ನಿಮ್ಮ ರೆಸ್ಯುಮೆ ಸ್ಕೋರ್ ಪರಿಶೀಲಿಸಲು ಇಲ್ಲಿವೆ ೫ ವೆಬ್ಸೈಟ್!

ಇಂದಿನ ಕಾಲದಲ್ಲಿ, ಈ ಜಗತ್ತಿನಲ್ಲಿ ಉದ್ಯೋಗ ಹುಡುಕುವುದು ಕ್ಲಿಷ್ಟಕರ. ಅದರಲ್ಲೂ ನೀವು ಉದ್ಯೋಗಾಕಾಂಕ್ಷಿಗಲಾಗಿದ್ದು, ಔದ್ಯೋಗಿಕವಾಗಿ ಯಾವುದೇ ವೈಯಕ್ತಿಕ ಸಂಪರ್ಕಗಳನ್ನು ಹೊಂದಿಲ್ಲದಿದ್ದರೆ ದೈತ್ಯ ಸಂಸ್ಥೆಯಲ್ಲಿ ಉದ್ಯೋಗಕ್ಕಾಗಿ ಸಂದರ್ಶನವನ್ನು ನೀಡುವುದು ಅಸಾಧ್ಯವೆಂದರೆ ತಪ್ಪಾಗಲಾರದು. 

“ಆದರೆ, ಅದು ಹೇಗೆ ಸಾಧ್ಯ? ನಾನು ರೆಸ್ಯುಮೆ ಕಂಪನಿಗೆ ಸಲ್ಲಿಸಿದ್ದೇನೆ!” – ಇದು ಸಹಜವಾಗಿ ಎಲ್ಲಾ ಉದ್ಯೋಗಾಕಾಂಕ್ಷಿಗಳು ನೀಡುವ ಉತ್ತರ. 

ನಿಮಗೆ ತಿಳಿಯದೇ ಇರುವ ವಿಷಯ ಒಂದಿದೆ.  

ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗದವರು ಅಭ್ಯರ್ಥಿಯ ಪರಿಪೂರ್ಣತೆಯನ್ನು ಅಳೆಯಲು ಅಥವಾ ಉದ್ಯೋಗಕ್ಕೆ ಸಂಬಂಧಿತ ಕೌಶಲ್ಯಗಳು ನಿಮ್ಮಲ್ಲಿದೆಯೇ ಪರಿಶೀಲಿಸಲು ನಿಮ್ಮ ರೇಸುಮೆಯಲ್ಲಿ ನೀಡಿರುವ ವಿವರಗಳ ಅನುಸಾರ ನಿರ್ಧರಿಸುವುದಿಲ್ಲ! ವಾಸ್ತವವಾಗಿ,  ನೇಮಕಾತಿದಾರರು ಅಥವಾ ಉದ್ಯೋಗದಾತರು ಪ್ರತಿ ರೆಸ್ಯುಮೆ ಯನ್ನು ನೋಡಲು ಕೇವಲ ಆರು ಸೆಕೆಂಡುಗಳನ್ನು ಕಳೆಯುತ್ತಾರೆ. ಈ ಸತ್ಯಾಂಶವನ್ನು ಹಲವಾರು ಅಧ್ಯಯನವು ಬೆಂಬಲಿಸುತ್ತವೆ. 

ಹಾಗಿದ್ದರೆ, ಅನೇಕ ರೆಸ್ಯುಮೆ ಗಳು ಮಾನವನ ಕಣ್ಣಿಗೆ ಕಾಣುವ ಮೊದಲೇ ಕಸದ ಬುಟ್ಟಿಗೆ ಸೇರುತ್ತವೆಯೇ? ಅದು ಹೇಗೆ ಸಾಧ್ಯ? ನಂಬಲಸಾಧ್ಯ ಅಲ್ಲವೇ? 

ಹೌದು! ಅದು ಹೇಗೆ ಸಾಧ್ಯ ಎನ್ನುವುದಕ್ಕೆ ಉತ್ತರ ಇಲ್ಲಿದೆ. ಮೊದಲ ಹಂತದ ರೆಸ್ಯುಮೆ ಪರಿಷ್ಕರಣೆ ಮಾಡಲು, ಅನೇಕ ದೊಡ್ಡ ಸಂಸ್ಥೆಗಳು ಅಪ್ಪ್ಲಿಕೆನ್ಟ್ ಟ್ರಾಕಿಂಗ್ ಸಿಸ್ಟಮ್ ಅಥವಾ ಅರ್ಜಿದಾರರ ಅನುಸರಣೆ ವ್ಯವಸ್ಥೆಗಳನ್ನು (ಎಟಿಎಸ್) ಅವಲಂಭಿಸಿರುತ್ತವೆ. ಸಂದರ್ಭೋಚಿತ ಪದ‌ಗಳು, ಕೀವರ್ಡ್ಸ್ ಮತ್ತು ಪ್ರಮುಖ ನುಡಿಗಟ್ಟುಗಳಿಗಾಗಿ ರೆಸ್ಯುಮೆಯನ್ನು ಶೋಧಿಸಿ, ಅವುಗಳ ಲಭ್ಯತೆಯ ಅನುಸಾರ ರೆಸ್ಯುಮೆಗಳನ್ನೂ ಪರಿಷ್ಕರಿಸಲಾಗುತ್ತದೆ. ಗಣಿತೀಯವಾಗಿ ಅವುಗಳನ್ನು ಪರಿಶೀಲಿಸಿ, ಮಾನವ ವಿಮರ್ಶೆಗೆ ಅರ್ಹವಾದ ರೆಸ್ಯುಮೆಗಳನ್ನು ಮುಂದಿನ ಹಂತದ ಪರಿಷ್ಕರಣಾ ಪ್ರಕ್ರಿಯೆಗೆ ಕಳುಹಿಸಲಾಗುತ್ತದೆ.

ನಿಸ್ಸಂದೇಹವಾಗಿ, ಇಂತಹ ಸ್ಕ್ರೀನಿಂಗ್ ಅಥವಾ ಪರಿಷ್ಕರಣಾ ಪ್ರಕ್ರಿಯೆ ಮಾನವ ಸಂಪನ್ಮೂಲ ವ್ಯವಸ್ಥಾಪಕರಿಗೆ ಕನಿಷ್ಠ ಸಿದ್ಧತೆ ಮತ್ತು ಕಡಿಮೆ ಸಮಯದಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಅದರೊಂದಿಗೆ, ದುರ್ಬಲ ರೆಸ್ಯುಮೆ ಅಥವಾ ಅಸೂಕ್ತವಾದ ರೆಸ್ಯುಮೆಗಳನ್ನು ಪರಿಷ್ಕರಿಸುವ ತೊಂದರೆಯನ್ನು ತಪ್ಪಿಸಿ, ಸಮಯವನ್ನು ಉಳಿಸುತ್ತದೆ. ಆದರೆ ನಿಮ್ಮ ರೆಸ್ಯುಮೆ ಯನ್ನು ಸರಿಯಾದ ರೀತಿಯಲ್ಲಿ ರಚಿಸಿರದಿದ್ದರೆ ಅಥವಾ ನೇಮಕಾತಿ ವ್ಯವಸ್ಥಾಪಕರು ಹುಡುಕುತ್ತಿರುವ ನಿಖರವಾದ ಪದಗಳನ್ನು ನಿಮ್ಮ ರೆಸ್ಯುಮೆ ಹೊಂದಿರದಿದ್ದರೆ ನಿಮ್ಮ ಅಪ್ಲಿಕೇಶನ್ ಮುಂದಿನ ಪರಿಷ್ಕರಣಾ ಹೆಂತಕ್ಕೆ ತೆರಳದೇ, ಕಸದಬುಟ್ಟಿ ಸೇರುವುದು ಖಚಿತ.

ಸಲಹೆ: ನಿಮ್ಮ ರೆಸ್ಯುಮೆ ಪ್ರಥಮ ಮಟ್ಟದ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಯಶಸ್ವಿ ಆಗಬೇಕೆ? ಹಾಗಾದರೆ, ಎಟಿಎಸ್ ಅನುಮೋದಿಸುವ ಸಲಹೆಗಳನ್ನು ಪರಿಶೀಲಿಸಿ ರೆಸ್ಯುಮೆ ವನ್ನು ಬರೆಯಿರಿ. ಈ ಬಗೆಯ ರೆಸ್ಯುಮೆಗಳು ಸಹಜವಾಗಿ ನೇಮಕಾತಿದಾರರ ಗಮನ ಸೆಳೆಯುತ್ತವೆ. 

ನೀವು ರೆಸ್ಯುಮೆ ತಯಾರಿಸುವಾಗ ಮಾಡಬಹುದಾದ ಮತ್ತು ಮಾಡಬಾರದಾದ ಕೆಲವು ವಿಷಯಗಳು ಇಲ್ಲಿವೆ:

 • ನಿಮ್ಮ ರೆಸ್ಯುಮೆಯಲ್ಲಿ ಸೃಜನಶೀಲತೆ ಅಥವಾ ಪ್ರತ್ಯೇಕತೆಯನ್ನು ತೋರಲು ನೀವು ಬಯಸಬಹುದು. ಆದರೆ, ಎಟಿಎಸ್‌ಗೆ ರೆಸ್ಯುಮೆಗಳಲ್ಲಿ ಸರಳತೆಯನ್ನು ಬಯಸುತ್ತದೆ. ಆದ್ದರಿಂದ, ನಿಮ್ಮ ರೆಸ್ಯುಮೆ ಯಲ್ಲಿ  ಲಾಂಛನಗಳು, ಚಿತ್ರಗಳು, ಚಿಹ್ನೆಗಳು ಯಾವುದೇ ಹೆಚ್ಚುವರಿ ಅಂಶಗಳನ್ನು ನೀವು ಬಳಸದೇ ಇರುವುದು ಸೂಕ್ತ. 
 • ಸಾಮಾನ್ಯವಾಗಿ, ರೆಸ್ಯುಮೆ ಅಲ್ಲಿನ ಅಕ್ಷರಗಳನ್ನು ಟೈಮ್ಸ್ ನ್ಯೂ ರೋಮನ್ ನಲ್ಲಿ ಬರೆಯುವುದು ಅಭ್ಯಾಸ. ಆದರೆ ನೀವು ಕೇವಲ ಇದೊಂದೇ ಬಗೆಯ ಅಕ್ಷರ ವಿನ್ಯಾಸಕ್ಕೆ ಅಂಟಿಕೊಳ್ಳದೇ, ಬೇರೆ ಬಗೆಯ ಅಕ್ಷರ ವಿನ್ಯಾಸವನ್ನೂ ಉಪಯೋಗಿಸಿಕೊಳ್ಳಬಹುದು. ಉದಾಹರೆಣೆಗೆ ಗಾರಮೋನ್ಡ್, ಏರಿಯಲ್, ಜಾರ್ಜೀ, ತಹೋಮ, ಇತ್ಯಾದಿ. ಆದರೆ ನೆನಪಿರಲಿ, ನಿಮ್ಮ ರೆಸ್ಯುಮೆ ಎಟಿಎಸ್ ಗೆ ಯಾವುದೇ ಬಗೆಯ ಗೊಂದಲವನ್ನು ಉಂಟು ಮಾಡಿದರೆ, ನಿಮ್ಮ ರೆಸ್ಯುಮೆ  ತಕ್ಷಣವೇ ತಿರಸ್ಕರಿಸಲ್ಪಡಬಹುದು.
 • ಅಷ್ಟೇ ಅಲ್ಲದೇ, ರೆಸ್ಯುಮೆಯಲ್ಲಿ ಅಗತ್ಯವಿರುವ ಸಾಮಾನ್ಯ ವಿಭಾಗಗಳನ್ನು ಮಾತ್ರ ಸೇರಿಸಿ. ಉದಾಹರೆಣೆಗೆ ಅರ್ಹತೆಗಳು, ವೃತ್ತಿಪರ ಅನುಭವ, ಶಿಕ್ಷಣ, ಕೌಶಲ್ಯಗಳು, ಇತ್ಯಾದಿ. ಸಂಘ ಸಂಸ್ಥೆಗಳು, ಪ್ರಕಟಣೆಗಳು ಅಥವಾ ಸದಸ್ಯತ್ವಗಳಂತಹ ಅಗತ್ಯವಿಲ್ಲದ ಶೀರ್ಷಿಕೆಗಳನ್ನು ನಿಮ್ಮ ರೆಸ್ಯುಮೆಯಲ್ಲಿ ಉಲ್ಲೇಖಿಸುವುದರಿಂದ ಎಟಿಎಸ್ ಗೆ ನಿಮ್ಮ ರೆಸ್ಯುಮೆಯನ್ನು ಪರಿಶೀಲಿಸಲು ತೊಂದರೆಯಾಗಿ, ನಿಮ್ಮ ರೆಸ್ಯುಮೆಯನ್ನು ನೇರವಾಗಿ ತಿರಸ್ಕರಿಸಬಹುದು. 

ನಿಮಗೆ ಗೊತ್ತಿದೆಯೇ ಕೆಲವು ವೆಬ್ಸೈಟ್ ಗಳು ನಿಮ್ಮ ರೆಸ್ಯುಮೆ ಸೂಕ್ತತೆಯ ಬಗ್ಗೆ ವಿಮರ್ಶಿಸುತ್ತವೆ? ಇದರಿಂದ ನಿಮ್ಮ ರೆಸ್ಯುಮೆಯ ಸೂಕ್ತತೆಯನ್ನು ಹೆಚ್ಚಿಸಬಹುದು ಮತ್ತು ಯಶಸ್ವಿಯಾಗಿ ನಿಮ್ಮ ರೆಸ್ಯುಮೆ ಆಯ್ಕೆಯಾಗುವಂತೆ ಮಾಡಬಹುದು.

ನಿಮ್ಮ ರೆಸ್ಯುಮೆಯನ್ನು ವಿಮರ್ಶೆಗೆ ಒಳಗಾಗಬೇಕೆಂದು ನೀವು ಬಯಸಿದರೆ, ಸಾಮಾನ್ಯ ಪ್ರಕ್ರಿಯೆಯ ಅನುಸಾರ ನೀವು ನಿಮ್ಮ ರೆಸ್ಯುಮೆ ಯನ್ನು ಜಾಲತಾಣಕ್ಕೆ ಅಪ್ಲೋಡ್ ಮಾಡಬೇಕಾಗುತ್ತದೆ ಅಥವಾ ರೆಸ್ಯುಮೆಯ ತಜ್ಞರಿಂದ ವಿಮರ್ಶೆಗಾಗಿ, ಅದನ್ನು ಇಮೇಲ್ ಮೂಲಕ ಅವರಿಗೆ  ಸಲ್ಲಿಸಬೇಕಾಗುತ್ತದೆ. ಆದರೆ ಕೆಲವು ವೆಬ್ಸೈಟ್ ಗಳು, ಸಾಫ್ಟ್ವೇರ್ ಸಹಾಯದಿಂದ, ನಿಮ್ಮ ರೆಸ್ಯುಮೆಯನ್ನು ತ್ವರಿತವಾಗಿ ವಿಮರ್ಶಿಸಿ, ತಕ್ಷಣ ನಿಮ್ಮ ರೆಸ್ಯುಮೆ ಅಂಕಪಟ್ಟಿ ಅಥವಾ ಸ್ಕೋರ್ ಬೋರ್ಡ್ ಅನ್ನು ತಯಾರಿಸುತ್ತದೆ. ನಿಮ್ಮ ರೆಸ್ಯುಮೆಯ ಸೂಕ್ತತೆಯನ್ನು ಅಥವಾ ಸ್ಕೋರ್ ಅನ್ನು ಹೆಚ್ಚಿಸಲು ಅಂತಹ ವೆಬ್ಸೈಟ್ ಗಳ ಸಾಫ್ಟ್ವೇರ್ ಸೇವೆ ಮತ್ತು ಹಸ್ತಚಾಲಿತ ಸೇವೆ – ಎರಡೂ ಬಗೆಯ ಸೇವೆಗಳನ್ನು ಬಳಸಿಕೊಳ್ಳಬಹುದು.

ಆದರೆ, ನಿಮಗೆ ತಿಳಿದಿದೆಯೇ? ರೆಸ್ಯುಮೆ ರಚನೆ ಮತ್ತು ವಿನ್ಯಾಸಗಳು ದೇಶದಿಂದ ದೇಶಕ್ಕೆ, ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ. ಆದ್ದರಿಂದ, ನೀವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರೆ ಅಥವಾ ಪರದೇಶದ ಯಾವುದೊ ಸಂಸ್ಥೆಯಲ್ಲಿ ನೀವು ರೆಸ್ಯುಮೆ ಸಲ್ಲಿಸುವುದಾದರೆ, ಆ ದೇಶದ ರೆಸ್ಯುಮೆ ವಿನ್ಯಾಸವನ್ನು ಅರಿತು, ಅದಕ್ಕೆ ಸೂಕ್ತವಾದ ರೆಸ್ಯುಮೆ ತಯಾರಿಸುವುದು ಅತ್ಯಗತ್ಯ. ಹಾಗಾಗಿ, ಅಲ್ಲಿಯ ಸಂಪನ್ಮೂಲಗಳನ್ನು ಬಳಸಿ ನಿಮ್ಮ ರೆಸ್ಯುಮೆ ತಯಾರಿಸಿ.

ಅತ್ಯುತ್ತಮ ಉಚಿತ ಆನ್ಲೈನ್ ರೆಸ್ಯುಮೆ ವಿಮರ್ಶೆ ವೆಬ್ಸೈಟ್ಗಳು

ನಿಮ್ಮ ಅಗತ್ಯತೆ ಮತ್ತು ನಿಮ್ಮ ಅವಸರಕ್ಕೆ ಸೂಕ್ತವಾದ ರೆಸ್ಯುಮೆ ಯನ್ನು ವಿಮರ್ಶಿಸುವ ವೆಬ್ಸೈಟ್ ಗಳ ಪಟ್ಟಿ ಇಲ್ಲಿವೆ. ಈ ವೆಬ್ಸೈಟ್ ಗಳಲ್ಲಿ ಹೆಚ್ಚಿನ ವಿವರವಾದ ವಿಮರ್ಶೆಯನ್ನು  ನೀಡುವುದಿಲ್ಲ. 

 • ResumeWorded
 • TopResume
 • Ladders
 • SkillRoads
 • TheResumeCenter

1. RESUMEWORDED – ಉಚಿತ ರೆಸ್ಯುಮೆ  ವಿಮರ್ಶೆ

ರೆಸ್ಯುಮೆ ವಿಮರ್ಶೆ ಸೇವೆಯನ್ನು ಪ್ರಮುಖವಾಗಿ ಕೇಂದ್ರೀಕರಿಸುವ ಹಲವು ವೆಬ್ಸೈಟ್ ಗಳ ಪಟ್ಟಿಯಲ್ಲಿ, ResumeWorded ಕೂಡ ಒಂದು. ಹಲವು ವೆಬ್ಸೈಟ್ ಗಳು ತಮ್ಮ ರೆಸ್ಯುಮೆ ಬರವಣಿಗೆ ಸೇವೆಯನ್ನು ಪಡೆಯುವ ಗ್ರಾಹಕರನ್ನು ಹೆಚ್ಚಿಸಲು, ತಮ್ಮ ವೆಬ್ಸೈಟ್ ನ ಕಾರ್ಯತಂತ್ರದ ಯೋಜನೆಯಾಗಿ ರೆಸ್ಯುಮೆ ವಿಮರ್ಶೆ ಸೇವೆಯನ್ನು ನೀಡಲಾಗುತ್ತದೆ. ಆದರೆ, ResumeWorded ವೆಬ್ಸೈಟ್ ನ  ಏಕೈಕ ವ್ಯವಹಾರವೆಂದರೆ ರೆಸ್ಯುಮೆ ಯ ವಿಮರ್ಶೆಯನ್ನು ಒದಗಿಸುವ ಸಾಫ್ಟ್ವೇರ್.

ನೀವು ಈ ವೆಬ್ಸೈಟ್ ನ ರೆಸ್ಯುಮೆ  ವಿಮರ್ಶೆ ಸಾಫ್ಟ್ವೇರ್ ಅನ್ನು ಕೇಂದ್ರೀಕರಿಸಿ ಗಮನಿಸಿದರೆ, ಈ ಮೌಲ್ಯಮಾಪನದ ಮತ್ತು ರೆಸ್ಯುಮೆ ವಿಮರ್ಶೆ ಪ್ರಕ್ರಿಯೆಯ ಆಳತೆ ಮತ್ತು ಸಕಾರಾತ್ಮಕ ಉದ್ದೇಶವನ್ನು ಅರಿಯಬಹುದು. 

ಒಟ್ಟಾರೆ ಪ್ರಕ್ರಿಯೆ ತೊಂದರೆ ಮಟ್ಟ: ಮಧ್ಯಮ

ಈ ವೆಬ್ಸೈಟ್‌ನಲ್ಲಿ “ರೆಸ್ಯುಮೆ  ಅಪ್ಲೋಡ್” ಬಟನ್ ಒತ್ತಿದ ನಂತರ, ಹೊಸ ಖಾತೆಯನ್ನು ರಚಿಸಲು ಅಥವಾ ಇರುವ ಖಾತೆಯೊಂದಿಗೆ ಸೈನ್ ಇನ್ ಮಾಡಲು ಒಂದು ಕಿಟಕಿ ತೆರೆಯುತ್ತದೆ. ಇಲ್ಲಿ ನ್ನೀವು ಹೊಸ ಖಾತೆಯನ್ನು ತೆರೆಯಬಹುದು ಅಥವಾ ನಿಮ್ಮ Google, Facebook ಅಕೌಂಟ್ ಬಳಸಿ ಲಾಗಿನ್ ಆಗಬಹುದು. 

ನೀವು ಇಮೇಲ್ ನೊಂದಿಗೆ  ಸೈನ್ ಅಪ್ ಆಗಲು ಬಯಸಿದರೆ, ವೆಬ್ಸೈಟ್ ನಲ್ಲಿ ನಿಮ್ಮ ಹೆಸರು, ಇಮೇಲ್ ಮತ್ತು ಇತ್ಯಾದಿ ವಿವರಗಳೊಂದಿಗೆ ಹೊಸ ಖಾತೆಯನ್ನು ತೆರೆಯಬಹುದು. ಒಮ್ಮೆ ನೀವು ಅಗತ್ಯ ಮಾಹಿತಿಯನ್ನು ನಮೂದಿಸಿದ ನಂತರ, ನಿಮ್ಮ ರೆಸ್ಯುಮೆಯನ್ನು ಜಾಲತಾಣಕ್ಕೆ ರವಾನಿಸಲು, ಈ ವೆಬ್ಸೈಟ್  ನಿಮ್ಮನ್ನು ಅಗತ್ಯವಿರುವ  ವೆಬ್ ಪೇಜ್ ಗೆ ಕರೆದೊಯ್ಯುತ್ತದೆ.

ಅಲ್ಲಿಂದ, ನಿಮ್ಮ ರೆಸ್ಯುಮೆ ಯ ವಿಮರ್ಶೆ ಪ್ರಾರಂಭಗೊಂಡು, ನಿಮ್ಮ ರೆಸ್ಯುಮೆಯನ್ನು ಅವಲೋಕಿಸಿ, ರೆಸ್ಯುಮೆ ಯ ಒಟ್ಟಾರೆ ಸ್ಕೊರ್ ಅನ್ನು ಈ ವೆಬ್ಸೈಟ್ ನೀಡುತ್ತದೆ.

ರೆಸ್ಯುಮೆ  ವಿಮರ್ಶೆ ಗುಣಮಟ್ಟ: ಅತ್ಯುತ್ತಮ

ಇತರ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ರಚಿಸಿದ ರೆಸ್ಯುಮೆಯ ಸ್ಕೊರ್ ಗಳಿಗೆ ಹೋಲಿಸಿದರೆ, ResumeWorded, ಅತ್ಯಂತ ಆಳವಾದ ಹಾಗೂ ಸೂಕ್ತವಾದ ಸಲಹೆಗಳನ್ನು ನೀಡುತ್ತದೆ.

ನಿಮ್ಮ ರೆಸ್ಯುಮೆಯನ್ನು ಈ ವೆಬ್ಸೈಟ್ ನಲ್ಲಿ ಸಲ್ಲಿಸಿದ ನಂತರ, ನಿಮ್ಮ ರೆಸ್ಯುಮೆಯನ್ನು ಪರಿಶೀಲಿಸಿ, ಅದಕ್ಕೆ ಅಗತ್ಯವಿರುವ ವಿಮರ್ಶೆಯನ್ನು ಈ ವೆಬ್ಸೈಟ್ ನೀಡುತ್ತದೆ. ವಿಮರ್ಶೆಯಲ್ಲಿ ಮುಖ್ಯವಾಗಿ ಅಂಶ ಸೂಚಕಗಳು, ಪ್ರತಿಯೊಂದು ಸಾಲಿನ ವಿಶ್ಲೇಷಣೆ, ಶಿಫಾರಸು ಮಾಡಲಾದ ಕ್ರಿಯಾಪದಗಳು, ಛಂದೋಬದ್ಧಗಳು, ಇತ್ಯಾದಿಯನ್ನು ಈ ವೆಬ್ಸೈಟ್ ಒದಗಿಸುತ್ತದೆ. 

ಸೂಚಿಸಲಾದ ಅನೇಕ ತಿದ್ದುಪಡಿಗಳು ಉಚಿತವಾಗಿ ಲಭ್ಯವಿರುತ್ತದೆ. ಆದರೆ ಇನ್ನಿತರ ತಿದ್ದುಪಡಿಗಳನ್ನು ತೆರವುಗೊಳಿಸಲು ವೆಬ್ಸೈಟ್ ನ ಪ್ರೊ ಅಥವಾ  ಪ್ರೀಮಿಯಂ ಯೋಜನೆಗೆ ಉನ್ನತೀಕರಿಸಿಕೊಳ್ಳಬೇಕು. 

ಪ್ರಕ್ರಿಯೆ ಸಮಯ: ತಕ್ಷಣ

ರೆಸ್ಯುಮೆ ವಿಮರ್ಶೆಯ ಈ ಸಂಪೂರ್ಣ ಪ್ರಕ್ರಿಯೆ ಕೇವಲ ಕೆಲವು ಕ್ಷಣಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ, ನಿಮ್ಮ ರೆಸ್ಯುಮೆಯಲ್ಲಿ ಬದಲಾದ ಅಂಶಗಳ ಬಗ್ಗೆ ನಿಮಗೆ ತಕ್ಷಣವೇ ತಿಳಿದು ಬರುತ್ತದೆ. 

2. TOPRESUME – ಉಚಿತ ರೆಸ್ಯುಮೆ  ವಿಮರ್ಶೆ

TopResume ವಿಶ್ವದ ಅತಿದೊಡ್ಡ ರೆಸ್ಯುಮೆ ಯ ಬರವಣಿಗೆಯ ಸೇವೆಯಾಗಿದ್ದು, ೩೦೦,೦೦೦ಕ್ಕೂ ಹೆಚ್ಚು ವೃತ್ತಿಪರರಿಗೆ ವಿವಿಧ ಸಂಸ್ಥೆಗಳಲ್ಲಿ ಸಂದರ್ಶನ ನೀಡಿ, ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡಿದೆ.

ಒಟ್ಟಾರೆ ಪ್ರಕ್ರಿಯೆ ತೊಂದರೆ ಮಟ್ಟ: ಅತ್ಯಂತ ಸುಲಭ

TopResumeಯ ಉಚಿತ ರೆಸ್ಯುಮೆ ವಿಮರ್ಶಾ ಪ್ರಕ್ರಿಯೆಯು ಸಾಧ್ಯವಾದಷ್ಟು ಸುಲಭವಾಗಿದೆ.

“ಉಚಿತ ರೆಸ್ಯುಮೆ  ವಿಮರ್ಶೆಯನ್ನು ಪಡೆಯಿರಿ” ಗುಂಡಿ ಒತ್ತಿ, ನಿಮ್ಮ ರೆಸ್ಯುಮೆ ಯನ್ನು ಜಾಲತಾಣಕ್ಕೆ ರವಾನಿಸಿ ಮತ್ತು ನಿಮ್ಮ ಇಮೇಲ್ ಅನ್ನು ನಮೂದಿಸಿ. ಅಷ್ಟೇ!! ಈ ಸುಲಭವಾದ ಪ್ರಕ್ರಿಯೆಯಲ್ಲಿ ಯಾವುದೇ ಬಗೆಯ ದೀರ್ಘ ಪ್ರಶ್ನಾವಳಿಗಳ ಜಂಜಾಟವಿಲ್ಲ. ನಿಮ್ಮ ರೆಸ್ಯುಮೆ ಯ ವಿಮರ್ಶೆ ಶೀಘ್ರವಾಗಿ ನಿಮ್ಮ ಕೈಯಲ್ಲಿರುತ್ತದೆ.

ರೆಸ್ಯುಮೆ  ವಿಮರ್ಶೆ ಗುಣಮಟ್ಟ: ಉತ್ತಮ

ಆನ್ಲೈನ್ ಅಲ್ಲಿ ಅತ್ಯುತ್ತಮ ಉಚಿತ ರೆಸ್ಯುಮೆ ವಿಮರ್ಶೆ ಮಾಡುವ ವೆಬ್ಸೈಟ್ ಗಳ ಪಟ್ಟಿಯಲ್ಲಿ TopResume ಎರಡನೇ ಸ್ಥಾನದಲ್ಲಿದೆ.

TopResume ಯ ರೆಸ್ಯುಮೆ ವಿಮರ್ಶೆ ಸಾಕಷ್ಟು ವಿಸ್ತಾರವಾಗಿರುತ್ತದೆ. ನಿಮ್ಮ ರೆಸ್ಯುಮೆಯಲ್ಲಿ ಕಾಣಿಸುವ ರೇಖಾಚಿತ್ರಗಳು, ಎದ್ದು ಕಾಣುವ ಪದಗಳು ಮತ್ತು ಸಾಮರ್ಥ್ಯಗಳು, ಇತ್ಯಾದಿಗಳನ್ನು ಈ ವೆಬ್ಸೈಟ್ ನ ರೆಸ್ಯುಮೆ ವಿಮರ್ಶೆ ನೀಡುತ್ತದೆ. ಉದಾಹರೆಣೆಗೆ ರೆಸ್ಯುಮೆ ವಿಮರ್ಶೆಯಲ್ಲಿ ರೆಸ್ಯುಮೆ ಯಾವ ವರ್ಗಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ ಎಂಬುದನ್ನು ಈ ವೆಬ್ಸೈಟ್ ವಿಶ್ಲೇಷಿಸುತ್ತದೆ. ಆದರೆ ಈ ವೆಬ್ಸೈಟ್ ನಲ್ಲಿ ರೆಸ್ಯುಮೆಯನ್ನು ಸುಧಾರಿಸಲು ಸ್ಪಷ್ಟ ಮತ್ತು ಸಂಕ್ಷಿಪ್ತ ಮಾಹಿತಿಯನ್ನು ಕೇವಲ ಪೆಯ್ಡ್ ಸೇವೆಯನ್ನಾಗಿ ಒದಗಿಸಲಾಗುತ್ತದೆ. 

ಪ್ರಕ್ರಿಯೆ ಸಮಯ: ೪೮ ಘಂಟೆ

TopResume ಯ ರೆಸ್ಯುಮೆ ವಿಮರ್ಶೆಯ ಸಂಪೂರ್ಣ ಪ್ರಕ್ರಿಯೆ ಕೇವಲ ೪೮ ಘಂಟೆಗಳ ಕಾಲ ತೆಗೆದುಕೊಳ್ಳುತ್ತದೆ.   

3. LADDERS – ಉಚಿತ ರೆಸ್ಯುಮೆ  ವಿಮರ್ಶೆ ಸೇವೆ 

Ladders ಒಂದು ಪ್ರಸಿದ್ಧ ಕಾರ್ಯನಿರ್ವಾಹಕ ಉದ್ಯೋಗ ಹುಡುಕಾಟದ ಜಾಲತಾಣವಾಗಿದೆ. ವಿಶೇಷವಾಗಿ ಆರು-ಅಂಕಿಗಳ ವೇತನವನ್ನು ಗಳಿಸುವವರಿಗೆ, ಈ ವೆಬ್ಸೈಟ್ ಅತ್ಯಂತ ಉಪಯೋಗಕಾರಿ. ರೆಸ್ಯುಮೆ ಬರವಣಿಗೆ ಈ ವೆಬ್ಸೈಟ್ ನ ಪರಿಣತಿಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಲ್ಲವಾದರೂ, Ladders ನ ರೆಸ್ಯುಮೆ ವಿಮರ್ಶೆ ತನ್ನ ನ್ಯಾಯಯುತ ಬಗೆಯಲ್ಲಿ ಮಾನ್ಯತೆ ಪಡೆದಿದೆ. ವಾರ್ಷಿಕವಾಗಿ,  Ladders ೧೦೦,೦೦೦ಕ್ಕೂ ಹೆಚ್ಚು ಬಳಕೆದಾರರ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತದೆ.

ಒಟ್ಟಾರೆ ಪ್ರಕ್ರಿಯೆಯ ತೊಂದರೆ ಮಟ್ಟ: ಬಹಳ ಸುಲಭ

ಆನ್ಲೈನ್ ನಲ್ಲಿ ಲಭ್ಯವಿರುವವ ಇತರ ರೆಸ್ಯುಮೆ ವಿಮರ್ಶಿಸುವ ವೆಬ್ಸೈಟ್ ಗಳಿಗೆ ಹೋಲಿಸಿದರೆ, Ladders ಭಿನ್ನವಾಗಿದೆ. ಅದಕ್ಕೆ ಕಾರಣ ಅವರ ಹಲವಾರು ಫಲಿತಾಂಶಗಳು ಮತ್ತು ಸೇವೆಗಳು ತ್ವರಿತವಾಗಿ ದೊರಕುವುದು.

ಈ ವೆಬ್ಸೈಟ್ ನ ಪ್ರಕ್ರಿಯೆ ಅನುಸಾರ ನಿಮ್ಮ ರೆಸ್ಯುಮೆ ಯನ್ನು ನೀವು ಜಾಲತಾಣಕ್ಕೆ ರವಾನಿಸಿದ ತಕ್ಷಣ, ಈ ವೆಬ್ಸೈಟ್ ನಿಮ್ಮನ್ನು ರೆಸ್ಯುಮೆ ವಿಮರ್ಶೆ ಪುಟಕ್ಕೆ ಕರೆದೊಯ್ಯತ್ತದೆ. ಇಲ್ಲಿ ನಿಮ್ಮ ರೆಸ್ಯುಮೆಯ ಸಾರಾಂಶವನ್ನು ತಿಳಿದುಕೊಳ್ಳಬಹುದು ಮತ್ತು ನಿಮ್ಮ ರೆಸ್ಯುಮೆಯನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಕೆಲವು ಸಲಹೆಗಳನ್ನು ಪಡೆಯಬಹುದು.

ವೆಬ್ಸೈಟ್ ನಿಮ್ಮ ರೆಸ್ಯುಮೆಯ ವಿಮರ್ಶೆಯನ್ನು ತಕ್ಷಣವೇ ನೀಡುವುದರಿಂದ, ಇದು ಸಾಫ್ಟ್ವೇರ್ ಸಹಾಯದಿಂದ ಮಾಡಲಾಗಿದೆ ಎಂದು ಅರ್ಥೈಸಿಕೊಳ್ಳಬಹುದು. ಇದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎನ್ನುವುದನ್ನು ನಿರ್ಧರಿಸುವುದು ನಿಮ್ಮ ಪರಿಕಲ್ಪನೆಗೆ ಬಿಟ್ಟಿದ್ದು. ಆದರೆ ಈ ರೀತಿ ಸಾಫ್ಟ್ವೇರ್ ಗಳು ರೆಸ್ಯುಮೆ ಪರಿಶೀಲಿಸುವುದರಿಂದ ಸಾಫ್ಟ್ವೇರ್ ಗಳು ರೆಸ್ಯುಮೆಯಲ್ಲಿ ಏನನ್ನು ಬಯಸುತ್ತವೆ ಎಂದು ತಿಳಿದುಕೊಳ್ಳಬಹುದು. 

ರೆಸ್ಯುಮೆ  ವಿಮರ್ಶೆ ಗುಣಮಟ್ಟ: ಮಧ್ಯಮ/ಉತ್ತಮ

Ladders ರೆಸ್ಯುಮೆ  ವಿಮರ್ಶೆ ಸಾಧನವು ಕೆಲವು ಯೋಗ್ಯ ಪ್ರತಿಕ್ರಿಯೆಯನ್ನು ಒದಗಿಸಿದೆ. 

Ladders ನ ತ್ವರಿತ ಪ್ರತಿಕ್ರಿಯೆ ಪರಿಗಣಿಸಿದರೆ, ನೀವು ೨೪-೪೮ ಘಂಟೆಗಳ ಕಾಲ ಕಾಯಬೇಕಾಗಿಲ್ಲ. ಇದು ಅತ್ಯಂತ ಧೃಡವಾದ ಸೇವೆಯಾಗಿದೆ. ಈ ವಿಮರ್ಶೆಯಲ್ಲಿ ಪಂಕ್ಟುಯೇಷನ್, ದೊಡ್ಡಕ್ಷರ, ಸಾಧನೆಗಳಿಗೆ ಸುಧಾರಣೆಗಳು ಮತ್ತು ಇತ್ಯಾದಿ ವಿಷಯಗಳ ಕುರಿತು ಎಲ್ಲಾ ಮಾಹಿತಿಯನ್ನು ನೀಡಲಾಗುತ್ತದೆ. 

ಸಾಮಾನ್ಯ ಸಲಹೆಯನ್ನು ನೀಡುವುದರ ಜೊತೆಗೆ, ಈ ವೆಬ್ಸೈಟ್ ನಲ್ಲಿ ನಿಜವಾಗಿಯೂ ನಿಮ್ಮ ರೆಸ್ಯುಮೆ ಯಲ್ಲಿ ಸುಧಾರಣೆಯ ಅಗತ್ಯವಿರುವ ವಿಭಾಗವನ್ನು ಸೂಚಿಸುತ್ತಾರೆ. ಇದರಿಂದ ಸುಮಾರು ಸೂಚನೆಗಳನ್ನು ಪರಿಗಣಿಸಿ, ನಿಮ್ಮ ರೆಸ್ಯುಮೆಯನ್ನು  ಸುಧಾರಿಸಬಹುದು. 

ಪ್ರಕ್ರಿಯೆ ಸಮಯ: ತಕ್ಷಣ

ರೆಸ್ಯುಮೆ ವಿಮರ್ಶೆಯ ಈ ಸಂಪೂರ್ಣ ಪ್ರಕ್ರಿಯೆ ಕೇವಲ ಕೆಲವು ಕ್ಷಣಗಳನ್ನು ತೆಗೆದುಕೊಳ್ಳುತ್ತದೆ.

4. SKILLROADS – ಉಚಿತ ರೆಸ್ಯುಮೆ  ವಿಮರ್ಶೆ ಸೇವೆ 

Skillroads ಎನ್ನುವುದು ರೆಸ್ಯುಮೆ ಮತ್ತು ಲಿಂಕ್ಡ್‌ಇನ್ ಪ್ರೊಫೈಲ್ ಬರವಣಿಗೆಯ ಸೇವೆಯಾಗಿದೆ. ಈ ವೆಬ್ಸೈಟ್ ನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ತಯಾರಿಸುವ ರೆಸ್ಯುಮೆ ನಿಮ್ಮ ವೃತ್ತಿ ಜೀವನದ ಅತ್ಯಂತ ಪ್ರಮುಖ ರೆಸ್ಯುಮೆ ಆಗಬಹುದು. 

ಒಟ್ಟಾರೆ ಪ್ರಕ್ರಿಯೆಯ ತೊಂದರೆ ಮಟ್ಟ: ಸುಲಭ

Skillroads ರೆಸ್ಯುಮೆ  ವಿಮರ್ಶೆ ವೆಬ್ಸೈಟ್ ಉಪಯೋಗಿಸಲು ಸುಲಭವಾಗಿದೆ. ಆದರೆ ಅದನ್ನು ಅತ್ಯಂತ ಸರಳ ಎನ್ನಲಾಗದು. ಅದಕ್ಕೆ ಕಾರಣ – ಇತರ ಉಚಿತ ರೆಸ್ಯುಮೆಯ ವಿಮರ್ಶಕರು ಅಥವಾ ಪರಿಶೀಲಕರು ರೆಸ್ಯುಮೆ ಯನ್ನು ಜಾಲತಾಣಕ್ಕೆ ರವಾನಿಸಲು ಮತ್ತು ನಿಮ್ಮ ಇಮೇಲ್ ಅನ್ನು ನಮೂದಿಸಲು ಕೇಳಿದರೆ, Skillroadsನಲ್ಲಿ ಕೇವಲ ವೆಬ್ಸೈಟ್ ನ ತೆರೆಯೊರೆಯಲ್ಲಿ ಸಂಪರ್ಕ ಪಡೆಯಬಹುದು.

ಇದು ಪರಿಗಣಿಸಲು  ದೊಡ್ಡ ವಿಷಯವಲ್ಲವಾದರೂ, ಈ ವೆಬ್ಸೈಟ್ ನ ಪ್ರಕ್ರಿಯೆಗಿಂತ ಸುಲಭವಾದ ವೆಬ್ಸೈಟ್ ಪ್ರಕ್ರಿಯೆಗಳಿವೆ. 

Skillroads ನ ಸಕಾರಾತ್ಮಕ ವಿಷಯವೆಂದರೆ ಅದು  ಕೇವಲ ರೆಸ್ಯುಮೆ ವಿಮರ್ಶೆ ನೀಡದೇ, ರೆಸ್ಯುಮೆಯ ಸ್ಕೊರ್ ಸಹ ನೀಡುತ್ತದೆ. 

ರೆಸ್ಯುಮೆ  ವಿಮರ್ಶೆ ಗುಣಮಟ್ಟ: ಮಧ್ಯಮ / ಉತ್ತಮ

ಈ ವೆಬ್ಸೈಟ್ ನಲ್ಲಿ ಮಾಡುವ ರೆಸ್ಯುಮೆ ವಿಮರ್ಶೆ ಅಥವಾ ಪರಿಶೀಲನೆ ತ್ವರಿತವಾಗಿ ಮಾಡಲಾದರೂ, ಸಮಗ್ರವಾಗಿರುತ್ತದೆ. ಈ ವೆಬ್ಸೈಟ್ ನಲ್ಲಿ  ರೆಸ್ಯುಮಯ ವಿಮರ್ಶೆಯನ್ನು ಏಳು ವಿಭಿನ್ನ ವಿಭಾಗಗಳಾಗಿ ವಿಭಜಿಸಲಾಗುತ್ತದೆ:

 • ಎಟಿಎಸ್ ಹೊಂದಾಣಿಕೆ
 • ಶೈಲಿ ಮತ್ತು ವಿನ್ಯಾಸ
 • ರೆಸ್ಯುಮೆ  ವಿಭಾಗ
 • ವೃತ್ತಿ ಗುರಿಗಳು
 • ಸಾಧನೆಗಳು
 • ಪ್ರಸ್ತುತತೆ
 • ಸಂಪರ್ಕ ವಿವರ

ಪ್ರಕ್ರಿಯೆ ಸಮಯ: ತಕ್ಷಣ

ರೆಸ್ಯುಮೆ ವಿಮರ್ಶೆಯ ಈ ಸಂಪೂರ್ಣ ಪ್ರಕ್ರಿಯೆ ಕೇವಲ ಕೆಲವು ಕ್ಷಣಗಳನ್ನು ತೆಗೆದುಕೊಳ್ಳುತ್ತದೆ.

5. ZIPJOB – ಉಚಿತ ರೆಸ್ಯುಮೆ  ವಿಮರ್ಶೆ ಸೇವೆ 

ZipJob ಅತ್ಯುತ್ತಮ ವೆಬ್‌ಸೈಟ್ ಹೊಂದಿದ್ದು, ಅದನ್ನು ಉಪಯೋಗಿಸಲು ಸುಲಭವಾಗಿದೆ. ಈ ವೆಬ್ಸೈಟ್ ತಾಂತ್ರಿಕವಾಗಿಯೂ ಸುಧಾರಿತವಾಗಿದೆ. ರೆಸ್ಯುಮೆಯ ಬರವಣಿಗೆ ಸೇವೆಗಳಿಗೆ ZipJob ಖ್ಯಾತಿ ಪಡೆದಿದೆ. ಅದಕ್ಕೆ ಸಾಕ್ಷಿಯಾಗಿ, ZipJob ನ ಬಳಕೆದಾರರಿಂದ ಈ ವೆಬ್ಸೈಟ್ ನೂರಾರು ೫-ಸ್ಟಾರ್ ರೇಟಿಂಗ್ ಪಡೆದಿದೆ. 

ಈ ವೆಬ್ಸೈಟ್ ನ ಮೂಲ ಪರಿಕಲ್ಪನೆ – ಹೊಸ ಗ್ರಾಹಕರನ್ನು ಪಡೆಯಲು ಉತ್ತಮ ಮಾರ್ಗವೆಂದರೆ ಉಚಿತ ರೆಸ್ಯುಮೆ  ವಿಮರ್ಶೆಯನ್ನು ನೀಡುವುದು.

ಒಟ್ಟಾರೆ ಪ್ರಕ್ರಿಯೆ: ಬಹಳ ಸುಲಭ

ZipJob ಅದರ ರೆಸ್ಯುಮೆ  ವಿಮರ್ಶೆ ಪ್ರಕ್ರಿಯೆಯನ್ನು ಚಿಕ್ಕದಾಗಿ ಮತ್ತು ಚೊಕ್ಕದಾಗಿರಿಸುತ್ತದೆ, ಉದ್ಯೋಗಾಕಾಂಕ್ಷಿಗಳಿಗೆ ಸುಲಭವಾಗುವಂತೆ.

ನೀವು ಮಾಡಬೇಕಾಗಿರುವುದು ನಿಮ್ಮ ರೆಸ್ಯುಮೆಯನ್ನು PDF, Doc, ಅಥವಾ Docx ‌ನಲ್ಲಿ ಜಾಲತಾಣಕ್ಕೆ ರವಾನಿಸಿ. ನಂತರ ನಿಮ್ಮ ಇಮೇಲ್ ವಿಳಾಸವನ್ನು ಅನ್ನು  ವೆಬ್ಸೈಟ್ ನಲ್ಲಿ ನಮೂದಿಸಬೇಕು. ನಂತರ “ಉಚಿತ ರೆಸ್ಯುಮೆ  ವಿಮರ್ಶೆಯನ್ನು ಪಡೆಯಿರಿ” ಗುಂಡಿಯನ್ನು ಒತ್ತಿ. ಇದರಿಂದ ನೀವು ದೃಢೀಕರಣ ಪುಟವನ್ನು ತಲುಪುತ್ತೀರಿ. ಅದು ನಿಮ್ಮ ವಿಮರ್ಶೆಯನ್ನು ೪೮ ಘಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಪಡೆಯುವಿರಿ ಎಂದು ಹೇಳುತ್ತದೆ.

ರೆಸ್ಯುಮೆ  ವಿಮರ್ಶೆಯ ಗುಣಮಟ್ಟ: ಮಧ್ಯಮ

ZipJob ವೆಬ್ಸೈಟ್ ರೆಸ್ಯುಮೆ ವಿಮರ್ಶಿಸುವಲ್ಲಿ ನ್ಯಾಯಯುತವಾದ ಕಾರ್ಯವನ್ನು ಮಾಡುತ್ತಿದೆ. ಈ ವೆಬ್ಸೈಟ್ ನಿಂದ ನಿಮ್ಮ ರೆಸ್ಯುಮೆ ವಿಮರ್ಶೆ ಪಡೆದು, ಅದರ ಅನುಸಾರ ರೆಸ್ಯುಮೆಯನ್ನು ತಿದ್ದಿದ ನಂತರ ನಿಮ್ಮ ರೆಸ್ಯುಮೆಗೆ ಹೆಚ್ಚಿನ ಬದಲಾವಣೆಗಳನ್ನು ಮಾಡುವ ಅಗತ್ಯವಿರುವುದಿಲ್ಲ. ಏಕೆಂದರೆ  ನಿಮ್ಮ ರೆಸ್ಯುಮೆ ZipJob ಸಹಾಯದಿಂದ ಈಗಾಗಲೇ ಉತ್ತಮ ಗುಣಮಟ್ಟದ್ದಾಗಿರುತ್ತದೆ.  

ZipJobನ ಉಚಿತ ರೆಸ್ಯುಮೆ ವಿಮರ್ಶೆ ಸೇವೆ ಮೆಚ್ಚಬಹುದಾದಂತದ್ದು. ಈ ವೆಬ್ಸೈಟ್ ನಲ್ಲಿ ಅತ್ಯಂತ ಕೀಳುಮಟ್ಟದ ರೆಸ್ಯುಮೆ ನೀಡಿದರೂ, ವಿವಿಧ ಭಾಗಗಳ ಪ್ರತ್ಯೇಕ ವಿಮರ್ಶೆಯನ್ನು ಪಡೆಯಬಹುದು. ಉದಾಹರಣೆಗೆ, ಕಡಿಮೆ ಗುಣಮಟ್ಟದ ರೆಸ್ಯುಮೆ ಅಪ್ಲೋಡ್ ಮಾಡಿದಾಗ, ನಾವು ಪಡೆದ ವಿಮರ್ಶೆಯ ಭಾಗಗಳು ಇಂತಿವೆ: 

 • ವಿನ್ಯಾಸ, ರಚನೆ ಮತ್ತು ಶೈಲಿ
 • ಭಾಷೆ ಮತ್ತು ಬರವಣಿಗೆ
 • ತಂತ್ರಾಂಶದಲ್ಲಿ ಕಣ್ಣಾಡಿಸುವ ಪರೀಕ್ಷೆಗೆ ಒಳಪಟ್ಟ ರೆಸ್ಯುಮೆ 
 • ಶಿಫಾರಸುಗಳು

ZipJobನ ವಿಮರ್ಶೆಯು ಹೆಚ್ಚಾಗಿ ಸಾಮಾನ್ಯ ಮಾಹಿತಿಯನ್ನು ಒದಗಿಸುತ್ತದೆ. ಆದರೆ, ನಿಮ್ಮ ರೆಸ್ಯುಮೆಯನ್ನು ಸುಧಾರಿಸಲು ಕೆಲವು ನಿರ್ದಿಷ್ಟ ಕ್ಷೇತ್ರಗಳನ್ನು ಮತ್ತು ಅದನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಸಲಹೆಗಳನ್ನು ಸಹ ನೀಡುತ್ತದೆ. ಇತರ ಉಚಿತ ರೆಸ್ಯುಮೆ  ವಿಮರ್ಶೆ ಪರಿಕರಗಳಿಗಿಂತ ZipJob ಭಿನ್ನವಾಗಿ. ಅದರ  ಕಾರ್ಯ ವೈಖರಿ ಪರಿಗಣಿಸಿದರೆ ರೆಸ್ಯುಮೆ ಮಾನವನಿಂದ ವಿಮರ್ಶಿಸಲ್ಪಟ್ಟಿದೆ ಅನ್ನಿಸುತ್ತದೆ. 

ಪ್ರಕ್ರಿಯೆ ಸಮಯ: ೪೮ ಘಂಟೆ

ZipJobನ ರೆಸ್ಯುಮೆ ವಿಮರ್ಶೆಯ ಸಂಪೂರ್ಣ ಪ್ರಕ್ರಿಯೆ ಕೇವಲ ೪೮ ಘಂಟೆಗಳ ಕಾಲ ತೆಗೆದುಕೊಳ್ಳುತ್ತದೆ.   

ಮೇಲೆ ನೀಡಿರುವ ವೆಬ್ಸೈಟ್ ಗಳಂತಹ ಹಲವಾರು ವೆಬ್ಸೈಟ್ ಗಳು ಜಾಲತಾಣಗಳಲ್ಲಿವೆ. ಸುಮಾರು ವೆಬ್ಸೈಟ್ ಗಳು ಉಚಿತ ಸೇವೆ ನೀಡಿದರೂ, ಕೆಲವು ವೆಬ್ಸೈಟ್ ಗಳು ಕನಿಷ್ಠ ಮಟ್ಟದ  ಶುಲ್ಕವನ್ನು ಪಾವತಿಸಲು ತಿಳಿಸುತ್ತವೆ. ಈ ರೀತಿಯ ಉಚಿತ ರೆಸ್ಯುಮೆಯ ವಿಮರ್ಶೆಗಳು ಉಪಯೋಗಕಾರಿ ಮತ್ತು  ಉದ್ಯೋಗಕಾಕಂಷಿಗಳನ್ನು ಪ್ರಚೋದಿಸುವಲ್ಲಿ ಆಶ್ಚರ್ಯವೇನು ಇಲ್ಲ. ಆದರೆ, ಪ್ರತಿಯೊಬ್ಬರೂ ತಮ್ಮ ರೆಸ್ಯುಮೆಯಲ್ಲಿರುವ ತಪ್ಪುಗಳನ್ನು ತಿದ್ದುಪಡಿಸಲು ಆಸಕ್ತಿ ಹೊಂದಿರುವುದಿಲ್ಲ. 

ಆದರೆ ಆಸಕ್ತಿ ಇರುವವರು ಮೇಲೆ ನೀಡಿರುವ ವೆಬ್ಸೈಟ್ ಗಳನ್ನು ಉಪಯೋಗಿಸಿಕೊಂಡು ತಮ್ಮ ರೆಸ್ಯುಮೆ ಗಳನ್ನು ಪರಿಶೀಲಿಸಿ, ತಮಗೆ ಅಗತ್ಯವಿರುವ ಮಾಹಿತಿಯನ್ನು ಪಡೆದುಕೊಳ್ಳಬಹುದು. ಹಾಗಾಗಿ ಈ ಸೇವೆಗಳನ್ನು ಉಪಯೋಗಿಸಿ, ನಿಮ್ಮ ರೆಸ್ಯುಮೆಯನ್ನು ಮತ್ತು ಅದರ ಸ್ಕೋರ್ ಅನ್ನು ಸುಧಾರಿಸಿ. ಇದರಿಂದ ಉದ್ಯೋಗದಾತರು ತಾವಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ.