ಸಾಫ್ಟ್ವೇರ್ ಡೆವೆಲಪರ್ ಉದ್ಯೋಗ: ಏನು, ಹೇಗೆ, ಬಗೆಗಳು ಮತ್ತು ಸಂದರ್ಶನ ಸಲಹೆಗಳು

ಸಾಫ್ಟ್ವೇರ್ ಡೆವೆಲಪರ್ ಉದ್ಯೋಗಿಗಳು ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ಕಲ್ಪಿಸಿ, ವಿನ್ಯಾಸಿಸಿ ನಿರ್ಮಿಸುತ್ತಾರೆ. ಕೆಲವರು ಮೊಬೈಲ್ ಅಥವಾ ಗಣಕ ಯಂತ್ರಕ್ಕಾಗಿ ಹೊಸ  ಅಪ್ಲಿಕೇಶನ್ ಗಳನ್ನು ಅಭಿವೃದ್ಧಿ ಪಡಿಸಿದರೆ, ಇತರರು ಇದಕ್ಕೆ ಆಧಾರವಾಗಿರುವ ಆಪರೇಟಿಂಗ್ ಸಿಸ್ಟಮ್ ಗಳನ್ನು ನಿರ್ಮಿಸುತ್ತಾರೆ. ಇದು ಯಾವುದೇ ಇರಲಿ, ಇದೆಲ್ಲಕ್ಕಿಂತ ಮುಖ್ಯವಾಗಿ ಸಾಫ್ಟ್ವೇರ್ ಡೆವೆಲಪರ್ ಗಳು  ಬಳಕೆದಾರರ ಅಗತ್ಯತೆಗಳನ್ನು ಗುರುತಿಸುತ್ತಾರೆ, ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ನಿರ್ಮಿಸುತ್ತಾರೆ ಮತ್ತು ಸಾಫ್ಟ್ವೇರ್ ಅನ್ನು ಪಾದೀಕ್ಷಿಸಿ, ಸುಧಾರಣೆಗಳನ್ನು ಕಾರ್ಯಗತಗೊಳಿಸುತ್ತಾರೆ. ಕಂಪ್ಯೂಟರ್ ಪ್ರೋಗ್ರಾಮರ್ ಗಳೊಂದಿಗೆ ನಿಕಟವಾಗಿ  ಕೆಲಸ ಮಾಡುವುದಷ್ಟೇ ಅಲ್ಲದೇ, ಸಾಫ್ಟ್ವೇರ್ ಡೆವೆಲಪರ್ ಗಳು ಕಂಪ್ಯೂಟರ್ ಸಿಸ್ಟಮ್ ಗಳು, ಅವುಗಳ ಉತ್ಪಾದನೆ, ಹಣಕಾಸು ಮತ್ತು ಸಾಫ್ಟ್ವೇರ್ ಪ್ರಕಾಶನ ಉದ್ಯಮಗಳಲ್ಲಿ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸುತ್ತಾರೆ. 

ಈ ಲೇಖನದಲ್ಲಿ ಸಾಫ್ಟ್ವೇರ್ ಡೆವೆಲಪರ್ ಉದ್ಯೋಗಿ ಆಗುವುದು ಹೇಗೆ, ಸಾಫ್ಟ್ವೇರ್ ಡೆವಲಪ್ಮೆಂಟ್  ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಗಳು ಯಾವುವು ಮತ್ತು ಆ ಉದ್ಯೋಗಗಳಿಗೆ ನೀವು ಆಯ್ಕೆ ಆಗಲು  ಸಂದರ್ಶನವನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ನಾವು ತಿಳಿಸಿದ್ದೇವೆ. 

ಸಾಫ್ಟ್ವೇರ್ ಡೆವೆಲಪರ್ ಉದ್ಯೋಗಿ ಏನು ಮಾಡುತ್ತಾರೆ?

 • ಸಾಫ್ಟ್ವೇರ್  ಡೆವೆಲಪರ್ ಗಳು ಕ್ಲೈಂಟ್  ಅಪ್ಲಿಕೇಶನ್ ಗಳಿಗಾಗಿ ಸಾಫ್ಟ್ವೇರ್  ಅನ್ನು ಮಾರ್ಪಡಿಸಲು, ಬರೆಯಲು ಮತ್ತು ಡಿಬಗ್ ಮಾಡಲು  ವಿವಿಧ ಬಗೆಯ ಡಿಬಗ್ಗರ್ ಗಳನ್ನು ಮತ್ತು ವಿಶ್ಯುಯಲ್ ಡೆವಲಪ್ಮೆಂಟ್  ಪರಿಸರಗಳನ್ನು ಬಳಸುತ್ತಾರೆ.  
 • ಕ್ಲೈಂಟ್ ಸಾಫ್ಟ್ವೇರ್ ಗಳನ್ನು ಪರೀಕ್ಷಿಸಿ, ದಾಖಲಿಸುತ್ತಾರೆ. ಅಪ್ಲಿಕೇಶನ್ ಗಳಿಗಾಗಿ ಕೋಡ್ ಗಳನ್ನು ರಚಿಸುತ್ತಾರೆ. 
 • ಸಾಫ್ಟ್ವೇರ್  ಡೆವೆಲಪರ್ ಗಳು  ಸಾಮಾನ್ಯವಾಗಿ ಆಫೀಸ್ ಗಳಲ್ಲಿ  ಕಾರ್ಯ ನಿರ್ವಹಿಸುತ್ತಾರೆ. ಮತ್ತು  ಕಂಪನಿ ಯೊಳಗಿನ ತಂತ್ರಜ್ಞಾನಗಳಿಗೆ ಮಾಹಿತಿ ತಂತ್ರಜ್ಞಾನ  ತಜ್ಞರಾಗಿ ಸಹ ಕೆಲಸ ನಿರ್ವಹಿಸುತ್ತಾರೆ.

ಸಾಫ್ಟ್ವೇರ್ ಡೆವಲಪ್ಮೆಂಟ್ ಕ್ಷೇತ್ರದಲ್ಲಿನ ಉದ್ಯೋಗಗಳು

ಸಾಫ್ಟ್ವೇರ್ ಡೆವೆಲಪರ್ ಉದ್ಯೋಗಿ ಶೈಕ್ಷಣಿಕ ಕಾರ್ಯಕ್ರಮಗಳು ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಹಲವಾರು ಉದ್ಯೋಗಗಳನ್ನು ನಿಭಾಯಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುತ್ತದೆ. ನಿಮಗೆ ಲಭ್ಯವಿರುವ ನಿರ್ಧಿಷ್ಟ ಅವಕಾಶಗಳು ನಿಮ್ಮ ಹಿಂದಿನ ವೃತ್ತಿ ಅನುಭವ, ಆದ್ಯತೆಯ ಉದ್ಯಮ, ಭೌಗೋಲಿಕ ಸ್ಥಳ ಮತ್ತು ಶಿಕ್ಷಣ ಮಟ್ಟವನ್ನು ಅವಲಂಬಿಸಿರುತ್ತದೆ. 

ಸಾಫ್ಟ್ವೇರ್ ಡೆವಲಪ್ಮೆಂಟ್ ಕ್ಷೇತ್ರದಲ್ಲಿ, ಸಾಫ್ಟ್ವೇರ್ ಡೆವಲಪ್ಮೆಂಟ್ ಪದವೀಧರರಿಗೆ ಸಾಮಾನ್ಯವಾಗಿ ಕೆಳಗೆ ನೀಡಿರುವ ಉದ್ಯೋಗಗಳು ಪ್ರಮುಖವಾಗಿವೆ. 

 • ವೆಬ್ ಡೆವೆಲಪರ್: ವೆಬ್ ಡೆವೆಲಪರ್ ಗಳು ವೆಬ್ ಪುಟಗಳನ್ನು ವಿನ್ಯಾಸಗೊಳಿಸುತ್ತಾರೆ ಮತ್ತು ನಿರ್ಮಿಸುತ್ತಾರೆ. ಅವರು ಸಾಮಾನ್ಯವಾಗಿ  ವೆಬ್ಸೈಟ್ ನ ಬ್ಯಾಕ್ ಎಂಡ್ ನಿರ್ಮಿಸಿ, ಫ್ರಂಟ್ ಎಂಡ್ ನ ಮುಖಪುಟವನ್ನು ರಚಿಸುತ್ತಾರೆ. ಈ ಉದ್ಯೋಗಕ್ಕೆ ವೆಬ್ ವಿನ್ಯಾಸದಲ್ಲಿ ಅನುಕೂಲವಾಗುವ ಸಾಫ್ಟ್ವೇರ್ ಡೆವಲಪ್ಮೆಂಟ್ ಪದವಿ ಅಗತ್ಯವಿರುತ್ತದೆ.
 • ಕಂಪ್ಯೂಟರ್ ಪ್ರೋಗ್ರಾಮರ್: ಕಂಪ್ಯೂಟರ್ ಪ್ರೋಗ್ರಾಮರ್ ಗಳು  ವಿವಿಧ ಕಂಪ್ಯೂಟರ್ ಭಾಷೆಗಳಲ್ಲಿ ಕೋಡ್  ಬರೆಯುವ ಮೂಲಕ ಕಂಪ್ಯೂಟರ್ ಅಪ್ಲಿಕೇಶನ್ ಗಳನ್ನು ನಿರ್ಮಿಸುತ್ತಾರೆ.  ಅವರು ಹೊಸ ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ಪರೀಕ್ಷಿಸಿ, ಅದರಲ್ಲಿನ ದೋಷಗಳನ್ನು ಪರಿಶೀಲಿಸುತ್ತಾರೆ. ಈ ಉದ್ಯೋಗಕ್ಕೆ  ಸಾಮಾನ್ಯವಾಗಿ ಸ್ನಾತಕೋತ್ತರ ಸಾಫ್ಟ್ವೇರ್ ಡೆವಲಪ್ಮೆಂಟ್ ಪದವಿ ಬೇಕಾಗುತ್ತದೆ. ಆದರೆ, ಕೆಲವು ಉದ್ಯೋಗದಾತರು ಅಸೋಸಿಯೇಟ್ ಡಿಗ್ರಿ  ಹೊಂದಿರುವವರನ್ನು ಸಹ ಈ ಉದ್ಯೋಗಕ್ಕೆ ನೇಮಿಸಿಕೊಳ್ಳುತ್ತಾರೆ.
 • ಡೇಟಾಬೇಸ್ ಅಡ್ಮಿನಿಸ್ಟ್ರೇಟರ್:  ಈ ಕಂಪ್ಯೂಟರ್ ವೃತ್ತಿಪರರು  ವಿವಿಧ ರೀತಿಯ ಸಂಸ್ಥೆಗಳಿಗೆ  ಡಾಟಾವನ್ನು ಸಂಗ್ರಹಿಸುತ್ತಾರೆ ಮತ್ತು ಸಂಘಟಿಸುತ್ತಾರೆ.  ಅವರು ಮಾಹಿತಿಯನ್ನು ಬ್ಯಾಕಪ್ ಮಾಡಿ, ಡಾಟಾವನ್ನು ಸುರಕ್ಷಿತವಾಗಿರಿಸಿ ಮತ್ತು ಬಳಕೆದಾರ  ಅನುಮತಿಗಳನ್ನು ನಿರ್ವಹಿಸುತ್ತಾರೆ. ಈ ಉದ್ಯೋಗದಲ್ಲಿ ಇರುವವರು ಸಾಮಾನ್ಯವಾಗಿ ಮಾಹಿತಿ ತಂತ್ರಜ್ಞಾನ  ಅಥವಾ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವವರಾಗಿರುತ್ತಾರೆ. 
 • ಸಾಫ್ಟ್ವೇರ್ ಡೆವೆಲಪರ್:  ಸಾಫ್ಟ್ವೇರ್ ಡೆವೆಲಪರ್  ಉದ್ಯೋಗಿಗಳು ಕಂಪ್ಯೂಟರ್ ಸಿಸ್ಟಮ್ ಗಳು ಅಥವಾ  ಅಪ್ಲಿಕೇಶನ್ ಗಳ ನ್ನು ವಿನ್ಯಾಸಗೊಳಿಸುತ್ತಾರೆ.  ಇವರು ಕಂಪ್ಯೂಟರ್ ಪ್ರೋಗ್ರಾಮರ್ ಗಳನ್ನು ನಿರ್ದೇಶಿಸಬಹುದು  ಅಥವಾ ಸ್ವತಃ ತಾವೇ ಕೋಡ್ ಗಳನ್ನು ಬರೆಯಬಹುದು. ಈ ವೃತ್ತಿಪರರಿಗೆ ಸಾಫ್ಟ್ವೇರ್ ಇಂಜಿನಿಯರಿಂಗ್ ಅಥವಾ ಕಂಪ್ಯೂಟರ್  ವಿಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಅಗತ್ಯ.

ಸಾಫ್ಟ್ವೇರ್  ಡೆವೆಲಪರ್ ಉದ್ಯೋಗಿ ಆಗುವುದು  ಹೇಗೆ?

 • ಸೂಕ್ತ ಪದವಿ ಪಡೆಯಿರಿ 

ಸಾಫ್ಟ್‌ವೇರ್ ಡೆವಲಪರ್‌ಗಳು ಸಂಬಂಧಿತ ಅಧ್ಯಯನ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಬೇಕು. ಹೆಚ್ಚಿನ ಉದ್ಯೋಗದಾತರಿಗೆ ಸಾಫ್ಟ್‌ವೇರ್ ಡೆವಲಪ್ಮೆಂಟ್ ವೃತ್ತಿ ಕ್ಷೇತ್ರದಲ್ಲಿ ಸೂಕ್ತ ಸಾಫ್ಟ್ವೇರ್ ಡೆವಲಪ್ಮೆಂಟ್ ಪದವಿ ಅಗತ್ಯವಿರುತ್ತದೆ, ಆದರೂ ಕೆಲವರು ಕಂಪ್ಯೂಟರ್ ವಿಜ್ಞಾನ, ಕಂಪ್ಯೂಟರ್ ಪ್ರೋಗ್ರಾಮಿಂಗ್ ಮತ್ತು ಸಂಬಂಧಿತ ವಿಭಾಗಗಳು ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಅಧ್ಯಾಯನ ಮಾಡಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ನೀಡಲು ತೆರೆದಿರುತ್ತಾರೆ.  ಆದರೆ ಸಾಮಾನ್ಯವಾಗಿ, ಉದ್ಯೋಗದಾತರು ಅಥವಾ ಕಂಪನಿಗಳು ಪ್ರಾದೇಶಿಕವಾಗಿ ಮಾನ್ಯತೆ ಪಡೆದಿರುವ ಸಂಸ್ಥೆಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ವೃತ್ತಿಪರರು ಪಡೆದ ಶಿಕ್ಷಣ ಗುಣಮಟ್ಟವು ಅವರಿಗೆ ತಿಳಿಯುತ್ತದೆ.

ಸಾಫ್ಟ್ವೇರ್  ಡೆವೆಲಪರ್ ಗಳಿಗಾಗಿ  ಅನೇಕ ಆನ್ಲೈನ್ ಕಾರ್ಯಕ್ರಮಗಳಿವೆ. ಈ  ಕಾರ್ಯಕ್ರಮಗಳು ನಿಮ್ಮದೇ ಸಮಯದ ಅನುಸಾರ, ಯಾವುದೇ ಸ್ಥಳದಿಂದ, ನಿಮ್ಮದೇ ಆದ ವೇಗದಲ್ಲಿ, ಉದ್ಯೋಗದಲ್ಲಿ ಕೆಲಸ  ಮಾಡುತ್ತಾ, ಶಿಕ್ಷಣ ಪಡೆದು ನಿಮ್ಮ ಪದವಿಯನ್ನು ಗಳಿಸಬಹುದು. ಸಾಫ್ಟ್ವೇರ್ ಡೆವಲಪ್ಮೆಂಟ್ ಕ್ಷೇತ್ರದ ಅಡ್ವಾನ್ಸ್ಡ್ ಪದವಿಗಳು ಪದವೀಧರರಿಗೆ ಮತ್ತು ಉದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಮತ್ತು  ಹೆಚ್ಚಿನ ಸಂಬಳ ಪಡೆಯಲು ಅರ್ಹತೆ ನೀಡುತ್ತದೆ. 

 • ಅನುಭವ  ಗಳಿಸಿ

ಅನೇಕ ಉದ್ಯೋಗದಾತರು ವೃತ್ತಿಪರ ಅನುಭವ ಹೊಂದಿರುವ ಸಾಫ್ಟ್‌ವೇರ್ ಡೆವಲಪರ್‌ಗಳನ್ನು ಹುಡುಕುತ್ತಾರೆ. ವೃತ್ತಿಪರರು ತಮ್ಮ  ರೇಸುಮೆ, ಕವರ್ ಲೆಟರ್ ಮತ್ತು ಪೋರ್ಟ್ಫೋಲಿಯೋ ಮೂಲಕ ತಮ್ಮ ವೃತ್ತಿ ಅನುಭವವನ್ನು ಪ್ರದರ್ಶಿಸಬಹುದು. ಅವರ ಶಿಕ್ಷಣದ ಮಟ್ಟವನ್ನು ಅವಲಂಬಿಸಿ, ವೃತ್ತಿಪರರು  ಕಾರ್ಯಕ್ಷೇತ್ರದಲ್ಲಿ ವಿಭಿನ್ನ ಅನುಭವಗಳನ್ನು ಹೊಂದಿರಬಹುದು. ಉದಾಹರೆಣೆಗೆ, ಸ್ನಾತಕೋತ್ತರ ಪದವಿ ಪಡೆದಿರುವ ಪದವೀಧರರು ಸ್ನಾತಕೋತ್ತರ ಕಾರ್ಯಕ್ರಮಕ್ಕೆ ಪ್ರವೇಶಿಸುವ ಮೊದಲು ಅಥವಾ ತಮ್ಮ  ಸ್ನಾತಕೋತ್ತರ ಶಿಕ್ಷಣ ಕಾರ್ಯಕ್ರಮದ ಸಮಯದಲ್ಲಿ ಈಗಾಗಲೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿರಬಹುದು. ಅದರ ಅನುಸಾರ ಅವರ ರೇಸುಮೆ ಗಳು ಇರುತ್ತವೆ.

ಆದರೆ ಪದವಿಪೂರ್ವ ವಿದ್ಯಾರ್ಥಿಗಳನ್ನು  ಸ್ನಾತಕೋತ್ತರ ಪದವೀಧರರಿಗೆ ಹೋಲಿಸಿದರೆ, ಸಾಮಾನ್ಯವಾಗಿ ಹೆಚ್ಚಿನ ಕಾರ್ಯಕ್ಷೇತ್ರ ಅನುಭವವನ್ನು ಹೊಂದಿರುವುದಿಲ್ಲ.  ಆದರೆ ಅವರಿಗೆ ಇಂಟರ್ನ್ಶಿಪ್ ಮಾಡಿರುವ ಅನುಭವವಿರುತ್ತದೆ. ಇಂಟರ್ನ್ಶಿಪ್ ಮಾಡಿರುವ ಪದವೀಧರರಿಗೆ ಸಾಮಾನ್ಯವಾಗಿ ಇಂಟರ್ನ್ಶಿಪ್ ಮಾಡಿದ ಕಂಪೆನಿಯಲ್ಲಿಯೇ   ತಮ್ಮ ಶಿಕ್ಷಣದ ನಂತರ ಪೂರ್ಣ ಸಮಯದ ಉದ್ಯೋಗ ಪಡೆಯಲು ಸಹಾಯವಾಗುತ್ತದೆ. ವೃತ್ತಿಪರರು ತಮ್ಮ ವೃತ್ತಿಕ್ಷೇತ್ರದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಕೆಲಸದ ಅನುಭವವನ್ನು ಪಡೆಯುವಲ್ಲಿ ಗಮನ ಹರಿಸಬೇಕು. ಈ ಅನುಭವವನ್ನು ಪ್ರದರ್ಶಿಸಲು ತಮ್ಮ ರೇಸುಮೆಯನ್ನು  ಅಭ್ಯರ್ಥಿಗಳು ಬಳಸಬಹುದು. 

 • ಕ್ರೆಡೆನ್ಶಿಯಲ್ ಗಳನ್ನು ಸಂಪಾದಿಸಿ

ಸಾಫ್ಟ್ವೇರ್ ಡೆವೆಲಪರ್ ಉದ್ಯೋಗಿಗಳಿಗೆ ಅನೇಕ ಸರ್ಟಿಫಿಕೇಷನ್ ಗಳು ಲಭ್ಯವಿದೆ. ಮೈಕ್ರೋಸಾಫ್ಟ್, ಅಮೆಜಾನ್ ಸಾಫ್ಟ್ವೇರ್ ಸರ್ವಿಸಸ್, ಕ್ಲೌಡ್ ಎರಾ ಮತ್ತು ಒರಾಕಲ್ ಸಾಮಾನ್ಯವಾಗಿ ಲಭ್ಯವಿರುವ ಸರ್ಟಿಫಿಕೇಷನ್ ಗಳು. ಅನೇಕ ಸಾಫ್ಟ್ವೇರ್ ಡೆವಲಪ್ಮೆಂಟ್  ವೃತ್ತಿಗಳಿಗೆ ಅಭ್ಯರ್ಥಿಗಳನ್ನು ತಮ್ಮ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಲು ಅನುಮತಿಸಲು ಮೊದಲು ವೃತ್ತಿಪರರು ಸರ್ಟಿಫಿಕೇಷನ್ ಗಳನ್ನು ಪಡೆಯಬೇಕು. ಸಾಮಾನ್ಯವಾಗಿ, ಸರ್ಟಿಫಿಕೇಷನ್ ಗಳು ವೃತ್ತಿಪರರು ಯಾವ ಸಾಫ್ಟ್ವೇರ್ ಮೇಲೆ ಕೆಲಸ ಮಾಡಲು ಬಯಸುತ್ತಾರೋ, ಆ ಸಾಫ್ಟ್ವೇರ್ ಬಗ್ಗೆ ಅಗತ್ಯ ಮಾಹಿತಿಯನ್ನು  ಪಡೆದಿದ್ದಾರೆ ಮತ್ತು ಆ ಸಾಫ್ಟ್ವೇರ್ ಗಳಲ್ಲಿ ಕೆಲಸ ಮಾಡಲು ಸಾಕಷ್ಟು ತಿಳಿದಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಕ್ರೆಡೆನ್ಶಿಯಲ್ಸ್ ಅಗತ್ಯ. ಅನೇಕ ಸಮಯ, ಈ ಕ್ರೆಡೆನ್ಶಿಯಲ್ಸ್ ಗಳು ಅಥವಾ ರುಜುವಾತುಗಳು ಸಾಫ್ಟ್ವೇರ್ ಡೆವೆಲಪರ್ ಗಳ ಸಂಬಳ ಮತ್ತು ಉದ್ಯೋಗಾವಕಾಶಗಳನ್ನು ಇತರ ಅಭ್ಯರ್ಥಿಗಳಿಗಿಂತ ಹೆಚ್ಚಿಸುವುದಕ್ಕೆ ಉಪಯೋಗಿಸಿಕೊಳ್ಳಬೇಕು. ವೃತ್ತಿಪರರು ಸರ್ಟಿಫಿಕೇಷನ್ ಗಳ ಕುರಿತಾಗಿ ತಮ್ಮದೇ ಆದ  ಸಂಶೋಧನೆಗಳನ್ನು ಆನ್ಲೈನ್ ನಲ್ಲಿ ಮೂಲಕ ಅಥವಾ ತಮ್ಮ ಕಾಲೇಜು ಅಥವಾ ಯೂನಿವರ್ಸಿಟಿ ಗಳನ್ನು ಸಂಪರ್ಕಿಸುವ ಮೂಲಕ ತಿಳಿದುಕೊಳ್ಳಬಹುದು. ಹೆಚ್ಚುವರಿಯಾಗಿ, ವೃತ್ತಿಪರ ಸಂಸ್ಥೆಗಳು ಹೆಚ್ಚಿನ ಸರ್ಟಿಫಿಕೇಷನ್ ಗಳನ್ನೂ ನೀಡಬಹುದು. 

ಈ ಮೇಲೆ ನೀಡಿರುವ ಶೈಕ್ಷಣಿಕ ಕೌಶಲ್ಯಗಳನ್ನು ಹೊಂದಿರುವುದರೊಂದಿಗೆ ಈ ಕೆಳಗೆ ನೀಡಿರುವ ಕಠಿಣ (ಹಾರ್ಡ್) ಮತ್ತು ಮೃದು (ಸಾಫ್ಟ್) ಕೌಶಲ್ಯಗಳನ್ನು ಸಹ ಕಲಿಯುವುದು ಈ ವೃತ್ತಿಗೆ ಅಗತ್ಯವಿರುತ್ತದೆ.

 • ಕಠಿಣ ಕೌಶಲ್ಯಗಳು:

ಕಠಿಣ ಕೌಶಲ್ಯಗಳು ನಿರ್ಧಿಷ್ಟ ಉದ್ಯೋಗದಲ್ಲಿ ಉತ್ತಮಗೊಳ್ಳಲು ಅಗತ್ಯವಾದ ನಿರ್ದಿಷ್ಟ ಸಾಮರ್ಥ್ಯಗಳನ್ನು ಒಳಗೊಳ್ಳುತ್ತದೆ. ಗ್ರಾಫಿಕ್ ಡಿಸೈನರ್ ಗಳಿಗೆ ಕಲಾತ್ಮಕ ಸಾಮರ್ಥ್ಯದ ಅಗತ್ಯವಿದೆ. ಶಸ್ತ್ರಚಿಕಿತ್ಸಕರಿಗೆ ಕೈ-ಕಣ್ಣುಗಳ ನಡುವಿನ ಸಮನ್ವಯದ ಅಗತ್ಯವಿರುತ್ತದೆ. ಹಾಗೆಯೆ, ಸಾಫ್ಟ್ವೇರ್ ಡೆವೆಲಪರ್ ಉದ್ಯೋಗಿಗಳಿಗೆ ಪ್ರಮುಖ ಪ್ರೋಗ್ರಾಮಿಂಗ್ ಭಾಷೆಗಳನ್ನು ಕಲಿತಿರುವ ಅಗತ್ಯವಿರುತ್ತದೆ. ಅಂತಹ ಕೆಲವು ಪ್ರೋಗ್ರಾಮಿಂಗ್ ಭಾಷೆಗಳ ಪಟ್ಟಿ ಇಲ್ಲಿದೆ: ASP.NET, ಜಾವಾಸ್ಕ್ರಿಪ್ಟ್, ಜಾವಾ, C#, ಪೈಥಾನ್, ಇತ್ಯಾದಿ.

 • ಮೃದು ಕೌಶಲ್ಯಗಳು:

ನಿಮಗೆ ಮೃದು ಕೌಶಲ್ಯಗಳ ಅಗತ್ಯದ ಬಗ್ಗೆ ಅನುಮಾನವಿರಬಹುದು. ಅಥವಾ ನೀವು ಆಶ್ಚರ್ಯಚಕಿತರಾಗಬಹುದು: ಕಂಪ್ಯೂಟರ್ ಪ್ರೋಗ್ರಾಮಿಂಗ್ ಅನ್ನು ಹೊರತು ಪಡಿಸಿ, ಸಾಫ್ಟ್ವೇರ್ ಡೆವೆಲಪರ್ ಉದ್ಯೋಗಿಯ ಕೌಶಲ್ಯಗಳು ಯಾವುವು ಎಂದು? ಆದರೆ ಸಾಫ್ಟ್ವೇರ್ ಡೆವಲಪ್ಮೆಂಟ್ ಗೆ ಇತರ ಅನೇಕ ಉದ್ಯೋಗಗಳಂತೆ, ಕಠಿಣ ಕೌಶಲ್ಯಗಳ ಜೊತೆಗೆ ಮೃದು ಕೌಶಲ್ಯಗಳ ಅಗತ್ಯವಿರುತ್ತದೆ. ಡೆವೆಲಪರ್ ಗಳು ತಮ್ಮ ಸಹೋದ್ಯೋಗಿಗಳೊಂದಿಗೆ ಮತ್ತು ಇತರ ಡೆವೆಲಪರ್ ಗಳೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಲು, ವಿವರಗಳಿಗೆ ಗಮನವನ್ನು ನೀಡಬೇಕು ಮತ್ತು ಸಂಕೀರ್ಣ ಸಮಸ್ಯೆಗಳ ಮೂಲಕ ಯೋಚಿಸಬೇಕು. ಈ ಎಲ್ಲಾ ಕಾರಣಗಳಿಂದ ಮೃದು ಕೌಶಲ್ಯಗಳು ಈ  ವೃತ್ತಿ ಕ್ಷೇತ್ರದಲ್ಲಿ ಅತ್ಯಂತ ಮುಖ್ಯ. ಕೆಲವು ಮೃದು ಕೌಶಲ್ಯಗಳ ಪಟ್ಟಿ ಇಲ್ಲಿದೆ: ಸಂವಹನ ಕೌಶಲ್ಯ, ಕೆಲಸವನ್ನು ತಂಡವಾಗಿ ನಿರ್ವಹಿಸುವುದು, ಸಮಸ್ಯೆ ಪರಿಹರಿಸುವ ಕೌಶಲ್ಯ ಮತ್ತು ಸೂಕ್ಷ್ಮತೆಗಳಿಗೆ ಗಮನ ಹರಿಸುವ ಕೌಶಲ್ಯ, ಇತ್ಯಾದಿ. 

ಈ ಬಗೆಯ ಶೈಕ್ಷಣಿಕ ಅರ್ಹತೆ ಮತ್ತು ವಿವಿಧ ಬಗೆಯ ಕೌಶಲ್ಯಗಳನ್ನು ಹೊಂದಿದ್ದರೂ, ನೀವು ಸಂದರ್ಶನಗಳಲ್ಲಿ ಸೂಕ್ತವಾಗಿ ವರ್ತಿಸಿ, ಉತ್ತರಿಸದಿದ್ದರೆ, ನೀವು ಸಾಫ್ಟ್ವೇರ್ ಡೆವೆಲಪರ್ ಆಗುವುದು ಅಸಾಧ್ಯ. ಹಾಗಾಗಿ, ನೀವು ನಿಮ್ಮ ಸಂದರ್ಶನವನ್ನು ಸೂಕ್ತವಾಗಿ ನಿರ್ವಹಿಸಲು, ನಾವು ಮುಂದಿನ ಭಾಗದಲ್ಲಿ ಟಿಪ್ಪಣಿಗಳನ್ನು ನೀಡಿದ್ದೇವೆ.

ಸಾಫ್ಟ್ವೇರ್ ಡೆವೆಲಪರ್ ಸಂದರ್ಶನಕ್ಕೆ ಸಲಹೆಗಳು

 • ನಿಮ್ಮ ರೆಸ್ಯುಮೆ ರಚಿಸಲು ತಜ್ಞರನ್ನು ನೇಮಿಸಿಕೊಳ್ಳಿ. ಏಕೆಂದರೆ ರೆಸ್ಯುಮೆ ರಚಿಸುವ ವೃತ್ತಿಪರರಿಂದಾಗಿ ನಿಮಗೆ ಹಲವಾರು ಸಂದರ್ಶನದ  ಕರೆ ಬರಬಹುದು. ಅಷ್ಟೇ ಅಲ್ಲದೇ, ನೀವು ಸಾಫ್ಟ್ವೇರ್ ಡೆವಲಪ್ಮೆಂಟ್ ಕ್ಷೇತ್ರದಲ್ಲಿ, ನಿಮ್ಮ ರೆಸ್ಯುಮೆ ಸೂಕ್ತವಾಗಿರದೇ ಇದ್ದರೆ, ನಿಮ್ಮ ಉದ್ಯೋಗದಾತರು  ನಿಮ್ಮ ರೆಸ್ಯುಮೆಯನ್ನು ಮೊದಲ ಹಂತದ ಪರಿಷ್ಕರಣೆಯಲ್ಲಿಯೇ ತಿರಸ್ಕರಿಸುತ್ತಾರೆ. 
 • ನಿಮ್ಮ  ಸಂದರ್ಶನ ತೆಗೆದುಕೊಳ್ಳುವವರ ಬಗ್ಗೆ ಮತ್ತು ಕಂಪನಿಯ ಬಗ್ಗೆ  ಸಂದರ್ಶನಕ್ಕೆ ಮೊದಲೇ ತಿಳಿದುಕೊಳ್ಳಿ. 
 • ಸುಲಭವಾಗಿ ಉದ್ಯೋಗ ಪಡೆಯಬೇಕೆ? ನೀವು  ಕೆಲಸ ಮಾಡುವ ಕಂಪನಿಯಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವವರಿಂದ  ಉಲ್ಲೇಖ ಪಡೆಯಿರಿ. ಈ ರೀತಿಯ ಉಲ್ಲಖಗಳು ನಿಮಗೆ ಸುಲಭವಾಗಿ ಸಂದರ್ಶನ ದೊರಕುವಂತೆ ಮಾಡುವುದಷ್ಟೇ ಅಲ್ಲದೇ, ಸುಲಭವಾಗಿ ಉದ್ಯೋಗ ದೊರೆಯುವಂತೆ ಮಾಡುವ ಸಾಧ್ಯತೆಗಳೂ ಇರುತ್ತವೆ.
 • ಅಲ್ಗೊರಿದಮ್ ಅವಲಂಭಿತವಾದ ಸಮಸ್ಯೆಗಳನ್ನು ಉತ್ತರಿಸಲು  ಕಲಿಯಿರಿ. ಸಾಮಾನ್ಯವಾಗಿ ಸಂದರ್ಶಕರು ತಮ್ಮ ಪ್ರಶ್ನೆಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅಲ್ಗೊರಿದಮ್ ಸಂಬಂಧಿತ ಪ್ರಶ್ನೆಗಳನ್ನು ಕೇಳುತ್ತಾರೆ. ಇಂತಹ ಪ್ರಶ್ನೆಗಳಿಗೆ ನೀವು ಹಂತಹಂತವಾಗಿ ಉತ್ತರಿಸಲು ಕಲಿತರೆ ಶೇಕಡಾ ಹತ್ತರಷ್ಟು ನೀವು ಸಂದರ್ಶನದಲ್ಲಿ ಆಯ್ಕೆಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
 • ಸಂದರ್ಶನದ ಯಾವುದೇ ಪ್ರಶ್ನೆಗಳಿಗೆ ಹುರುಪಿನಿಂದ ಉತ್ತರಿಸಿ. ನಿಮ್ಮ ಸಂದರ್ಶಕರು ಕೇಳುವ ಪ್ರಶ್ನೆಗೆ ಒಂದು ಪದ ಅಥವಾ ಒಂದು ವಾಕ್ಯ ತಾಂತ್ರಿಕವಾಗಿ ಸರಿಯಾದ ಉತ್ತರ ನೀಡಿದರೂ, ಈ ರೀತಿ ಉತ್ತರಿಸುವುದರಿಂದ ನೀವು ಈ ಉದ್ಯೋಗಾವಕಾಶದಲ್ಲಿ ನಿಮಗಿರುವ ಆಸಕ್ತಿಯನ್ನು ವ್ಯಕ್ತಪಡಿಸುವ ಅವಕಾಶವನ್ನು ಕಳೆದುಕೊಳ್ಳುತ್ತೀರಿ. ಹಾಗಾಗಿ, ನಿಮ್ಮ ಸಂದರ್ಶಕರ ಯಾವುದೇ ಪ್ರಶ್ನೆಗೆ ಉತ್ತರವನ್ನು ವಿವರವಾಗಿ ಮತ್ತು ಹುರುಪಿನಿಂದ ಉತ್ತರಿಸಿ. 
 • ಸಂದರ್ಶನದಲ್ಲಿ ಕೆಲವು ಪ್ರಶ್ನೆಗಳನ್ನು ನಿಮ್ಮನ್ನು ಕಷ್ಟದಲ್ಲಿ ಸಿಲುಕಿಸಲೆಂದೇ ಸಂದರ್ಶಕರು ಕೇಳುತ್ತಾರೆ. ಉದಾಹರೆಣೆಗೆ, ನೀವು ಬೇರೆ ಉದ್ಯೋಗ ಹುಡುಕಿಕೊಳ್ಳಲು ಕಾರಣವೇನು? ನಿಮ್ಮ ಪ್ರಬಲ ಕೌಶಲ್ಯಗಳು ಯಾವುವು? ನೀವು ಹಿಂದಿನ ಬಾರಿ ನಿಮ್ಮ ಸಹೋದ್ಯೋಗಿಯೊಂದಿಗೆ ಯಾವುದೊ ತಾಂತ್ರಿಕ ತೊಂದರೆಯಿಂದ ಜಗಳ ಮಾಡಿಕೊಂಡಿದ್ದು ಯಾವಾಗ ಮತ್ತು ಅದನ್ನು ಹೇಗೆ ನಿವಾರಿಸಿಕೊಂಡಿದ್ದೀರಿ? ಇಂತಹ ಪ್ರಶ್ನೆಗಳಿಗೆ ನೀವು ಚಾಣಾಕ್ಷತೆಯಿಂದ ಉತ್ತರಿಸಬೇಕು. ಇಲ್ಲವೇ, ನಿಮ್ಮ ಉತ್ತರವನ್ನೇ ಆಧಾರವಾಗಿರಿಸಿಕೊಂಡು, ನಿಮ್ಮನ್ನು ಸಾಫ್ಟ್ವೇರ್ ಡೆವೆಲಪರ್ ಉದ್ಯೋಗಕ್ಕೆ ತಿರಸ್ಕರಿಸುವ ಸಾಧ್ಯತೆ ಇರುತ್ತದೆ.
 • ನಿಮ್ಮ ರೆಸ್ಯುಮೆಯಲ್ಲಿಯೇ ಆಗಲಿ ಅಥವಾ ನಿಮ್ಮ ಸಂದರ್ಶನದಲ್ಲಿಯೇ ಆಗಲಿ, ಯಾವುದೇ ಕಾರಣದಿಂದ ಸುಳ್ಳು ಹೇಳಬೇಡಿ. ಯಾವುದೊ ಪ್ರಶ್ನೆಗೆ ಉತ್ತರ ಗೊತ್ತಿರದೇ ಇದ್ದರೆ, ಅದನ್ನು ನೇರವಾಗಿ ಒಪ್ಪಿಕೊಳ್ಳಿ.
 • ಅತಿಯಾಗಿ ಕ್ರೂರವಾದ ಪ್ರಾಮಾಣಿಕತೆ ಬೇಡ. ಸಾಮಾನ್ಯವಾಗಿ, ಸಾಫ್ಟ್ವೇರ್ ಡೆವೆಲಪರ್ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರು ಹುರುಪಿನಿಂದ ತಮ್ಮ ಬಗ್ಗೆ ಅತಿಯಾಳದ ವೈಯಕ್ತಿಕ ವಿಷಯಗಳನ್ನು ತಿಳಿಸುತ್ತಾರೆ. ಇದರಿಂದ ಸುಮಾರು ಬಾರಿ ಅದು ಸಂದರ್ಶಕರ ದಿಕ್ಕು ತಪ್ಪಿಸಿ, ನಿಮಗೆ ದೊರಕಬಹುದಾದ ಉದ್ಯೋಗವನ್ನು ಕಿತ್ತುಕೊಳ್ಳಬಹುದು.
 • ಕಂಪ್ಯೂಟರ್ ವಿಜ್ಞಾನದ ಮೂಲಭೂತ ಅಂಶಗಳನ್ನು ತಿಳಿದುಕೊಂಡಿರಿ. ಲಿಸ್ಟ್ಸ್ ಅಥವಾ ಸ್ನಾಕ್ಸ್ ಈ ರೀತಿಯ ಹಲವಾರು ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಸಾಫ್ಟ್ವೇರ್ ಡೆವೆಲಪರ್ ವೃತ್ತಿಗೆ ಅನಿವಾರ್ಯ. ಹಾಗಾಗಿ, ಸಂದರ್ಶನಕ್ಕೆ ಹೋಗುವ ಮುನ್ನ ಈ ಎಲ್ಲಾ ವಿಷಯಗಳನ್ನು ಓದಿ, ತಿಳಿದುಕೊಳ್ಳಿ.
 • ನಿಮ್ಮ ವೃತ್ತಿ ಅನುಭವವನ್ನು ಸೃಜನಾತ್ಮಕವಾಗಿ ರಚಿಸಿಕೊಳ್ಳಿ. ಅಂದರೆ ಸಾಮಾನ್ಯವಾಗಿ, ಉದ್ಯೋಗದಾತರು ತಮ್ಮ ಕಂಪನಿಯಲ್ಲಿ ಅಭ್ಯರ್ಥಿಗಳಿಗೆ  ಕೆಲಸ ನೀಡಲು, ಅನುಭವವನ್ನು ನೋಡುತ್ತಾರೆ. ಆದರೆ, ಇಲ್ಲಿಯವರೆಗೆ ಕೆಲಸ ಮಾಡದೇ ಇರುವ ಅಭ್ಯರ್ಥಿಗೆ ಕೆಲಸದ ಅನುಭವ ಎಲ್ಲಿಂದ ಬರಬೇಕು? ಅದಕ್ಕೆ ಉತ್ತರ ಇಲ್ಲಿದೆ: ಓಪನ್ ಸೊರ್ಸ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿ. ಅಥವಾ ಮೊಬೈಲ್ ಆಪ್ ರಚಿಸಿ, ಅದನ್ನು ಆಪ್ ಸ್ಟೋರ್ ನಲ್ಲಿ ಪ್ರದರ್ಶಿಸಿ, ಬ್ಲಾಗ್ ಬರೆಯಿರಿ, ಇತ್ಯಾದಿ.

ಸಾಫ್ಟ್ವೇರ್ ಡೆವಲಪ್ಮೆಂಟ್ ಉದ್ಯೋಗ ಸುಲಭದ ವೃತ್ತಿ ಅಲ್ಲ. ಆದರೆ ನಿಮ್ಮ ಕನಸು ನೀವು ಸಾಫ್ಟ್ವೇರ್ ಡೆವೆಲಪರ್ ಉದ್ಯೋಗಿ ಆಗುವುದೇ ಆದಲ್ಲಿ, ಈ ಮೇಲೆ ನೀಡಿರುವ ಎಲ್ಲಾ ಮಾಹಿತಿಯನ್ನು ಬಳಸಿ, ಸುಲಭವಾಗಿ ನಿಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು. 

ನಿಮ್ಮ ಕನಸು ಸಾಕಾರಗೊಳ್ಳಲಿ ಎಂದು ಬಯಸುವ ಟೀಮ್ ಮಿಂಟ್ಲಿ