ಭಾರತದ ಉನ್ನತ ಉದ್ಯೋಗಿ ಹಿನ್ನೆಲೆ ಪರಿಶೀಲನೆ ಸೇವಾ ಪೂರೈಕೆದಾರರು ಯಾವುವು

ಉದ್ಯೋಗಿ ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವವರು ಯಾರು? ಮತ್ತು ಇವುಗಳು ಬೇರೆ ಸಂಸ್ಥೆಗಳಿಗೆ ಏಕೆ ಬೇಕು? 

“ಹಿನ್ನೆಲೆ ಪರಿಶೀಲನಾ ಸೇವೆ” ಹೆಸರೇ ಸೂಚಿಸುವಂತೆ ವ್ಯಕ್ತಿಯ ಅಥವಾ ಅಭ್ಯರ್ಥಿಯ ಹಿನ್ನೆಲೆ ಕಂಡುಹಿಡಿಯಲು ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವ ಕಂಪನಿಗಳನ್ನು ನಿಯೋಜಿಸಲಾಗುತ್ತದೆ. ಅಭ್ಯರ್ಥಿಯ  ಅಥವಾ ಉದ್ಯೋಗಿಯ ಶೈಕ್ಷಣಿಕ ಪರಿಶೀಲನೆ, ಉದ್ಯೋಗ ಪರಿಶೀಲನೆ, ಕ್ರಿಮಿನಲ್ ದಾಖಲೆ ಪರಿಶೀಲನೆ, ವಿಳಾಸ ಪರಿಶೀಲನೆ, ಡ್ರಗ್ ಪರೀಕ್ಷೆ, ಇತ್ಯಾದಿ ವಿಷಯಗಳನ್ನು ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವವರು ನೀಡುತ್ತಾರೆ. 

ಪರಿಶೀಲನಾ ಸೇವೆ ಒದಗಿಸುವ ಕಂಪನಿಗಳು ಅಭ್ಯರ್ಥಿಯ ಬಗ್ಗೆ ಸಾಧ್ಯವಿರುವ ಎಲ್ಲಾ ವಿವರಗಳನ್ನು ಅಗೆಯಲು ಪ್ರಯತ್ನಿಸುತ್ತದೆ. 

ಇತ್ತೀಚಿನ ದಿನಗಳಲ್ಲಿ ಯಾವುದೇ ಸಂಸ್ಥೆಗಳಲ್ಲಿ ಅಥವಾ ಕಂಪೆನಿಗಳಲ್ಲಿ, ಹಿನ್ನೆಲೆಯನ್ನು ಪರಿಶೀಲಿಸುವುದು ಹೆಚ್ಚಿನ ಮಹತ್ವ ಹೊಂದಿದೆ. ವಿವಿಧ ಸಂಸ್ಥೆಗಳು ಅಭ್ಯರ್ಥಿಯ ಹಿನ್ನೆಲೆ ಪರಿಶೀಲನಾ ಸೇವೆಯನ್ನು ವಿವಿಧ ಕಾರಣಗಳಿಗಾಗಿ ಬಳಸಲಾಗುತ್ತದೆ. 

ಅಭ್ಯರ್ಥಿಗಳು ತಮ್ಮ ಬಗ್ಗೆ ಪ್ರಮುಖ ಸಂಗತಿಗಳನ್ನು ಮರೆಮಾಚುವ ಸಾಧ್ಯತೆ ಇರುತ್ತದೆ. ಅದಕ್ಕೆ ಕಾರಣ ಈ ಸಂಗತಿಗಳು ಅಭ್ಯರ್ಥಿಯ ವೃತ್ತಿಜೀವನದ ಭವಿಷ್ಯದ ಮೇಲೆ ಅಥವಾ ಅವರ ಮದುವೆಯ ಮೇಲೆ ಪರಿಣಾಮ ಬೀರಬಹುದು ಎನ್ನುವ ಭಯ ಇರಬಹುದು. ಹಿನ್ನೆಲೆ ಪರಿಶೀಲನೆ ಸೇವೆ ಒದಗಿಸುವವರು ಈ ಎಲ್ಲ ಸಂಗತಿಗಳನ್ನು ಸಂಸ್ಥೆಗಳಿಗೆ ತಿಳಿಸಿಕೊಡುವಲ್ಲಿ ಸಹಾಯ ಮಾಡುತ್ತವೆ. 

ಹಿನ್ನೆಲೆ ಪರಿಶೀಲನೆ ಏಕೆ ಮಾಡಬೇಕು? 

ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಹಿನ್ನೆಲೆ ಪರಿಶೀಲನೆಯನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅದರ ವಿವರಗಳು ಇಲ್ಲಿವೆ:

  • ಉದ್ಯೋಗ ಅಭ್ಯರ್ಥಿಗಳು ತಮ್ಮ ರೆಸ್ಯುಮೆ ಯಲ್ಲಿ ಉಲ್ಲೇಖಿಸಿರುವ ಶೈಕ್ಷಣಿಕ ಅರ್ಹತೆಗಳು ಮತ್ತು ಕೆಲಸದ ಕೌಶಲ್ಯಗಳನ್ನು ಪರಿಶೀಲಿಸುವುದು ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವವರ ಕರ್ತವ್ಯ. 
  • ಪೋಸ್ಟ್ ಪೇಯ್ಡ್ ಮೊಬೈಲ್ ಫೋನ್ ಸಂಪರ್ಕವನ್ನು ತೆಗೆದುಕೊಳ್ಳುವ ವ್ಯಕ್ತಿಯ ವಾಸಸ್ಥಳ ಮತ್ತು ಇತರ ರುಜುವಾತುಗಳನ್ನು ನಿರ್ಧರಿಸಲು.
  • ಸಾಲ ಮತ್ತು ಕ್ರೆಡಿಟ್ ಕಾರ್ಡ್ ಅರ್ಜಿಗಳನ್ನು ಸಲ್ಲಿಸಿರುವ ಹೊಸ ಗ್ರಾಹಕರ ವಿಳಾಸ ಮತ್ತು ಆದಾಯದ ಪುರಾವೆಗಾಗಿ ಬ್ಯಾಂಕುಗಳು ಹಿನ್ನೆಲೆ ಪರಿಶೀಲನೆ ನಡೆಸುತ್ತವೆ.
  • ಭಾರತದಲ್ಲಿ ಪೊಲೀಸರು ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ಬಗ್ಗೆ ನಿರ್ದಿಷ್ಟ ವಿವರಗಳನ್ನು ಪರಿಶೀಲಿಸಲು ಹಿನ್ನೆಲೆ ಪರಿಶೀಲನೆ ನಡೆಸುತ್ತಾರೆ.
  • ಬೆರಳೆಣಿಕೆಯಷ್ಟು ಖಾಸಗಿ ಕಂಪನಿಗಳು ನಿರೀಕ್ಷಿತ ಸಂಗಾತಿಗಳು ಮತ್ತು ಅವರ ಕುಟುಂಬಗಳ ವಿವೇಚನಾಯುಕ್ತ ಹಿನ್ನೆಲೆ ಪರಿಶೀಲನೆಯನ್ನು ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವ ಕಂಪನಿಗಳಿಂದ ಪಡೆಯುತ್ತಾರೆ.

ಹಿನ್ನೆಲೆ ಪರಿಶೀಲನೆಯನ್ನು ಯಾರು ಬಳಸುತ್ತಾರೆ?

ಹಲವಾರು ದೊಡ್ಡ ಕಂಪನಿಗಳು ಅಥವಾ ಉದ್ಯೋಗದಾತರು ನೌಕರರ ಹಿನ್ನೆಲೆ ಪರಿಶೀಲಿಸಲು ಎಂಪ್ಲೋಯೀ ಬ್ಯಾಕ್ಗ್ರೌಂಡ್ ಸ್ಕ್ರೀನಿಂಗ್ ಅಥವಾ ಉದ್ಯೋಗಿಗಳ ಹಿನ್ನೆಲೆ ಪರಿಶೀಲನಾ ಸೇವೆಯನ್ನು ಬಳಸುತ್ತಾರೆ.

ಇದಕ್ಕೆ ಕಾರಣ ಉದ್ಯೋಗದಾತರು ತಾವು ನೇಮಿಸಿಕೊಳ್ಳುವ ಅಭ್ಯರ್ಥಿಗಳು ಸರಿಯಾದ ಅಭ್ಯರ್ಥಿಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವುದಕ್ಕಾಗಿ. ಭಾರತದಲ್ಲಿ ಈ ಸೇವೆ ಸೂಕ್ತ ಪ್ರಖ್ಯಾತಿಯನ್ನು ಇತ್ತೀಚಿನ ದಿನಗಳಲ್ಲಿ ಪಡೆಯುತ್ತಿದೆ. ಭಾರತದ ಕೆಲವು ದೊಡ್ಡ ಸಂಸ್ಥೆಗಳಷ್ಟೇ ಈ ಸೇವೆಯನ್ನು ಪಡೆಯುತ್ತಿದ್ದು, ಬೇರೆ ಸಂಸ್ಥೆಗಳು ಈ ಸೇವೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿವೆ. ಇದಕ್ಕೆ ಮುಖ್ಯ ಕಾರಣ ಹಿನ್ನೆಲೆ ಪರಿಶೀಲನೆಯಲ್ಲಿ ಒಳಗೊಂಡಿರುವ ವೆಚ್ಚ.

ಇದಲ್ಲದೆ, ಮೊಬೈಲ್ ಸೇವಾ ಪೂರೈಕೆದಾರರು, ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ನಂತಹ ಸಾಲವನ್ನು ನೀಡುವ ಕಂಪನಿಗಳು ಹಿನ್ನೆಲೆ ಪರಿಶೀಲನೆ ಸೇವೆಯನ್ನು ಹೆಚ್ಚು ಬಳಸಿಕೊಳ್ಳುತ್ತವೆ.

ಕಂಪನಿಗಳು, ಬ್ಯಾಂಕುಗಳು, ಎನ್‌ಬಿಎಫ್‌ಸಿಗಳು ಮತ್ತು ವ್ಯಕ್ತಿಗಳು ಹಿನ್ನೆಲೆ ಪರಿಶೀಲನೆಯ ಕಠಿಣ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಿಲ್ಲದ ಕಾರಣ, ಅವರು ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವ ಕಂಪನಿಗಳ ಸಹಾಯವನ್ನು ಪಡೆಯುತ್ತಾರೆ.

ಈ ಲೇಖನದಲ್ಲಿ ನಾವು ಭಾರತದ ಅಂತಹ ಪ್ರಖ್ಯಾತ 11 ಹಿನ್ನೆಲೆ ಪರಿಶೀಲನಾ ಕಂಪನಿಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.

ಭಾರತದಲ್ಲಿನ ಪ್ರಖ್ಯಾತ ೧೧ ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವ ಕಂಪನಿಗಳು

1. ಕೆಪಿಎಂಜಿ:

ಜಾಗತಿಕ ದೈತ್ಯ ಕೆಪಿಎಂಜಿ ಭಾರತದಲ್ಲಿ ನೌಕರರ ಹಿನ್ನೆಲೆ ಮತ್ತು ಇತರ ಪರಿಶೀಲನಾ ಸೇವೆಗಳನ್ನು ಒದಗಿಸುತ್ತದೆ. ಕೆಪಿಎಂಜಿ ಗೆ ಇರುವ ಪರಿಣಿತಿಯ ಕಾರಣದಿಂದ ಈ ಸಂಸ್ಥೆಯು ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವ ಕಂಪೆನಿಗಳಲ್ಲಿ ಅತ್ಯಂತ ಪ್ರಮುಖ ಕಂಪನಿ ಆಗಿದೆ. ಹಿನ್ನೆಲೆ ಪರಿಶೀಲನಾ ಸೇವೆಯ ಜಗತ್ತಿನಲ್ಲಿ ಕೆಪಿಎಂಜಿ ಸಂಸ್ಥೆಯು ವಿಶ್ವದಲ್ಲಿಯೇ ಅಗ್ರಗಣ್ಯವಾಗಿದೆ. ಕೆಪಿಎಂಜಿ ಭಾರತ ದ  ಪರಿಶೀಲನಾ ಸೇವೆಯನ್ನು ಬೇರೆ ದೇಶಗಳಲ್ಲಿರುವ ಸಂಸ್ಥೆಗಳ ಮತ್ತು ಉದ್ಯೋಗಿಗಳ ಹಿನ್ನೆಲೆ ಪರಿಶೀಲನೆ ಮಾಡಲು ಸಹ ಬಳಸಬಹುದು. 

2. ಮಿಂಟ್ಲಿ ಹಿನ್ನೆಲೆ ಪರಿಶೀಲನಾ ಸೇವೆ:

ಬ್ಲಾಕ್ ಚೈನ್ ಆಧಾರಿತ ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವ ಮಿಂಟ್ಲಿ ಹಿನ್ನೆಲೆ ಪರಿಶೀಲನಾ ಜಗತ್ತಿನಲ್ಲಿಯೇ ಹೊಸ ಸಾಧನೆಗಳನ್ನು ಮಾಡುತ್ತಾ ಪ್ರಖ್ಯಾತಿ ಪಡೆಯುತ್ತಿದೆ. ಮಿಂಟ್ಲಿ ಯ ಹಿನ್ನೆಲೆ ಪರಿಶೀಲನಾ ಸೇವೆಯನ್ನು ಬಳಸಿದರೆ, ಕೇವಲ ಒಂದೇ ದಿನದಲ್ಲಿ ಅದರ ಗುಣಮಟ್ಟದ ಫಲಿತಾಂಶವನ್ನು ಪಡೆಯಬಹುದು. ಈ ಸೇವೆಯ ಮೂಲಕ ನಿಮ್ಮ ವೆಚ್ಚವನ್ನು ಕಡಿಮೆಗೊಳಿಸಿಕೊಳ್ಳುವುದಷ್ಟೇ ಅಲ್ಲದೇ, ಯಾವುದೇ ದೋಷವಿಲ್ಲದ ಫಲಿತಾಂಶವನ್ನು ಪಡೆಯಬಹುದು.

3. ಒನಿಕ್ರಾ:

ಒನಿಕ್ರಾ ಕ್ರೆಡಿಟ್ ರೇಟಿಂಗ್ ಏಜನ್ಸಿ ಭಾರತದಲ್ಲಿ ಕ್ರೆಡಿಟ್ ಮತ್ತು ಕಾರ್ಯಕ್ಷಮತೆ ರೇಟಿಂಗ್ ಸೇವೆಗಳನ್ನು ಒದಗಿಸುತ್ತದೆ. ಇದು ವ್ಯಕ್ತಿಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ರೇಟಿಂಗ್, ಅಪಾಯದ ಮೌಲ್ಯಮಾಪನ ಮತ್ತು ವಿಶ್ಲೇಷಣಾತ್ಮಕ ಪರಿಹಾರಗಳನ್ನು ಒದಗಿಸುತ್ತದೆ.

“ವಿವಿಧ ಹಣಕಾಸು, ಕಾರ್ಯಾಚರಣೆ, ಕೈಗಾರಿಕೆ ಮತ್ತು ಮಾರುಕಟ್ಟೆ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು, ಆ ಮಾಹಿತಿಯನ್ನು ಸಂಶ್ಲೇಷಿಸಲು ಮತ್ತು ಘಟಕದ ಸ್ವಾಯತ್ತ, ವಿಶ್ವಾಸಾರ್ಹ ಮೌಲ್ಯಮಾಪನಗಳನ್ನು ಒದಗಿಸುವಲ್ಲಿ ಕೇಂದ್ರ ಮತ್ತು ನಿರ್ಣಾಯಕ ಪಾತ್ರವನ್ನು ಒನಿಕ್ರಾ ವಹಿಸುತ್ತದೆ, ಇದರಿಂದಾಗಿ ಮಧ್ಯಸ್ಥಗಾರರಿಗೆ ನಿರ್ಧಾರ ತೆಗೆದುಕೊಳ್ಳು ಪ್ರಕ್ರಿಯೆಯಲ್ಲಿ ಪ್ರಮುಖ ಇನ್ಪುಟ್ ಒನಿಕ್ರಾ ಒದಗಿಸುತ್ತದೆ ” ಎಂದು ಒನಿಕ್ರಾ ವೆಬ್‌ಸೈಟ್ ಹೇಳುತ್ತದೆ.

4. ಐಕ್ರೆಡೆರಿಟಿ:

ಐಕ್ರೆಡೆರಿಟಿ ಮತ್ತೊಂದು ಉನ್ನತ ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವ ಕಂಪನಿಯಾಗಿದ್ದು, ಇದು ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತದೆ. ಈ ಕಂಪನಿ ಭಾರತೀಯ ಉದ್ಯಮದ ಎಲ್ಲಾ ವಿಭಾಗಗಳಿಗೆ ಮತ್ತು ಫಾರ್ಚೂನ್ 500 ಕಂಪನಿಗಳಿಗೆ ಉದ್ಯೋಗಿಯ ಹಿನ್ನೆಲೆ ಪರಿಶೀಲನಾ ಸೇವೆಗಳನ್ನು ಒದಗಿಸುತ್ತದೆ ಎಂದು ಕಂಪನಿಯ ವೆಬ್ಸೈಟ್  ನಲ್ಲಿ ಬರೆಯಲಾಗಿದೆ. ಹಿನ್ನೆಲೆ ಪರಿಶೀಲನೆಯನ್ನು ನಡೆಸಲು ತನ್ನದೇ ಆದ ಮಾದರಿಯನ್ನು ಅಭಿವೃದ್ಧಿಪಡಿಸಿದೆ ಎಂದು ಸಂಸ್ಥೆ ಹೇಳುತ್ತದೆ.

5. ಐಡಿಫೈ:

ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವವರಲ್ಲಿ ಮುಂಬೈ ಮೂಲದ ಐಡಿಫೈ ಮತ್ತೊಂದು ಪ್ರಮುಖ ಕಂಪನಿ. ಕಂಪನಿಯು ತನ್ನ ಇತರ ಸೇವೆಗಳೊಂದಿಗೆ  ಉದ್ಯೋಗಾಕಾಂಕ್ಷಿಗಳ ಅಥವಾ ಅಭ್ಯರ್ಥಿಗಳ ಹಿನ್ನೆಲೆ ಪರಿಶೀಲನೆ, ಮರಣ ಪ್ರಮಾಣಪತ್ರ ಪರಿಶೀಲನೆ, ಸಾಮಾಜಿಕ ಡಾಟಾಬೇಸ್ ಪರಿಶೀಲನೆ, ಇತ್ಯಾದಿ ಸೇವೆಗಳನ್ನು ಒದಗಿಸುತ್ತದೆ. ಈ ಕಂಪನಿಯು ವ್ಯಕ್ತಿಗಳ ಮತ್ತು ಕಂಪನಿಗಳ ಹಿನ್ನೆಲೆಯನ್ನು ಪರಿಶೀಲಿಸಲು ಅತ್ಯಾಧುನಿಕ ತಂತ್ರಗಳನ್ನು ಬಳಸುತ್ತದೆ ಎಂದು ತನ್ನ ವೆಬ್ ಸೈಟ್ ನಲ್ಲಿ ಹೇಳಿಕೊಳ್ಳಲಾಗಿದೆ.

6. ಸಿಫಸ್ಟ್ ಕಾರ್ಪ್:

ಸಿಫಸ್ಟ್ ಕಾರ್ಪ್ ಓಹಿಯೋದ ಸಿನ್ಸಿನಾಟಿ ಮತ್ತು ಭಾರತದ ಬೆಂಗಳೂರು ನಲ್ಲಿ ನೆಲೆಗೊಂಡಿದ್ದು, ಭಾರತೀಯ ಕಾರ್ಯಾಚರಣೆಗಳನ್ನು ಬೆಂಗಳೂರಿನಿಂದ ಕೈಗೊಳ್ಳಲಾಗುತ್ತದೆ. 

“ನಮ್ಮ ತಂಡದ ಖಾಸಗಿ  ತನಿಖಾಧಿಕಾರಿಗಳು ಅತ್ಯುನ್ನತ ಸೇವೆ ಮತ್ತು ಎಲ್ಲರಿಕ್ಕಿಂತ ಮಿಗಿಲಾದ, ಉತ್ತಮ ಸಮಯದಲ್ಲಿ ಅಗತ್ಯವಿರುವ ಫಲಿತಾಂಶವನ್ನು ನೀಡುತ್ತದೆ. ನಾವು ಸ್ವತಂತ್ರ ತೃತೀಯ ಬಗೆಯ ತನಿಖಾಧಿಕಾರಿಗಳು ನವೀಕರಿಸಿದ ಡಾಟಾಬೇಸ್ ಗಳನ್ನು ಹೆಚ್ಚು ನಿಖರವಾದ ಮತ್ತು ನವೀಕೃತ ಮಾಹಿತಿಗಾಗಿ ಬಳಸುತ್ತೇವೆ” ಇಂದು ಸಿಫಸ್ಟ್ ಕಾರ್ಪ್ ಕಂಪನಿ ತನ್ನ ವೆಬ್ಸೈಟ್ ನಲ್ಲಿ ಹೇಳುತ್ತದೆ.

7. ಫಸ್ಟ್ ಅಡ್ವಾಂಟೇಜ್:

ಫಸ್ಟ್ ಅಡ್ವಾಂಟೇಜ್  14 ದೇಶಗಳಲ್ಲಿ 35,000 ಕಂಪನಿಗಳಿಗೆ ಸುಮಾರು 55 ಮಿಲಿಯನ್ ಸ್ಕ್ರೀನಿಂಗ್‌ಗಳನ್ನು ಪ್ರಕ್ರಿಯೆಗೊಳಿಸಿದೆ ಎಂದು ಹೇಳಿಕೊಂಡಿದೆ. ಫಸ್ಟ್ ಅಡ್ವಾಂಟೇಜ್ ತನ್ನ ಹಿನ್ನೆಲೆ ಪರಿಶೀಲನಾ ಸೇವೆಗಾಗಿ 5,000 ತನ್ನ ಉದ್ಯೋಗಿಗಳನ್ನು  ವಿವಿಧ ಕೈಗಾರಿಕೆಗಳಿಗೆ ಬಳಸಿಕೊಳ್ಳುತ್ತದೆ ಎಂದು ಕಂಪನಿಯ ವೆಬ್‌ಸೈಟ್ ಹೇಳುತ್ತದೆ. ಫಸ್ಟ್ ಅಡ್ವಾಂಟೇಜ್ ಸೂಕ್ಷ್ಮ, ಸಣ್ಣ ಮತ್ತು ಮಾಧ್ಯಮ ಉದ್ಯಮಗಳಿಗೆ ಸಹ ಹಿನ್ನೆಲೆ ಪರಿಶೀಲನಾ ಸೇವೆಗಳು ಒದಗಿಸುವುದಾಗಿ ಹೇಳುತ್ತದೆ. 

8. ಸೆಕ್ಯೂರ್ ಕ್ರೆಡೆನ್ಶಿಯಲ್ಸ್:

ಸೆಕ್ಯೂರ್ ಕ್ರೆಡೆನ್ಶಿಯಲ್ಸ್ ಭಾರತದ ಅತಿದೊಡ್ಡ ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವ ಕಂಪೆನಿಗಳಲ್ಲಿ ತಾನು ಒಂದು ತನ್ನ ವೆಬ್ಸೈಟ್ ನಲ್ಲಿ ಹೇಳಿಕೊಂಡಿದೆ. ಕಂಪನಿಯ ವೆಬ್ಸೈಟ್ ಅನುಸಾರ ದೇಶದಾದ್ಯಂತ ಮತ್ತು ಹದಿನಾಲ್ಕು ದೇಶಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿದೆ. ಸುಮಾರು ಮೂವತ್ತು ಕೈಗಾರಿಕೆಗಳನ್ನು  ಒಳಗೊಂಡ 350 ಕ್ಕೂ ಹೆಚ್ಚು ದೊಡ್ಡ ಕಂಪನಿಗಳಿಗೆ ತನ್ನ ಹಿನ್ನೆಲೆ ಪರಿಶೀಲನಾ ಸೇವೆ ಒದಗಿಸುವುದಾಗಿ ಸೆಕ್ಯೂರ್ ಕ್ರೆಡೆನ್ಶಿಯಲ್ಸ್ ಹೇಳಿಕೊಂಡಿದೆ. ಈ ಕಂಪನಿಯು ವಾರ್ಷಿಕವಾಗಿ ಸುಮಾರು ಐದು ಲಕ್ಷ ರೆಸ್ಯುಮೆಗಳನ್ನು ಪರಿಶೀಲಿಸುತ್ತದೆ. 

9. ಇಂಟೆಗ್ರಿಟಿ ವೆರಿಫಿಕೇಷನ್ ಸರ್ವಿಸಸ್:

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪಿ.ಎಸ್.ಪಾಸ್ರಿಚಾ ಅವರು ಸ್ಥಾಪಿಸಿದ, ಇಂಟೆಗ್ರಿಟಿ ವೆರಿಫಿಕೇಷನ್ ಸರ್ವಿಸಸ್ ಅಥವಾ ಸಮಗ್ರತೆ ಪರಿಶೀಲನಾ ಸೇವೆಗಳು ಉದ್ಯೋಗಿ ಹಿನ್ನೆಲೆ ಪರಿಶೀಲನಾ ಸೇವೆ, ಸಂಬಂಧಪಟ್ಟ ಅಪಾಯವನ್ನು ತಗ್ಗಿಸುವುದು ಮತ್ತು ವಂಚನೆ ತಡೆಗಟ್ಟುವ ಸೇವೆಗಳನ್ನು ಒದಗಿಸುತ್ತದೆ.

ಇದು ಬೌದ್ಧಿಕ ಆಸ್ತಿ ಹಕ್ಕುಗಳ ಜಾರಿ (ಇಐಪಿಆರ್) ಗುಂಪಿನ ಒಂದು ವಿಭಾಗವಾಗಿದೆ, ಇದು ನಕಲಿ ವಿರೋಧಿ ಪರಿಹಾರಗಳಲ್ಲಿ ಪರಿಣತಿ ಹೊಂದಿದೆ.

10. ಆಥ್ ಬ್ರಿಡ್ಜ್

ಆಥ್ ಬ್ರಿಡ್ಜ್ 2005 ರಲ್ಲಿ ಸ್ಥಾಪಿಸಲಾಗಿದೆ. ಮತ್ತು ಸುಮಾರು 140 ದೇಶಗಳಲ್ಲಿ ತನ್ನ ಹಿನ್ನೆಲೆ ಪರಿಶೀಲನಾ ಸೇವೆಯನ್ನು ಒದಗಿಸುತ್ತದೆ ಎಂದು ಈ ಕಂಪನಿಯ ವೆಬ್ಸೈಟ್ ಹೇಳುತ್ತದೆ. ಈ  ವೆಬ್ಸೈಟ್ ನಲ್ಲಿ “ಆಥ್ ಬ್ರಿಡ್ಜ್ ಮಾನವ ಸಂಪನ್ಮೂಲ ಸೇವೆಗಳನ್ನು ಹೇಗೆ ನವೀಕರಿಸುತ್ತಿದೆ” ಎನ್ನುವುದರ ಕುರಿತಾಗಿ ಕಾರ್ನೆಲ್ ಯೂನಿವರ್ಸಿಟಿ ಕೇಸ್ ಸ್ಟಡಿ ನಡೆಸಿದೆ ಎಂದು ತಿಳಿಸಲಾಗಿದೆ.

11. ವೆರಿಫ್ಯಾಕ್ಟ್ಸ್

ಬೆಂಗಳೂರು ಮೂಲದ ವೆರಿಫ್ಯಾಕ್ಟ್ಸ್ ಭಾರತದ ಅಗ್ರ ಹಿನ್ನೆಲೆ ಕಂಪನಿಯಾಗಿದ್ದು, ಇದು ಭಾರತ ಮತ್ತು ವಿದೇಶಗಳಲ್ಲಿ ಸುಮಾರು 600 ಕಂಪನಿಗಳಿಗೆ ಸೇವೆ ಸಲ್ಲಿಸುವುದಾಗಿ ಹೇಳಿಕೊಂಡಿದೆ. ಕಂಪೆನಿಗಳು ತಮ್ಮ ನೇಮಕ ಪ್ರಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ ಕಂಪನಿಯು ವಿವಿಧ ರೀತಿಯ ಹಿನ್ನೆಲೆ ಪರಿಶೀಲನೆಗಳು, ಪರೀಕ್ಷೆಗಳು ಮತ್ತು ಇತರ ಸೇವೆಗಳನ್ನು ಒದಗಿಸುತ್ತದೆ.

ಹಿನ್ನೆಲೆ ಪರಿಶೀಲನೆಯ ಇತಿಹಾಸ

ಹಿನ್ನೆಲೆ ಪರಿಶೀಲನೆಯ ವ್ಯವಸ್ಥೆಯು ಹೊಸತೇನಲ್ಲ. ಈ ವ್ಯವಸ್ಥೆಯು 19 ನೇ ಶತಮಾನದ ಯುರೋಪಿನಷ್ಟು ಹಿಂದಿನದು, ಏಕೆಂದರೆ ಈ ಖಂಡದ ಕೈಗಾರೀಕರಣ ಆಗಿನ ಕಾಲದಲ್ಲಿಯೇ ಪ್ರಖ್ಯಾತಿ ಪಡೆಯಲು ಪ್ರಾರಂಭಿಸಿತ್ತು. 

ದೂರದ ಸ್ಥಳಗಳು ಮತ್ತು ವಿವಿಧ ದೇಶಗಳ ಕಾರ್ಮಿಕರು ಉದ್ಯೋಗದ ಹುಡುಕಾಟದಲ್ಲಿ ಕೈಗಾರಿಕಾ ಉತ್ಪಾದನಾ ಕೇಂದ್ರಗಳಲ್ಲಿ ಒಗ್ಗೂಡುತ್ತಿದ್ದರು. ಕೆಲವರು ತಮ್ಮ ಶೈಕ್ಷಣಿಕ ಯೋಗ್ಯತೆಯ ಬಗ್ಗೆ ಮತ್ತು ವೃತ್ತಿ ಕೌಶಲ್ಯಗಳ ಬಗ್ಗೆ ಸತ್ಯವಾಗಿ ಹೇಳಿದ್ದರೆ, ಇನ್ನುಳಿದವರು ತಮ್ಮ ಸಮರ್ಥನೆಗಳ ಬಗ್ಗೆ ಸುಳ್ಳು ಹೇಳಿರುವ ಸಾಧ್ಯತೆ ಇರುತ್ತಿತ್ತು. ಕ್ರಮೇಣ ಇಂತಹ ಪರಿಸ್ಥಿತಿಯು ಕೆಡಲು ಪ್ರಾರಂಭಿಸಿತು. ಅದರ  ಪರಿಣಾಮವಾಗಿ ಕೈಗಾರಿಕೆಗಳು ನೇಮಿಸಿಕೊಳ್ಳುವ ಉದ್ಯೋಗಿಗಳು ಪೊಲೀಸರು ಹುಡುಕುತ್ತಿರುವ ಅಥವಾ ಅಗತ್ಯ ವೃತ್ತಿ ಕೌಶಾಲ್ಯದ ಕೊರತೆ ಇರುವ ಅಥವಾ ಉದ್ಯೋಗ ಸ್ಥಳದಲ್ಲಿ ಅನಾಹುತಗಳಿಗೆ ಅಥವಾ ಅಪಘಾತಗಳಿಗೆ ಕಾರಣರಾಗುವ ಉದ್ಯೋಗಿಗಳು ಸಂಸ್ಥೆಯನ್ನು ಸೇರಲು ಪ್ರಾರಂಭಿಸಿದರು. ಇದನ್ನು ತಡೆಗಟ್ಟಲು, ಕಾರ್ಖಾನೆಯ ಮಾಲೀಕರು ತಮ್ಮ ಬಳಿ ಬಂದ ಉದ್ಯೋಗಾಕಾಂಕ್ಷಿಗಳ ರುಜುವಾತುಗಳನ್ನು ಪಡೆಯಲು ಪ್ರಾರಂಭಿಸಿದರು. ಕೆಲವೊಮ್ಮೆ, ತಮ್ಮ ಉದ್ಯೋಗ ಅಭ್ಯರ್ಥಿ ಹೇಳುತ್ತಿರುವುದು ಸತ್ಯವೇ ಎಂದು ಪರಿಶೀಲಿಸಲು, ಅಭ್ಯರ್ಥಿಯ ಹಿಂದಿನ ಸಂಸ್ಥೆಗೆ ಪತ್ರಗಳ ಪರಿಶೀಲಿಸಲು ಪ್ರಾರಂಭಿಸಿದರು.

ಶತಮಾನಗಳಿಂದ ಈ ಹಿನ್ನೆಲೆ ಪರಿಶೀಲನಾ ಅಭ್ಯಾಸವನ್ನು ಪರಿಷ್ಕರಿಸಲಾಗಿದೆ. ಹಿಂದಿನ ಕಾಲದಲ್ಲಿ, ಮೊದಲನೆಯ ಮಹಾಯುದ್ಧ ಮತ್ತು ಎರಡನೆಯ ಮಹಾಯುದ್ಧದ ಸಮಯದಲ್ಲಿ ಸೈನಿಕರು ಅಪ್ರಾಪ್ತ ವಯಸ್ಸಿನವರೇ? ಅಥವಾ ತಮ್ಮ ಪಡೆಗಳಿವೆ ಮೋಸ ಮಾಡುತ್ತಿರುವವರೇ ಎಂದು ಪತ್ತೆಹಚ್ಚಲು ಸೈನಿಕರ ಹಿನ್ನೆಲೆ ಪರಿಶೀಲನೆ ನಡೆಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ, ಈ ಹಿನ್ನೆಲೆ ಪರಿಶೀಲನಾ ಸೇವೆಗಳು ಅತ್ಯಂತ ಆಧುನಿಕವಾಗಿವೆ ಮತ್ತು ಅವುಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ನೀವು ತಿಳಿದುಕೊಳ್ಳಬೇಕಾದ ವಿಷಯ 

ಪ್ರತಿ ಕಂಪನಿಯು ವಿಭಿನ್ನ ಅಂಕಿಅಂಶಗಳನ್ನು ಹೊಂದಿದ್ದರೂ, ಉದ್ಯೋಗಾಕಾಂಕ್ಷಗಳಿಂದ ಪಡೆದ ಎಲ್ಲಾ ರೆಸ್ಯುಮೆ ಗಳಲ್ಲಿ ಎರಡರಿಂದ ಮೂರೂ ಶತಕದಷ್ಟು ರೆಸ್ಯುಮೆಗಳು ಸುಳ್ಳು ಮಾಹಿತಿಯನ್ನು ನೀಡಿರುತ್ತವೆ ಎಂದು ಶಂಕಿಸಲಾಗುತ್ತದೆ. ವೃತ್ತಿ ಅನುಭವ, ಸೇವೆಯ ಕಾಲ ಮತ್ತು ವೇತನಗಳ ಕುರಿತಾಗಿ ಸುಳ್ಳು ಹೇಳುವ ಸಾಧ್ಯತೆ ಹೆಚ್ಚು. ಬೆರಳೆಣಿಕೆಯಷ್ಟು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಬಗ್ಗೆಯೂ ತಪ್ಪು ಮಾಹಿತಿಯನ್ನು ನೀಡುವ ಸಾಧ್ಯತೆ ಇದೆ. ಆದರೆ ಸಾಮಾನ್ಯವಾಗಿ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳ ಗಣಕೀಕೃತ ವಿವರಗಳನ್ನು ನಿರ್ವಹಿಸುವುದರಿಂದ ಇದನ್ನು ಸುಲಭವಾಗಿ ಕಂಡುಹಿಡಿಯಬಹುದು.

ಹಿನ್ನೆಲೆ ಪರಿಶೀಲನಾ ಸೇವೆಯ ವೆಚ್ಚ

ಸಾಮಾನ್ಯವಾಗಿ, ಉದ್ಯೋಗಿಯ ಹಿನ್ನೆಲೆ ಪರಿಶೀಲನಾ ಸೇವೆಗಳಿಗಾಗಿ ಕಂಪನಿಗಳು ಪ್ರತಿ ಅಭ್ಯರ್ಥಿಗೆ ರೂ 2,500 ರಿಂದ ರೂ 10,000 ರವರೆಗೆ ಶುಲ್ಕ ಒದಗಿಸಬೇಕಾಗುತ್ತದೆ. ಅದರ ನಿರ್ದಿಷ್ಟ ಶುಲ್ಕ ಕಂಪನಿಯು ಯಾವ ಸೇವೆಗಳನ್ನು ಆಯ್ದುಕೊಳ್ಳುತ್ತದೆ  ಎನ್ನುವುದರ ಮೇಲೆ ಅವಲಂಭಿತವಾಗುತ್ತದೆ.

ಹಿಚ್ಚಿನ ಪರಿಶೀಲನಾ ಸೇವೆಗಳನ್ನು ಪಡೆಯಲು ಬಯಸಿದರೆ, ಹೆಚ್ಚಿನ  ಶುಲ್ಕವನ್ನು ಒದಗಿಸಬೇಕು. ಇದಕ್ಕೆ ಕಾರಣ ಕಂಪನಿಗಳು ಹಿನ್ನೆಲೆ ಪರಿಶೀಲನೆಗೆ ಅಗತ್ಯ ಮಾಹಿತಿಯನ್ನು ಪಡೆಯಲು ವಿವಿಧ ಅಧಿಕಾರಿಗಳಿಗೆ ಹಣ ಪಾವತಿಸಬೇಕು. 

ಕೊನೆಯದಾಗಿ 

ಪ್ರಪಂಚದ ಹಲವು ಭಾಗಗಳಲ್ಲಿ ಅಭ್ಯರ್ಥಿಯ  ಹಿನ್ನೆಲೆ ಪರಿಶೀಲನೆ ಅಗತ್ಯವೆಂದು ಪರಿಗಣಿಸಿದರೂ, ಅಭ್ಯರ್ಥಿಯ ನೇಮಕಾತಿಯ ಮೇಲೆ ಅದರ ಪ್ರಸ್ತುತತೆಯ ಬಗ್ಗೆ ಚರ್ಚೆಗಳು ಇವೆ. ಮಾನವ ಸಂಪನ್ಮೂಲ ತಜ್ಞರು ಹೇಳುವ ಪ್ರಕಾರ ಪ್ರತಿ ರೆಸ್ಯುಮೆಯಲ್ಲಿ ಕನಿಷ್ಠ ನಕಲಿ ಮಾಹಿತಿಯನ್ನು ನೀಡಲಾಗಿರುತ್ತದೆ. ಉದ್ಯೋಗಾಕಾಂಕ್ಷಿಗಳು ಈ ಬಗೆಯ ಸುಳ್ಳು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಬೆರೆಸುತ್ತಾರೆ.ಅದಕ್ಕೆ ಕಾರಣ ಅವರನ್ನು ಲಭ್ಯವಿರುವ ವೃತ್ತಿಗೆ ಪರಿಗಣಿಸಿ, ಸಂದರ್ಶನಕ್ಕೆ ಆಹ್ವಾನಿಸಲಿ ಎಂದು. ಈ ರೀತಿಯ ಕಾರಣಗಳು ಹಲವಾರಿದ್ದರೂ, ಹಿನ್ನೆಲೆ ಪರಿಶೀಲನಾ ಸೇವೆ “ಹಿನ್ನೆಲೆ”ಯನ್ನು ಪರಿಶೀಲಿಸುತ್ತದೆಯೇ ವಿನಃ ಮುಂದಿನ ದಿನಗಳನ್ನು ಅಲ್ಲ.