ಶೈಕ್ಷಣಿಕ ಸಲಹೆಗಾರ ಹುದ್ದೆಯ ಉದ್ಯೋಗ ವಿವರಣೆ, ಸಂದರ್ಶನದ ಪ್ರಶ್ನೆಗಳು ಮತ್ತು ಸಲಹೆಗಳು

ಶಿಕ್ಷಣ ಸಲಹೆಗಾರರು ವಿವಿಧ ವೃತ್ತಿ ಮತ್ತು ವೃತ್ತಿ ಅವಕಾಶಗಳ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿರುವ ವೃತ್ತಿಪರರು. ಶೈಕ್ಷಣಿಕ ಸಲಹೆಗಾರರ ಪ್ರಮುಖ ವೃತ್ತಿ ಜವಾಬ್ದಾರಿಗಳೆಂದರೆ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಗುರುತಿಸುವ ಮತ್ತು ಒದಗಿಸುವ ಮೂಲಕ ಶಾಲೆಯ ಪಠ್ಯಕ್ರಮವನ್ನು ನಿರ್ವಹಿಸುವುದು, ಶಾಲೆಯ ಅಗತ್ಯಗಳನ್ನು ಸುಧಾರಿಸುವುದು, ಶಾಲಾ ಸಭೆಗಳನ್ನು ನಡೆಸುವುದು ಮತ್ತು ಶಿಕ್ಷಕರ  ಕಾರ್ಯಕ್ಷಮತೆಯನ್ನು ಮೇಲ್ವಿಚಾರಿಸುವುದು.. ಶಿಕ್ಷಣ ಸಲಹೆಗಾರರು ಸಾಮಾನ್ಯವಾಗಿ ವಿದ್ಯಾರ್ಥಿಗಳ ವೃತ್ತಿಜೀವನದ ಆಯ್ಕೆ ಸಂಬಂಧಿತ ಪ್ರಶ್ನೆಗಳನ್ನು ಉತ್ತರಿಸುವುದು ಮತ್ತು ಪಠ್ಯಕ್ರಮಗಳ ಬಗ್ಗೆ ಗಮನ ಹರಿಸುವುದನ್ನು ಸಹ ನಿಭಾಯಿಸುತ್ತಾರೆ. ಅದರೊಂದಿಗೆ, ಶೈಕ್ಷಣಿಕ ಸಲಹೆಗಾರರು ಅನೇಕ ಬಾರಿ ಸೂಚನಾ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಾರೆ, ಬೋಧಕರಿಗೆ ಮಾರ್ಗಸೂಚಿಗಳನ್ನು ಒದಗಿಸುತ್ತಾರೆ, ಪ್ರಸ್ತುತ ತಂತ್ರಜ್ಞಾನವನ್ನು ಸಂಯೋಜಿಸುತ್ತಾರೆ, ಶೈಕ್ಷಣಿಕ ವಿಷಯವನ್ನು ಸಂಘಟಿಸುತ್ತಾರೆ.

ಶೈಕ್ಷಣಿಕ ಸಲಹೆಗಾರರ ಶೈಕ್ಷಣಿಕ ಅರ್ಹತೆ 

ಶೈಕ್ಷಣಿಕ ಸಲಹೆಗಾರರು ಸುಶಿಕ್ಷಿತರಾಗಿರಬೇಕು. ಶೈಕ್ಷಣಿಕ ತಂತ್ರಜ್ಞಾನದಲ್ಲಿ ಕನಿಷ್ಠ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಮತ್ತು ಅವರು ಸಂಸ್ಥೆಯ ನಿರ್ವಹಣೆಯ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿರಬೇಕು. ಅದರೊಂದಿಗೆ, ಪದವಿಯನ್ನು ಸಹ ಹೊಂದಿರಬೇಕು ಎನ್ನುವ ನಿರೀಕ್ಷೆ ಇರುವುದು ಸಹಜ. ಇಷ್ಟು ಶೈಕ್ಷಣಿಕ ಅರ್ಹತೆಯೊಂದಿಗೆ, ಅಭ್ಯರ್ಥಿಯು ಯಾವುದೇ ರೀತಿಯ ಶೈಕ್ಷಣಿಕ  ಕ್ಷೇತ್ರದಲ್ಲಿ ಅಂದರೆ ತರಬೇತಿಗಾರರಾಗಿ, ಗ್ರಂಥಪಾಲಕರಾಗಿ, ಸೂಚನಾ ವಿನ್ಯಾಸಕರಾಗಿ, ಇತ್ಯಾದಿ ವೃತ್ತಿಗಳಲ್ಲಿ ತಮ್ಮ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಬಹುದು. ಶಿಕ್ಷಣ ಸಲಹೆಗಾರರನ್ನು ನೇಮಕ ಮಾಡಿಕೊಳ್ಳುವ ಶಾಲೆಗಳು ಸಹ ಶಾಲಾ ನಿರ್ವಹಣೆಯ ಅನುಭವವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತವೆ.

ಶೈಕ್ಷಣಿಕ ಸಲಹೆಗಾರರ ಪ್ರಮುಖ ಕೌಶಲ್ಯಗಳು 

ಶೈಕ್ಷಣಿಕ ಸಲಹೆಗಾರರ ಪ್ರಮುಖ ಮತ್ತು ಅಗತ್ಯ ಕೌಶಲ್ಯಗಳಲ್ಲಿ ಒಂದು – ಪರಿಣಾಮಕಾರಿ ಸಂವಹನ ಕೌಶಲ್ಯ. ಅದರೊಂದಿಗೆ, ಅವರು ಈ ಕೆಳಗಿನ ಕೌಶಲ್ಯಗಳನ್ನು ಸಹ ಹೊಂದಿರಬೇಕು:

 • ಅವಲಂಬಿಸಲು  ಅರ್ಹತೆ ಮತ್ತು ಸಹಕಾರಿ ವರ್ತನೆ 
 • ತಿಳುವಳಿಕೆ ಮತ್ತು ಸಹಾಯಕ ಸ್ವಭಾವ
 • ಅತ್ಯುತ್ತಮ ನಾಯಕತ್ವದ ಗುಣಗಳು
 • ಬದಲಾವಣೆಗಳಿಗೆ ಹೊಂದಿಕೂಳ್ಳುವ ಸಾಮರ್ಥ್ಯ
 • ಅತ್ಯುತ್ತಮ ವಿಶ್ಲೇಷಣಾತ್ಮಕ ಚಿಂತನೆ ಮತ್ತು ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ತರ್ಕವನ್ನು ಬಳಸುವ ಸಾಮರ್ಥ್ಯ
 • ನಿರ್ವಹಣೆ ಮತ್ತು ಆಡಳಿತದ ಬಗ್ಗೆ ಜ್ಞಾನ··
 • ತಜ್ಞರ ಸಮಸ್ಯೆ ಪರಿಹಾರ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ
 • ಪರಿಣಾಮಕಾರಿ ಸಮಯ ನಿರ್ವಹಣೆಯೊಂದಿಗೆ ನಿರ್ದಿಷ್ಟ ಸಮಯದೊಳಗೆ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ
 • ಸರ್ಕಾರವು ನಿರ್ಧರಿಸಿದ ಕಾನೂನು ಕರ್ತವ್ಯಗಳು ಮತ್ತು ಕಾನೂನುಗಳ ಬಗ್ಗೆ ಜ್ಞಾನ ಹೊಂದಿರಬೇಕು

ಶೈಕ್ಷಣಿಕ ಸಲಹೆಗಾರರ ವೃತ್ತಿ ಜವಾಬ್ದಾರಿಗಳು 

ಶಿಕ್ಷಣ ಸಲಹೆಗಾರರು ಸಾಮಾನ್ಯವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಎಲ್ಲಾ ಅಗತ್ಯ ಅವಶ್ಯಕತೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅದರೊಂದಿಗೆ, ಶೈಕ್ಷಣಿಕ ಸಲಹೆಗಾರರು ಈ ಕೆಳಗಿನ ಪ್ರಮುಖ ಉದ್ಯೋಗ ಜವಾಬ್ದಾರಿಗಳನ್ನು ಸಹ ನಿರ್ವಹಿಸಬೇಕು:

 • ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಬೌದ್ಧಿಕ ಕಲ್ಯಾಣವನ್ನು ಉತ್ತೇಜಿಸಲು ವಿವಿಧ ಸಮಿತಿಗಳು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸುವುದು.
 • ಶೈಕ್ಷಣಿಕ ಸಮಿತಿಗಳ ಸದಸ್ಯರೊಂದಿಗೆ ವಿವಿಧ ಸಮಸ್ಯೆಗಳನ್ನು ಚರ್ಚಿಸಿ, ಮೂಲಭೂತ ಸಮಸ್ಯೆಗಳು ಮತ್ತು ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದು.
 • ಸರಿಯಾದ ಸಂಶೋಧನೆಯನ್ನು ಕೈಗೊಂಡು, ಪಠ್ಯಕ್ರಮ ಮತ್ತು ಶಾಲಾ ಸಾಮಗ್ರಿಗಳ ಕುರಿತು ಶಿಫಾರಸುಗಳನ್ನು ಒದಗಿಸುವುದು.
 • ಪಠ್ಯಕ್ರಮದ ಅಭಿವೃದ್ಧಿ, ವಸ್ತು ಮತ್ತು ಸಲಕರಣೆಗಳ ಬಳಕೆಯ ಬಗ್ಗೆ ಆಡಳಿತ ಮತ್ತು ಬೋಧನಾ ಸಿಬ್ಬಂದಿಗೆ ಸಲಹೆ ನೀಡುವುದು.
 • ಹೊಸ ತರಗತಿಯ ಕಾರ್ಯವಿಧಾನಗಳು ಮತ್ತು ಬೋಧನಾ ಕಾರ್ಯತಂತ್ರಗಳನ್ನು, ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಸಂಘಟಿಸುವುದು ಮತ್ತು ಆಯೋಜಿಸುವುದು.
 • ಪಠ್ಯಕ್ರಮದ ಪರಿಣಾಮಕಾರಿತ್ವವನ್ನು ಅಳೆಯಲು ಪರೀಕ್ಷೆಗಳನ್ನು ಕೈಗೊಳ್ಳುವುದು ಮತ್ತು ಕಾರ್ಯಕ್ರಮದ ಉದ್ದೇಶಗಳನ್ನು ಪೂರೈಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು. 
 • ಬೋಧನಾ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು, ಅಗತ್ಯವಿದ್ದರೆ ಕೆಲವು ಬದಲಾವಣೆಗಳನ್ನು ಶಿಫಾರಸು ಮಾಡುವುದು.
 • ಬೋಧಕರು ಮತ್ತು ಶಿಕ್ಷಕರು ಬಳಸಬೇಕಾದ ಸೂಚನಾ ವಸ್ತುಗಳನ್ನು ಅಭಿವೃದ್ಧಿಪಡಿಸುವುದು.

ಶೈಕ್ಷಣಿಕ ಸಲಹೆಗಾರರ ಸಂಬಳ ಸರಾಸರಿ ವಾರ್ಷಿಕವಾಗಿ ಏಳು ಲಕ್ಷ ಪ್ರತಿ ವರ್ಷ. ಶೈಕ್ಷಣಿಕ ಸಲಹೆಗಾರರ ಸಂಬಳ ಅಭ್ಯರ್ಥಿಯ ಅರ್ಹತೆ ಮತ್ತು ಅನುಭವದ ಪ್ರಕಾರ ನಿರ್ಧರಿಸಲಾಗುತ್ತದೆ. ಈ ವೇತನವು ಉದ್ಯೋಗದಾತ ಮತ್ತು ಈ ಉದ್ಯೋಗ ಹುದ್ದೆಯ ಕರ್ತವ್ಯಗಳ ಮೇಲೆ ಸಹ ಅವಲಂಬಿತವಾಗಿರುತ್ತದೆ.

ಶೈಕ್ಷಣಿಕ ಸಲಹೆಗಾರರ ಸಂದರ್ಶನ ಪ್ರಶ್ನೆಗಳು

ಶೈಕ್ಷಣಿಕ ಸಲಹೆಗಾರರ ಸಂದರ್ಶನವು ಸಾಮಾನ್ಯವಾಗಿ ನಿಮ್ಮ ಹಿನ್ನೆಲೆ, ಕೌಶಲ್ಯಗಳನ್ನು ಮತ್ತು ಉದ್ಯೋಗದ ಬಗ್ಗೆ ನಿಮಗೆ ಇರುವ ಆಸಕ್ತಿ ಮತ್ತು ಅರಿವನ್ನು ತಿಳಿದುಕೊಳ್ಳುವ ಕಡೆಗೆ ಕೇಂದ್ರೀಕರಿಸಿರುತ್ತದೆ. ಈ ಕೆಳಗೆ ನೀಡಿರುವ ಪ್ರಶ್ನೆಯ ಮೂಲಕ ನಿಮ್ಮ ನಾಯಕತ್ವದ ಶೈಲಿ ಮತ್ತು ಸಮಾಲೋಚನೆಯಲ್ಲಿ ನಿಮಗಿರುವ ಆಸಕ್ತಿಯನ್ನು ತಿಳಿದುಕೊಳ್ಳಲು ನಿಮ್ಮ ಉದ್ಯೋಗದಾತರಿಗೆ ಸಹಾಯ ಮಾಡುತ್ತದೆ.

೧. ಶೈಕ್ಷಣಿಕ ಸಲಹೆಗಾರ ಹುದ್ದೆ ನಿಮಗೆ ಏಕೆ ಬೇಕು?

ಸಹಜವಾಗಿಯೇ, ಕಂಪನಿಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಈ ಹುದ್ದೆಯ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿರುವವರನ್ನು ಆಯ್ಕೆ ಮಾಡಲು ಇಚ್ಛಿಸುತ್ತಾರೆ. ಅದೇ ಕಾರಣದಿಂದಾಗಿ, ಈ ಪ್ರಶ್ನೆಗೆ ನಿಮ್ಮ ಉತ್ತರ ಸೂಕ್ತವಾಗಿರಬೇಕು. 

ಈ ಪ್ರಶ್ನೆಗೆ ಉತ್ತರಿಸುವಾಗ ಮೊದಲು ನಿಮ್ಮನ್ನು ನೀವು ಪರಿಶೀಲಿಸಿಕೊಳ್ಳಿ. ಈ ಹುದ್ದೆಗೆ ಸೂಕ್ತವಾಗಿರುವ ನಿಮ್ಮಲ್ಲಿರುವ ವೃತ್ತಿ ಕೌಶಲ್ಯಗಳು ಗುರುತಿಸಿಕೊಳ್ಳಿ ಮತ್ತು ಅದನ್ನು ನಿಮ್ಮ ಉತ್ತರದಲ್ಲಿ ನಿಮ್ಮಸಂದರ್ಶಕರಿಗೆ ಹೆಮ್ಮೆಯಿಂದ ತಿಳಿಸಿ (ಉದಾಹರಣೆಗೆ: ನಾನು ಕಸ್ಟಮರ್ ಸಪೋರ್ಟ್ ಇಷ್ಟ ಪಡುತ್ತೇನೆ ಏಕೆಂದರೆ ಈ ಹುದ್ದೆಯಲ್ಲಿ ನಾನು ಜನರೊಂದಿಗೆ ಮಾತನಾಡಿ, ಅವರ ಸಮಸ್ಯೆಗಳನ್ನು ಪರಿಹರಿಸಬಹುದು. ಈ ಜವಾಬ್ದಾರಿ ನನಗೆ ವೃತ್ತಿ ಸಂಬಂಧಿತ ಸಂತೃಪ್ತಿ ನೀಡುತ್ತದೆ). ಅದರ ನಂತರ ನೀವು ಈ ಕಂಪನಿಯನ್ನು ಏಕೆ ಇಷ್ಟ ಪಡುತ್ತೀರಿ ಎನ್ನುವುದನ್ನು ನಿಮ್ಮ ಉತ್ತರದಲ್ಲಿ ಹೇಳಿ (ಉದಾಹರೆಣೆಗೆ: ನನಗೆ ಶಿಕ್ಷಣ ಕ್ಷೇತ್ರ ಎಂದರೆ ಇಷ್ಟ ಮತ್ತು ಈ ಕ್ಷೇತ್ರದಲ್ಲಿ ನಿಮ್ಮ ಸಂಸ್ಥೆ ಸಾಧನೆ ಮಾಡುತ್ತಿದೆ. ಇದೆ ಕಾರಣದಿಂದ ನಾನು ಸಹ ನಿಮ್ಮ ಸಾಧನೆಗಳಲ್ಲಿ ಪಾಲ್ಗೊಳ್ಳಲು ಬಯಸುತ್ತೇನೆ).

೨. ಶೈಕ್ಷಣಿಕ ಸಲಹೆಗಾರ ಉದ್ಯೋಗದಲ್ಲಿ ನೀವು ಯಾವ ಬಗೆಯ ಸವಾಲುಗಳನ್ನು ನಿರೀಕ್ಷಿಸುತ್ತಿದ್ದೀರಿ?

ನೀವು ನಿಮ್ಮ ಈ ಮುಂದಿನ ಉದ್ಯೋಗದಲ್ಲಿ ಏನನ್ನು ಬಯಸುತ್ತಿದ್ದೀರಿ ಅಥವಾ ಈ ಉದ್ಯೋಗ ನಿಮಗೆ ಸೂಕ್ತವೇ ಎಂದು ನಿರ್ಧರಿಸಲು ನಿಮ್ಮ ಉದ್ಯೋಗದಾತರು ಕೇಳುವ ಈ ಪ್ರಶ್ನೆ ಸಹಾಯ ಮಾಡುತ್ತದೆ. ಈ ಪ್ರಶ್ನೆಗೆ ಉತ್ತರಿಸಲು ಸೂಕ್ತ ಮಾರ್ಗ ಎಂದರೆ ನೀವು ನಿಮ್ಮ ಕೌಶಲ್ಯಗಳನ್ನು ಮತ್ತು ನಿಮ್ಮ ಅನುಭವವನ್ನು ಈ ವೃತ್ತಿಯಲ್ಲಿ ಹೇಗೆ ಅಳವಡಿಸಬಹುದು  ಮತ್ತು ಅದರಿಂದ ಕಂಪನಿಗೆ ಹೇಗೆ ಲಾಭವಾಗುತ್ತದೆ ಎನ್ನುವುದನ್ನು ತಿಳಿಸುವುದು. ಅದರೊಂದಿಗೆ, ನೀವು ಸಾಮಾನ್ಯವಾಗಿ ವೃತ್ತಿ ಕ್ಷೇತ್ರದ ಸವಾಲುಗಳಿಂದ ನೀವು ಹೇಗೆ ಪ್ರೇರೇಪಣೆಗೊಳ್ಳುತ್ತೀರಿ, ಸವಾಲುಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯದ ಬಗ್ಗೆ, ಈ ವೃತ್ತಿಯನ್ನು ನಿರ್ವಹಿಸಲು ಅಗತ್ಯವಿರುವ ಕೌಶಲ್ಯಗಳ ಬಗ್ಗೆ ನೀವು ಮಾತನಾಡಬೇಕು. ಇದು ನಿಮ್ಮ ಉದ್ಯೋಗದಾತರಿಗೆ ಒಳ್ಳೆಯ ಅನಿಸಿಕೆ ಮೂಡಿಸುತ್ತದೆ.

೩. ಶೈಕ್ಷಣಿಕ ಸಲಹೆಗಾರರ ಸಾಮಾನ್ಯ ದಿನದ ಬಗ್ಗೆ ವಿಶ್ಲೇಷಿಸಿ?

ಈ ಪ್ರಶ್ನೆಯ ಮೂಲಕ ನಿಮ್ಮ ಸಂದರ್ಶಕರು ತಿಳಿದುಕೊಳ್ಳಲು ಬಯಸುವುದೇನೆಂದರೆ ನೀವು ನಿಮ್ಮ ಉದ್ಯೋಗದ ದಿನಚರಿಯಲ್ಲಿ ಏನು ಮಾಡುತ್ತೀರಿ ಎಂದು ತಿಳಿದುಕೊಳ್ಳಲು ಮತ್ತು ನಿಮಗೆ ಉದ್ಯೋಗದ ಬಗ್ಗೆ ಸಂಪೂರ್ಣ ಅರಿವು ಇದೆಯೇ ಎನ್ನುವುದನ್ನು ಅರಿತುಕೊಳ್ಳಲು. 

ಈ ಪ್ರಶ್ನೆಗೆ ನೀವು ಉತ್ತರಿಸುವ ಮುನ್ನ, ನೀವು ಯಾವ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದೀರಿ ಮತ್ತು ಈ ಉದ್ಯೋಗ ನಿಮ್ಮ ಹಳೆಯ ಉದ್ಯೋಗಕ್ಕೆ ಹೇಗೆ ಸಂಬಂಧ ಎನ್ನುವುದನ್ನು ತಿಳಿದುಕೊಳ್ಳಿ. ನಿಮ್ಮ ಕಳೆಯ ಉದ್ಯೋಗವನ್ನು ಈ ಉದ್ಯೋಗಕ್ಕೆ ಎಷ್ಟು ಸುಲಭವಾಗಿ ನೀವು ಸಂಬಂಧಿಸಿ ವಿವರಿಸುತ್ತಿರೋ, ಅಷ್ಟೇ ನೀವು ಈ ಪ್ರಶ್ನೆಯನ್ನು ಉತ್ತರಿಸುವಲ್ಲಿ ಯಶಸ್ಸು ಗಳಿಸುತ್ತೀರಿ ಎಂದು ಅರ್ಥ. ನಿಮ್ಮ ಉತ್ತರ ವೃತ್ತಿ ಕರ್ತವ್ಯಗಳ ಕುರಿತಾಗಿ ಇರಲಿ. ನಿಮ್ಮ ಸಂದರ್ಶಕರಿಗೆ ನೀವು  ಎಷ್ಟು ಸಂಘಟಿತರು ಮತ್ತು ದಕ್ಷರು ಎನ್ನುವುದನ್ನು ತಿಳಿಸಿರಿ.

೪. ನಿಮ್ಮನ್ನು ನಾವು ಏಕೆ ಶೈಕ್ಷಣಿಕ ಸಲಹೆಗಾರರ ಹುದ್ದೆಗೆ ಆಯ್ದುಕೊಳ್ಳಬೇಕು?

ಈ ಪ್ರಶ್ನೆಗೆ ಉತ್ತರಿಸುವಾಗ ನೀವು ನಿಮ್ಮ ಕೌಶಲ್ಯಗಳನ್ನು, ನಿಮ್ಮ ಅನುಭವವನ್ನು, ನಿಮ್ಮ ವಿದ್ಯಾರ್ಹತೆಯನ್ನು ಮತ್ತು ನಿಮ್ಮ ವ್ಯಕ್ತಿತ್ವವನ್ನು ಈ ಉದ್ಯೋಗಕ್ಕೆ ಹೇಗೆ ಸಂಬಂಧಿಸುತ್ತೀರಿ ಎನ್ನುವುದನ್ನು ಆಲೋಚಿಸಿ. ಇದೇ ಕಾರಣಕ್ಕಾಗಿ ನೀವು ನೀವು ಅರ್ಜಿ ಸಲ್ಲಿಸಿರುವ ಈ ಉದ್ಯೋಗದ ಎಲ್ಲಾ ಕರ್ತವ್ಯಗಳನ್ನು, ಕಂಪನಿಯ ಸಂಸ್ಕೃತಿಯನ್ನು ಮತ್ತು ಇತರ ವಿವರಣೆಗಳನ್ನು ತಿಳಿದುಕೊಂಡಿರಬೇಕು. ಅದರೊಂದಿಗೆ ನಿಮ್ಮ ಉತ್ತರದಲ್ಲಿ ನೀವು ಸಾಧಿಸಿರುವ ಕೆಲವು ಕೆಲಸಗಳ ಉದಾಹರಣೆಗಳನ್ನೂ ನೀಡುವುದು ಸೂಕ್ತ.ಉದಾಹರೆಣೆಗೆ: ನಿಮ್ಮ ಸಹದ್ಯೋಗಿಗಳೊಂದಿಗಿನ ಒಡನಾಟದ ಬಗ್ಗೆ.

ನಿಮ್ಮ ಕೌಶಲ್ಯಗಳು, ಅನುಭವ ಅಥವಾ ವಿದ್ಯಾರ್ಹತೆ ಇತರ ಅಭ್ಯರ್ಥಿಗಳಿಗಿಂತ ನಿಮ್ಮನ್ನು ವಿಭಿನ್ನರಾಗಿಸದಿದ್ದರೆ, ಏನು ಮಾಡಬೇಕು? ಆಗ ನಿಮ್ಮ ಆಸಕ್ತಿ ಕಾರ್ಯರೂಪಕ್ಕೆ ಬರುತ್ತದೆ. ಸಾಮಾನ್ಯವಾಗಿ, ವರ್ಚಸ್ವಿಯಾಗಿರುವ ಅಥವಾ ಹೆಚ್ಚು ಆಸಕ್ತಿ ಮತ್ತು ಒಲವಿನಿಂದ ಮಾತನಾಡುವ ಅಭ್ಯರ್ಥಿ ಎಡೆಗೆ ಸಂದರ್ಶಕರು ವಾಲುತ್ತಾರೆ. ಹಾಗಾಗಿ, ನೀವು ನಿಮ್ಮ ಬಗ್ಗೆ ಮತ್ತು ನಿಮ್ಮ ಕೌಶಲ್ಯಗಳ ಬಗ್ಗೆ ಹೇಳುವಾಗ ಎಷ್ಟು ಒಲವಿನಿಂದ ಮಾತನಾಡುವಿರೋ,ಅಷ್ಟು ನಿಮಗೆ ಒಳಿತು.

೫. ನಮ್ಮ ಕಂಪನಿ ಬಗ್ಗೆ ನಿಮಗೆ ಏನು ತಿಳಿದಿದೆ?

ಯಾವುದೇ ಕಂಪನಿಯಲ್ಲಿ ಸಂದರ್ಶನಕ್ಕೆ ಹೋಗುವ ಮೊದಲು ಈ ಕೆಳಗೆ ನೀಡಿರುವ ಸುಲಭ ಸಂಶೋಧನಾ ಟಿಪ್ಪಣಿಗಗಳನ್ನು ಉಪಯೋಗಿಸಿ

 • ಕಂಪನಿ  ವೆಬ್ಸೈಟ್ ನೋಡಿ. ಅದರಲ್ಲಿನ  “ಅಬೌಟ್ ಅಸ್” ಮತ್ತು “ಕರಿಯರ್” ವಿಭಾಗವನ್ನು ಓದಿ ತಿಳಿದುಕೊಳ್ಳಿ.
 • ಕಂಪನಿಯ ಲಿಂಕ್ಡ್ಇನ್ ಪೇಜ್ ಅನ್ನು ಸಹ ಓದಿ, ಕಂಪನಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
 • ಗೂಗಲ್ ನಲ್ಲಿ ಕಂಪನಿಯ ಪ್ರೆಸ್ ರಿಲೀಸ್ ಬಗ್ಗೆ ಓದಿ ತಿಳಿದುಕೊಳ್ಳಿ. ಕಂಪನಿ ಸಂಬಂಧಿತ ಇತ್ತೀಚಿನ ಮಾಹಿತಿಯ ಬಗ್ಗೆ ನಿಮಗೆ ಅರಿವಿರಲಿ.

ಆದರೆ ನೀವು ಕಂಪನಿಯ ಬಗ್ಗೆ ಸಂಶೋಧನೆ ಮಾಡಿದ್ದೀರಿ ಎನ್ನುವುದರ ಅರ್ಥ ನೀವು ಈ ಎಲ್ಲಾ ವಿಷಯಗಳನ್ನು ಸಂಶೋಧಕರ ಮುಂದೆ ಹೇಳಬೇಕು ಅಂದಲ್ಲ. ಆದರೆ ಕನಿಷ್ಠ ಈ ಮಾಹಿತಿಯನ್ನು ನಿಮ್ಮ ಉತ್ತರದಲ್ಲಿ ಹೇಳಿ:

 • ಕಂಪನಿಯ ಸರಕು ಅಥವಾ  ಸೇವೆಗಳಾವುವು?
 • ಈ ಕಂಪನಿ ಮಾರುಕಟ್ಟೆಯಲ್ಲಿ ಎಷ್ಟು ವರ್ಷಗಳಿಂದ  ಇದೆ?
 • ಕಂಪನಿಯ  ಸಂಸ್ಕೃತಿ  ಏನು? ಅಥವಾ ಕಂಪನಿಯ  ಮಿಷನ್ ಏನು? ಮತ್ತು ಕಂಪನಿಯ  ಮೌಲ್ಯಗಳು ನಿಮ್ಮ ವ್ಯಕ್ತಿತ್ವಕ್ಕೆ ಹೇಗೆ ಮೆರುಗು ನೀಡುತ್ತದೆ?

ನೀವು ಸಂದರ್ಶನದಲ್ಲಿ ಎಲ್ಲಾ ಪ್ರಶ್ನೆಗಳಿಗೆ  ಸೂಕ್ತ ಉತ್ತರ ನೀಡಿ, ಶೈಕ್ಷಣಿಕ ಸಲಹೆಗಾರ ಹುದ್ದೆಗೆ ಆಯ್ಕೆಯಾದರೆ, ಅಭಿನಂದನೆಗಳು! ಆದರೆ, ನಿಮ್ಮ ಜವಾಬ್ದಾರಿ ಅಲ್ಲಿಗೆ ಮುಕ್ತಾಯವಾಗುವುದಿಲ್ಲ. ನೀವು ನಿಮ್ಮ ಕಾರ್ಯಕ್ಷಮತೆಯನ್ನು ಸಹ ನಿಮ್ಮ ಉದ್ಯೋಗದಾತರಿಗೆ ತೋರಿಸಬೇಕು. ಅದಕ್ಕೆ ಸಲಹೆಗಳು ಇಲ್ಲಿವೆ.

ಶೈಕ್ಷಣಿಕ  ಸಲಹೆಗಾರರಿಗೆ ಸಲಹೆಗಳು: 

ಈ ಕೆಳಗೆ ನೀಡಿರುವ ಸಲಹೆಗಳ ಸಹಾಯದಿಂದ ನೀವು ಕಂಪನಿಗೆ ಮತ್ತು ನಿಮ್ಮ ಹುದ್ದೆಗೆ ನೀವು ಸೂಕ್ತ ಅಭ್ಯರ್ಥಿ ಎಂದು ತೋರಿಸಿಕೊಡಬಹುದು.

 • ನಿಮ್ಮ ಭವಿಷ್ಯದ ಆಕಾಂಕ್ಷೆಗಳನ್ನುನಿರ್ಧರಿಸಿ: ನೀವು ನಿಮ್ಮ ಭವಿಷ್ಯದಲ್ಲಿ ಏನು ಮಾಡಲು ಬಯಸುತ್ತೀರಿ ಎನ್ನುವುದನ್ನು ನಿಶ್ಚಯಿಸಿ. ನೀವು ನಿಮ್ಮ ಕ್ಷೇತ್ರದಲ್ಲಿ ಪರಿಣಿತರಾಗಿ ಭಾಷಣಕಾರರು ಮತ್ತು ಸಲಹೆಗಾರರಾಗಲು ಬಯಸುತ್ತೀರೆ? ಹಾಗಿದ್ದರೆ, ಈ ಹುದ್ದೆಯಿಂದ ಯಾವ ಬಗೆಯ ಅನುಭವವನ್ನು ಪಡೆದುಕೊಳ್ಳಬೇಕು ಎನ್ನುವುದನ್ನು ನಿಶ್ಚಯಿಸಿ, ಅದಕ್ಕೆ ಸೂಕ್ತವಾಗಿ ಕಾರ್ಯ ನಿರ್ವಹಿಸಿ.
 • ನಿಮ್ಮ ಬ್ರಾಂಡ್  ಸ್ಥಾಪಿಸಿ: ಶೈಕ್ಷಣಿಕ ಸಲಹೆಗಾರ ಉದ್ಯೋಗ ನೀವು ಬಯಸಿದ ಕ್ಷೇತ್ರವಾಗಿದ್ದು, ನೀವು ಭವಿಷ್ಯದಲ್ಲಿ ಇದೇ ಕ್ಷೇತ್ರದಲ್ಲಿ ಮುಂದೆವರೆಯುವ ಉದ್ದೇಶವಿದ್ದರೆ, ಈ ಕ್ಷೇತ್ರದಲ್ಲಿ ನಿಮ್ಮ ಛಾಪನ್ನು ಮೂಡಿಸಿ. ಅದಕ್ಕೆ ಅಗತ್ಯವಿರುವ ಎಲ್ಲ ವಿಷಯಗಳನ್ನು ಯೋಚಿಸಿ. ಬ್ಲಾಗ್ ಗಳನ್ನು ಬರೆಯಿರಿ, ಟ್ವೀಟ್ ಮಾಡಿ, ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಉದ್ಯೋಗಕ್ಷೇತ್ರದ ಬಗ್ಗೆ ಚರ್ಚಿಸಿ, ಮಾಹಿತಿ ನೀಡಿ. ಇದು ನಿಮ್ಮ ಬಗ್ಗೆ ಜಗತ್ತಿಗೆ ತಿಳಿಸುತ್ತದೆ. ನಿಮ್ಮದೇ ಆದ ಸ್ವಂತ ಬ್ಲಾಗ್  ಅನ್ನು ಸಹ ಹೊಂದಿರಿ.  
 • ಗ್ರಾಹಕರಿಗೆ ಸಹಾಯ ಮಾಡಿ: ನಿಮ್ಮ ಗ್ರಾಹಕರಿಗೆ ಸಹಾಯ ಮಾಡುವಾಗ ನಿರ್ಮಲ ಮನಸ್ಸಿಂದ ಮಾಡಿ. ಯಾವುದೇ ಬಗೆಯ ಫಲಾಪೇಕ್ಷೆ ಬೇಡ. ನಿಮ್ಮ ಸೇವಾ ಮನಸ್ಥಿತಿಯು ನಿಮ್ಮನ್ನು ಪ್ರಖ್ಯಾತ ಮತ್ತು ಯಶಸ್ವಿ ಶೈಕ್ಷಣಿಕ ಸಲಹೆಗಾರರನ್ನಾಗಿ ಮಾಡಲು ಸಹಾಯ ಮಾಡುತ್ತದೆ.
 • ಮಾರ್ಗದರ್ಶಕರಾಗಿ, ನಾಯಕನಲ್ಲ: ನಿಮ್ಮ ಗ್ರಾಹಕರು ನಿಮ್ಮನ್ನು ಕೇಳಿಸಿಕೊಳ್ಳಬೇಕು ಎನ್ನುವುದಾದರೆ ನಿಮ್ಮ ಸಂದೇಶ ಸ್ಪಷ್ಟವಾಗಿರಲಿ – ಈ ಪುಸ್ತಕವನ್ನು ಓದಿ. ಈ ಪುಸ್ತಕ ನೀವು ಈ ಉದ್ಯೋಗದಲ್ಲಿ ಏಕೆ ಮತ್ತು ಹೇಗೆ ನಿಮ್ಮ ಗ್ರಾಹಕರಿಗೆ ಮಾರ್ಗದರ್ಶಕರಾಗಬೇಕು, ನಾಯಕನಲ್ಲ ಎನ್ನುವುದನ್ನು ತಿಳಿಸುತ್ತದೆ. ಅದಕ್ಕೆ ಮುಖ್ಯ ಕಾರಣ ನಿಮ್ಮ ಎಲ್ಲಾ ಗ್ರಾಹಕರು ತಮ್ಮ ಜೀವನದ ನಾಯಕರು ತಾವೇ ಆಗಬೇಕು ಎಂದು ಬಯಸುತ್ತಾರೆಯೇ ವಿನಃ ನೀವಲ್ಲ.
 • “ನಾನು ಮೋಸಗಾರ” ಎನ್ನುವ ಸಿಂಡ್ರೋಮ್ ದೂರವಿಡಿ: ಎಲ್ಲರೂ ತಮ್ಮ ಜೀವನದ ಯಾವುದಾದರೂ ಒಂದು ಪರಿಸ್ಥಿತಿಯಲ್ಲಿ ತಮ್ಮ ಬಗ್ಗೆಯೇ ತಾವು ಅನುಮಾನ ಪಟ್ಟಿರುತ್ತಾರೆ. ಆದರೆ ನೀವು ಶೈಕ್ಷಣಿಕ ಸಲಹೆಗಾರ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸುವಾಗ ಈ ಅನುಮಾನ ಮರುಕಳಿಸಬಹುದು. ಅದನ್ನು ಎದುರಿಸಿ, ನಿಮ್ಮ ವೃತ್ತಿ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಿ.
 • ಒತ್ತಡದ ಪರಿಸ್ಥಿತಿಗಳನ್ನು ನಿಭಾಯಿಸಿ: ನಮ್ಮ ದೈನಂದಿನ ಪರಿಸ್ಥಿತಿಯಲ್ಲಿ ಒತ್ತಡದ ಪರಿಸ್ಥಿತಿಗಳನ್ನು ಎದುರಿಸುವುದು ಸಾಮಾನ್ಯ. ಆದರೆ ನೀವು ಎದುರಿಸುವ ಒತ್ತಡ ನೀವು ನುಡಿದ ಯಾವುದೊ ಒಂದು ಮಾತಿನ ಕಾರಣದಿಂದ ಆದರೆ? ಅದನ್ನು ಚಾಣಾಕ್ಷತನದಿಂದ ನಿಭಾಯಿಸುವುದು ಅತ್ಯಗತ್ಯ. ಇಂತಹ ಪರಿಸ್ಥಿತಿಗಳು ಶೈಕ್ಷಣಿಕ ಸಲಹೆಗಾರರ ವೃತ್ತಿಯಲ್ಲಿ ಹಲವಾರು. ಅದನ್ನು ಸಮಾಧಾನದಿಂದ ನಿಭಾಯಿಸಿದಲ್ಲಿ, ನಿಮ್ಮ ವೃತ್ತಿಕ್ಷೇತ್ರದಲ್ಲಿ ಯಶಸ್ಸು ಗಳಿಸುವುದು ಸುಲಭ. ಕೃಷಿಯಲ್ ಕಾನ್ವರ್ಸಿಷನ್ಸ್ ಪುಸ್ತಕವು  ನಿಮಗೆ ಅಗತ್ಯವಿರುವ ಟಿಪ್ಪಣಿಗಳನ್ನು ನೀಡುತ್ತದೆ. 

ನೀವು ಶೈಕ್ಷಣಿಕ ಸಲಹೆಗಾರ ಹುದ್ದೆಗೆ ಹೊಸತಾಗಿಯೇ ಸೇರುತ್ತಿರಬಹುದು ಅಥವಾ ಅನುಭವಿ ಉದ್ಯೋಗಿಯೇ ಆಗಿರಬಹುದು. ಮೇಲೆ ನೀಡಿರುವ ಸಲಹೆಗಳನ್ನು ಉಪಯೋಗಿಸಿಕೊಂಡು ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಿ.