ್ದೇಶವೆಂದರೆ ಸಂಸ್ಥೆಯ ವೆಬ್ಸೈಟ್ ಅಥವಾ ಸಂಸ್ಥೆಯ ಸೋಶಿಯಲ್ ಮೀಡಿಯಾ ಪ್ರೊಫೈಲ್ ಗಳಿಗೆ ಸಂಭಾವ್ಯ ಗ್ರಾಹಕ  ಅಥವಾ ಸಂದರ್ಶಕರನ್ನು ಆಕರ್ಷಿಸುವುದು. ಇದರ ಮೂಲಕ ಉತ್ಪನ್ನಗಳ ಅಥವಾ ಸೇವೆಗಳ ಮಾರಾಟ ಹೆಚ್ಚಿಸುವುದು. 

ಡಿಜಿಟಲ್ ಮಾರ್ಕೆಟಿಂಗ್ ಅನ್ನು ಮೂರು ಭಾಗವಾಗಿ ವಿಂಗಡಿಸಬಹುದು. ಅವುಗಳೆಂದರೆ ಸ್ವಾಧೀನ (Acquisition), ಧಾರಣೆ (Retention) ಮತ್ತು ಪರಿವರ್ತನೆ (Conversion). ಸಾಮಾನ್ಯವಾಗಿ ಡಿಜಿಟಲ್ ಮಾರ್ಕೆಟಿಂಗ್ ತಜ್ಞರು ಈ ಭಾಗಗಳ ಒಂದರಲ್ಲಿ ಪರಿಣತಿ ಹೊಂದಿರುತ್ತಾರೆ. ಆದರೆ, ಆ ಒಂದು ಭಾಗದಲ್ಲಿ ಪರಿಣತಿ ಹೊಂದುವ ಮೊದಲು ಈ ಎಲ್ಲಾ ಭಾಗಗಳ ಬಗ್ಗೆ ಅರಿತು, ತಿಳಿದುಕೊಂಡಿರುತ್ತಾರೆ. ಡಿಜಿಟಲ್ ಮಾರ್ಕೆಟಿಂಗ್ ನ ವೃತ್ತಿಪರರಾಗಲು, ಈ ಮೂರೂ ಭಾಗಗಳ ಬಗ್ಗೆ ತಿಳಿದುಕೊಂಡು, ಇವುಗಳಲ್ಲಿ ಯಾವುದರ ಬಗ್ಗೆ ತಮ್ಮ ಆಸಕ್ತಿ ಹೆಚ್ಚಿದೆ ಎನ್ನುವುದನ್ನು ಗುರುತಿಸಿಕೊಳ್ಳಬೇಕು. ಹಾಗೆ ಗುರುತಿಸಿಕೊಳ್ಳುವುದು ಕಷ್ಟವಾದಲ್ಲಿ, ಈ ಎಲ್ಲಾ ಭಾಗಗಳ ಬಗ್ಗೆ ತಿಳಿದುಕೊಂಡು ಸಾಮಾನ್ಯಾವಾದಿಯಾಗುವುದು ಉತ್ತಮ. ಹಲವಾರು ಕಂಪನಿಗಳು, ಅದರಲ್ಲಿಯೂ ಸ್ಟಾರ್ಟ್ ಅಪ್ ಗಳು, ಈ ಬಗೆಯ ಸಾಮಾನ್ಯವಾದಿಗಳನ್ನು ಆಯ್ದುಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ ಅವರ ಈ ಸರ್ವತೋಮುಖ ಜ್ಞಾನ ಸಂಸ್ಥೆಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ನ ಎಲ್ಲಾ ಭಾಗಗಳನ್ನು ಸೂಕ್ತವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. 

ಡಿಜಿಟಲ್ ಮಾರ್ಕೆಟಿಂಗ್ ನ ಈ ಎಲ್ಲಾ ಭಾಗಗಳನ್ನು ತಿಳಿದುಕೊಳ್ಳಲು ಇಲ್ಲಿದೆ ಅತ್ಯುತ್ತಮ ಮಾರ್ಗಗಳು:

1. ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿತ ಪುಸ್ತಕಗಳನ್ನು ಓದಿ, ಜ್ಞಾನ ಗಳಿಸಿಕೊಳ್ಳಿ

ಪುಸ್ತಕಗಳಲ್ಲಿ ಸಿಗುವ ಆನಂದ, ಜ್ಞಾನ ಬೇರೆ ಯಾವುದೇ ತಂತ್ರಾಂಶಗಳಲ್ಲಿ ದೊರಕುವುದಿಲ್ಲ. ಹಾಗಾಗಿ, ನೀವು ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರರಾಗಲು ಬಯಸಿದರೆ, ಅದರ ಸಂಬಂಧಿತ ಪುಸ್ತಕಗಳನ್ನು ಓದಿ. ಅವುಗಳು ನಿಮಗೆ ಅಗತ್ಯವಿರುವ ಜ್ಞಾನವನ್ನು  ನೀಡುತ್ತದೆ ಅದರೊಂದಿಗೆ ಈ ಕ್ಷಾತ್ರವನ್ನು ಆಯ್ದುಕೊಳ್ಳಲು ಅಗತ್ಯವಿರುವ ಚೈತನ್ಯ ಮತ್ತು ವಿಶ್ವಾಸವನ್ನು ನೀಡುತ್ತದೆ.

ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿತ ಪುಸ್ತಕಗಳು ಹಲವಾರು ಇವೆ. ಅತ್ಯುತ್ತಮ ಡಿಜಿಟಲ್ ಮಾರ್ಕೆಟಿಂಗ್ ಪುಸ್ತಕಗಳ ಪಟ್ಟಿ ಇಲ್ಲಿದೆ. ನೀವು ಹೊಸತಾಗಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಅಥವಾ ಈಗಾಗಲೇ ನಿಮ್ಮಲ್ಲಿರುವ ಡಿಜಿಟಲ್ ಮಾರ್ಕೆಟಿಂಗ್ ನ ಜ್ಞಾನವನ್ನು ಹೆಚ್ಚಿಸಲು ಈ ಪುಸ್ತಕಗಳು ಖಂಡಿತವಾಗಿಯೂ ಸಹಾಯ ಮಾಡುತ್ತವೆ.

ಲೇಖಕರು: ಗ್ಯಾರಿ ವೈನರ್ಚಕ್ 

ಗ್ಯಾರಿ ಅತ್ಯುತ್ತಮ ಲೇಖಕರಾಗಿದ್ದು, ಈ ಪುಸ್ತಕದಲ್ಲಿ ಗ್ರಾಹಕರನ್ನು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಮೂಲಕ ಗ್ರಾಹಕರನ್ನು ಹೇಗೆ ಆಕರ್ಷಿಸಬೇಕು ಮತ್ತು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಮಾಡಲು ಮತ್ತು ಗ್ರಾಹಕರ ಭಾವನಾತ್ಮಕ ಪ್ರತಿಕ್ರಿಯೆ ಪಡೆಯಲು ಯಾವ ಜ್ಯಾಬ್ ಮತ್ತು ಹುಕ್ ಗಳನ್ನು ಬಳಸಬೇಕು ಎನ್ನುವುದನ್ನು ಲೇಖಕರು ವಿಸ್ತಾರವಾಗಿ ತಿಳಿಸಿಕೊಡುತ್ತಾರೆ.

ಲೇಖಕರು: ಜೇ ಬೇಯರ್

ಮಾರ್ಕೆಟಿಂಗ್ ನ ಮಾತುಗಾರ, ಡಿಜಿಟಲ್ ಮಾರ್ಕೆಟಿಂಗ್ ನ ಪ್ರವರ್ತಕ, ಜೇ ತಮ್ಮ ಪುಸ್ತಕದಲ್ಲಿ ಸಾಂಪ್ರದಾಯಿಕ ಮನಃಸ್ಥಿತಿ ಇಂದ ಹೊರ ಬಂದು ಇಂದಿನ, ಈ ಜಗತ್ತಿಗೆ ಅಗತ್ಯವಿರುವ ರೀತಿಯಲ್ಲಿ ಮಾರ್ಕೆಟಿಂಗ್ ಹೇಗೆ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತಾರೆ. 

ಲೇಖಕರು: ಜೋ ಪುಲಿಜಿ

“ಗಾಡ್ ಫಾದರ್ ಆಫ್ ಕಂಟೆಂಟ್ ಮಾರ್ಕೆಟಿಂಗ್” ಎಂದೇ ಪ್ರಖಾತಿ ಪಡೆದಿರುವ ಜೋ ಪುಲಿಜಿ ಅವರು ತಮ್ಮ ಪುಸ್ತಕದಲ್ಲಿ ತಮ್ಮದೇ ಆದ ವಿಶೇಷ ರೀತಿಯಲ್ಲಿ ಕಂಟೆಂಟ್ ಮಾರ್ಕೆಟಿಂಗ್ ಬಗ್ಗೆ ತಿಳಿಸಕೊಟ್ಟಿದ್ದಾರೆ. ಅವರು ಹೇಳುವುದೇನೆಂದರೆ ಕಂಟೆಂಟ್ ಮಾರ್ಕೆಟಿಂಗ್ ಮಾಡಲು ಮಾರ್ಕೆಟಿಂಗ್ ಬಗ್ಗೆ ಕಡಿಮೆ ಗಮನ ಹರಿಸಿ, ಗ್ರಾಹಕ ಮನವೊಲಿಸುವ ಕಡೆ ಹೆಚ್ಚಿನ ಗಮನ ಹರಿಸಬೇಕು.

ಲೇಖಕರು: ಅವಿನಾಶ್ ಕೌಶಿಕ್

2009 ರ ಸ್ಟಾಸ್ಟಿಕಲ್ ಅಡ್ವೋಕೇಟ್ ಆ ದಿ ಇಯರ್ ಪ್ರಶಸ್ತಿಯನ್ನು ಪಡೆದಿರುವ ಅವಿನಾಶ್ ಕೌಶಿಕ್, ತಮ್ಮ ಈ ಪುಸ್ತಕದಲ್ಲಿ ಇಂದಿನ ಕಾಲದಲ್ಲಿ ಒಂದು ಸಂಸ್ಥೆ  ಅಥವಾ ವ್ಯವಹಾರ ಯಶಸ್ವಿಗಳಿಸಲು ಆನ್ಲೈನ್ ಡೇಟಾ ದ ಅಗತ್ಯತೆ ಎಷ್ಟಿದೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಅದರೊಂದಿಗೆ ಲಭ್ಯವಿರುವ ಈ ಡಾಟಾವನ್ನು ಹೇಗೆ ಲಾಭವಾಗಿ ಪರಿವರ್ತಿಸಬೇಕು ಎನ್ನುವುದನ್ನೂ ಲೇಖಕರು ಈ ಪುಸ್ತಕದಲ್ಲಿ ತಿಳಿಸಿಕೊಟ್ಟಿದ್ದಾರೆ.

ಲೇಖಕರು: ಸೇಥ್ ಗೋಡಿನ್

18 ಪುಸ್ತಕಗಳ ಲೇಖಕರಾಗಿರುವ ಸೇಥ್ ಗೋಡಿನ್, ತಮ್ಮ ಈ ಪುಸ್ತಕದಲ್ಲಿ ಮಾರ್ಕೆಟಿಂಗ್ ವೃತ್ತಿಯವರು ತಮ್ಮ ಸಂದೇಶವನ್ನು ಗ್ರಾಹಕರ ಅಗತ್ಯತೆಗೆ ತಕ್ಕಂತೆ ಹೇಗೆ ಅಕಾರ ನೀಡಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ.   

2. ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿತ ಕೋರ್ಸ್ ಸೇರಿಕೊಳ್ಳಿ

ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಬಯಸುವವರು ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಗಳಿಗೆ ಸೇರಬಹುದು. ಈ ಕೋರ್ಸ್ ಗಳು ಆನ್ಲೈನ್ ಆಗಿರಬಹುದು ಅಥವಾ ಆಫ್ ಲೈನ್ ಆಗಿರಬಹುದು. ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ನ ಅವಧಿ ಸಾಮಾನ್ಯವಾಗಿ ಎರಡರಿಂದ ಐದು ತಿಂಗಳಗಳವರೆಗೆ ಇರುತ್ತದೆ. ಡಿಜಿಟಲ್ ಮಾರ್ಕೆಟಿಂಗ್ ನ ಬಗ್ಗೆ ಹೆಚ್ಚು ಕಲಿತುಕೊಳ್ಳಲು ಬಯಸುವವರು ಒಂದು ವರ್ಷದ ಡಿಪ್ಲೋಮ ಸೇರಿಕೊಳ್ಳಬಹುದು. ಅಥವಾ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನೂ ಪಡೆಯಬಹುದು. 

ಡಿಜಿಟಲ್ ಮಾರ್ಕೆಟಿಂಗ್ ನ ಕೋರ್ಸ್ ಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ತಿಳಿಸಿಕೊಡಲಾಗುತ್ತದೆ. ಅವುಗಳಲ್ಲಿ ಕೆಲವು ವಿಷಯಗಳೆಂದರೆ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಮತ್ತು ಅನಾಲಿಟಿಕ್ಸ್, ಗೂಗಲ್ ಆಡ್ ಮಾರ್ಕೆಟಿಂಗ್, ವೆಬ್ ಅನಾಲಿಟಿಕ್ಸ್, ಇಮೇಲ್ ಮಾರ್ಕೆಟಿಂಗ್ ಮತ್ತು ಕಂಟೆಂಟ್ ಮಾರ್ಕೆಟಿಂಗ್, ಇತ್ಯಾದಿ.

ಡಿಜಿಟಲ್ ಮಾರ್ಕೆಟಿಂಗ್ ಗೆ ಸಂಬಂಧಪಟ್ಟ ಕೋರ್ಸ್ ಮತ್ತು ನೀವು ಫಾಲೋ ಮಾಡಬೇಕಾದ ಕೆಲವು ವೆಬ್ ಸೈಟ್ ಗಳ ಪಟ್ಟಿ ಇಲ್ಲಿದೆ.

 • ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಕೋರ್ಸ್ 
 • ದಿ ಬಫರ್ ಬ್ಲಾಗ್ 
 • ದಿ ಗ್ರೋ ಬ್ಲಾಗ್ 
 •  ದಿ ಸೋಶಿಯಲ್ ಮೀಡಿಯಾ ಎಕ್ಸಾಮಿನೇರ್ ಬ್ಲಾಗ್ 
 • ದಿ ಹಬ್ ಸ್ಪಾಟ್ ಬ್ಲಾಗ್

3. ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಅಲ್ಲಿ ಇಂಟರ್ನ್ ಅಥವಾ ಸಹಾಯಕರಾಗಿ ಕೆಲಸ ಮಾಡುವುದು

ಡಿಜಿಟಲ್  ಮಾರ್ಕೆಟಿಂಗ್ ಕಂಪನಿ ಅಥವಾ ಏಜೆನ್ಸಿಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಇಂಟರ್ನ್ ಅಥವಾ ಸಹಾಯಕರಾಗಿ ಕೆಲಸ ಮಾಡಿ. ಇದರಿಂದ ನಿಮಗೆ ಕೆಲಸದ ಅನುಭವ ದೊರಕುತ್ತದೆ. ಅದರೊಂದಿಗೆ, ಡಿಜಿಟಲ್ ಮಾರ್ಕೆಟಿಂಗ್ ನ ಹೊಸ ಹೊಸ ಆಯಾಮಗಳನ್ನು ಸಹ ನೀವು ತಿಳಿದುಕೊಳ್ಳಬಹುದು. ಡಿಜಿಟಲ್ ಮಾರ್ಕೆಟಿಂಗ್ ನ ಇಂಟರ್ನ್ ಆಗಿ ಕೆಲಸ ಮಾಡುವುದರಿಂದ ಹಲವಾರು ಲಾಭಗಳಿವೆ. 

 • ಡಿಜಿಟಲ್ ಮಾರ್ಕೆಟಿಂಗ್ ನ ಪ್ರತಿಯೊಂದು ಆಯಾಮವನ್ನು ನೀವು ಇಂಟರ್ನ್ ಆಗಿ ಕೆಲಸ ಮಾಡುವಾಗ ತಿಳಿದುಕೊಳ್ಳಬಹುದು. ಅದರೊಂದಿಗೆ ಡಿಜಿಟಲ್ ಮಾರ್ಕೆಟಿಂಗ್ ನ ಇತ್ತೀಚಿನ ಟೂಲ್ಸ್ ಮತ್ತು ತಂತ್ರಜ್ಞಾನಗಳ ಬಗ್ಗೆ ಸಹ ತಿಳಿದುಕೊಳ್ಳಬಹುದು.
 • ಇಂಟರ್ನ್ ಆಗಿ ಕೆಲಸ ಮಾಡುವುದರಿಂದ ನಿಮ್ಮ  ಸಾಮಾಜಿಕ ಕೌಶಲ್ಯಗಳನ್ನು ಸಹ ಸುಧಾರಿಸಿಕೊಳ್ಳಬಹುದು. 
 • ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯಲ್ಲಿ ಇಂಟರ್ನ್ ಆಗಿ ಸೇರಿದರೆ ಅಲ್ಲಿ ಲೈವ್ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಬಹುದು.ಇದರಿಂದಾಗಿ ನೀವು ಸುಲಭವಾಗಿ ಡಿಜಿಟಲ್ ಮಾರ್ಕೆಟಿಂಗ್ ಬಗೆಗಿನ ಪ್ರಾಯೋಗಿಕ ಜ್ಞಾನವನ್ನು ಸಹ ಪಡೆದುಕೊಳ್ಳಬಹುದು.
 • ಡಿಜಿಟಲ್ ಮಾರ್ಕೆಟಿಂಗ್ ಇಂಟರ್ನ್ ಆಗಿ ಕೆಲಸ ಮಾಡುವುದರಿಂದ ನಿಮ್ಮ ರೆಸ್ಯುಮೆ ಮೌಲ್ಯ ಹೆಚ್ಚುತ್ತದೆ. ನೀವು ಯಾವುದಾದರೂ ಕಂಪನಿಯಲ್ಲಿ ಉದ್ಯೋಗಾವಕಾಶಕ್ಕಾಗಿ ಅರ್ಜಿ ಸಲ್ಲಿಸಿದರೆ, ಬೇರೆ ಎಲ್ಲಾ ಅರ್ಜಿದಾರರಿಗಿಂತ ಹೆಚ್ಚಿನ ಮೌಲ್ಯವನ್ನು ನಿಮ್ಮ ರೆಸ್ಯುಮೆ ಪಡೆಯುತ್ತದೆ.
 • ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುವುದರಿಂದ ನಿಮ್ಮ ಸಂವಹನ ಕಲೆ, ಮಾತುಗಾರಿಕೆ ಕೌಶಲ್ಯ ಸುಧಾರಿಸುತ್ತದೆ. ಯಾವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎನ್ನುವುದನ್ನು ಸಹ ಡಿಜಿಟಲ್ ಮಾರ್ಕೆಟಿಂಗ್ ಇಂಟರ್ನ್ಶಿಪ್ ಕಲಿಸಿಕೊಡುತ್ತದೆ.
 • ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಅಥವಾ ಏಜೆನ್ಸಿ ಯಲ್ಲಿ ಮೊದಲೇ ಇಂಟರ್ನ್ ಆಗಿ ಕೆಲಸ ಮಾಡಿದ್ದರೆ, ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡಾಗ ಆತ್ಮ ವಿಶ್ವಾಸ ಹೆಚ್ಚುತ್ತದೆ.

4. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಫ್ರೀಲಾನ್ಸಿಂಗ್ 

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಫ್ರೀ ಲಾನ್ಸಿಂಗ್ ಆಯ್ದುಕೊಳ್ಳುವುದರಿಂದ ನೀವು ಮೂಲತಃ ಕಂಪನಿಗಳಿಗೆ ತಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಆನ್ಲೈನ್ ಮೂಲಕ ಗ್ರಾಹಕರಿಗೆ ತಿಳಿಸಿಕೊಡಲು  ಸಹಾಯ ಮಾಡುತ್ತೀರಿ. ಫ್ರೀ ಲ್ಯಾನ್ಸರ್ ಆಗಿ ನಿಮ್ಮ ಪ್ರಮುಖ ಜವಾಬ್ದಾರಿ, ಸಂಸ್ಥೆಯ ಅಥವಾ ಕಂಪನಿಯ ಉದ್ದೇಶಿತ ಪ್ರೇಕ್ಷಕರನ್ನು ಆನ್ಲೈನ್ ಮೂಲಕ ತಲುಪುವುದು, ಅವರನ್ನು ನಿಮ್ಮ ಕ್ಲೈಂಟ್ ಅಥವಾ ಸಂಸ್ಥೆಯ ವೆಬ್ ಸೈಟ್ ಗೆ ಬರುವಂತೆ ಮಾಡುವುದು ಮತ್ತು ಆ ಪ್ರೇಕ್ಷಕರನ್ನು ಗ್ರಾಹಕರಾಗಿ ಪರಿವರ್ತಿಸುವುದರಲ್ಲಿ ಸಹಾಯ ಮಾಡುವುದು. ಈ ಜವಾಬ್ದಾರಿಯನ್ನು ಕಂಟೆಂಟ್ ಮಾರ್ಕೆಟಿಂಗ್ ಅಥವಾ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಅಥವಾ ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಅಥವಾ ಸರ್ಚ್ ಎಂಜಿನ್ ಮಾರ್ಕೆಟಿಂಗ್ ಮೂಲಕ ಮಾಡಬಹುದು. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಫ್ರೀ ಲಾನ್ಸಿಂಗ್ ಗೆ ಹಲವಾರು ಅನುಕೂಲಗಳು ಮತ್ತು ಅನಾನುಕೂಲಗಳಿವೆ. 

ಅನುಕೂಲಗಳು:

 • ನಿಮಗೆ ನೀವೇ ಬಾಸ್
 • ಕೆಲಸ ಮಾಡಲು ನಿರ್ದಿಷ್ಟ ಸಮಯವಿಲ್ಲ. ನೀವು ಫ್ರೀ ಲ್ಯಾನ್ಸರ್ ಆಗಿರುವುದರಿಂದ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಕೆಲಸ ಮಾಡುವ ಸಮಯವನ್ನು  ನಿರ್ಧರಿಸಬಹುದು.
 • ನಿಮ್ಮ ಅನುಕೂಲಕ್ಕೆ ತಕ್ಕಂತೆ, ನಿಮಗೆ ಸರಿಯಾಗುವ ಸ್ಥಳದಲ್ಲಿ ಕೆಲಸವನ್ನು ಮಾಡಬಹುದು.
 • ನಿಮ್ಮ ಸಂಭಾವನೆಯನ್ನು ನೀವು ನಿರ್ಧರಿಸಬಹುದು.

ಅನಾನುಕೂಲಗಳು:

 • ಕಾಂಪಿಟಿಷನ್ ಅಥವಾ ಸ್ಪರ್ಧೆ ಹೆಚ್ಚಿರುತ್ತದೆ. ಹಾಗಾಗಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ನಿಮ್ಮದೇ ಆದ ಛಾಪು ಮೂಡಿಸುವುದು ಅನಿವಾರ್ಯ.
 • ಡಿಜಿಟಲ್ ಮಾರ್ಕೆಟಿಂಗ್ ಫ್ರೀ ಲಾನ್ಸಿಂಗ್ ಮಾಡುವುದರಿಂದ ನಿರ್ಧಿಷ್ಟ ಆದಾಯವಿರುವುದಿಲ್ಲ. ಕೆಲವು ಸಲ ಐವತ್ತು ಸಾವಿರ ರೂಪಾಯಿ ದುಡಿಯಬಹುದು. ಇನ್ನುಳಿದ ಬಾರಿ ಕೇವಲ ೫೦೦ ರೂಪಾಯಿ. ಫ್ರೀ ಲಾನ್ಸಿಂಗ್ ನಲ್ಲಿ ಉದ್ಯೋಗದಲ್ಲಿ ಇರುವ ಸ್ಥಿರತೆ ಇರುವುದಿಲ್ಲ.

ಬೇರೆ ಯಾವ ವಿಧಾನಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಬಹುದು?

ಮೇಲೆ ನೀಡಿರುವ ವಿಧಾನಗಳನ್ನು ಬಿಟ್ಟು, ಈ ಕೆಳಗೆ ನೀಡಿರುವ ವಿಧಾನಗಳನ್ನು ಸಹ ಬಳಸಿಕೊಂಡು ಡಿಜಿಟಲ್ ಮಾರ್ಕೆಟಿಂಗ್ ಕಲಿಯಬಹುದು. 

 • ಫೇಸ್ಬುಕ್ ಲೀಡ್ ಆಡ್ ಮೂಲಕ
 • ಕಡಿಮೆ ಬಂಡವಾಳದಲ್ಲಿ ಉತ್ತಮವಾದ ವೆಬ್ಸೈಟ್ ಪ್ಯಾಕೇಜ್ ಮೂಲಕ ನಿಮ್ಮದೇ ಆದ ವೆಬ್ಸೈಟ್ ರಚಿಸಿ, ಅದರಲ್ಲಿ ನಿಮ್ಮ ಸೋಶಿಯಲ್ ಮೀಡಿಯಾ ಪುಟಗಳ್ಳನೂ ಸೇರಿಸಿ, ಕಡಿಮೆ ಬಂಡವಾಳದಲ್ಲಿ ಪ್ರಚಾರ ಮಾಡಬಹುದು. 
 • ಉಚಿತವಾಗಿ ಇ ಮೇಲ್ ಮಾರ್ಕೆಟಿಂಗ್ ರಚಿಸುವುದು.
 • ನಿಮ್ಮ ಅಭಿರುಚಿಗೆ ಅನುಗುಣವಾಗಿ ವಿಷಯವನ್ನು ಆಯ್ದುಕೊಂಡು,  ಅದಕ್ಕೆ ತಕ್ಕ ಕಂಟೆಂಟ್ ರಚಿಸುವುದು. ನಿಮಗೆ ಇಷ್ಟವಾಗುವ ವಿಷಯ ಯಾವುದೇ ಆಗಿರಬಹುದು. ಉದಾಹರಣೆಗೆ: ಜೀವನಶೈಲಿ, ಅಡುಗೆ, ಫ್ಯಾಷನ್, ಇತ್ಯಾದಿ. ಅದಕ್ಕೆ ಅನುಗುಣವಾಗಿ ನಿಮ್ಮ ವೆಬ್ಸೈಟ್ ರಚಿಸಿ, ಅದರ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಮಾಡುವುದು. 
 • ಅಫಿಲಿಯೇಟ್ ಮಾರ್ಕೆಗ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಕಲಿತುಕೊಳ್ಳಬಹುದು. 
 • ಇನ್ಫ್ಲ್ಯೂಎನ್ಸರ್  ಮಾರ್ಕೆಟಿಂಗ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಕಲಿಯಬಹುದು. ಇತ್ಯಾದಿ. 

ಡಿಜಿಟಲ್ ಮಾರ್ಕೆಟಿಂಗ್ ಉಪಯೋಗಗಳು:

ಇಂದಿನ ಕಾಲದಲ್ಲಿ ಲಭ್ಯವಿರುವ ಸಾವಿರಾರು ಉದ್ಯೋಗ ಆಯ್ಕೆಗಳಲ್ಲಿ, ಡಿಜಿಟಲ್ ಮಾರ್ಕೆಟಿಂಗ್ ಏಕೆ ಆಯ್ದುಕೊಳ್ಳಬೇಕು? ಅದಕ್ಕೆ ಉತ್ತರ ಇಲ್ಲಿದೆ.

 • ನಿಮ್ಮ ಬಳಿ ಈಗಾಗಲೇ ಲಭ್ಯವಿರುವ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಹಾಯದಿಂದ ನೀವು ಡಿಜಿಟಲ್ ಮಾರ್ಕೆಟಿಂಗ್ ನ್ನು ಸ್ವತಂತ್ರವಾಗಿ ಕಲಿಯಲು ಪ್ರಾರಂಭಿಸಬಹುದು. 
 • ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಪರಿಣತಿ ಪಡೆಯಲು ಯಾವುದೇ ಬೇರೆ ರೀತಿಯ ಯಂತ್ರ ಅಥವಾ ಮನುಷ್ಯರ ಸಹಾಯ ಪಡೆಯಬೇಕಾಗಿಲ್ಲ. ನಿಮ್ಮ ಕಲಿಕೆಯನ್ನು ನೀವು ಸ್ವತಂತ್ರವಾಗಿ ಮಾಡಬಹುದು.
 • ಡಿಜಿಟಲ್ ಮಾರ್ಕೆಟಿಂಗ್ ಗೆ ಅಗತ್ಯವಿರುವ ವಸ್ತುಗಳು ಅಗ್ಗವಾಗಿ, ಇಲ್ಲವೇ ಉಚಿತವಾಗಿ ದೊರಕುತ್ತವೆ. ಹಾಗಾಗಿ ಡಿಜಿಟಲ್ ಮಾರ್ಕೆಟಿಂಗ್ ಕಡಿಮೆ ಬಂಡವಾಳದಲ್ಲಿ ಮಾಡಬಹುದು.
 • ಡಿಜಿಟಲ್ ಮಾರ್ಕೆಟಿಂಗ್ ಕಲಿಯಲೂ ಸಹ ಬಂಡವಾಳ ಹೆಚ್ಚಿಲ್ಲ. 

ಬೇರೆ ಯಾವೆಲ್ಲ ವಿಧಾನಗಳಿಂದ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಕಲಿಯಬಹುದು ?

ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳು:

ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಈ ಜಗತ್ತಿನಲ್ಲಿ, ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉತ್ತಮವಾದ ಉದ್ಯೋಗ ಅವಕಾಶಗಳಿವೆ. ಅವುಗಳಲ್ಲಿ ಪ್ರಮುಖವಾದುದು: 

1. ಮಾರ್ಕೆಟಿಂಗ್ ಆಟೋಮೇಷನ್ 

2. ಬ್ಲಾಗಿಂಗ್ 

3. ಬ್ರಾಂಡ್ ಮ್ಯಾನೇಜ್ಮೆಂಟ್ 

4. ವೆಬ್ ಡೆಸೈನಿಂಗ್ ಮತ್ತು ವೆಬ್ ಡೆವಲಪ್ಮೆಂಟ್ 

5. ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ 

6. ಕಂಟೆಂಟ್ ಮ್ಯಾನೇಜ್ಮೆಂಟ್ 

7. ಎಡಿಟಿಂಗ್ ಮತ್ತು ಕಾಪಿ ರೈಟಿಂಗ್ 

8. ಡೇಟಾ ಅನಲಿಟಿಕ್ಸ್ 

9. ಇ ಕಾಮರ್ಸ್ 

10. ಇ ಮೇಲ್ ಮಾರ್ಕೆಟಿಂಗ್ 

11. ಮೊಬೈಲ್ ಮಾರ್ಕೆಟಿಂಗ್

ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಯಾವೆಲ್ಲ ಸ್ಥಾನಗಳಲಿ  ಕಾರ್ಯ ನಿರ್ವಹಿಸಬಹುದು:  

ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರ ದಲ್ಲಿ ನಿಮ್ಮ ಆಸಕ್ತಿ ಜೊತೆಗೆ ನಿಮ್ಮ ಕೌಶಲ್ಯ ಗಳನ್ನು ಬಳಸಿ ನೀವು ಪರಿಣಿತಿ ಹೊಂದಿದಂತೆ, ಈ ಕೆಳಗಿನ ಸ್ಥಾನಗಳಲ್ಲಿ ನೀವು ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬಹುದು.  

1. ಬ್ರಾಂಡ್ ಮ್ಯಾನೇಜರ್ 

2. ಸೋಶಿಯಲ್ ಮೀಡಿಯಾ ಮಾರ್ಕೇಟರ್  

3. ಆನ್ಲೈನ್ ಕಂಟೆಂಟ್ ಡೆವೆಲಪರ್ 

4. ಬಿಸಿನೆಸ್ ಸ್ಪೆಷಲಿಸ್ಟ್ ಅನಲಿಟಿಕ್ಸ್ 

5. ಸರ್ಚ್ ಎಂಜಿನ್ ಆಪ್ಟಿಮೈಸಷನ್ ಸ್ಪೆಶಲಿಸ್ಟ್

6. ವೆಬ್ ಡಿಸೈನರ್ 

7. ಪ್ರೊಫೆಷನಲ್ ಬ್ಲಾಗರ್ 

8. ಮೊಬೈಲ್ ಮಾರ್ಕೆಟಿಂಗ್ ಸ್ಪೆಶಲಿಸ್ಟ್ 

9. ಇ ಮೇಲ್ ಮಾರ್ಕೇಟರ್ 

10. ಸರ್ಚ್ ಪರಿಣಿತರಾಗಿ ಕಾರ್ಯ ನಿರ್ವಹಿಸಬಹುದು 

ಡಿಜಿಟಲ್ ಮಾರ್ಕೆಟಿಂಗ್ ನಿಂದ ಆಗುವ ಅನುಕೂಲಗಳು:

ಎಲ್ಲಾ ವೃತ್ತಿಗಳಿಗೂ ತಮ್ಮದೇ ಆದ ಅನುಕೂಲತೆ ಮತ್ತು ಅನಾನುಕೂಲತೆ ಇದ್ದೇ ಇರುತ್ತವೆ. ನೀವು ಡಿಜಿಟಲ್ ಮಾರ್ಕೆಟಿಂಗ್ ಆಯ್ದುಕೊಂಡರೇ, ಅದರಿಂದ ಆಗುವ ಅನುಕೂಲತೆಗಳ ಪಟ್ಟಿ ಇಲ್ಲಿದೆ. 

 • ನಿಮ್ಮ ವೃತ್ತಿ ಜೀವನವನ್ನು ನೀವು ಯಾವುದೇ ಬಂಡವಾಳದ ಚಿಂತೆ ಇಲ್ಲದೇ, ಉಚಿತವಾಗಿ ಪ್ರಾರಂಭಿಸಬಹುದು. 
 • ಸಕಾರಾತ್ಮಕ ವ್ಯಾಪ್ತಿಯೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ಉದ್ಯಮಗಳಲ್ಲಿ ಒಂದು – ಡಿಜಿಟಲ್ ಮಾರ್ಕೆಟಿಂಗ್. 
 • ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಯನ್ನು ಆಯ್ದುಕೊಳ್ಳುವವರ ಭವಿಷ್ಯ ಉಜ್ವಲವಾಗಿರುತ್ತದೆ. ಏಕೆಂದರೆ ಡಿಜಿಟಲ್ ಮಾರ್ಕೆಟಿಂಗ್ ಲಾಭದಾಯಕ ಉದ್ಯೋಗ. 
 • ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಯಲ್ಲಿ ಯಶಸ್ವಿಯಾಗಲು, ಸೃಜನಶೀಲತೆ ಅತ್ಯಂತ ಮುಖ್ಯ. ಹಾಗಾಗಿ ನೀವು ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಯನ್ನು ಆಯ್ದುಕೊಂಡರೆ ನಿಮ್ಮ ಸೃಜನಶೀಲತೆ ಖಂಡಿತವಾಗಿಯೂ ರೆಕ್ಕೆ ಪಡೆಯುತ್ತದೆ.

ಡಿಜಿಟಲ್ ಮಾರ್ಕೆಟಿಂಗ್ ಅನಾನುಕೂಲಗಳು:

ಡಿಜಿಟಲ್ ಮಾರ್ಕೆಟಿಂಗ್ ನ ಅನಾನುಕೂಲತೆಗಳ ಪಟ್ಟಿ ಇಲ್ಲಿದೆ. 

 • ಡಿಜಿಟಲ್ ಮಾರ್ಕೆಟಿಂಗ್ ಡೈನಾಮಿಕ್ ಜಗತ್ತಿನ ಒಂದು ಭಾಗ. ಹಾಗಾಗಿ ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ಈ ಕ್ಷೇತ್ರದಲ್ಲಿ ನೀವು ಯಶಸ್ವಿ ಆಗಬೇಕು ಎಂದರೆ, ಈ ಕ್ಷೇತ್ರಕ್ಕೆ ತಕ್ಕಂತೆ ನೀವು ಸುಲಭವಾಗಿ ಹೊಂದಿಕೊಳ್ಳಬೇಕು ಮತ್ತು ನಿರಂತರವಾಗಿ ಕಲಿಯಬೇಕು. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಮೂಲಭೂತ ಅಂಶಗಳನ್ನು ಕಲಿಯುವುದು ಮತ್ತು ಕೆಲವು ಆನ್‌ಲೈನ್ ಕೋರ್ಸ್‌ಗಳನ್ನು ಪೂರ್ಣಗೊಳಿಸುವುದು ನಿಮ್ಮ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿ ಜೀವನದಲ್ಲಿ ಅನಿವಾರ್ಯ. 
 • ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಯಲ್ಲಿ ಹಲವಾರು ಕೌಶಲ್ಯಗಳ ನೈಪುಣ್ಯತೆ ಪಡೆಯುವುದು ಅನಿವಾರ್ಯ. ಆದರೆ ಈ ಕೌಶಲ್ಯಗಳ ಪಟ್ಟಿ ಅತೀ ವೇಗವಾಗಿ ಬದಲಾವಣೆ ಕಾಣುತ್ತದೆ. ಹಾಗಾಗಿ ಅದಕ್ಕೆ ತಕ್ಕಂತೆ ಕೌಶಲ್ಯಗಳನ್ನು ಕಲಿತುಕೊಳ್ಳುವ ಮತ್ತು ರೂಢಿಸಿಕೊಳ್ಳುವ ಕುಶಲತೆ ಇರಬೇಕು. ಅದರಲ್ಲಿ ವಿಫಲರಾದರೆ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಕಷ್ಟಸಾಧ್ಯ.