ರಾಜೀನಾಮೆ ಪತ್ರವನ್ನು ಬರೆಯುವುದು ಹೇಗೆ?

ನೀವು ಉದ್ಯೋಗ ಬದಲಾಯಿಸಲು ನಿಶ್ಚಯಿಸಿದ್ದೀರಿ. ಮಿಂಟ್ಲಿಯಿಂದ ಸೂಕ್ತ ಉದ್ಯೋಗ ಸಹ ನಿಮಗೆ ದೊರಕಿದೆ. ಹೊಸ ಉದ್ಯೋಗ, ಹೊಸ ಕಂಪನಿ ಸೇರಿಕೊಳ್ಳಲು ಸಹಜವಾಗಿ ಉತ್ಸುಕರಾಗಿದ್ದೀರಿ. ಆದರೆ ನೀವು ನಿಮ್ಮ ಹೊಸ ಉದ್ಯೋಗಕ್ಕೆ ವರ್ಗಾವಣೆ ಆಗುವ ಮೊದಲು, ಪಾಲಿಸಬೇಕಾದ ಒಂದು ಪ್ರಕ್ರಿಯೆ ಇದೆ. ಅದೇ ನಿಮ್ಮ ಪ್ರಸ್ತುತ ಕಂಪನಿಗೆ ನೀಡಬೇಕಾದ ರಾಜೀನಾಮೆ. ಮತ್ತು  ನಿಮ್ಮ ರಾಜೀನಾಮೆಯನ್ನು ಅಧಿಕೃತವಾಗಿ ತಿಳಿಸಲು ನೀಡಬೇಕಾದ ರಾಜೀನಾಮೆ ಪತ್ರ. 

ನಿಮ್ಮ ಬಾಸ್ ಗೆ ನೀವು ಕಂಪನಿ ತೊರೆಯುತ್ತಿದ್ದೀರಿ ಎನ್ನುವ ವಿಷಯ ತಿಳಿಸುವುದು ಸುಲಭದ ಕೆಲಸವಲ್ಲ. ಎಷ್ಟೋ ವರ್ಷಗಳಿಂದ ನಿಮಗೆ ಉದ್ಯೋಗ ನೀಡಿದ ಕಂಪನಿಯನ್ನು ತೊರೆಯುವುದು ಸಹ ಸುಲಭವಲ್ಲ. ಆದರೆ, ಒಂದು ಗೌರವಾನ್ವಿತ ರಾಜೀನಾಮೆ ಪತ್ರ  ಅಸಮಾಧಾನದ ವಿದಾಯವನ್ನು ಅಳಿಸಿ ಹಾಕಿ, ದೀರ್ಘಾವಧಿ ವೃತ್ತಿಪರ ಸುಸಂಬಂಧಕ್ಕೆ ಕಾರಣವಾಗಬಲ್ಲದು.

ಸಾಮಾನ್ಯವಾಗಿ, ಎಲ್ಲಾ ಕಂಪನಿಗಳಲ್ಲಿ ತಮ್ಮ ಮಾನವ ಸಂಪನ್ಮೂಲ ನೀತಿಗಳ ಅನುಸಾರ ನೋಟೀಸ್ ಪಿರಿಯಡ್ (ಸೂಚನೆಯ ಅವಧಿ) ಇರುತ್ತದೆ. ನೀವು ರಾಜೀನಾಮೆ ಪತ್ರ ನೀಡಿದ ನಂತರ, ಈ ನೋಟೀಸ್ ಪಿರಿಯಡ್ ಮುಗಿಯುವವರೆಗೂ ಪ್ರಸ್ತುತ ಕಂಪನಿಯಲ್ಲಿ ಕೆಲಸ ಮಾಡಬೇಕು. ರಾಜೀನಾಮೆ ಪತ್ರವು ಕಂಪನಿಯಲ್ಲಿ ನಿಮ್ಮ ಉದ್ಯೋಗ ತೊರೆಯುವಿಕೆಯನ್ನು ಅಧಿಕೃತವಾಗಿ ಘೋಷಿಸಲು ಸಹಾಯ ಮಾಡುತ್ತದೆ. ರಾಜೀನಾಮೆ ಪತ್ರವನ್ನು ನಿಮ್ಮ ಪ್ರಸ್ತುತ ಕಂಪನಿಗೆ ಒದಗಿಸಿದ  ನಂತರ ಮಾನವ ಸಂಪನ್ಮೂಲ ವಿಭಾಗದವರು ಕಂಪನಿಯಿಂದ ನಿಮ್ಮ ನಿರ್ಗಮನದ ಪ್ರಕ್ರಿಯೆಯನ್ನು ಪ್ರಾರಂಭಿಸಿ, ನಿಮ್ಮ ಕೊನೆಯ ದಿನ ಮತ್ತು ಇನ್ನಿತರ ಅಗತ್ಯ ವಿವರಗಳನ್ನು ನಿಶ್ಚಯಿಸುತ್ತಾರೆ. 

ಪ್ರಬಲ ರಾಜೀನಾಮೆ ಪತ್ರವನ್ನು ಸಲ್ಲಿಸುವುದರಿಂದ ನೀವು ನಿಮ್ಮ ಉದ್ಯೋಗದಾತರು ಮತ್ತು ನಿಮ್ಮ ಔದ್ಯೋಗಿಕ ತಂಡದ ಮುಖ್ಯಸ್ಥರೊಂದಿಗೆ ಸೂಕ್ತ ಸಕಾರಾತ್ಮಕ ಸಂಬಂಧವನ್ನು ಉಳಿಸಿಕೊಳ್ಳಬಹುದು. ಇದು ನಿಮ್ಮ ಮುಂದಿನ ಔದ್ಯೋಗಿಕ ಬೆಳವಣಿಗೆಗೆ ಸುಗಮವಾಗುತ್ತದೆ. ಆದರೆ, ರಾಜೀನಾಮೆ ಪತ್ರ ಎಂದರೇನು? ಉತ್ತಮ ರಾಜೀನಾಮೆ ಪತ್ರವನ್ನು ಹೇಗೆ ಬರೆಯಬೇಕು? ಆ ಪತ್ರದಲ್ಲಿ ಯಾವ ಬಗೆಯ ವಿಷಯಗಳನ್ನು ಬರೆಯಬೇಕು? ಮತ್ತು ಯಾವ ಬಗೆಯ ವಿಷಯಗಳನ್ನು ವಿಶ್ಲೇಷಿಸಬಾರದು? ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು, ನಾವು ಈ ಲೇಖನದಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ. 

ರಾಜೀನಾಮೆ ಪತ್ರ ಎಂದರೇನು?

how to write resignation letter in bengali

ರಾಜೀನಾಮೆ ಎಂದರೆ ನೀವು ನಿಮ್ಮ ಪ್ರಸ್ತುತ ಕಂಪನಿಯಿಂದ ಉದ್ಯೋಗ ತೊರೆಯುವ ಕ್ರಿಯೆ. ರಾಜೀನಾಮೆ ಪತ್ರ ನೀವು ಪ್ರಸ್ತುತ ಉದ್ಯೋಗವನ್ನು ತೊರೆಯುವ ಉದ್ದೇಶವನ್ನು ಅಧಿಕೃತವಾಗಿ ವ್ಯಕ್ತಪಡಿಸುವ ಪತ್ರ. ಆದರೆ, ರಾಜೀನಾಮೆ ಪತ್ರ ಬರೆಯುವ ಅಗತ್ಯತೆ ಇದೆಯೇ? ಕೇವಲ ಮೌಖಿಕವಾಗಿ ನಿಮ್ಮ ಬಾಸ್ ಅಥವಾ ನಿಮ್ಮ ಕಂಪನಿಯ ಮಾನವ ಸಂಪನ್ಮೂಲ ವಿಭಾಗದವರಿಗೆ ತಿಳಿಸಿದರೆ ಸಾಲದೇ? 

ನೀವು ರಾಜೀನಾಮೆ ಪತ್ರ ಬರೆಯಬೇಕೇ?

ರಾಜೀನಾಮೆ ಪತ್ರ ಬರೆಯುವುದು ಅಗತ್ಯವೇ? ಸರಳವಾದ ಉತ್ತರ ಹೇಳಬೇಕೆಂದರೆ, ಪ್ರತಿ ಹುದ್ದೆಯಲ್ಲಿಯೂ ರಾಜೀನಾಮೆ ಪತ್ರ ಬರೆಯುವ ಅಗತ್ಯತೆ ಇಲ್ಲ. 

ಸಾಮಾನ್ಯವಾಗಿ ಅನೇಕ ಉದ್ಯೋಗಿಗಳು ತಮ್ಮ ಉದ್ಯೋಗದಾತರಿಗೆ ತಾವು  ಪ್ರಸ್ತುತ ಕಂಪನಿಯಿಂದ ಉದ್ಯೋಗ ತೊರೆಯುವ ಮುನ್ನ ಔಪಚಾರಿಕ ಮತ್ತು ಅಧಿಕೃತ ರಾಜೀನಾಮೆ ಪತ್ರ ನೀಡಬೇಕು ಎಂದು ನಂಬುತ್ತಾರೆ. ಆದರೆ, ಅನೇಕ ಕಂಪೆನಿಗಳಲ್ಲಿ ಉದ್ಯೋಗಿಗಳು ಹಾಗೆ ಮಾಡಬೇಕಾದ ಅನಿವಾರ್ಯತೆ ಆಗಲಿ ಅಥವಾ ಅಗತ್ಯತೆ ಆಗಲಿ ಇಲ್ಲ. ಅಮೆರಿಕಾದ ಕಂಪನಿಗಳಲ್ಲಿ, ಹೆಚ್ಚಿನ ಉದ್ಯೋಗವನ್ನು “ಇಚ್ಛಾನುಸಾರ” ಎಂದು ಕರೆಯಲಾಗುತ್ತದೆ. ಇದರ ಅರ್ಥ ನಿಮ್ಮ ಪ್ರಸ್ತುತ ಉದ್ಯೋಗದಾತರು ನಿಮ್ಮನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ (ಕಾನೂನಿನಡಿಯಲ್ಲಿ ನಿಷೇಧಿಸಲಾಗಿರು ವಂತಹ ಕಾರಣ ಗಳನ್ನು ಹೊರತು ಪಡಿಸಿ) ನಿಮ್ಮನ್ನು ನಿಮ್ಮ ಉದ್ಯೋಗದಿಂದ ವಜಾ ಮಾಡಬಹುದು. ಇಂತಹ ಪರಿಸ್ಥಿತಿಗಳಲ್ಲಿಯೂ ನಿಮ್ಮ ಉದ್ಯೋಗದಾತರು ನೀವು ಪ್ರಸ್ತುತ ಕೆಲಸವನ್ನು ತ್ಯಜಿಸುವ ಮುನ್ನ ನಿಮಗೆ ನಿರ್ದಿಷ್ಟ ಸಮಯವನ್ನು “ಸೂಚನೆ ಅವಧಿ” ಅಥವಾ “ನೋಟೀಸ್ ಪಿರಿಯಡ್” ಎಂದು ನೀಡಬೇಕು. ಸಾಮಾನ್ಯವಾಗಿ, ಈ ಸೂಚನೆ ಅವಧಿ ಅಥವಾ ನೋಟೀಸ್ ಪಿರಿಯಡ್ ಎರಡು ವಾರಗಳಷ್ಟು ಇರುತ್ತದೆ. ಇಂತಹ ನೋಟೀಸ್ ಪಿರಿಯಡ್ ಅಥವಾ ಸೂಚನೆ ಅವಧಿ ಔಪಚಾರಿಕತೆ ಹೊಂದಿರುವ ಕಂಪನಿಗಳು ಸಹ ನೀವು ನಿಮ್ಮ ಉದ್ಯೋಗ ತ್ಯಜಿಸಲು ವಿವರವಾಗಿ ಕಾರಣಗಳನ್ನು ವಿಶ್ಲೇಷಿಸುವ ರಾಜೀನಾಮೆ ಪತ್ರ ನೀಡಲೇಬೇಕು ಎಂದು ನಿರೀಕ್ಷಿಸುವುದಿಲ್ಲ. 

ಹಾಗಿದ್ದರೂ, ನೀವು ರಾಜೀನಾಮೆ ಪತ್ರವನ್ನು ಏಕೆ ಬರೆಯಲೇಬೇಕು? ರಾಜೀನಾಮೆ ಪತ್ರವನ್ನು ಬರೆಯುವುದರಿಂದ ಆಗುವ ಒಳಿತೆನು?

ನೀವು ಯಾವುದೋ ಬಹುರಾಷ್ಟ್ರೀಯ ಕಂಪನಿಯಲ್ಲಿಯೇ ಉದ್ಯೋಗ ನಿರ್ವಹಿಸುತ್ತಿರಬಹುದು ಅಥವಾ ಯಾವುದೋ ಕಾಫಿ ಶಾಪ್ ನಲ್ಲಿ ಕೆಲಸ ಮಾಡುತ್ತಿರಬಹುದು, ಆ ಉದ್ಯೋಗವನ್ನು ತೊರೆಯುವಾಗ ಒಂದು ಔಪಚಾರಿಕ ಮತ್ತು ಅಧಿಕೃತ ರಾಜೀನಾಮೆ ಪತ್ರ ನೀಡುವುದು ನಿಮ್ಮ ವಿನಯಶೀಲ ಮತ್ತು ವೃತ್ತಿಪರ ಮನೋಭಾವ ಕಾಣಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅನೇಕ ತಜ್ಞರು ನಂಬುತ್ತಾರೆ. ರಾಜೀನಾಮೆ ಪತ್ರ ನಿಮ್ಮ ತಂಡದ ಮುಖ್ಯಸ್ಥರಿಗೆ ನೀವು ಉದ್ಯೋಗ ತೊರೆಯುವ ವಿಷಯವನ್ನು ಅಧಿಕೃತವಾಗಿ ಸೂಚಿಸುತ್ತದೆ. ಇದರಿಂದಾಗಿ ನಿಮ್ಮ ಸ್ಥಾನಕ್ಕೆ ಬೇರೆಯವರನ್ನು ನೇಮಿಸಿಕೊಳ್ಳವ ನಿರ್ಧಾರ ತೆಗೆದುಕೊಳ್ಳಲು ನಿಮ್ಮ ಉದ್ಯೋಗದಾತರಿಗೆ ಸುಲಭವಾಗುತ್ತದೆ.  

ಅದರೊಂದಿಗೆ, ರಾಜೀನಾಮೆ ಪತ್ರ ಬರೆಯಲು ನಿಜವಾದ ಕಾರಣವೆಂದರೆ ನೀವು ಯಾವ ನಿರ್ದಿಷ್ಟ ದಿನಾಂಕದಂದು ನೋಟೀಸ್ ನೀಡಿದ್ದೀರಿ, ಅಂದಿನಿಂದ ನಿಮ್ಮ ಉದ್ಯೋಗದಾತರಿಗೆ ಎರಡು ವಾರಗಳ ಸೂಚನೆ ಅಥವಾ ಇನ್ನಿತರ ಮೊತ್ತದ ಸೂಚನೆ ದೊರಕುತ್ತದೆ. ಇವೆಲ್ಲದರ ಜೊತೆಗೆ, ನೀವು ಅಧಿಕೃತವಾದ ರಾಜೀನಾಮೆ ಪತ್ರ ನೀಡುವುದರಿಂದ ನಿಮ್ಮ ಪ್ರಸ್ತುತ ಉದ್ಯೋಗಕ್ಕೆ ಸಂಬಂಧಪಟ್ಟ ಮತ್ತು ಮುಂದಿನ ಉದ್ಯೋಗಕ್ಕೆ ಅಗತ್ಯವಿರುವ ಡಾಕ್ಯುಮೆಂಟ್ಸ್ ಅಥವಾ ಕಾಗದಪತ್ರಗಳನ್ನು ಪಡೆದುಕೊಳ್ಳಲು ಉಪಯೋಗ ಆಗುತ್ತದೆ. ನಿಮ್ಮ ಪ್ರಸ್ತುತ ಕಂಪನಿಯಲ್ಲಿ ನೀವು ಉದ್ಯೋಗ ತೊರೆಯಲು ಕಾರಣವನ್ನು ಉಲ್ಲೇಖಿಸಲು ನಿಮ್ಮ ರಾಜೀನಾಮೆ ಪತ್ರ ಸಹಾಯ ಮಾಡುತ್ತದೆ. 

ನಿಮ್ಮ ರಾಜೀನಾಮೆ ಪತ್ರ ಕಂಪನಿಯಲ್ಲಿನ ನಿಮ್ಮ ಕೊನೆಯ ಕೆಲಸ ಮಾಡುವ ದಿನವನ್ನು ಸೂಚಿಸಿ, ನಿಮ್ಮ ಉದ್ಯೋಗ ಒಪ್ಪಂದವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮ್ಮ ಉದ್ಯೋಗದಾತರಿಗೆ ಅಥವಾ ಕಂಪನಿಯ ಮಾನವ ಸಂಪನ್ಮೂಲ ವಿಭಾಗದವರಿಗೆ ಸಹಾಯ ಮಾಡುತ್ತದೆ. ಇದರಿಂದ ಯಾವುದೇ ಸಂಭಾವ್ಯ ಕಾನೂನಿನ ತೊಂದರೆಗಳನ್ನು ಸಹ ತಡೆಗಟ್ಟಬಹುದು.

ಮೇಲೆ ನೀಡಿರುವ ಎಲ್ಲಾ ಕಾರಣಗಳನ್ನು ಪರಿಗಣಿಸಿದರೆ, ರಾಜೀನಾಮೆ ಪತ್ರವನ್ನು ನಿಮ್ಮ ಕಂಪನಿಗೆ ನೀಡುವುದು ಅತ್ಯಗತ್ಯ ಎನ್ನಿಸುವುದು ಸಾಮಾನ್ಯ. ಆದರೆ ಪ್ರಸ್ತುತ ಕಂಪನಿಯ ಉದ್ಯೋಗಿ ಆಗಿ ನಿಮ್ಮ ಉದ್ಯೋಗದಾತರಿಗೆ ರಾಜೀನಾಮೆ ಪತ್ರ ಬರೆಯುವುದು ಹೇಗೆ? ರಾಜೀನಾಮೆ ಪತ್ರದಲ್ಲಿ ಯಾವ ಅಂಶಗಳು ಒಳಗೊಂಡಿರಬೇಕು? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದ ಮುಂದಿನ ಭಾಗ ಉತ್ತರ ನೀಡುತ್ತದೆ.

ವೃತ್ತಿಪರ ರಾಜೀನಾಮೆ ಪತ್ರವನ್ನು ಹೇಗೆ ಬರೆಯಬೇಕು?

ವೃತ್ತಿಪರ ರಾಜೀನಾಮೆ ಪತ್ರ ಸಂಕ್ಷಿಪ್ತವಾಗಿರಬೇಕು. ಅದರೊಂದಿಗೆ, ಈ ಪತ್ರ ಕೇವಲ ಅಗತ್ಯವಿರುವ ಮತ್ತು ಸಹಾಯಕವಾಗುವ ಮಾಹಿತಿಯನ್ನು ಒಳಗೊಂಡಿರಬೇಕು. ಈ ಪತ್ರದಲ್ಲಿ ಯಾವುದೇ ಕಾರಣಕ್ಕೂ ನೀವು ಸೇರುತ್ತಿರುವ ಬೇರೆ ಕಂಪನಿಯ ಬಗ್ಗೆ ಅಥವಾ ನಿಮ್ಮ ಹೊಸ ಉದ್ಯೋಗದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಅಥವಾ ಒಲವನ್ನು ವ್ಯಕ್ತಪಡಿಸಬೇಡಿ. ಅದರ ಬದಲಾಗಿ, ನೀವು ತೊರೆಯುತ್ತಿರುವ ಕಂಪನಿಯ ಬಗ್ಗೆ ಮತ್ತು ನಿಮ್ಮ ಸಹೋದ್ಯೋಗಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲು ರಾಜೀನಾಮೆ ಪತ್ರವನ್ನು ಬಳಸಿಕೊಳ್ಳಿ.

ವೃತ್ತಿಪರ ರಾಜೀನಾಮೆ ಪತ್ರ ಯಾವ ಅಂಶಗಳನ್ನು ಒಳಗೊಂಡಿರಬೇಕು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. 

೧. ಪ್ಯಾರಾಗ್ರಾಫ್  ೦೧ – ನಿಮ್ಮ ಪರಿಚಯ

ನೀವು ಉದ್ಯೋಗ ತೊರೆಯುತ್ತಿರುವುದು ಖಚಿತ. ಉದ್ಯೋಗ ಮತ್ತು ಕಂಪನಿ ತೊರೆಯುವ ವಿಷಯವನ್ನು ನಿಮ್ಮ ಕಂಪನಿಗೆ ತಿಳಿಸುವುದು ನಿಮ್ಮ ರಾಜೀನಾಮೆ ಪತ್ರದ ಪ್ರಮುಖ ಉದ್ದೇಶ. ಹಾಗಾಗಿ, ನಿಮ್ಮ ರಾಜೀನಾಮೆ ಪತ್ರದಲ್ಲಿ ಮೊದಲು ನಿಮ್ಮ ಹೆಸರು ಮತ್ತು ಪ್ರಸ್ತುತ ಕಂಪನಿಯಲ್ಲಿ ನಿಮ್ಮ ಹುದ್ದೆಯ ಬಗ್ಗೆ ಬರೆಯಿರಿ. ನಿಮ್ಮ ಕಂಪನಿಯ ಹೆಸರನ್ನು ರಾಜೀನಾಮೆ ಪತ್ರದಲ್ಲಿ ತಿಳಿಸುವುದು ಸೂಕ್ತ. ನಿಮ್ಮ ರಾಜೀನಾಮೆ ಪತ್ರವನ್ನು ಈ ಎಲ್ಲಾ ಮಾಹಿತಿಗಳೊಂದಿಗೆ ಪ್ರಾರಂಭಿಸಿ. ಈ ವಿಷಯವನ್ನು ಪತ್ರದಲ್ಲಿ ಪ್ರಸ್ತಾಪಿಸಿದ ನಂತರ, ನಿಮ್ಮ ರಾಜೀನಾಮೆ ವಿಷಯವನ್ನು ಸರಳವಾಗಿ ತಿಳಿಸಿ.

ನಿಮ್ಮ ರಾಜೀನಾಮೆ ಪತ್ರದಲ್ಲಿ ಮೊದಲ ಪ್ಯಾರಾಗ್ರಾಫ್ ನಲ್ಲಿ ಉದ್ಯೋಗದ ನಿಮ್ಮ ಅಂತಿಮ ದಿನಾಂಕವನ್ನು ತಿಳಿಸುವುದು ಮಾನವ ಸಂಪನ್ಮೂಲ ವಿಭಾಗದವರಿಗೆ ಸಹಾಯಕವಾಗಿರುತ್ತದೆ. 

೨. ಪ್ಯಾರಾಗ್ರಾಫ್ ೦೨ – ಸಕಾರಾತ್ಮಕತೆಯನ್ನು ಪ್ರತಿಬಿಂಬಿಸಿ

ರಾಜೀನಾಮೆ ಪತ್ರವನ್ನು ಬರೆಯಲು ಪ್ರಾರಂಭಿಸುವ ಮೊದಲು, ನಿಮ್ಮ ಕಂಪನಿಯ ಬಗ್ಗೆ, ನಿಮ್ಮ ಹುದ್ದೆಯ ಬಗ್ಗೆ, ಮತ್ತು ಈ ಕಂಪನಿ ಮತ್ತು ಅದರ ಮುಖ್ಯಸ್ಥರು ನಿಮಗೆ ಮತ್ತು ನಿಮ್ಮ ಔದ್ಯೋಗಿಕ ಬೆಳವಣಿಗೆಗೆ ಹೇಗೆ ಸಹಾಯ ಮಾಡಿದ್ದಾರೆ ಎನ್ನುವುದರ ಬಗ್ಗೆ ಯೋಚಿಸಿ. ಅದರೊಂದಿಗೆ ಈ ಕಂಪನಿಯಲ್ಲಿ ನೀವು ವಿನಿಯೋಗಿಸಿರುವ ಸಮಯ ನಿಮಗೆ ಯಾವ ರೀತಿ ಸಹಾಯ ಮಾಡಿದೆ  ಎನ್ನುವುದನ್ನು ಪರಿಗಣಿಸಿ. ಇವುಗಳ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದುಕೊಳ್ಳಿ – ಬಹುಶಃ ಕಂಪನಿಯು ವೃತ್ತಿಪರ ಅಭಿವೃದ್ಧಿ ಅವಕಾಶಗಳನ್ನು ಒದಗಿಸಿರುವ ಕುರಿತಾಗಿ, ಅಥವಾ ಕಂಪನಿಯ ಸಂಸ್ಕೃತಿ ನಿಮಗೆ ಮೆಚ್ಚುಗೆ ಆಗಿರುವ ಕುರಿತಾಗಿ ಅಥವಾ ಕಂಪನಿ ನಿಮ್ಮ ವೃತ್ತಿಜೀವನದ ಬೆಳವಣಿಗೆ ಬೆಂಬಲಿಸಲು ಬಳಸಿದ ಸಮಯ ಮತ್ತು ಸಂಪನ್ಮೂಲಗಳ ಕುರಿತಾಗಿ ಇರಬಹುದು. ನಿಮಗೆ ಮೆಚ್ಚುಗೆ ಆದ ವಿಷಯವನ್ನು, ಸಕಾರಾತ್ಮಕ ರೀತಿಯಲ್ಲಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿ.

ನಿಮಗೆ ಸರಿ ಎನ್ನಿಸಿದರೆ, ನೀವು ಸೇರುತ್ತಿರುವ ಹೊಸ ಕಂಪನಿಯ ಬಗ್ಗೆ ಮತ್ತು ನೀವು ಈ ಹೊಸ ಉದ್ಯೋಗವನ್ನು ಸೇರಲು ಕಾರಣಗಳನ್ನು ಸಹ ಬರೆಯಬಹುದು. ನೀವು ನಿಮ್ಮ ಔದ್ಯೋಗಿಕ ಆಸೆಗಳನ್ನು ಪೂರೈಸಲು ಬೇರೆ ಉದ್ಯೋಗ ಕ್ಷೇತ್ರ ಆಯ್ದುಕೊಂಡಿದ್ದರೆ ಅಥವಾ ಉನ್ನತ ಶಿಕ್ಷಣ ಅಭ್ಯಾಸಿಸಲು ಯಾವುದಾದರೂ ಶಾಲೆಗೆ ಸೇರಿಕೊಳ್ಳುತ್ತಿದ್ದರೆ, ಅದನ್ನು ಸಹ ರಾಜೀನಾಮೆ ಪತ್ರದ ಎರಡನೇ ಪ್ಯಾರಾಗ್ರಾಫ್ ನಲ್ಲಿ ಉಲ್ಲೇಖಿಸಬಹುದು. ಆದರೆ, ನೀವು ನಿಮ್ಮ ಪ್ರಸ್ತುತ ಹುದ್ದೆಯನ್ನು ನಿಮ್ಮ ಪ್ರಸ್ತುತ ಕಂಪನಿಯ ಪ್ರತಿಸ್ಪರ್ಧಿ ಕಂಪನಿಯೊಂದಿಗೆ ಕೆಲಸ ಮಾಡಲು ಹೊರಟಿದ್ದರೆ, ನಿಮ್ಮ ಮುಂದಿನ ಔದ್ಯೋಗಿಕ ಪಯಣದ ಬಗ್ಗೆ ಈ ಪತ್ರದಲ್ಲಿ ತಿಳಿಸದೇ ಇರುವುದು ಉತ್ತಮ.

೩. ಪ್ಯಾರಾಗ್ರಾಫ್  ೦೩ – ಪರಿವರ್ತನೆಗೆ ಸಹಾಯ ಮಾಡುವ ಇಚ್ಛೆ ವ್ಯಕ್ತಪಡಿಸಿ

ನಿಮ್ಮ ರಾಜೀನಾಮೆ ಪತ್ರದ ಮೂರನೇ ಪ್ಯಾರಾಗ್ರಾಫ್ ನಲ್ಲಿ ಕಂಪನಿಗೆ ಅಗತ್ಯವಿರುವ ಮತ್ತು ನೀವು ಹೊಸ ಕಂಪನಿಗೆ ವರ್ಗಾವಣೆಗೊಳ್ಳಲು ಅಗತ್ಯವಿರುವ ಎಲ್ಲಾ  ಬಗೆಯ ಪರಿವರ್ತನೆಗೆ ನೀವು ಸಹಾಯ ಮಾಡುವುದಾಗಿ ನಮೂದಿಸಿ. ಅದರೊಂದಿಗೆ ಅಗತ್ಯವಿರುವ ವಿವರದ ಮಾಹಿತಿಯನ್ನು ನಿರ್ಧಿಷ್ಟ ರೀತಿಯಲ್ಲಿ ತಿಳಿಸಿ. ಈ ರೀತಿ ನಿಮ್ಮ ರಾಜೀನಾಮೆ ಪತ್ರದಲ್ಲಿ ಬರೆಯುವುದರಿಂದ ಅದು ಅತ್ಯಂತ ಪ್ರಭಾವಶಾಲಿಯಾಗಿರುತ್ತದೆ. 

೪. ಪ್ಯಾರಾಗ್ರಾಫ್ ೦೪: ನಿಮ್ಮ ವೃತ್ತಿ ಜವಾಬ್ದಾರಿಗಳ ಬಗ್ಗೆ ವಿವರಿಸಿ

ಈ ಪ್ಯಾರಾಗ್ರಾಫ್ ನಿಮ್ಮ ಇಚ್ಛೆಗೆ ಬಿಟ್ಟಿದ್ದು. ಸೂಕ್ತವೆನಿಸಿದರೆ ಈ ಪ್ಯಾರಾಗ್ರಾಫ್ ಅನ್ನು ನಿಮ್ಮ ರಾಜೀನಾಮೆ ಪತ್ರದಲ್ಲಿ ಸೇರಿಸಿ. 

ಈ ಪ್ಯಾರಾಗ್ರಾಫ್ ನಲ್ಲಿ ಪ್ರಸ್ತುತ ಕಂಪನಿಯಲ್ಲಿ ನಿಮಗೆ ಇದ್ದ ಜವಾಬ್ದಾರಿಗಳು, ಮತ್ತು ನೀವು ಈ ಕಂಪನಿಯನ್ನು ತೊರೆಯುವಾಗ ನೀವು ಅಧಿಕೃತವಾಗಿ ಯಾವ ವೃತ್ತಿ ಜವಾಬ್ದಾರಿಗಳನ್ನು ತೊರೆಯುತ್ತಿದ್ದೀರಿ ಎನ್ನುವುದನ್ನು ಸಂಕ್ಷಿಪ್ತವಾಗಿ ಪರಿಶೀಲಿಸಿ. ಸಾಮಾನ್ಯವಾಗಿ, ಈ ನಿಮ್ಮ ವೃತ್ತಿ ಜವಾಬ್ದಾರಿಗಳನ್ನು ನೀವು ಕಂಪನಿ ತೊರೆದ ನಂತರ ಹೇಗೆ ನಿಭಾಯಿಸಬೇಕು ಎನ್ನುವುದನ್ನು ನಿರ್ಧರಿಸುವುದು ನಿಮ್ಮ ತಂಡದ ಮುಖ್ಯಸ್ಥರು ಅಥವಾ ನಿಮ್ಮ ಮ್ಯಾನೇಜರ್ ಗಳ ಜವಾಬ್ದಾರಿಯಾದರೂ, ನೀವು ನಿಮ್ಮ ವೃತ್ತಿ ಜವಾಬ್ದಾರಿಗಳನ್ನು ರಾಜೀನಾಮೆ ಪತ್ರದಲ್ಲಿ ತಿಳಿಸುವುದು ಇಡೀ ತಂಡಕ್ಕೆ ಸಹಾಯವಾಗುತ್ತದೆ. ಇದು ನೀವು ಕಂಪನಿ ತೊರೆದ ನಂತರ, ನಿಮ್ಮ ಹುದ್ದೆಗೆ ಬರುವ ನೌಕರರಿಗೆ ಎಲ್ಲ ಜವಾಬ್ದಾರಿಗಳನ್ನು ಮತ್ತು ಕಾರ್ಯಗಳನ್ನು ವರ್ಗಾಯಿಸಲು ಸಹಾಯ ಮಾಡುತ್ತದೆ. ಅದರಲ್ಲಿಯೂ, ನೀವು ಯಾವುದಾದರೂ ನೆರೆ ವರದಿಗಳಿಗೆ ಜವಾಬ್ದಾರರಾಗಿದ್ದರೆ ಅಥವಾ ಇತರ ಇಲಾಖೆಗಳೊಂದಿಗೆ ಸೂಕ್ತ ಸಂಪರ್ಕವಿದ್ದರೆ, ಅತ್ಯಂತ ಸಹಾಯಕವಾಗಿರುತ್ತದೆ. 

೫. ಪ್ಯಾರಾಗ್ರಾಫ್ ೦೫ – ವೈಯಕ್ತಿಕ ಸಂಪರ್ಕ ಮಾಹಿತಿಯನ್ನು ಒದಗಿಸಿ 

ನಿಮ್ಮ ರಾಜೀನಾಮೆ ಪತ್ರವನ್ನು ಮುಕ್ತಾಯಗೊಳಿಸುವ ಮೊದಲು ನಿಮ್ಮ ವೈಯಕ್ತಿಕ ಸಂಪರ್ಕ ಮಾಹಿತಿಯನ್ನು ನೀಡುವುದು ಉತ್ತಮ. ಈ ಪ್ಯಾರಾಗ್ರಾಫ್ ಐಚ್ಛಿಕವಾದರೂ, ನೀವು ನಿಮ್ಮ ಪ್ರಸ್ತುತ ಉದ್ಯೋಗದಾತರು ನಿಮ್ಮೊಂದಿಗೆ ಸಂಪರ್ಕದಲ್ಲಿರಲು ಬಯಸಿದರೆ, ಈ ಮಾಹಿತಿಯೂ ರಾಜೀನಾಮೆ ಪತ್ರದಲ್ಲಿ ಉತ್ತಮ ಸೇರ್ಪಡೆಯಾಗಿ ಕಾರ್ಯ ನಿರ್ವಹಿಸುತ್ತದೆ. 

ಪ್ಯಾರಾಗ್ರಾಫ್ ೦೪ ಮತ್ತು ಪ್ಯಾರಾಗ್ರಾಫ್ ೦೫ ಐಚ್ಛಿಕ ವಿಭಾಗಗಳಾಗಿವೆ. ಇವುಗಳು ಕಂಪೆನಿಯಲ್ಲಿನ ನಿಮ್ಮ ಸ್ಥಾನ ಮತ್ತು ಕಂಪೆನಿಯೊಂದಿಗಿನ ನಿಮ್ಮ ಸಂಬಂಧಿವನ್ನು ಅವಲಂಬಿಸಿದೆ. 

ರಾಜೀನಾಮೆ ಪತ್ರದ ಮಾದರಿಗಳು

ಮೇಲೆ ನೀಡಿರುವ ಎಲ್ಲಾ ಮಾಹಿತಿಗಳನ್ನು ಬಳಸಿಕೊಂಡು ತಯಾರಿಸಿರುವ ಕೆಲವು ಮಾದರಿ ರಾಜೀನಾಮೆ ಪತ್ರಗಳನ್ನು ನೋಡೋಣ. ಈ ಕೆಳಗೆ ನೀಡಿರುವ ರಾಜೀನಾಮೆ ಪತ್ರಗಳು ವಿಭಿನ್ನ ಹುದ್ದೆಗಳಿಗೆ ಸಂಬಂಧಿಸಿದ್ದಾಗಿದ್ದು, ಎಲ್ಲದರಲ್ಲೂ ಸೌಹಾರ್ದತೆ ಸ್ವರವನ್ನು ಪ್ರತಿಬಿಂಬಿಸಿದೆ.

ರಾಜೀನಾಮೆ ಪತ್ರ ಮಾದರಿ ೦೧

ಕೇಂದ್ರೀಕರಿಸಿರುವ ಅಂಶಗಳು: ಕೃತಜ್ಞತೆ, ಹೊಸ ಅವಕಾಶ, ಸಂಪರ್ಕ ಮಾಹಿತಿ 

ಇಂದ,

ನಿಮ್ಮಹೆಸರು 

ನಿಮ್ಮ ವಿಳಾಸ 

ನಿಮ್ಮ ನಗರ, ರಾಜ್ಯ, ಪಿನ್ ಕೋಡ್ 

ನಿಮ್ಮ ದೂರವಾಣಿ ಸಂಖ್ಯೆ 

ನಿಮ್ಮ ಇಮೇಲ್ ವಿಳಾಸ

ದಿನಾಂಕ:

ಗೆ, 

ಕಂಪನಿ ಮುಖ್ಯಸ್ಥರ ಹೆಸರು 

ಶೀರ್ಷಿಕೆ 

ಸಂಸ್ಥೆ ವಿಳಾಸ 

ನಗರ, ರಾಜ್ಯ, ಪಿನ್ ಕೋಡ್

ಆತ್ಮೀಯ ಶ್ರೀ/ಮೀ. ಕೊನೆಯ ಹೆಸರು

ಈ ಪತ್ರದ ಮೂಲಕ ನಾನು ತಿಳಿಸಲು ಬಯಸುವುದೇನೆಂದರೆ ಈ ಕಂಪನಿಯಲ್ಲಿ ನನ್ನ ಹುದ್ದೆಯಾದ, ಡೇಟಾ ಅನಾಲಿಸ್ಟ್ ಹುದ್ದೆಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಇದು (ನಿಮ್ಮ ಕೊನೆಯ ದಿನಾಂಕ) ಇಂದ ಜಾರಿಗೆ ಬರುತ್ತದೆ.

ಕಳೆದ (ಕಂಪೆನಿಯಲ್ಲಿ ನೀವು ಕಳೆದ ಸಮಯ) ವರ್ಷಗಳಿಂದ ಈ ಸಂಸ್ಥೆ ನನಗೆ ಒದಗಿಸಿರುವ ವೃತ್ತಿಪರ ಅಭಿವೃದ್ಧಿಯ ಅವಕಾಶಗಳನ್ನು ನಾನು ಮನಸ್ಫೂರ್ವಕವಾಗಿ ಪ್ರಶಂಸಿಸುತ್ತೇನೆ. ಈ ಕಂಪನಿಯಲ್ಲಿ ನಾನು ಕಾರ್ಯನಿರ್ವಹಿಸಿದ ಅಧಿಕಾರಾವಧಿಯನ್ನು ನಾನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಇಂತಹ ಸಮರ್ಪಿತ ತಂಡದ ಜೊತೆಗೆ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ಅವಕಾಶ ಕೊಟ್ಟಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. 

ನಾನು (ಹೊಸ ಹುದ್ದೆಯ ಸ್ಥಳ) ಅಲ್ಲಿ ಟೀಚರ್ ಸ್ಥಾನವನ್ನು ಸ್ವೀಕರಿಸಿದ್ದೇನೆ. ಈ ಕಂಪನಿಯಲ್ಲಿ ನಾನು ನಿರ್ವಹಿಸಿದ ಉದ್ಯೋಗ ನನ್ನ ಅನುಭವವನ್ನು ಹೆಚ್ಚಿಸಿ, ಲಾಭದಾಯಕವಾಗಿದ್ದರೂ, ನಾನು ನನ್ನ ಮುಂದಿನ ಉದ್ಯೋಗ ಸೇರಲು ಉತ್ಸುಕನಾಗಿದ್ದೇನೆ.

ನನ್ನ ಸ್ಥಾನಕ್ಕೆ ಬೇರೆಯವರನ್ನು ನೇಮಿಸಿಕೊಳ್ಳಲು ನನ್ನಿಂದ ಯಾವ ಬಗೆಯ ಸಹಾಯ ಆಗಬೇಕಿದ್ದರೂ, ನಾನು ಮಾಡಲು ತಯಾರಿದ್ದೇನೆ. ನೀವು ಬೇರೆಯವರನ್ನು ನೇಮಿಸಿಕೊಳ್ಳುವವರೆಗು ಈ ಉದ್ಯೋಗಕ್ಕಾಗಿ, ನಾನು ಫ್ರೀಲಾನ್ಸಿನ್ಗ್ ಮಾಡಲು ತಯಾರಿದ್ದೇನೆ.

ಈ ಕಂಪನಿಯಲ್ಲಿ ನನಗೆ ಉದ್ಯೋಗ ಮಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನಾನು ಈ ಸಂಸ್ಥೆಗೆ ಶುಭ ಹಾರೈಸುತ್ತೇನೆ. ನೀವು ನನ್ನನ್ನು ಸಂಪರ್ಕಿಸಲು ಈ ಇಮೇಲ್ ವಿಳಾಸಕ್ಕೆ ಇಮೇಲ್ ಮಾಡಬಹುದು.

ಪ್ರಾಮಾಣಿಕತೆಯಿಂದ,

(ನಿಮ್ಮ ಹೆಸರು)

ರಾಜೀನಾಮೆ ಪಾತ್ರ ಮಾದರಿ ೦೨

ಕೇಂದ್ರೀಕೃತ ಅಂಶಗಳು: ಸಂಕ್ಷಿಪ್ತತೆ, ಕೃತಜ್ಞತೆ 

ಇಂದ, 

ನಿಮ್ಮಹೆಸರು 

ನಿಮ್ಮ ವಿಳಾಸ 

ನಿಮ್ಮ ನಗರ, ರಾಜ್ಯ, ಪಿನ್ ಕೋಡ್ 

ನಿಮ್ಮ ದೂರವಾಣಿ ಸಂಖ್ಯೆ 

ನಿಮ್ಮ ಇಮೇಲ್ ವಿಳಾಸ

ದಿನಾಂಕ:

ಗೆ, 

ಕಂಪನಿ ಮುಖ್ಯಸ್ಥರ ಹೆಸರು 

ಶೀರ್ಷಿಕೆ 

ಸಂಸ್ಥೆ ವಿಳಾಸ 

ನಗರ, ರಾಜ್ಯ, ಪಿನ್ ಕೋಡ್

ಆತ್ಮೀಯ ಶ್ರೀ/ಮೀ. ಕೊನೆಯ ಹೆಸರು

ಈ ಕಂಪನಿಯ ಕಂಟೆಂಟ್ ರಚನೆಕಾರನ ಸ್ಥಾನದಿಂದ ನಾನು ರಾಜೀನಾಮೆ ನೀಡಿತ್ತಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ದಯವಿಟ್ಟು ಸ್ವೀಕರಿಸಿ. ಈ ಕಂಪನಿಯಲ್ಲಿ, ಈ ಹುದ್ದೆಯಲ್ಲಿ ನನ್ನ ಕೊನೆಯ ದಿನ (ಕೊನೆಯ ದಿನಾಂಕ). 

ಕಳೆದ ಎರಡು ವರ್ಷಗಳಿಂದ ಈ ಕಂಪನಿಯಲ್ಲಿ ಮತ್ತು ಈ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ನನಗೆ ಸಂತೋಷ ತಂದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಂಪನಿ ಬೆಳೆದಂತೆ ವ್ಯಾಪಕವಾದ ಕಾಪಿರೈಟಿಂಗ್ ಯೋಜನೆಗಳನ್ನು ನಿಭಾಯಿಸುವುದನ್ನು ನಾನು ಆನಂದಿಸಿದ್ದೇನೆ. ನನ್ನ ಉದ್ಯೋಗ ಕ್ಷೇತ್ರದಲ್ಲಿ ನನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಇಲ್ಲಿಯವರೆಗೆ ಈ ಸಂಸ್ಥೆ ನನಗೆ ನೀಡಿದ ಅವಕಾಶಗಳಿಗೆ ಮತ್ತು ಮಾರ್ಗದರ್ಶನಕ್ಕೆ ಧನ್ಯವಾದಗಳು. 

ನನ್ನ ಸ್ಥಾನಕ್ಕೆ ಬೇರೆಯವರನ್ನು ನೇಮಿಸಿಕೊಳ್ಳಲು ನನ್ನಿಂದ ಯಾವುದೇ ಸಹಾಯ ಬೇಕಾದರೂ, ದಯವಿಟ್ಟು ನನಗೆ ತಿಳಿಸಿ.

ಇಂತಿ ನಿಮ್ಮ, 

(ನಿಮ್ಮ ಹೆಸರು)

ರಾಜೀನಾಮೆ ಪತ್ರದ ಟೆಂಪ್ಲೆಟ್

ಕೆಲವೊಮ್ಮೆ ನಿಮ್ಮ ಸ್ಥಾನದ ಸ್ವರೂಪವು ನಿಮ್ಮ ರಾಜೀನಾಮೆ ಪತ್ರದ ಮಾದರಿಯನ್ನು ನಿರ್ಧರಿಸುತ್ತದೆ. ಹೆಚ್ಚಿನ ಕ್ರಿಯಾತ್ಮಕ ಪಾತ್ರಗಳು ಸಂಸ್ಥೆಯಿಂದ ಸೂಕ್ತವಾಗಿ ನಿರ್ಗಮಿಸಲು ಸಹಾಯ ಮಾಡುವ ರಾಜೀನಾಮೆ ಪತ್ರದ ಒಂದೆರಡು ಟೆಂಪ್ಲೆಟ್ ಗಳನ್ನು ಕೆಳಗೆ ನೀಡಲಾಗಿದೆ.

ಟೆಂಪ್ಲೆಟ್ ೦೧

ಫ್ರೀಲಾನ್ಸರ್ ಮತ್ತು ಕಂಟ್ರಾಕ್ಟರ್ ಗಳಿಗಾಗಿ

ನೀವು ಫ್ರೀಲಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ, ನೀವು ನಿಮ್ಮ ರಾಜೀನಾಮೆ ಪತ್ರದ ಕೇಂದ್ರಂಶವನ್ನು  ಸೂಕ್ತ ರೀತಿಯಲ್ಲಿ ಹೊಂದಿಸಬೇಕಾಗುತ್ತದೆ. ನಿಮ್ಮ ರಾಜೀನಾಮೆ ಪತ್ರದಲ್ಲಿ ಪ್ರಮುಖವಾಗಿ ನಿಮ್ಮ ಅಂತಿಮ ಕಾರ್ಯಯೋಜನೆಗಳನ್ನು ಕೇಂದ್ರೀಕರಿಸಿ ಮತ್ತು ನಿಮ್ಮ ಕ್ಲೈಂಟ್ ನಿಂದ ನೀವು ಹೇಗೆ ಬೇರ್ಪಡಿಸಿಕೊಳ್ಳುತ್ತಿದ್ದೀರಿ ಎನ್ನುವುದನ್ನು ವಿವರಿಸಿ. ಇದರಲ್ಲಿ ನಿಮ್ಮ ಪ್ರಸ್ತುತ ಕಾರ್ಯಯೋಜನೆಗಳು, ಯಾವ ಕಾರ್ಯಗಳನ್ನು ನೀವು ಪೂರ್ತಿಗೊಳಿಸಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಅಂತಿಮ ಪಾವತಿಯನ್ನು ನೀವು ಹೇಗೆ ಸ್ವೀಕರಿಸುತ್ತೀರಿ ಎನ್ನುವ ವಿಷಯವನ್ನು ತಿಳಿಸಿ.

ನಿರ್ಗಮನದ ಸೂಚನಾ ಪತ್ರ

ವೈಯಕ್ತಿಕ ದೂರವಾಣಿ । ವೈಯಕ್ತಿಕ ಇಮೇಲ್ ವಿಳಾಸ  

ದಿನಾಂಕ:

ಗೆ, 

ವ್ಯವಸ್ಥಾಪಕರ ಹೆಸರು 

ವ್ಯವಸ್ಥಾಪಕರ ಶೀರ್ಷಿಕೆ 

ಸಂಸ್ಥೆಯ ಹೆಸರು 

ರಸ್ತೆಯ ವಿಳಾಸ 

ನಗರ, ಪಿನ್ ಕೋಡ್ 

ಗೌರವಾನ್ವಿತ (ನಿಮ್ಮ ವ್ಯವಸ್ಥಾಪಕರ ಹೆಸರು), 

ಈ ಪತ್ರದ ಮೂಲಕ ನಾನು ತಿಳಿಸಬಯಸುವುದೇನೆಂದರೆ  ನಾನು (ಕಂಪನಿ ಮತ್ತು ಸ್ಥಳ) ದಲ್ಲಿ ಪೂರ್ಣಾವಧಿ ಸ್ಥಾನವನ್ನು ಸ್ವೀಕರಿಸಿದ್ದೇನೆ. ಹಾಗಾಗಿ, ನೀವು ನನ್ನನ್ನು ಅಧಿಕೃತವಾಗಿ ನಿಮ್ಮ (ಫ್ರೀಲಾನ್ಸರ್ ಪೂಲ್) ನಿಂದ ನನ್ನನ್ನು ತೆರವುಗೊಳಿಸಬಹುದು. ನನ್ನ ಕೊನೆಯ ನಿಯೋಜನೆಯ (ನಿಯೋಜನೆಯ ಹೆಸರು) ಅನ್ನು ನಾನು (ನಿಯೋಜನೆಯನ್ನು ಪೂರ್ತಿಗೊಳಿಸುವ ದಿನಾಂಕ) ರಂದು ಮುಗಿಸುತ್ತೇನೆ. ಅದಕ್ಕೆ ಸಂಬಂಧಿತ ಯಾವುದೇ ಪರಿಷ್ಕರಣೆ ಇದ್ದಲ್ಲಿ, (ನಿರ್ಗಮನದ ದಿನಾಂಕ) ಕ್ಕಿಂತ ಮೊದಲು ತಿಳಿಸಬೇಕಾಗಿ ವಿನಂತಿ. ಈ ನಿಯೋಜನೆಗೆ ಸಂಬಂಧಿಸಿದ ಶುಲ್ಕವನ್ನು ನೀವು ನನ್ನ ಸಾಮಾನ್ಯ ಖಾತೆಗೆ ಪಾವತಿಸಬೇಕಾಗಿ ವಿನಂತಿ.

(ಪ್ರಸ್ತುತ ಕಂಪನಿ ಹೆಸರು) ನಲ್ಲಿ ಮತ್ತು ನಿಮ್ಮ ತಂಡದೊಂದಿಗೆ ಕೆಲಸ ಮಾಡುವುದು ನನಗೆ ಅಪಾರ ಲಾಭದಾಯಕ ಅನುಭವವಾಗಿದೆ. ನೀವು ನನಗೆ ನೀಡಿದ ಅವಕಾಶದೊಂದಿಗೆ ನೀವು ನನಗೆ ನೀಡಿದ ಎಲ್ಲಾ ಬೆಂಬಲಕ್ಕಾಗಿ ನಾನು ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಈ ಪರಿವರ್ತನೆಯ ಸಮಯದಲ್ಲಿ ನನ್ನಿಂದ ನಿಮಗೆ ಅಥವಾ ನಿಮ್ಮ ಸಂಸ್ಥೆಗೆ ಯಾವುದಾದರೂ ಸಹಾಯ ಅಗತ್ಯವಿದ್ದರೆ, ಅದನ್ನು ಮಾಡಲು ನಾನು ಸಿದ್ಧನಾಗಿದ್ದೇನೆ. ನನ್ನ ಸಂಪರ್ಕ ಮಾಹಿತಿಯನ್ನು ಈ ಪತ್ರದ ಮೇಲ್ಭಾಗದಲ್ಲಿ ನೀಡಿದ್ದೇನೆ.

ಇಂತಿ ನಿಮ್ಮ, 

(ನಿಮ್ಮ ಹೆಸರು)

ಟೆಂಪ್ಲೆಟ್ ೦೨

ಕಾರ್ಯನಿರ್ವಾಹಕರು ಮತ್ತು ಹಿರಿಯ ನಾಯಕರಿಗಾಗಿ

ನೀವು ಕಾರ್ಯನಿರ್ವಾಹಕ ಅಥವಾ ಹಿರಿಯ ಮಟ್ಟದ ನಾಯಕತ್ವದ ಪಾತ್ರದಲ್ಲಿದ್ದರೆ, ಅಧಿಕೃತ ರಾಜೀನಾಮೆಗಾಗಿ ನಿಮ್ಮ ಉನ್ನತರಿಗೆ ತ್ವರಿತ ಇಮೇಲ್ ಅಥವಾ ಎರಡು ಪ್ಯಾರಾಗ್ರಾಫ್ ಸೂಚನೆ ಸಾಕಾಗುವುದಿಲ್ಲ. ಏಕೆಂದರೆ ಈ ಸ್ಥಾನಗಳು ಉನ್ನತವಾಗಿದ್ದು, ಅಂತಹ ಸ್ಥಾನಕ್ಕೆ ಬೇರೆಯವರನ್ನು ನೇಮಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಮತ್ತು ಇಂತಹ ಸ್ಥಾನಗಳಿಗಾಗಿ ಪರಿವರ್ತನೆಯ ಅವಧಿಯಲ್ಲಿ ನಿಮ್ಮ ಸಹಾಯ ಮತ್ತು ಪಾತ್ರ ಹೆಚ್ಚಿರುತ್ತದೆ. ನೀವು ನಿರ್ವಹಿಸುತ್ತಿರುವ ಜನರ ತಂಡ ಮತ್ತು ನೀವು ನಿರ್ವಹಿಸುತ್ತಿರುವ ವೃತ್ತಿ ಜವಾಬ್ದಾರಿಗಳು ಹೆಚ್ಚಿರುವುದರಿಂದ – ನಿಮ್ಮ ಸ್ಥಾನಕ್ಕೆ ಬೇರೆಯವರನ್ನು ನೇಮಿಸಿಕೊಳ್ಳುವುದು ಕಷ್ಟ.

ಕೆಳಗಿನ ರಾಜೀನಾಮೆ ಟೆಂಪ್ಲೆಟ್ ಅನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ – ಮೊದಲನೆಯದು: ರಾಜೀನಾಮೆ. ಎರಡನೆಯದು – ನೀವು ರಾಜೀನಾಮೆ ನೀಡಿದ ನಂತರ ನಿಮ್ಮ ಕೆಲಸ ಕಾರ್ಯಗಳನ್ನು ಹೇಗೆ ಮತ್ತು ಯಾರು ನಿರ್ವಹಿಸುತ್ತಾರೆ ಎನ್ನುವುದರ ಬಗ್ಗೆ.

(ನಿಮ್ಮ ಹೆಸರು)

ದಿನಾಂಕ:

ರಾಜೀನಾಮೆ ಪತ್ರ 

(ನಿಮ್ಮ ವ್ಯವಸ್ಥಾಪಕರ ಹೆಸರು/ ಮಾನವ ಸಂಪನ್ಮೂಲ ಪ್ರತಿನಿಧಿಯ ಹೆಸರು),

ನಾನು ಅಧಿಕೃತವಾಗಿ (ಪ್ರಸ್ತುತ ಕಂಪನಿ) ಯ (ಪ್ರಸ್ತುತ ಉದ್ಯೋಗದ ಶೀರ್ಷಿಕೆ) ಹುದ್ದೆಯಿಂದ, (ಭವಿಷ್ಯದ ದಿನಾಂಕ ಅಥವಾ “ತಕ್ಷಣ”) ಇಂದ ರಾಜೀನಾಮೆ ನೀಡುತ್ತಿದ್ದೇನೆ.  

೧. ರಾಜೀನಾಮೆ ನಿಯಮಗಳು:

ಈ ಕಂಪನಿಯ (ಶೀರ್ಷಿಕೆ) ಆಗಿ ಕೆಲಸ ನಿರ್ವಹಿಸಿರುವುದು ನನಗೆ ಬಹಳ  ಸಂತೋಷವಾಗಿದೆ. ಮತ್ತು ಈ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಈ ಹುದ್ದೆಯಲ್ಲಿ ನನ್ನ ಜೊತೆ ಕೆಲಸ ಮಾಡಿರುವ ತಂಡಗಳ ಬಗ್ಗೆ ಮತ್ತು ವ್ಯಕ್ತಿಗಳ ಬಗ್ಗೆ ನನಗೆ ಅತ್ಯಂತ ಗೌರವವಿದೆ, ಮತ್ತು ಇಲ್ಲಿರುವ ಎಲ್ಲರನ್ನು ನನ್ನ ಸಹೋದ್ಯೋಗಿಗಳು ಎಂದು ಕರೆಯಲು ನನಗೆ ಹೆಮ್ಮೆಯಾಗುತ್ತದೆ. (ದಿನಾಂಕ) ಇಂದ ನಾನು (ಹೊಸ ಉದ್ಯೋಗದಾತ/ಹೊಸ ಕಂಪನಿ) ಯಲ್ಲಿ (ನಿರ್ದಿಷ್ಟ ಅಲ್ಪಾವಧಿ ಗುರಿಗಳು) ಗಾಗಿ (ಹೊಸ ಉದ್ಯೋಗ ಶೀರ್ಷಿಕೆ) ಆಗಿ ಉದ್ಯೋಗಕ್ಕೆ ಸೇರುತ್ತಿದ್ದೇನೆ. ಅದರೊಂದಿಗೆ, ಈ ಪ್ರಸ್ತುತ ಕಂಪನಿಯಲ್ಲಿ ನಾನು ಪಡೆದಿರುವ ಅನುಭವಗಳನ್ನು ನನ್ನ ಹೊಸ ಉದ್ಯೋಗಕ್ಕೆ ಅನ್ವಯಿಸಲು ನಾನು ಉತ್ಸುಕನಾಗಿದ್ದೇನೆ.

೨. ಪರಿವರ್ತನೆಯ ನಿಯಮಗಳು:

ನನ್ನ ಸ್ಥಾನ (ಪ್ರಸ್ತುತ ಉದ್ಯೋಗ ಶೀರ್ಷಿಕೆ) ವನ್ನು ಅಲಂಕರಿಸಲು, ನಾನು ವೈಯಕ್ತಿಕವಾಗಿ (ನಿಮ್ಮ ಸ್ಥಾನವನ್ನು ಅಲಂಕರಿಸಲು ಸೂಕ್ತವಾದ ಸಹೋದ್ಯೋಗಿ ಹೆಸರು) ಆಯ್ಕೆ ಮಾಡುತ್ತೇನೆ. ಅವನ/ಅವಳೊಂದಿಗೆ ಕೆಲಸ ಮಾಡುವುದು, ಅವನು/ಅವಳು ನಮ್ಮ (ಇಲಾಖೆ, ವ್ಯವಹಾರ ಘಟಕ, ಬಿಸಿನೆಸ್ ಅಥವಾ ಸಂಸ್ಥೆಯ ಹೆಸರು) ಯ ಬೆಳವಣಿಗೆಗೆ ನಿರ್ಣಾಯಕವಾಗಿದ್ದಾರೆ, ಮತ್ತು ಅವನು/ಅವಳು ನನ್ನ ಸ್ಥಾನದಲ್ಲಿ (ಕಂಪನಿಯ ಹೆಸರು) ಅಭಿವೃದ್ಧಿ ಹೊಂದಲು ನಾನು ಎಲ್ಲಾ ಬಗೆಯ ಸಹಾಯ ಮಾಡುತ್ತಾರೆ ಎನ್ನುವುದು ನನ್ನ ನಂಬಿಕೆ. ಈ ವ್ಯಕ್ತಿಗೆ ಈ ವಿಷಯದ ಕುರಿತಾಗಿ ಸೂಚನೆ ನೀಡಲಾಗಿಲ್ಲ. ನನ್ನ ನಿರ್ಗಮನದ ಸಮಯದಲ್ಲಿ ನೀವು ಅವನನ್ನು/ಅವಳನ್ನು ಈ ಸ್ಥಾನಕ್ಕೆ ನೇಮಿಸಿಕೊಳ್ಳವ ನಿರ್ಧಾರವನ್ನು ನಿಮ್ಮ ವಿವೇಚನೆಗೆ ಬಿಡುತ್ತೇನೆ. ನೀವು ಇದರ ಕುರಿತಾದ ನಿರ್ಧಾರ ಮಾಡುವ ಸಮಯದಲ್ಲಿ, ನಾನು ನನ್ನ ತಂಡದ ಉಳಿದವರಿಗೆ (ಪ್ರಾಜೆಕ್ಟ್ ೦೧), (ಪ್ರಾಜೆಕ್ಟ್ ೦೨), ಮತ್ತು (ಪ್ರಾಜೆಕ್ಟ್ ೦೩) ಅನ್ನು ನಿಯೋಜಿಸುವ ಪ್ರಕ್ರಿಯೆಯಲ್ಲಿ ಇದ್ದೇನೆ. ಮತ್ತು ನನ್ನ ಅಧಿಕೃತ ನಿರ್ಗಮನದ ಮೊದಲು (ಪ್ರಾಜೆಕ್ಟ್ ೦೪) ಅನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ. ಅಗತ್ಯವಿದ್ದರೆ ಈ ಸ್ಥಿತ್ಯಂತರವನ್ನು ವೈಯಕ್ತಿಕವಾಗಿ ಚರ್ಚಿಸಲು ನಾನು ತಯಾರಾಗಿದ್ದೇನೆ.

ಈ ಎಲ್ಲ ವಿಷಯಗಳನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. 

ಇಂತಿ, 

(ನಿಮ್ಮ ಹೆಸರು) 

ಔದ್ಯೋಗಿಕವಾಗಿ ನಿಮ್ಮ ವೃತ್ತಿ ಏನೇ ಇರಲಿ, ಮತ್ತು ನಿಮ್ಮ ಕಂಪನಿ ಯಲ್ಲಿ ನಿಮ್ಮ ಪಾತ್ರ ಏನೇ ಇರಲಿ, ನೀವು ಈ ಹುದ್ದೆಯನ್ನು ಏಕೆ ತೊರೆಯುತ್ತಿದ್ದೀರಿ ಮತ್ತು ನೀವು ಯಾರಿಗೆ ಈ ವಿಷಯವನ್ನು ತಿಳಿಸುತ್ತಿದ್ದೀರಿ ಎನ್ನುವುದನ್ನು ಅರಿತು, ನಿಮ್ಮ ರಾಜೀನಾಮೆ ಪತ್ರವನ್ನು ಸಭ್ಯವಾಗಿ ಬರೆಯಿರಿ. ನೀವು ಕಂಪನಿ ತೊರೆಯುವ ಸಮಯದಲ್ಲಿ, ನಿಮ್ಮ ರಾಜೀನಾಮೆ ಪತ್ರದಲ್ಲಿ ನಿಮ್ಮ ಉದ್ಯೋಗದಾತರಿಗೆ ಕೃತಜ್ಞತೆ ಮತ್ತು ಬೆಂಬಲ ನೀಡುವುದು ಅತ್ಯಗತ್ಯ. ಈ ರೀತಿಯ ವೃತ್ತಿಪರ ರಾಜೀನಾಮೆ ಪತ್ರ ನಿಮ್ಮ ಉದ್ಯೋಗದಾತರೊಂದಿಗೆ ಒಳ್ಳೆಯ ಸಂಬಂಧ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.