ನಿಮ್ಮ ಅಭ್ಯರ್ಥಿಗಳನ್ನು ಪೂರ್ವ ಪರೀಕ್ಷಿಸಲು ಉಪಯೋಗಿಸಬಹುದಾದ 5 ವೆಬ್ ಸೈಟ್

ಉದ್ಯೋಗಗಳನ್ನು ಹುಡುಕುವುದು ಈ ಕಾಲದಲ್ಲಿ ಎಷ್ಟು ಕಷ್ಟವೋ, ಅದಕ್ಕಿಂತ ಹೆಚ್ಚಿನ ಕಷ್ಟ ಸೂಕ್ತ ಅಭ್ಯರ್ಥಿಗಳನ್ನು ಹುಡುಕುವುದು. ಉದಾಹರೆಣೆಗೆ, ನೀವು ಇದೀಗ ಉದ್ಯೋಗ ಜಾಹೀರಾತನ್ನು ಪೋಸ್ಟ್ ಮಾಡಿದ್ದೀರಿ ಎಂದು ಭಾವಿಸಿ. ಸಹಜವಾಗಿಯೇ ನೀವು ನೂರಾರು ಅರ್ಜಿಗಳನ್ನು ಎದುರು ನೋಡುತ್ತಿರುತ್ತೀರಿ. ಉದ್ಯೋಗಕ್ಕಾಗಿ ಬಂದ ಎಲ್ಲಾ ಅರ್ಜಿಗಳು ನೋಡಲು ಚಂದ ಅನ್ನಿಸಿದರೂ, ಅರ್ಜಿದಾರನು ನಿಜವಾಗಿಯೂ ಸ್ಥಾನಕ್ಕೆ ಸೂಕ್ತವಾದವರೇ ಮತ್ತು ಅವರು ನಿಮ್ಮ ತಂಡಕ್ಕೆ ಹೊಂದಿಕೊಳ್ಳುತ್ತಾರೆಯೇ – ಎಂದು ನೀವು ತಿಳಿದುಕೊಳ್ಳುವುದಾದರೂ ಹೇಗೆ? ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನೀವು ಅವುಗಳನ್ನು ಪರೀಕ್ಷಿಸಿ, ಪರಿಶೀಲಿಸುವುದು ಅತ್ಯಗತ್ಯ. ಆದರೆ ಸಹಜವಾಗಿ ಕಾಡುವ ಪ್ರಶ್ನೆಯೆಂದರೆ, ಅವುಗಳನ್ನು ಹೇಗೆ ಅಥವಾ ಎಲ್ಲಿ ಪರೀಕ್ಷಿಸಬೇಕು?
ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಮಾಡುವ ಕೆಲವು ಶ್ರೇಷ್ಠ ವೆಬ್ಸೈಟ್ಗಳು ಇಲ್ಲಿವೆ, ಈ ವೆಬ್ಸೈಟ್ಗಳಿಂದ ನೀವು ಹೇಗೆ ಮತ್ತು ಯಾವ ಉಪಯೋಗವನ್ನು ಪಡೆಯಬಹುದು, ಜೊತೆಗೆ ಅವರ ಸಾಧಕ-ಬಾಧಕಗಳೇನು ಎನ್ನುವುದನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ. 

1) Codility/ಕೋಡಿಲಿಟಿ

ಅತ್ಯುತ್ತಮ ಸೇವೆಗಳು:

ದೃಢವಾದ ನೇಮಕಾತಿ ಸಂಕೇತಗಳನ್ನು ಪಡೆಯಲು, ತಮ್ಮ ತಾಂತ್ರಿಕ ನೇಮಕಾತಿ ಪ್ರಕ್ರಿಯೆಯನ್ನು ಅತ್ಯುತ್ತಮವಾಗಿಸಲು ಬಯಸುವ ಕಂಪನಿಗಳು ಮತ್ತು ತಮ್ಮ ಅಭ್ಯರ್ಥಿಗಳಿಗೆ ಉತ್ತಮ ನೇಮಕಾತಿ ಅನುಭವಗಳನ್ನು ನೀಡಲು ಬಯಸುವ ಕಂಪನಿಗಳಿಗೆ ಕೊಡಿಲಿಟಿ ಆತ್ಮೀಯ. 

ಉತ್ಪನ್ನದ ವಿವರಗಳು:

ಡೆವಲಪರ್ಸ್ ಗಳನ್ನು ಪರೀಕ್ಷಿಸಲು ಈ ವೆಬ್ ಸೈಟ್ ಒಳ್ಳೆಯ  ವೇದಿಕೆಯಾಗಿದೆ. ತಾಂತ್ರಿಕ ನೇಮಕಾತಿ ತಂಡಗಳಿಗೆ ಅಭ್ಯರ್ಥಿಗಳ ತಾಂತ್ರಿಕ ಕೌಶಲ್ಯಗಳನ್ನು ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ಣಯಿಸಲು, ಮತ್ತು ಅತ್ಯಂತ ಅರ್ಹರಾದ ಅಭ್ಯರ್ಥಿಗಳನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. ಕೋಡಿಲಿಟಿ ನೂರಾರು ಪ್ರೋಗ್ರಾಮಿಂಗ್ ಕಾರ್ಯಗಳು, ಬಹು ಭಾಷೆಗಳು ಮತ್ತು ವಿಭಿನ್ನ ಹಂತದ ಪ್ರಶ್ನೆಗಳನ್ನು ಹೊಂದಿರುವ, ನೈಜ-ಜೀವನದ ಸನ್ನಿವೇಶಗಳನ್ನು ಒಳಗೊಂಡಿರುವ ಪರೀಕ್ಷೆಯನ್ನು ಹೊಂದಿದೆ. ಅಕ್ಸೆಂಚರ್, ಅಮೆಜಾನ್, ಬಾರ್ಕ್ಲೇಸ್, ಸಿಟಿ, ಫ್ಲಟೈರಾನ್, ಇಂಟೆಲ್, ಮೈಕ್ರೋಸಾಫ್ಟ್, ಪೇಪಾಲ್, ರಾಕುಟೆನ್, ಸರ್ವೆಮಂಕಿ, ಟ್ವಿಚ್, ವೋಲ್ವೋ, ಮತ್ತು  ಝಲಾಂಡೋ ಸೇರಿದಂತೆ 1,200 ಕ್ಕೂ ಹೆಚ್ಚು ಕಂಪನಿಗಳು ಈ ವೆಬ್ಸೈಟ್ ಬಳಸುತ್ತವೆ.

ತಜ್ಞರ ವಿಮರ್ಶೆ:

I. ಸ್ಟೀಫನ್ ಎಚ್
(ಸಾಫ್ಟ್‌ವೇರ್ ಡೆವಲಪರ್, ಹುರು ಸಿಸ್ಟಮ್ಸ್)
“ಕಂಪನಿಗಳ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಈ ವೆಬ್ಸೈಟ್ ಮೂಲಕ ನಾನು ಹೆಚ್ಚು ತಿಳಿದುಕೊಂಡೆ. ಈ ವೆಬ್ಸೈಟ್ ನಲ್ಲಿ ನಾನು ಕ್ರಮಾವಳಿಗಳನ್ನು ಅಭ್ಯಾಸ ಮಾಡುವುದನ್ನು ತುಂಬಾ ಆನಂದಿಸಿದೆ,”

ಸಾಧಕಗಳು: ಕೋಡಿಂಗ್ ಕೌಶಲ್ಯಗಳನ್ನು ಮೌಲ್ಯಮಾಪನವನ್ನು ಮಾಡಲು ಇದು ಸುಸಂಘಟಿತ ವೇದಿಕೆಯಾಗಿದೆ. ಪಾಠಗಳು ಮತ್ತು ಸವಾಲುಗಳು ಬಳಕೆದಾರರ ಅಭ್ಯಾಸಕ್ಕೆ ಉತ್ತಮ ವಿಷಯವನ್ನು ಒದಗಿಸುತ್ತವೆ.  ಬಳಕೆದಾರರು ಅಥವಾ ಅಭ್ಯರ್ಥಿಗಳು ಸುಧಾರಿಸಬೇಕಾದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಈ ವೆಬ್ ಸೈಟ್ ನ ಸಾರಾಂಶ ವಿಭಾಗವು ಸಹಾಯ ಮಾಡುತ್ತದೆ.

ಬಾಧಕಗಳು: ಈ ವೆಬ್ಸೈಟ್ ನ ಬಳಕೆದಾರರ ಅನುಸಾರ ಈ ಪ್ಲಾಟ್‌ಫಾರ್ಮ್ ಹೆಚ್ಚಿನ ಲಾಭಗಳನ್ನು ನೀಡುತ್ತಿದ್ದು, ಸುಧಾರಿಸಲೇ ಬೇಕಾದಂತಹ ವಿಷಯಗಳು ಯಾವುದೂ ಇಲ್ಲ.

II. ಸಾಯಿ ಕಿರಣ್  ಜಿ
(ಸಾಫ್ಟ್ವೇರ್ ಇಂಜಿನಿಯರ್)

“ಉತ್ತಮ ಅನುಭವ”

ಸಾಧಕಗಳು: ಉತ್ತಮ ಕೋಡಿಂಗ್ ಪ್ಲಾಟ್‌ಫಾರ್ಮ್, ಕ್ಲೀನ್ ಇಂಟರ್ಫೇಸ್‌ ಇರುವುದರಿಂದ ಇದನ್ನು ಬಳಸುವುದು ಸುಲಭ. ಇದರಲ್ಲಿ ಲಭ್ಯವಿರುವ ಕಾರ್ಯತಂತ್ರವನ್ನು ನಾನು ಆನಂದಿಸಿದೆ. ಪ್ರಶ್ನೆಗಳು ಮತ್ತು ಉದಾಹರಣೆಗಳು ಸಂಕ್ಷಿಪ್ತವಾಗಿ, ಹೆಚ್ಚಿನ ಸ್ಪಷ್ಟತೆಯೊಂದಿಗೆ ರಚಿಸಲಾಗಿವೆ. ಸ್ಕ್ರೀನಿಂಗ್‌ಗಾಗಿ ಕೋಡಿಲಿಟಿ ಬಳಸಿದ ಕಂಪನಿಗಳಿಗೆ ನಾನು ಒಂದೆರಡು ಪರೀಕ್ಷೆಗಳನ್ನು ತೆಗೆದುಕೊಂಡಿದ್ದೇನೆ. ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ನನ್ನ ಸ್ವಂತ ಟೆಸ್ಟ್-ಸೆಟ್‌ಗಳನ್ನು ಹಾಕುವ ಮೂಲಕ ನಾನು ಬರೆಯುವ ಮತ್ತು ಕೋಡಿಂಗ್ ಪರೀಕ್ಷೆಯಲ್ಲಿ ಉತ್ತಮ ಅನುಭವ ಹೊಂದಿದ್ದೇನೆ.
ನಮ್ಮ ನೇಮಕಾತಿ ಪ್ರಕ್ರಿಯೆಯಲ್ಲಿ ಐಡಿ ಮೌಲ್ಯಮಾಪನ ಭಾಗವನ್ನು ಹೊಂದಲು ಕೋಡಿಲಿಟಿ ನಮಗೆ ಅವಕಾಶವನ್ನು ನೀಡುತ್ತದೆ. ಇದರಿಂದಾಗಿಯೂ ಬಹುಶಃ ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮವಾದ  ವೆಬ್ಸೈಟ್ ಎನ್ನಬಹುದು.

ಬಾಧಕಗಳು: ಸಾಫ್ಟ್‌ವೇರ್ ಬಹುಮಟ್ಟಿಗೆ ಸ್ವಸಂಪೂರ್ಣವಾಗಿದೆ ಮತ್ತು ಚೊಕ್ಕವಾಗಿದೆ. ನಾನು ದೂರು ನೀಡಲು ದೊಡ್ಡದೇನು ಇಲ್ಲ. ಆದರೆ ನಾನು ಹೆಚ್ಚಿನ ಪಝಲ್ಸ್ ಗಳನ್ನು ನೋಡಲು ಇಷ್ಟಪಡುತ್ತೇನೆ. ಮತ್ತು ಪ್ರತಿಯೊಂದು ಸಂಭವನೀಯ ಸ್ಥಾನಕ್ಕೂ ಇದು ಇನ್ನೂ ಹೆಚ್ಚಿನ ಪರೀಕ್ಷೆಗಳನ್ನು ಹೊಂದಿದರೆ ಹೆಚ್ಚು ಸೂಕ್ತ.

ಒಟ್ಟಾರೆ: ನಾವು ಕೋಡಿಲಿಟಿಯೊಂದಿಗೆ ಗ್ರಾಹಕರಾಗಿ ಕೆಲಸ ಆರಂಭಿಸಿದಾಗಿನಿಂದಲೂ ಇವರೊಡನೆಯ ಒಡನಾಟ ಅದ್ಭುತ! ಈ ವೆಬ್ಸೈಟ್ ನ ಸಿಬ್ಬಂದಿಯು ತುಂಬಾ ತಾಳ್ಮೆ ಮತ್ತು ಉದಾರವಾಗಿ ನಮಗೆ ಸಹಾಯ ಮಾಡುತ್ತಾರೆ, ನಾವು ಕೇಳುವುದಕ್ಕಿಂತ ಹೆಚ್ಚಿನದನ್ನು ಮಾಡುತತ್ತಾರೆ! ಇಲ್ಲಿಯವರೆಗೆ ಕೊಡಿಲಿಟಿಯೊಂದಿಗಿನ ಗ್ರಾಹಕ ಅನುಭವ ಉತ್ತಮವಾಗಿದೆ. ಹಾಗೆಯೆ, ಇದು ಮುಂದುವರಿಯುತ್ತದೆ ಎಂದು ನಾವು ಭಾವಿಸಿದ್ದೇವೆ.

2) Devskiller/ಡೇವ್‌ಸ್ಕಿಲ್ಲರ್

ಅತ್ಯುತ್ತಮ ಸೇವೆಗಳು:

ಐಟಿ ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳು ತಮ್ಮ ಸಂಸ್ಥೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಡೆವಲಪರ್‌ಗಳನ್ನು ಪರೀಕ್ಷಿಸಲು, ಅವರ ಶಿಕ್ಷಣ ಮತ್ತು ಕೌಶಲ್ಯಗಳನ್ನು ಮೌಲ್ಯಮಾಪನ ಮತ್ತು ಪ್ರಮಾಣೀಕರಿಸುವ ಉದ್ದೇಶದಿಂದಾಗಿ ಡೇವ್ ಸ್ಕಿಲ್ಲರ್ ವೆಬ್ಸೈಟ್ ಬಳಸುತ್ತಾರೆ.

ಉತ್ಪನ್ನಗಳ ವಿವರಗಳು:

ಡೆವ್‌ಸ್ಕಿಲ್ಲರ್, ಡೆವಲಪರ್ ಸ್ಕ್ರೀನಿಂಗ್ ಮತ್ತು ಆನ್‌ಲೈನ್ ಸಂದರ್ಶನ ವೇದಿಕೆಯಾಗಿದ್ದು ಅದು ನೈಜ ರೀತಿಯಲ್ಲಿ, ರಿಯಲ್ಟೈಮ್ ಪರಿಸರದಲ್ಲಿ ಪರೀಕ್ಷೆ ನಡೆಸುತ್ತದೆ. ಸರಿಯಾದ ಕೌಶಲ್ಯವನ್ನು ಹೊಂದಿರುವ ಡೆವಲಪರ್‌ಗಳನ್ನು ಹುಡುಕಲು ಈ ಸಾಧನವು ನಿಮಗೆ ಅವಕಾಶ ಮಾಡಿಕೊಡುತ್ತದೆ, ನಿಮ್ಮ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಸಮಯವನ್ನು ಶೇಕಡ 60% ರಷ್ಟು ಕಡಿಮೆ ಮಾಡುತ್ತದೆ. ಪ್ರೋಗ್ರಾಮಿಂಗ್ ಪರೀಕ್ಷೆಗಳು ಉನ್ನತ ಸಾಧಕರನ್ನು ಗುರುತಿಸಿ, ಅವರ ಕೆಲಸದ ಅನುಭವದ ಬಗ್ಗೆ ತಿಳಿಸಿಕೊಡುತ್ತದೆ.

ತಜ್ಞರ ವಿಮರ್ಶೆ:

I. ಮಾರಿಯೋಸ್ ಎಂ.
  (ನಿರ್ದೇಶಕರು, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ, ಕಂಪ್ಯೂಟರ್ ಸಾಫ್ಟ್ವೇರ್)

ಸಾಧಕಗಳು: ಈ ವೆಬ್ಸೈಟ್ ನ ಬಳಕೆದಾರರಿಗೆ ಈ ವೆಬ್ಸೈಟ್ ನವರು ತೋರುವ ವೃತ್ತಿಪರತೆಯನ್ನು ಖಂಡಿತವಾಗಿಯೂ ಮೆಚ್ಚಲೇಬೇಕು. ಅಷ್ಟೇ ಅಲ್ಲದೇ, ಈ ವೆಬ್ಸೈಟ್ ಬಳಸಲು ಅತ್ಯಂತ ಸುಲಭವಾಗಿದ್ದು, ಇದು ಪೂರ್ವನಿರ್ಧರಿತ ಪರೀಕ್ಷೆಗಳ ವಿಶಾಲವಾದ ಲೈಬ್ರರಿಯನ್ನು ಹೊಂದಿದೆ. ಇದರಲ್ಲಿನ ಅಡ್ಮಿನ್ ಪ್ಯಾನೆಲ್ ಹಲವು ಸೆಟ್ಟಿಂಗ್‌ಗಳನ್ನು ಹೊಂದಿದ್ದು, ಇದರಿಂದಾಗಿ ಪರೀಕ್ಷಾ ಅನುಭವವನ್ನು ನನ್ನ ಅಗತ್ಯಗಳಿಗೆ ಅನುಗುಣವಾಗಿ ಕಾನ್ಫಿಗರ್ ಮಾಡುವುದು ತುಂಬಾ ಸುಲಭವಾಗಿದೆ. ಕಸ್ಟಮರ್ ಸಪೋರ್ಟ್ ತುಂಬಾ ಸಹಾಯಕವಾಗಿದೆ ಮತ್ತು ವೃತ್ತಿಪರವಾಗಿದೆ. ಮತ್ತು ಉತ್ಪನ್ನವು ಮಾರ್ಕೆಟ್ ಸ್ಟ್ಯಾಂಡರ್ಡ್ ತಕ್ಕದ್ದಾಗಿದ್ದು, ಅತ್ಯುತ್ತಮವಾಗಿದ್ದರೂ, ಈ ವೆಬ್ಸೈಟ್ ಅವರು ವೆಬ್ಸೈಟ್ ಅನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸುಧಾರಿಸುವಲ್ಲಿ ಮತ್ತು ಹೆಚ್ಚಿನ ಕಾರ್ಯಗಳನ್ನು ಈ ವೆಬ್ಸೈಟ್ ನಲ್ಲಿ ಸಮಗ್ರಿಸಲು ಹೊಸ ಮಾರ್ಗಗಳನ್ನು ಶೋಧಿಸುವುಸು  ಖಚಿತ.  

ಬಾಧಕಗಳು: ಈ ವೆಬ್ಸೈಟ್ ಗೆ ಸಂಬಂಧಿಸಿದಂತೆ ನನ್ನ ಏಕೈಕ ಸಮಸ್ಯೆ ಎಂದರೆ ನಾನು ಆಯ್ಕೆ ಪ್ರಕ್ರಿಯೆ ನಡೆಸಲು ಮತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೆಚ್ಚಿನ ವಿಮರ್ಶಿತ ಪ್ರಶ್ನೆಯನ್ನು ಪರೀಕ್ಷೆಯಲ್ಲಿ ಬಯಸುತ್ತೇನೆ. ಅದರ ಕೊರತೆ ಈ ವೆಬ್ಸೈಟ್ ನಲ್ಲಿ ಕಂಡುಬರುತ್ತದೆ. ಆದರೆ ಈ ವೆಬ್ಸೈಟ್ ನ ಇನ್ನಿತರ ಲಾಭಗಳಿಗೆ ಹೋಲಿಸಿದರೆ, ಈ ಸಮಸ್ಯೆ ಕೂಡಾ ನನಗೆ ಒಂದು ಸಣ್ಣ ವಿಷಯವಾಗಿದೆ.

II. ಜೊನಾಟಾನ್ ಆರ್.
    (ನಿರ್ದೇಶಕರು, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ)
“ಅದ್ಬುತ”

ಸಾಧಕಗಳು: ಡೆವ್‌ಸ್ಕಿಲ್ಲರ್ ಟೆಕ್, ನೇಮಕಾತಿ ಪ್ರಕ್ರಿಯೆಯನ್ನು ಸುಲಭ, ವೇಗವಾಗಿ ಮತ್ತು ಸುಗಮವಾಗಿಸಲು ಸಹಾಯ ಮಾಡುತ್ತದೆ ಏಕೆಂದರೆ ಇದು ವಿವಿಧ ಪ್ರೋಗ್ರಾಮಿಂಗ್ ಭಾಷೆಗಳು, ಗ್ರಂಥಾಲಯಗಳು ಮತ್ತು ತಂತ್ರಜ್ಞಾನಗಳಿಗೆ ವಿಭಿನ್ನ ಬಗೆಯ ಪರೀಕ್ಷಾ ಪ್ರಶ್ನೆಯನ್ನು ಹೊಂದಿರುವ ವಿವಿಧ ಪರೀಕ್ಷೆಗಳನ್ನು ಒದಗಿಸುತ್ತದೆ. ಪರೀಕ್ಷೆಗಳು ಆಳವಾದ ಪ್ರೋಗ್ರಾಮಿಂಗ್ ಯೋಜನೆಗಳನ್ನು ಒಳಗೊಂಡಿದ್ದು, ಅವುಗಳು ಬಹಳ ಮೌಲ್ಯಯುತ ಎನ್ನುವುದು ನನ್ನ ಅನಿಸಿಕೆ. ಪರೀಕ್ಷೆಗಳ ರೇಟಿಂಗ್ ಸ್ವಯಂಚಾಲಿತವಾಗಿದೆ ಮತ್ತು ಈ ವೆಬ್ಸೈಟ್ ಕಾರ್ಯಗತಗೊಳಿಸಿದ ಕಾರ್ಯವನ್ನು ಮಾತ್ರವಲ್ಲದೆ, ಕೋಡಿಂಗ್ ಶೈಲಿಯನ್ನು ಸಹ ಪರಿಗಣಿಸುತ್ತದೆ. ಉತ್ತಮ ಕೋಡಿಂಗ್ ಅಭ್ಯಾಸಗಳನ್ನು ಅನುಸರಿಸುತ್ತದೆ. ಇದು ಬಳಸಲು ಸಹ ತುಂಬಾ ಸುಲಭ.

ಬಾಧಕಗಳು: ನಾನು ಡೇವ್‌ಸ್ಕಿಲ್ಲರ್‌ ವೆಬ್ಸೈಟ್ ನಲ್ಲಿ ಯಾವುದೇ ನೈಜ ನ್ಯೂನತೆಗಳನ್ನು ಕಂಡಿಲ್ಲ. ಇನ್ನೂ ಹೆಚ್ಚಿನ ಭಾಷೆಗಳನ್ನು ಪರೀಕ್ಷಿಸುವ ಆಯ್ಕೆಗಳೊಂದಿಗೆ ಪರೀಕ್ಷಾ ಗ್ರಂಥಾಲಯವನ್ನು ನಿರ್ಮಿಸುವುದು ಉತ್ಪನ್ನವನ್ನು ಇನ್ನಷ್ಟು ಸುಧಾರಿಸಬಹುದು ಎನ್ನುವುದು  ನನ್ನ ಅನಿಸಿಕೆ.
ಒಟ್ಟಾರೆ: ಡೇವ್‌ಸ್ಕಿಲ್ಲರ್‌ನೊಂದಿಗೆ ನಾವು ಅಭ್ಯರ್ಥಿಯ ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ವೇಗವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ. ಇದು ನೇಮಕಾತಿ ಪ್ರಕ್ರಿಯೆಯಿಂದ ಮಾತ್ರವಲ್ಲ, ನಾವು ಡೆವ್‌ಸ್ಕಿಲ್ಲರ್ ಅನ್ನು ಬಳಸುವ ಮೊದಲು ಪರೀಕ್ಷೆಗಳನ್ನು ಹಸ್ತಚಾಲಿತವಾಗಿ ರಚಿಸಿ ಸರಿಪಡಿಸಬೇಕಾಗಿದ್ದ ಹಿರಿಯ ಡೆವಲಪರ್‌ಗಳ ಸಮಯವನ್ನು ಉಳಿಸುತ್ತದೆ.

3) eSkill/ಈಸ್ಕಿಲ್

ಅತ್ಯುತ್ತಮ ಸೇವೆಗಳು:

ಬೆಳೆಯುತ್ತಿರುವ ಮಧ್ಯಮ ಗಾತ್ರದ ಮತ್ತು ದೊಡ್ಡ ಗಾತ್ರದ ಸ್ಟಾರ್ಟ್ ಆಪ್ ಗಳು ಮತ್ತು ಸ್ಕೇಲ್‌ಅಪ್‌ ಗಳಿಗೆ ಈಸ್ಕಿಲ್ ವೆಬ್ಸೈಟ್ ಅತ್ಯಂತ ಉಪಯೋಗಕಾರಿ.

ಉತ್ಪನ್ನ ವಿವರಗಳು:

ಈ ವೆಬ್ಸೈಟ್ ನಲ್ಲಿ ನಿಮ್ಮ ಅಭ್ಯರ್ಥಿಗಳನ್ನು ಪರೀಕ್ಷಿಸುವುದರಿಂದ ನಿಮ್ಮ ಅಭ್ಯರ್ಥಿಯ ಶಿಕ್ಷಣ ಮತ್ತು ಅನುಭವದ ಕುರಿತಾದ ಮಾಹಿತಿಯೊಂದಿಗೆ, ಹೆಚ್ಚಿನ ಅಂಶಗಳನ್ನು ನೀವು ತಿಳಿದುಕೊಳ್ಳಬಹುದು. ಈ ಪರೀಕ್ಷಾ ಫಲಿತಾಂಶಗಳು ಪ್ರತಿಯೊಬ್ಬ ಅಭ್ಯರ್ಥಿಯ ಪ್ರಮುಖ ವ್ಯಕ್ತಿತ್ವದ ಗುಣಲಕ್ಷಣಗಳನ್ನು ನಿಮಗೆ ತಿಳಿಸುತ್ತದೆ. ಮತ್ತು ಅವನು ಅಥವಾ ಅವಳು ನಿಮ್ಮ ತಂಡಕ್ಕೆ ಉತ್ತಮವಾದ ವ್ಯಕ್ತಿಯಾಗುತ್ತಾರೆಯೇ ಎಂಬುದರ ಕುರಿತಾಗಿ ಪುರಾವೆ ಆಧಾರಿತ ಫಲಿತಾಂಶವನ್ನು ನೀಡಿ, ನೇಮಕಾತಿ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ.
ಈಸ್ಕಿಲ್ ನ ಸಮಗ್ರ ಪೂರ್ವ ಉದ್ಯೋಗ ಪರೀಕ್ಷೆಯನ್ನು ಬಳಸಿಕೊಂಡು ನೀವು ಅಭ್ಯರ್ಥಿಯ ಕೆಲಸದ ಕಾರ್ಯಕ್ಷಮತೆ ಮತ್ತು ಸಾಂಸ್ಕೃತಿಕ ಸಾಮರ್ಥ್ಯವನ್ನು ಉಹಿಸಬಹುದು ಮತ್ತು ನಿಮ್ಮ ಅಭ್ಯರ್ಥಿಗಳ ವ್ಯಕ್ತಿತ್ವವು ಅವರ ಕೆಲಸದ ವರ್ತನೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಬಹುದು.

ತಜ್ಞರ ವಿಮರ್ಶೆ:

I. ಅನ್ನಾ-ಲೆನಾ ಕೆ.
    (ನೇಮಕಾತಿ ಅಧಿಕಾರಿ, ಮಾನವ  ಸಂಪನ್ಮೂಲ ವಿಭಾಗ , ಆಟೋಮೋಟಿವ್)

“ಪರಿಪೂರ್ಣ ಗ್ರಾಹಕ ಬೆಂಬಲ, ಪರಿಪೂರ್ಣ ವ್ಯವಸ್ಥಾಪಕ ಸಾಧನ”

ಸಾಧಕಗಳು: ಆಟೋಮೋಟಿವ್ ಉದ್ಯಮದಲ್ಲಿ ನೇಮಕಾತಿಯಾಗಿ, ನಾನು ಪ್ರತಿದಿನ ಈಸ್ಕಿಲ್ ಜೊತೆ ಕೆಲಸ ಮಾಡುತ್ತೇನೆ. ವೆಬ್ಸೈಟ್ ನಲ್ಲಿ ಗ್ರಾಹಕರ ಬೆಂಬಲ ಅಥವಾ ಕಸ್ಟಮರ್ ಸಪೋರ್ಟ್ ಯಾವಾಗಲೂ ಲಭ್ಯವಿರುತ್ತದೆ. ಆದ್ದರಿಂದ, ಕೇವಲ ಒಂದೇ ದಿನದಲ್ಲಿ ಸಣ್ಣದೇ ಇರಲಿ ಅಥವಾ ದೊಡ್ಡದೇ ಇರಲಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ನನಗೆ ಈ ವೆಬ್ಸೈಟ್ ನ ಕಸ್ಟಮರ್ ಸಪೋರ್ಟ್  ಸಹಾಯ ಮಾಡುತ್ತದೆ. ನಾನು ತಪ್ಪು ಮಾಡಿದರೆ, ಅದನ್ನು ಸರಿಪಡಿಸಲು ನನಗೆ ಪೂರ್ವಭಾವಿ ಪ್ರತಿಕ್ರಿಯೆಯನ್ನು ನೀಡುತ್ತದೆ. ಈ ವೆಬ್ಸೈಟ್ ಉದ್ಯೋಗ ಪ್ರಸ್ತಾಪವನ್ನು ಪ್ರಕಟಿಸುವುದಷ್ಟೇ ಅಲ್ಲದೇ ನಮಗೆ ಹೆಚ್ಚಿನ ಪ್ರಮಾಣದ ಅಭ್ಯರ್ಥಿಗಳನ್ನು ನಿರ್ವಹಿಸುವಲ್ಲಿ ಸಹ ಸಹಾಯ ಮಾಡುತ್ತದೆ. ಇದರಿಂದಾಗಿ ನಾವು ಸುಲಭವಾಗಿ ಅವಲೋಕನವನ್ನು ಮಾಡಿಕೊಳ್ಳಬಹುದು.

ಬಾಧಕಗಳು: ಸಧ್ಯಕ್ಕೆ ಆಸಕ್ತಿದಾಯಕವಲ್ಲದ ಅಭ್ಯರ್ಥಿಗಳನ್ನು ನಿರ್ವಹಿಸಲು ಈ ವೆಬ್ಸೈಟ್ ನಲ್ಲಿ ಸಾಧ್ಯವಿಲ್ಲ. ಅಗತ್ಯವಿದ್ದಲ್ಲಿ, ಎಕ್ಸೆಲ್ ಡೊಕ್ಯೂಮೆಂಟ್ ನಲ್ಲಿರುವ ಆಸಕ್ತಿದಾಯಕ ಹೆಸರುಗಳನ್ನು ನಾವು ಪ್ರತ್ಯೇಕವಾಗಿ ನೆನಪಿಟ್ಟುಕೊಳ್ಳಬೇಕು. ಇದರಿಂದ ನಾನು ಆ ಹೆಸರುಗಳನ್ನು ಮರೆಯುವುದಾಗಲಿ ಅಥವಾ ಅವುಗಳನ್ನು ಕಳೆದುಕೊಳ್ಳುವುದಾಗಲಿ – ಇಂತಹ  ಅಪಾಯಗಳನ್ನು ನಾವು ತಡೆದುಕೊಳ್ಳಲಾಗುವುದಿಲ್ಲ. ಈ ಸಮಸ್ಯೆಗೆ ಈಸ್ಕಿಲ್ ಉತ್ತಮ ಪರಿಹಾರವನ್ನು ಸೂಚಿಸುತ್ತದೆ ಎಂದು ನಾವು ಭಾವಿಸುತ್ತೇವೆ. 

II. ಮೇಕೆ ಪಿ.ಎಸ್.
    (ಮಾನವ ಸಂಪನ್ಮೂಲ ಸಲಹೆಗಾರರು, ಉನ್ನತ ಶಿಕ್ಷಣ)

ಸಾಧಕಗಳು: ಈಸ್ಕಿಲ್ ವೀಡಿಯೊ ಸಂದರ್ಶನಗಳಿಗೆ ಧನ್ಯವಾದಗಳು. ನಾವು ಈ ಪ್ರಕ್ರಿಯೆಗಳಿಂದ ಮೊದಲ ಸುತ್ತಿನಲ್ಲಿ ಸಿವಿಗಳನ್ನು ಮೌಲ್ಯಮಾಪನ ಮಾಡುವ ಮೂಲಕ ಆಯ್ದುಕೊಳ್ಳುತ್ತಿದ್ದ ಅಭ್ಯರ್ಥಿಗಳಿಗಿಂತ, ನಾವು ಈಗ ಹೆಚ್ಚಿನ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದ್ದೇವೆ. ಉಪಕರಣಗಳ ಸಹಾಯದಿಂದ ಅಭ್ಯರ್ಥಿಗಳು ತಮ್ಮ ರೆಸ್ಯುಮೆ ಗಳಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸುತ್ತಾರೆ. ಅದರೊಂದಿಗೆ ಇಂತಹ ರೆಸ್ಯುಮೆಗಳು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಟ್ಟವನ್ನು ಹೊಂದಿರುತ್ತದೆ. ಈ ಕಾರಣಗಳಿಂದಾಗಿ ಸ್ವದೇಶದ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಹಾಯವಾಗುತ್ತದೆ.

ಬಾಧಕಗಳು: ಮಲ್ಟಿಪೋಸ್ಟಿಂಗ್ ಫೀಚರ್ ಅಕಾಡೆಮಿಗಳಿಗೆ ಇನ್ನೂ ಕೆಲಸ ಮಾಡುವುದಿಲ್ಲ. ನಾವು ಪೋಸ್ಟಿಂಗ್‌ಗಳನ್ನು ಆಸಕ್ತಿದಾಯಕ ಶೈಕ್ಷಣಿಕ ಜಾಬ್ ಬೋರ್ಡ್‌ಗಳಿಗೆ ಹಸ್ತಚಾಲಿತವಾಗಿ ರವಾನಿಸಬೇಕಾಗಿದೆ, ಆದರೆ ಶೀಘ್ರದಲ್ಲೇ ಇದಕ್ಕೆ ಸೂಕ್ತ ಮಾರ್ಗ ಕಂಡುಕೊಳ್ಳುತ್ತೇವೆ.

ಒಟ್ಟಾರೆ: ಉದ್ಯೋಗ ಅರ್ಜಿಗಳ ಕೇಂದ್ರೀಕರಣದಿಂದಾಗಿ ನಾವು ಸಾಕಷ್ಟು ಸಮಯವನ್ನು ಉಳಿಸುತ್ತೇವೆ. ಅಪ್ಲಿಕೇಶನ್‌ಗಳ ಪೂರ್ವ-ಸ್ಕ್ಯಾನಿಂಗ್, ಉತ್ತಮ ಅರ್ಜಿಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಪರದೆಯ ಮೇಲೆ ಅಭ್ಯರ್ಥಿಗಳನ್ನು ಹೋಲಿಸುವುದು ಮತ್ತು ನೇಮಕಾತಿದಾರರ ನಡುವೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಜೀವನವನ್ನು ಸುಲಭಗೊಳಿಸುತ್ತದೆ. ಅಭ್ಯರ್ಥಿಗಳಿಗೆ ಪ್ರತಿಕ್ರಿಯೆ ನೀಡುವುದು ನಿಜವಾಗಿಯೂ ತ್ವರಿತ ಮತ್ತು ಸುಲಭವಾಗಿದೆ.

4) HireVue/ಹೈರ್‌ವ್ಯೂ

ಅತ್ಯುತ್ತಮ ಸೇವೆಗಳು:

ಅಭ್ಯರ್ಥಿ ನೇಮಕಾತಿ, ಅಭ್ಯರ್ಥಿ ವಿಶ್ಲೇಷಣೆ ಮತ್ತು ಸಾಮರ್ಥ್ಯ ಮೌಲ್ಯಮಾಪನದೊಂದಿಗೆ ತಂಡಗಳನ್ನು ನೇಮಿಸಿಕೊಳ್ಳಲು ಸಹಾಯ ಮಾಡುವ ಮೌಲ್ಯಮಾಪನ ಪರಿಹಾರ ಹೈರ್ ವ್ಯೂ ವೆಬ್ಸೈ ಟ್.

ಉತ್ಪನ್ನ ವಿವರಗಳು:

ಇಂದಿನ ಪ್ರತಿಭೆಗಳಿಗೆ ಹೆಚ್ಚು ವಿಸ್ತಾರವಾಗಿರುವ ಈ ವೆಬ್ಸೈಟ್, ಆಕರ್ಷಕವಾಗಿ ಮೌಲ್ಯಮಾಪನ ಪರಿಹಾರವನ್ನು ನೀಡಲು ವೀಡಿಯೊ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಆಟ-ಆಧಾರಿತ ಸವಾಲುಗಳನ್ನು ಬಳಸಿಕೊಂಡು ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಮೌಲ್ಯಮಾಪನಗಳನ್ನು ಬಳಸುತ್ತದೆ.

ತಜ್ಞರ ವಿಮರ್ಶೆ:

I) ಟೈರಸ್ ಬಿ. 
(ಜಾಗತಿಕ ಕಾರ್ಯಕ್ರಮ ನಿರ್ವಾಹಕರು, ವಿದ್ಯುತ್ / ಎಲೆಕ್ಟ್ರಾನಿಕ್ ಉತ್ಪಾದನೆ)

“ಅತ್ಯುತ್ತಮ ಬೆಂಬಲದೊಂದಿಗೆ ಡಿಜಿಟಲ್ ಸಂದರ್ಶನ ವೇದಿಕೆ”

ಸಾಧಕಗಳು: ಹೈರ್‌ವ್ಯೂ ನೀಡುವ ಬೆಂಬಲ ಅದ್ಭುತವಾಗಿದೆ. ಅವರು ಯಾವಾಗಲೂ ತಾಂತ್ರಿಕ ಸಮಸ್ಯೆಗಳನ್ನು (ಅಭ್ಯರ್ಥಿಗಳು, ಸಂದರ್ಶಕರಿಗೆ 24/7 ಬೆಂಬಲ) ಮತ್ತು ವ್ಯವಹಾರದ ಸಮಸ್ಯೆಗಳನ್ನು ನಿವಾರಿಸಲು ಸಹಾಯ  ಮಾಡಲು ಸಿದ್ಧರಿರುತ್ತಾರೆ. 

ಬಾಧಕಗಳು: ಟ್ಯಾಲಿಯೊ ಏಕೀಕರಣಗೊಳಿಸುವುದರ ಮೂಲಕ ಸುಧಾರಣೆಗೆ ಅವಕಾಶವಿದೆ. ನೇಮಕಾತಿ ಮಾಡುವವರಿಗೆ ಅಥವಾ ಸಂದರ್ಶನ ಸಂಯೋಜಕರಿಗೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಟ್ಯಾಲಿಯೊದಲ್ಲಿ ನೇರವಾಗಿ ಹೆಚ್ಚಿನ ಆಯ್ಕೆಗಳು ಮತ್ತು ಗೋಚರತೆಯನ್ನು ಹೊಂದಿರುವುದು ಒಳ್ಳೆಯದು; ಇದು ಉಪಕರಣವನ್ನು ಅಳವಡಿಸಿಕೊಳ್ಳುವುದನ್ನು ಸುಲಭಗೊಳಿಸುತ್ತದೆ.

II) ಮೈಕೆಲ್ ಆರ್.
    (ಮಾನವ ಸಂಪನ್ಮೂಲ, ಬ್ಯಾಂಕಿಂಗ್)

“ಮಾರುಕಟ್ಟೆಯಲ್ಲಿ ಉತ್ತಮ ವೀಡಿಯೊ ಸಂದರ್ಶನ ನೀಡುವವರಲ್ಲಿ ಈ ವೆಬ್ಸೈಟ್ ಸಹ ಒಂದು”

ಸಾಧಕಗಳು: ನೀವು ವೀಡಿಯೊ ಸಂದರ್ಶನ ಒದಗಿಸುವವರನ್ನು ಹುಡುಕುತ್ತಿದ್ದರೆ, ಹೈರ್‌ವ್ಯೂ ಅತ್ಯಂತ ಸೂಕ್ತ ಆಯ್ಕೆ. ಹೈರ್‌ವ್ಯೂ ಬಗ್ಗೆ ನಾನು ಹೆಚ್ಚು ಇಷ್ಟಪಡುವುದೇನೆಂದರೆ ಈ ಪ್ಲಾಟ್‌ಫಾರ್ಮ್‌ನ ಬ್ರ್ಯಾಂಡಿಂಗ್ ತುಂಬಾ ವೃತ್ತಿಪರವಾಗಿ ಕಾಣುತ್ತದೆ ಮತ್ತು ಒಟ್ಟಾರೆ ವ್ಯವಸ್ಥೆಯು ಅತ್ಯಂತ ಗ್ರಾಹಕೀಯವಾಗಿದೆ. ಹೆಚ್ಚುವರಿಯಾಗಿ, ಪ್ಲಾಟ್‌ಫಾರ್ಮ್‌ನ ವರದಿ ಮಾಡುವ ಸಾಮರ್ಥ್ಯಗಳು ಬಹಳ ಆಳವಾಗಿದ್ದು, ನಿಮ್ಮ ಎಲ್ಲಾ ಇಲಾಖೆಗಳಿಗೆ ಮತ್ತು ವರ್ಷದಲ್ಲಿ ಅವರು ನೇಮಕ ಮಾಡುವ ಸ್ಥಾನಗಳಿಗೆ ನಿಮಗೆ ಅಗತ್ಯವಿರುವ ಪ್ರಮುಖ ವಿಶ್ಲೇಷಣೆಯನ್ನು ನಿಜವಾಗಿಯೂ ಅಳೆಯಲು ಅಣುವು  ಮಾಡಿಕೊಡುತ್ತದೆ.

ಬಾಧಕಗಳು: ಹೈರ್‌ವ್ಯೂ ನಲ್ಲಿ  ಇರುವ ಒಂದು ತೊಂದರೆ ಎಂದರೆ ಅದು ವೀಡಿಯೊ ಸಂದರ್ಶನ ಒದಗಿಸುವವರಿಗೆ ನೀವು ಪಾವತಿಸುವ ಹಣ. ಇದು ತುಂಬಾ ದುಬಾರಿ ಎನ್ನಿಸುತ್ತದೆ. ಆದಾಗ್ಯೂ, ಹೈರ್‌ವ್ಯೂ ವೆಬ್ಸೈಟ್ ನಲ್ಲಿ ಸಾಕಷ್ಟು ಉತ್ತಮ ವೈಶಿಷ್ಟ್ಯಗಳನ್ನು ಒದಗಿಸುವ ಸಾಮರ್ಥ್ಯವಿರುವ ಕಾರಣ ನೀವು ಪಾವತಿಸಿದ ಮೊತ್ತ ಸೂಕ್ತವೆನಿಸುತ್ತದೆ.

ಒಟ್ಟಾರೆ: ಸಂದರ್ಶನ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಈ ವೆಬ್ಸೈಟ್ ಸಂಸ್ಥೆಯಲ್ಲಿನ ವಿವಿಧ ನೇಮಕಾತಿ ವ್ಯವಸ್ಥಾಪಕರೊಂದಿಗೆ ಅಭ್ಯರ್ಥಿ ಸಂದರ್ಶನ ಮಾಹಿತಿಯನ್ನು ಹಂಚಿಕೊಳ್ಳಲು ಅನುಕೂಲವಾಗಿದೆ. ಪರದೇಶದಿಂದ ಅಭ್ಯರ್ಥಿಗಳನ್ನು ಸಂದರ್ಶಿಸುತ್ತಿದ್ದರೂ ಸಂದರ್ಶನಕ್ಕಾಗಿ ಅವರನ್ನು ಇಲ್ಲಿಗೆ ಕರೆಯದೇ, ಈ ವೆಬ್ಸೈಟ್ ಮೂಲಕ ಅಭ್ಯರ್ಥಿಗಳೊಂದಿಗೆ ಮುಖಾಮುಖಿಯಾಗಿ ಮಾತನಾಡಬಹುದು.

5) Testdome.com/ಟೆಸ್ಟ್-ಡೋಮ್.ಕಾಂ

ಅತ್ಯುತ್ತಮ ಸೇವೆಗಳು:

ಎಲ್ಲಾ ಕಂಪನಿಗಳು ಕನಿಷ್ಠ ಒಂದು ಸಾಫ್ಟ್‌ವೇರ್ ಡೆವಲಪರ್‌ನನ್ನು ನೇಮಿಸಿಕೊಳ್ಳಲು ಬಯಸುತ್ತವೆ. ಟೆಸ್ಟ್‌ಡೊಮ್ ಹೊಸ ಪರೀಕ್ಷಾ ಡೊಮೇನ್‌ಗಳಾಗಿ ವಿಸ್ತರಿಸಿದೆ. ಈ ವೆಬ್ಸೈಟ್ ಸಾಫ್ಟ್‌ವೇರ್ ಸಂಬಂಧಿತವಲ್ಲದ ಸೇವೆಗಳನ್ನು ಸಹ ನೀಡುತ್ತದೆ. ಉದಾಹರೆಣೆಗೆ, ಪ್ರಾಜೆಕ್ಟ್ ನಿರ್ವಹಣೆ, ಮಾರ್ಕೆಟಿಂಗ್, ಅಕೌಂಟಿಂಗ್, ಸೇಲ್ಸ್, ಗ್ರಾಹಕ ಸೇವೆ.

ಉತ್ಪನ್ನ ವಿವರಗಳು:

ಇದು ಸ್ವಯಂಚಾಲಿತ ಉದ್ಯೋಗ ಪೂರ್ವ ಕೌಶಲ್ಯ ಪರೀಕ್ಷೆ. ಅಭ್ಯರ್ಥಿಯು ಕೆಲಸದಲ್ಲಿ ಉತ್ತಮವಾಗಿದ್ದಾರೆಯೇ ಎಂದು ಪರೀಕ್ಷಿಸಲು, ಈ ವೆಬ್ಸೈಟ್ ಅವರಿಗೆ ನಿಜವಾದ ಕೆಲಸದ ಮಾದರಿಯನ್ನು ನೀಡುತ್ತೇವೆ. ಐಕ್ಯೂ ಅಥವಾ ಇಂಟೆಲಿಜೆನ್ಸ್ ಕೊಶೆಂಟ್, ವ್ಯಕ್ತಿತ್ವ ಅಥವಾ ಶಿಕ್ಷಣ ಮಟ್ಟದಂತಹ ಪರೋಕ್ಷ ಕ್ರಮಗಳಿಗಿಂತ ಇದು ಕೆಲಸದ ಕಾರ್ಯಕ್ಷಮತೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ.

ತಜ್ಞರ ವಿಮರ್ಶೆ:

I) ಓಸ್ಕರ್ ಎ.
    (ಮ್ಯಾನೇಜರ್, ಮಾರ್ಕೆಟಿಂಗ್ ಮತ್ತು ಅಡ್ವರ್ಟೈಸಿಂಗ್)

“ಕೌಶಲ್ಯಗಳನ್ನು ಪರೀಕ್ಷಿಸಲು ಉತ್ತಮ ವೇದಿಕೆ”

ಸಾಧಕಗಳು: ಈ ವೆಬ್ಸೈಟ್ ನಲ್ಲಿ ಅಭ್ಯರ್ಥಿಗಳ ಅನೇಕ ಕೌಶಲ್ಯಗಳನ್ನು ವಿವಿಧ ಪರೀಕ್ಷೆಗಳ ಸಹಾಯದಿಂದ ಪರೀಕ್ಷಿಸುವುದು ಅನುಕೂಲಕರ. ಸಮಸ್ಯೆ ಇದ್ದಾಗಲೆಲ್ಲಾ ಗ್ರಾಹಕ ಸೇವಾ ಪ್ರತಿಕ್ರಿಯೆ ಅದ್ಭುತವಾಗಿದೆ. ಒಟ್ಟಾರೆಯಾಗಿ ಇದು ಉತ್ತಮ ವೇದಿಕೆಯಾಗಿದ್ದು, ಬಳಸಲು ಸುಲಭವಾಗಿದೆ. ಈ ವೆಬ್ಸೈಟ್ ನ ಪರೀಕ್ಷೆಗಳ ಫಲಿತಾಂಶವು ತಕ್ಷಣವೇ ದೊರಕುತ್ತದೆ.

ಬಾಧಕಗಳು: ಅಭ್ಯರ್ಥಿಗಳು ಫಲಿತಾಂಶದ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಲು ತ್ವರಿತ ಮಾರ್ಗವನ್ನು ಈ ವೆಬ್ಸೈಟ್ ಹೊಂದಿರುವುದು ಒಳ್ಳೆಯದು. ಆದರೆ, ಪ್ರತಿ ಪರೀಕ್ಷೆಯ ಫಲಿತಾಂಶಗಳಿಗೆ ಹೋಗಿ ನಂತರ ಪಿಡಿಎಫ್ಗೆ ಮುದ್ರಿಸಬೇಕಾದ ಸೆಟಪ್ ಈಗ ಪರಿಣಾಮಕಾರಿಯಾಗಿಲ್ಲ.

II) ಬ್ರಿಯಾನ್ ಎಂ.
    (ಕಾರ್ಯಾಚರಣೆಗಳ ವಿ.ಪಿ., ಕಂಪ್ಯೂಟರ್ ಸಾಫ್ಟ್ವೇರ್)

“ಸರಳ ಮತ್ತು ಪರಿಣಾಮಕಾರಿ”

ಸಾಧಕಗಳು: ಹೊಸ ಅಭಿವೃದ್ಧಿ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪರೀಕ್ಷಿಸಲು ನಾವು ಟೆಸ್ಟ್‌ಡೊಮ್ ಅನ್ನು ಬಳಸುತ್ತೇವೆ. ಅಭ್ಯರ್ಥಿಗಳ ಪ್ರತಿಭೆಯನ್ನು ನಿರ್ಣಯಿಸಲು ಸಾಕಷ್ಟು ಪ್ರಶ್ನೆಗಳಿವೆ ಮತ್ತು ನಮ್ಮ ಅನನ್ಯ ಸವಾಲುಗಳನ್ನು ಕೇಂದ್ರೀಕರಿಸುವ ನಮ್ಮದೇ ಆದ ಪ್ರಶ್ನೆಗಳನ್ನು ರಚಿಸುವ ಸಾಮರ್ಥ್ಯವು ಈ ವೆಬ್ಸೈಟ್ ನ  ದೊಡ್ಡ ಬೋನಸ್ ಆಗಿದೆ.

ಬಾಧಕಗಳು: ತಾಂತ್ರಿಕೇತರ ನೇಮಕಾತಿಗಾಗಿ (ಕಸ್ಟಮರ್ ಸಪೋರ್ಟ್) ನಾವು ಟೆಸ್ಟ್‌ಡೊಮ್ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಪ್ರಯತ್ನಿಸಿದ್ದೇವೆ. ಈ ಪ್ರತಿಕ್ರಿಯೆಗೆ ಅಗತ್ಯವಿರುವ ಪ್ರಶ್ನೆಗಳು ತಕ್ಕಮಟ್ಟಿಗೆ ಅಸ್ಪಷ್ಟವಾಗಿದೆ.

ಒಟ್ಟಾರೆ: ನಾವು ನುರಿತ ಹುದ್ದೆಗಳಿಗೆ ಸಾಕಷ್ಟು ಜನರನ್ನು ನೇಮಿಸಿಕೊಳ್ಳುತ್ತಿದ್ದೇವೆ. ನಾವು ಸಾಕಷ್ಟು ಅರ್ಜಿದಾರರನ್ನು ಹೊಂದಿರುವ ಮಾರುಕಟ್ಟೆಯಲ್ಲಿದ್ದೇವೆ, ಆದರೆ ಅನೇಕ ಅರ್ಜಿದಾರರ ಗುಣಮಟ್ಟವು ಅನೇಕ ಸಂದರ್ಭಗಳಲ್ಲಿ ಸಾಕಾಗುವುದಿಲ್ಲ. ಕನಿಷ್ಠ ಮೂಲಭೂತ ಮಟ್ಟವನ್ನು ತಲುಪಲು ಸಾಧ್ಯವಾಗದ ಜನರನ್ನು ಫಿಲ್ಟರ್ ಮಾಡುವ ಮೂಲಕ ನಮ್ಮ ನೇಮಕಾತಿ ಕೆಲಸದ ಹೊರೆಗಳನ್ನು ಸಮರ್ಥವಾಗಿ ಕಡಿಮೆ ಮಾಡಲು ಟೆಸ್ಟ್ಡೊಮ್ ನಮಗೆ ಸಹಾಯ ಮಾಡುತ್ತದೆ. ಅನಗತ್ಯ ಸಂದರ್ಶನಗಳಿಗಾಗಿ ನಾವು ಸಮಯವನ್ನು ಕಳೆಯುವುದು ಕ್ರಮೇಣ ಕಡಿಮೆಯಾಗಿರುವುದರಿಂದ, ಪ್ರತಿ ಪರೀಕ್ಷೆಯ ವೆಚ್ಚವು ಸಹ ಕಡಿಮೆಯಾಗಿದೆ.