ಭಾರತದಲ್ಲಿ ಮನೆಯಿಂದ ಮಾಡುವ ಉದ್ಯೋಗಾವಕಾಶಗಳು

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಮನೆಯಿಂದ ಕೆಲಸ ಮಾಡುವ ಅಥವಾ ವರ್ಕ್ ಫ್ರಮ್ ಹೋಂ ಉದ್ಯೋಗಾವಕಾಶಗಳು ಸಕಾರಾತ್ಮಕವಾಗಿ ಪರಿಣಾಮಕಾರಿಯಾಗಿದೆ. ಇದು ಉದ್ಯೋಗಿಗಳ ಉತ್ಪಾದಕತೆಯನ್ನು ಉತ್ಕೃಷ್ಟಗೊಳಿಸಬಹುದು. ಇದಕ್ಕೆ ಕಾರಣ ಮನೆಯಿಂದ ಕೆಲಸ ಮಾಡುವ ಉದ್ಯೋಗಗಳು ನಿಮ್ಮನ್ನು ಆಫೀಸ್ ವಾತಾವರಣದಿಂದ ಹೊರಗಿರಿಸಿ, ಕೆಲಸದ ಹೊರೆಯನ್ನು ತಕ್ಕಮಟ್ಟಿಗೆ ಕಡಿಮೆಗೊಳಿಸುತ್ತದೆ.

ಅಂತಹ ಮನೆಯಿಂದ ಕೆಲಸ ಮಾಡುವ ಆಸಕ್ತಿದಾಯಕವಾದ ಮತ್ತು ಆಕರ್ಷಕವಾದ ಉದ್ಯೋಗಾವಕಾಶಗಳ ಪಟ್ಟಿ ಇಲ್ಲಿದೆ. 

  • ಫ್ರೀಲಾನ್ಸರ್ ಬರಹಗಾರ (ಫ್ರೀಲಾನ್ಸರ್ ಕಂಟೆಂಟ್ ರೈಟರ್)

ಫ್ರೀಲಾನ್ಸರ್ ಬರಹಗಾರರು ಪರಿಣಿತ ಬರಹಗಾರರಾಗಿದ್ದು, ಇವರು ಆನ್ಲೈನ್ ಚಟುವಟಿಕೆಗಳಲ್ಲಿ ಬಳಸಲಾಗುವ ಮನಮುಟ್ಟುವ ವಿಷಯವನ್ನು ರಚಿಸುತ್ತಾರೆ.  ಲೇಖನಗಳು, ಶೀರ್ಷಿಕೆಗಳು, ಬ್ಲಾಗ್ ಗಳು, ವೆಬ್ಸೈಟ್ ಕಂಟೆಂಟ್ ಮತ್ತು ಇತರ ರೀತಿಯ ವೆಬ್ಸೈಟ್ ಸಂಬಂಧಿತ ಬರವಣಿಗೆ ಮಾಡುತ್ತಾರೆ. ಈ ಉದ್ಯೋಗವನ್ನು ಮನೆಯಲ್ಲಿಯೇ ಕುಳಿತು ಮಾಡಬಹುದಾದ ಕೆಲಸ. ಮಹಿಳೆಯರು ಮನೆಯಿಂದ ಮಾಡುಬಹುದಾದ ಕೆಲಸಗಳಲ್ಲಿ ಇದು ಒಂದು ಎಂದರೆ ತಪ್ಪಾಗದು. 

  • ಡೇಟಾ ಎಂಟ್ರಿ ಏಜೆಂಟ್

ಈ ಉದ್ಯೋಗ  ಜವಾಬ್ದಾರಿ ಎಂದರೆ ಹಲವಾರು ಮೂಲಗಳಿಂದ ಡೇಟಾ ಪಡೆದು, ಅದನ್ನು ಕಂಪನಿಯ ಕಂಪ್ಯೂಟರ್ ಗಳಲ್ಲಿ ಮತ್ತು ಡೇಟಾಬೇಸ್ ಗಳಲ್ಲಿ ಸೇರಿಸುವುದು. ಡೇಟಾ ಎಂಟ್ರಿ ಉದ್ಯೋಗಿಗಳು ಸೂಕ್ಷ್ಮ ಮತ್ತು ವೈಯಕ್ತಿಕ ಡಾಟಾವನ್ನು ನಿಭಾಯಿಸಬೇಕಾಗಬಹುದು. ಈ ಉದ್ಯೋಗದದಲ್ಲಿ ಕಂಪನಿಯ ವಿಶೇಷ  ಖಾತೆಗಳ ಮೂಲಕ ಎಲ್ಲಾ ಡಾಟಾವನ್ನು ನೀಡಲಾಗುತ್ತದೆ. ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಫೋನ್ ನಲ್ಲಿ ಎಲ್ಲವನ್ನೂ ವಿವರಿಸುತ್ತಾರೆ. ಅದಾದ ನಂತರ ಉದ್ಯೋಗಿಗಳು ತಮ್ಮ ನಮ್ಯತೆ ಮತ್ತು ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು. 

  • ಮಾನವ ಸಂಪನ್ಮೂಲ ರಿಕ್ರೂಟರ್

ಸಂಪೂರ್ಣ ನೇಮಕಾತಿಯನ್ನು ನಿರ್ವಹಿಸಲು ಮಾನವ ಸಂಪನ್ಮೂಲ ರಿಕ್ರೂಟರ್ ಸಹಾಯ ಮಾಡುತ್ತಾರೆ. ಸಂಭಾವ್ಯ ಉದ್ಯೋಗಿಗಳನ್ನು ಗುರುತಿಸುವುದು, ಅರ್ಜಿದಾರರನ್ನು ಸಂದರ್ಶಿಸುವುದು ಮತ್ತು ಅರ್ಜಿದಾರರ ಕುರಿತು ನಿರ್ಣಯ ಮಾಡುವುದು – ಈ ಎಲ್ಲಾ ಜವಾಬ್ದಾರಿಗಳನ್ನು ಮಾನವ ಸಂಪನ್ಮೂಲ ರಿಕ್ರೂಟರ್ ಮನೆಯಿಂದ ಕೆಲಸ ಮಾಡುತ್ತಲೇ ನಿಭಾಯಿಸುತ್ತಾರೆ.

  • ಆನ್ಲೈನ್ ಟ್ಯೂಟರ್:

ಆನ್ಲೈನ್ ಶಿಕ್ಷಣವು ಆನ್ಲೈನ್ ಟ್ಯುಟೋರ್ ನೀಡುವ ಶಿಕ್ಷಣವಾಗಿದೆ. ಇದನ್ನು ಮನೆಯಿಂದ ಕೆಲಸ ಮಾಡುವ ಅರೆಕಾಲಿಕ ಉದ್ಯೋಗವೆಂದು ಸ್ವೀಕರಿಸಬಹುದು ಅಥವಾ ಪೂರ್ಣ ಸಮಯದ ವೃತ್ತಿಯಾಗಿ ಸ್ವೀಕರಿಸಬಹುದು. ಆನ್ಲೈನ್ ಟ್ಯೂಷನ್ ವಿಡಿಯೋ ಅಥವಾ ಲೈವ್ ಆನ್ಲೈನ್ ವಿಡಿಯೋಗಳು ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಸಹಾಯ ಮಾಡುತ್ತವೆ. ಈ ಉದ್ಯೋಗವನ್ನು ಮನೆಯಿಂದಲೇ ಮಾಡಬಹುದಾದ ಕಾರಣ ಪ್ರಯಾಣದ ಸಮಯ ಮತ್ತು ವೆಚ್ಚ ಶೂನ್ಯವಾಗಿರುತ್ತದೆ.

  • ಗ್ರಾಫಿಕ್ ಡಿಸೈನರ್:

ಚಿತ್ರಗಳು, ಲೋಗೋಗಳು, ವಿನ್ಯಾಸಗಳು ಸೇರಿದಂತೆ ಇತರ ಅಂಶಗಳನ್ನು ನಿರ್ಧರಿಸುವುದು, ದೃಶ್ಯ್ಕರೀಸುವುದು ಮತ್ತು ವಿನ್ಯಾಸಗೊಳಿಸುವ ಸಂಪೂರ್ಣ ವಿಧಾನವನ್ನು ಗ್ರಾಫಿಕ್ ಡಿಸೈನರ್ ನಿರ್ದಿಷ್ಟಪಡಿಸುತ್ತಾರೆ. ಇವರಿಗೆ ಫೋಟೋಶಾಪ್ ಮತ್ತು ಕೊರಲ್ ಡ್ರಾ ಬಲಿಸುವುದು ಸುಲಭದ ಕೆಲಸ. ಗ್ರಾಫಿಕ್ ಡಿಸೈನ್ ಮಾಡುವುದು ಮನೆಯಿಂದ ಮಾಡುವ ಕೆಲಸಗಳಲ್ಲಿ ಒಂದಾಗಿದೆ. ಈ ಉದ್ಯೋಗದಲ್ಲಿ ಕಂಪನಿಯು ಆನ್ಲೈನ್ ಗ್ರಾಫಿಕ್ ಡಿಸೈನರ್ ಅನ್ನು ನೇಮಿಸಿಕೊಂಡು, ವಿನ್ಯಾಸಿಸಬೇಕಾದ ಚಿತ್ರದ ಕುರಿತಾದ ವಿವರಣೆ ನೀಡುತ್ತಾರೆ. ಕಂಪನಿ ನೀಡಿದ ಸೂಚನೆ ಅನುಸಾರ ಗ್ರಾಫಿಕ್ ಡಿಸೈನರ್ ಗಳು ಕಾರ್ಯ ನಿರ್ವಹಿಸುತ್ತಾರೆ. ಮನೆಯಿಂದ ಕೆಲಸ ಮಾಡಿದರೆ ಗ್ರಾಫಿಕ್ ಡಿಸೈನರ್ ಗಳು ಕ್ರಿಯಾತ್ಮಕವಾಗಿ ಅನನ್ಯ ವಿನ್ಯಾಸವನ್ನು ರಚಿಸಲು ಸಹಾಯವಾಗುತ್ತದೆ.

  • ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್

ಇದರ ಹೆಸರೇ ಸೂಚಿಸುವಂತೆ ಈ ಕೆಲಸ ಆನ್ಲೈನ್ ನಲ್ಲಿ ಮಾಡುವಂತದ್ದಾಗಿದೆ. ಸಾಮಾನ್ಯವಾಗಿ ಎಲ್ಲಾ ವೆಬ್ಸೈಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತಿಯನ್ನು ಹೊಂದಿರುತ್ತದೆ. ಸೋಶಿಯಲ್ ಮೀಡಿಯಾ ಮರ್ಕೇಟರ್ ಈ ಕಂಪನಿಯ ವೆಬ್ಸೈಟ್ ಗಳನ್ನು ಆನ್ಲೈನ್ ಮೂಲಕ ಉತ್ತೇಜಿಸಲು ಸಹಾಯ ಮಾಡುತ್ತಾರೆ. ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಟ್ರೆಂಡಿಂಗ್ ಆಗಿದ್ದು, ಮನೆಯಿಂದ ಮಾಡುವ ಕೆಲಸವೆಂದರೆ ತಪ್ಪಾಗಲಾರದು. ಈ ಉದ್ಯೋಗದಲ್ಲಿ ಕಂಪನಿಯ ವಸ್ತುನಿಷ್ಠ ಗ್ರಾಹಕರನ್ನು ಮುನ್ನಡೆಸಲು ಸೂಕ್ತವಾದ ವಿಷಯ ಸಾಮಗ್ರಿಗಳನ್ನು ಉತ್ತೇಜಿಸುವುದು ಅಗತ್ಯವಾಗಿದೆ. ಈ ಉದ್ಯೋಗಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಎಲ್ಲಾ ವಿಷಯಗಳನ್ನು ನಿಯಂತ್ರಿಸುತ್ತಾರೆ.

  • ಭಾಷಾ ಅನುವಾದ

ಭಾಷಾ ಅನುವಾದ ಅತ್ಯಂತ ಸಂತೋಷದಾಯಕವಾದ ಕೆಲಸವಾಗಿದೆ. ಈ ಉದ್ಯೋಗದಲ್ಲಿ ಹೆಚ್ಚು ಕಲಿಯುವ ಅವಕಾಶವಿರುತ್ತದೆ. ಇದು ಸುಲಭವಾದ ಮನೆಯಿಂದ ಮಾಡುವ ಕೆಲಸವಾಗಿದೆ. ಸಾಮಾನ್ಯವಾಗಿ ಯಾವುದೇ ಉದ್ಯೋಗ ಮನೆಯಿಂದ ಮಾಡುವುದಾದರೆ, ಅದರಿಂದ ಸಾಮಾನ್ಯವಾಗಿ ಉತ್ಪಾದಕತೆ ಹೆಚ್ಚುತ್ತದೆ. ಬರಹಗಾರರು ಮತ್ತು ಅನುವಾದಕರು ಮೂಲ ಭಾಷೆಯಲ್ಲಿನ ವಿಚಾರಗಳನ್ನು ಉದ್ದೇಶಿತ ಭಾಷೆಗಳಲ್ಲಿ ಪರಿಕಲ್ಪಿತ ರೀತಿಯಲ್ಲಿ ಅನುವಾದ ಮಾಡುತ್ತಾರೆ. ಸಾಂವಿಧಾನಿಕ ಚೌಕಟ್ಟುಗಳಲ್ಲಿ ಬಳಸಲಾದ ವಿಶೇಷ ಪದಗಳಂತಹ ಡೇಟಾವನ್ನು ಗ್ಲಾಸರಿಗಳು ಮತ್ತು ಭಾಷಾಂತರಗಳ ವ್ಯಾಖ್ಯಾನಗಳಲ್ಲಿ ಅಭ್ಯಾಸ ಮಾಡಲು ಶಬ್ದಕೋಶ ದತ್ತಸಂಚಯಗಳಾಗಿ ಅನುವಾದಕರು ಸಂಗ್ರಹಿಸುತ್ತಾರೆ.  

  • ವೆಬ್ ಡೆವಲಪ್ಮೆಂಟ್

ವೆಬ್ ಡೆವೆಲಪರ್ ಉದ್ಯೋಗ ಜವಾಬ್ದಾರಿಗಳು ಎಂದರೆ ವೆಬ್ಸೈಟ್ ಲೇಔಟ್ ಅನ್ನು ಕ್ಲೈಂಟ್ ಗಳ ಅಗತ್ಯತೆಗೆ ಸೂಕ್ತವಾಗಿ ಕೋಡಿಂಗ್ ಮಾಡಿ, ವಿನ್ಯಾಸವನ್ನು ರಚಿಸುವುದು. ಸಾಮಾನ್ಯವಾಗಿ ವೆಬ್ ಡೆವೆಲಪರ್ ಕೆಲಸ ಮಾಡುವ ಕಂಪನಿಗೆ ಕ್ಲೈಂಟ್ ಗಳು ಅವರ ಅಗತ್ಯತೆಗಳನ್ನು ವಿವರಿಸುತ್ತಾರೆ. ಆ ಸೂಚನೆಗಳ ಅನುಸಾರ ವೆಬ್ ಡೆವೆಲಪರ್ ಕಾರ್ಯ ನಿರ್ವಹಿಸುತ್ತಾರೆ. ಈ ಜವಾಬ್ದಾರಿಗಳನ್ನು ಮನೆಯಿಂದ ಅಥವಾ ಕಂಪನಿಯಿಂದ ನಿರ್ವಹಿಸಬಹುದು. ಹಾಗಾಗಿ, ವೆಬ್ ಡೆವಲಪ್ಮೆಂಟ್ ನಮ್ಮ ಮನೆಯಿಂದ ಮಾಡುವ ಕೆಲಸದ ಪಟ್ಟಿಗೆ ಖಂಡಿತವಾಗಿಯೂ ಸೇರುತ್ತದೆ.

  • ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್

ಬಿಸಿನೆಸ್ ದಡೆವಲಪ್ಮೆಂಟ್ ಉದ್ಯೋಗವು ಮನೆಯಿಂದಲೇ ಮಾಡಬಹುದಾದ ಕೆಲಸಗಳಲ್ಲಿ ಒಂದಾಗಿದೆ. ಈ ಉದ್ಯೋಗದಲ್ಲಿ ನೀವು ಗ್ರಾಹಕರೊಂದಿಗೆ ಸಂವಹನ ಅಥವಾ ಮಾತುಕತೆ ನಡೆಸಬೇಕು ಮತ್ತು ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ತಿಳಿಸಿ, ಕಂಪನಿಗೆ ಲಾಭ ಗಳಿಸಲು ಸಹಾಯ ಮಾಡಬೇಕು. ಇದು ಹಣ ಗಳಿಸುವ ಪ್ರಕ್ರಿಯೆಯಾಗಿದ್ದು, ಇದಕ್ಕಾಗಿ ಮನೆಯಲ್ಲಿಯೇ ಕುಳಿತು ಕರೆ ಮಾಡಬಹುದು. 

  • ವಿಡಿಯೋ ಸಂಪಾದನೆ ಅಥವಾ ವಿಡಿಯೋ ಎಡಿಟಿಂಗ್

ವಿಡಿಯೋ ಸಂಪಾದನೆಗಳು ಗೃಹಾಧಾರಿತ ಕೆಲಸವಾಗಿದೆ. ವಿಡಿಯೋ ಸಂಪಾದಕರು ಸಾಮಾನ್ಯವಾಗಿ ರೆಕಾರ್ಡ್ ಮಾಡಿದ ಕಚ್ಚಾ ವಿಡಿಯೋ ಗಳನ್ನು ಅಥವಾ ವಿಡಿಯೋ ತುಣುಕುಗಳನ್ನು ಸಂಪಾದಿಸಲು ಮತ್ತು ಸಂಕಲಿಸಲು ತಮ್ಮ ಶ್ರಮವನ್ನು ಬಳಸುತ್ತಾರೆ. ಈ ಉದ್ಯೋಗವೂ ಕ್ರೀಯಾತ್ಮಕವಾದ ಉದ್ಯೋಗ ಆಗಿರುವುದರಿಂದ, ಇದು ಸಹ ಮನೆಯಿಂದ ಮಾಡುವ ಕೆಲಸಗಳಲ್ಲಿ ಒಂದಾಗಿದೆ.