ಸೇಲ್ಸ್ ಉದ್ಯೋಗ ಕ್ಷೇತ್ರದಲ್ಲಿ ನಿಮಗೇಕೆ ಬೆಳವಣಿಗೆ ಆಗುತ್ತಿಲ್ಲ?

ಬೆಳವಣಿಗೆ ಎನ್ನುವುದು ಮಾನವನ ನೈಸರ್ಗಿಕ ಅಗತ್ಯತೆಗಳಲ್ಲಿ ಒಂದು. ನಮ್ಮ ಜೀವನದುದ್ದಕ್ಕೂ ನಾವು ವಿಭಿನ್ನ ರೂಪಗಳಲ್ಲಿ ತೃಪ್ತಿಗೊಳಿಸಲು ಪ್ರಯತ್ನಿಸುತ್ತೇವೆ. ಮಗುವಾಗಿದ್ದಾಗ ಅಂಬೆಗಾಲಿಡುವ ಮೂಲಕ ಅಥವಾ ತೊದಲ ನುಡಿಗಳ ಮೂಲಕ, ಬಾಲ್ಯದಲ್ಲಿ ದೈಹಿಕ ಬೆಳವಣಿಗೆಯ ಮೂಲಕ, ಪ್ರೌಢಾವಸ್ಥೆಯಲ್ಲಿ ಮಾನಸಿಕ ಬೆಳವಣಿಗೆಯ ಮೂಲಕ, ಹೀಗೆ ವಿವಿಧ ಬೆಳವಣಿಗೆಯ ಮೂಲಕ ನಮ್ಮ ಬೆಳೆಯುವ ಬಯಕೆಯನ್ನು ಈಡೇರಿಸಿಕೊಳ್ಳುತ್ತೇವೆ. ಅದೇ ರೀತಿ ನಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, ವೃತ್ತಿಪರ ಕಲಿಕೆ ಅಥವಾ ವೃತ್ತಿಯಲ್ಲಿ ಅಭಿವೃದ್ಧಿ ಹೊಂದುವ ಮೂಲಕ ನಾವು ಬೆಳೆಯಲು ಬಯಸುತ್ತೇವೆ. ಆದರೆ, ಯಾವುದೊ ಒಂದು ಸಮಯದಲ್ಲಿ ಅಥವಾ ಪರಿಸ್ಥಿತಿಯಲ್ಲಿ ಅಭಿವೃದ್ಧಿ ನಿಶ್ಚಲವಾದಾಗ, ಮಾನವನಿಗೆ ಆಗುವ ಬೇಸರ, ಹತಾಶೆ ಮತ್ತು ನೋವು ಹೇಳತೀರದು. ಅದರಲ್ಲಿಯೂ ನೀವು ಸೇಲ್ಸ್ ಉದ್ಯೋಗ ಕ್ಷೇತ್ರದಲ್ಲಿದ್ದರೆ, ನಿಮ್ಮ ವೃತ್ತಿಯಲ್ಲಿ ಅಭಿವೃದ್ಧಿ ಕಾಣದಿದ್ದರೆ, ಮನಸ್ಸಿಗೆ ನೋವಾಗುವುದು ಖಚಿತ.

ಸೇಲ್ಸ್ ವೃತ್ತಿ ಕಷ್ಟವಾದದ್ದು. ಸೇಲ್ಸ್ ವೃತ್ತಿಯಲ್ಲಿ ಬೆಳವಣಿಗೆ ಇನ್ನೂ ಹೆಚ್ಚು ಕಷ್ಟವಾದದ್ದು. ಏಕೆಂದರೆ ಈ ಉದ್ಯೋಗ ತನ್ನ ಉದ್ಯೋಗಿ ತಕ್ಕ ಮಟ್ಟಕ್ಕೆ ಒತ್ತಡಕ್ಕೊಳಗಾಗುವಂತೆ ಮಾಡುತ್ತದೆ. ಅದರೊಂದಿಗೆ ಈ ಉದ್ಯೋಗ ಹತ್ತು ಹಲವಾರು ಕಷ್ಟಕರ ಚಾಲೆಂಜ್ ಗಳನ್ನೂ ನೀಡುತ್ತದೆ. ಆದರೆ ಒಂದು ಬಿಸಿನೆಸ್ ಅಥವಾ ವ್ಯವಹಾರ ಬೆಳೆಯಲು ಸೇಲ್ಸ್ ಕ್ಷೇತ್ರ ಅತ್ಯಗತ್ಯ. ಸೇಲ್ಸ್ ಮಾಡುವವರಿಲ್ಲದೇ ಯಾವುದೇ ಬಗೆಯ ಬಿಸಿನೆಸ್ ಉನ್ನತಿ ಕಾಣುವ ಸಾಧ್ಯತೆ ಇಲ್ಲ. 

ಸೇಲ್ಸ್ ವೃತ್ತಿ ಕ್ಷೇತ್ರದಲ್ಲಿ ಯಾವುದೇ ವೃತ್ತಿಪರರು ಯಶಸ್ಸು ಕಾಣಲು ಸಾಧಿಸುವ ಛಲ ಮತ್ತು ಸ್ಥಿರತೆ ಅಗತ್ಯವಿದೆ. ಇವುಗಳಲ್ಲಿ ಯಾವುದೇ ಒಂದು ಕುಂದಿದರೂ, ಯಶಸ್ಸು ಕೈಗೆ ನಿಲುಕದ ಹಣ್ಣು. ಇದೇ ಕಾರಣದಿಂದಾಗಿ ಹಲವಾರು ಸೇಲ್ಸ್ ಕ್ಷೇತ್ರದ ಉದ್ಯೋಗಿಗಳು ತಮ್ಮ ಸೇಲ್ಸ್ ಗುರಿಗಳನ್ನು ತಲುಪಲು ವಿಫಲರಾಗುತ್ತಾರೆ. ಸೇಲ್ಸ್ ಸಂಬಂಧಿತ ಅವರ ಸಮಸ್ಯೆಗಳು ಅವರ ಕಾರ್ಯಕ್ಷಮತೆಗೆ ಅಡ್ಡಿಯುಂಟು ಮಾಡಲು ಅವಕಾಶ ಒದಗಿಸಿಕೊಡುತ್ತಾರೆ. ಆದರೆ ಅವರು ತಮ್ಮ ಉದ್ಯೋಗ ಕ್ಷೇತ್ರದ ಕುರಿತು, ತಮ್ಮ ಕಾರ್ಯವೈಖರಿಯನ್ನು ಕುರಿತು ಸರಿಯಾದ ರೀತಿಯಲ್ಲಿ ಸಮಾಲೋಚನೆ ಮಾಡಿದಲ್ಲಿ, ತಮ್ಮ ಉದ್ಯೋಗ ಕ್ಷೇತ್ರದಲ್ಲಿ ತಾವು ಬೆಳವಣಿಗೆ ಕಾಣಲು ಏಕೆ ಕಷ್ಟವಾಗುತ್ತಿದೆ ಎನ್ನುವುದನ್ನು ಅರಿತು ಕೊಳ್ಳಬಹುದು. 

ತಮ್ಮ ಸೇಲ್ಸ್ ವೃತ್ತಿಯ ನಿಶ್ಚಲ ಪರಿಸ್ಥಿತಿಗೆ ಕಾರಣವನ್ನು ಅರಿತುಕೊಳ್ಳಲು ಪ್ರಯತ್ನಪಟ್ಟು, ವಿಫಲರಾದವರಲ್ಲಿ ನೀವೂ ಒಬ್ಬವರಾಗಿದ್ದರೆ,  ನಿಮ್ಮ ಬಗ್ಗೆ ಮತ್ತು ನಿಮ್ಮ ವೃತ್ತಿ ಮತ್ತು ನಿಮ್ಮ ಕಾರ್ಯವೈಖರಿಯ ಬಗ್ಗೆ ನೀವೇ ಸ್ವಯಂ ವಿಶ್ಲೇಷಣೆ ಮಾಡಿಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ. 

ಸೇಲ್ಸ್ ಉದ್ಯೋಗ ಕ್ಷೇತ್ರದಲ್ಲಿ ನೀವು ಬೆಳವಣಿಗೆ ಕಾಣದೇ ಇರಲು ಕಾರಣಗಳೇನು?

ಸೇಲ್ಸ್ ವೃತ್ತಿಯಲ್ಲಿ ಬೆಳವಣಿಗೆ ಕಾಣದೇ ಇರಲು ಹಲವಾರು ಕಾರಣಗಳಿರಬಹುದು. ಈ ಭಾಗದಲ್ಲಿ ನಾವು ಪ್ರಮುಖ ಕಾರಣಗಳ ಬಗ್ಗೆ ಚರ್ಚಿಸಿದ್ದೇವೆ. 

ದಕ್ಷತೆಯ ಕೊರತೆ

ನಿಮ್ಮ ವೃತ್ತಿಯಲ್ಲಿ ನೀವು ಅಭಿವೃದ್ಧಿ ಕಾಣದೇ ಇರುವುದಕ್ಕೆ ಇರುವ ಸುಮಾರು ಕಾರಣಗಳಲ್ಲಿ ಇದು ಮುಖ್ಯವಾದದ್ದು. ಸೇಲ್ಸ್ ವೃತ್ತಿಪರರ ಕಡಿಮೆ ಉತ್ಪಾದಕತೆ ಅಥವಾ ಪ್ರೊಡಕ್ಟಿವಿಟಿ ಮತ್ತು ದಕ್ಷತೆಯ ಕೊರತೆ ಇಂದಾಗಿ ನಿಮ್ಮ ವೃತ್ತಿ ನರಳುತ್ತಿರಬಹುದು. ಉದಾಹರಣೆಗೆ: ಸೇಲ್ಸ್ ವೃತ್ತಿಪರರು ತಮ್ಮ ಕೆಲಸದ ಸುಮಾರು ಸಮಯವನ್ನು ವರದಿಗಳನ್ನು ಭರ್ತಿ ಮಾಡಲು, ಡೇಟಾ ಭರ್ತಿ ಮಾಡಲು, ಕಾಲ್ ಶೀಟ್ ಗಳಲ್ಲಿ ಅಗತ್ಯವಿರುವ ಮಾಹಿತಿಯನ್ನು ತುಂಬಿಸಲು ಮಾಡುವುದರಿಂದ ತಮ್ಮ ಸಂಸ್ಥೆಯ ಉತ್ಪನ್ನ ಅಥವಾ ಸೇವೆಗಳನ್ನು ಮಾರಾಟ ಮಾಡಲು ಕನಿಷ್ಠ ಸಮಯವನ್ನು ಹೊಂದುತ್ತಾರೆ. ಇದರಿಂದಾಗಿಯೇ ಸೇಲ್ಸ್ ವೃತ್ತಿಗೆ ಅಗತ್ಯವಿರುವ ಸಮಯವನ್ನು ನೀಡದೇ, ಲಭ್ಯವಿರುವ ಸಮಯವನ್ನೂ ಸೂಕ್ತ ರೀತಿಯಲ್ಲಿ ಬಳಸದೇ ತಮ್ಮ ವೃತ್ತಿಯಲ್ಲಿ ಅಭಿವೃದ್ಧಿ ಕುಂಟುವಿಕೆಯನ್ನು ಕಾಣುತ್ತಾರೆ. ಹಾಗಿದ್ದರೆ, ಈ ಸವಾಲಿಗೆ ಪರಿಹಾರ ಏನು? 

ಈ ಸವಾಲನ್ನು ಜಯಿಸಲು ಮತ್ತು ನಿಮ್ಮ ಸೇಲ್ಸ್ ವೃತ್ತಿಯಲ್ಲಿ ಯಶಸ್ಸು ಕಾಣಲು ಒಂದು ಸರಳ ಪರಿಹಾರವಿದೆ – ನಿಮ್ಮ ಅಗತ್ಯತೆಗಳ ಅನುಸಾರ ಯಾಂತ್ರಿಕೃತೆಯನ್ನು ಬಳಸಿ. 

ವಿವಿಧ ಬಗೆಯ ಸೇಲ್ಸ್ ಪರಿಕರಗಳನ್ನು ಬಳಸುವುದರಿಂದ ಮತ್ತು ತಂತ್ರಜ್ಞಾನದ ಉಪಯೋಗವನ್ನು ಅಗತ್ಯ ರೀತಿಯಲ್ಲಿ ಪಡೆದುಕೊಳ್ಳುವುದರಿಂದ, ಪ್ರತಿದಿನ ನಿಮ್ಮ ಬಹುಪಾಲು ಸಮಯವನ್ನು ತೆಗೆದುಕೊಳ್ಳುವ ಪ್ರಾಪಂಚಿಕ ಮತ್ತು ಆಡಳಿತಾತ್ಮಕ ಕಾರ್ಯಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದಕ್ಕೆ ಸಂಬಂಧಿತ ಮತ್ತು ನಿಮ್ಮ ಕಾರ್ಯಗಳಿಗೆ ಅನುಕೂಲವಾಗುವ ಹೊಸ ಉಪಕರಣಗಳು ನಿರಂತರವಾಗಿ ಮಾರುಕಟ್ಟೆಗೆ ಬರುತ್ತಿರುತ್ತವೆ. ನಿಮ್ಮ ಉದ್ದೇಶವನ್ನು ಪೂರೈಸುವ, ನಿಮ್ಮ ಕೆಲಸದಲ್ಲಿನ ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ನಿಮ್ಮ ದಕ್ಷತೆಯನ್ನು ಸುಧಾರಿಸುವ ಕಾರ್ಯಕ್ರಮಗಳನ್ನು ಅಥವಾ ಪರಿಕರಗಳನ್ನು ಹುಡುಕಿ, ಅಳವಡಿಸಿಕೊಳ್ಳಿ. 

ನಿರ್ಧಾರಗಳನ್ನು ತೆಗೆದುಕೊಳ್ಳಲು ದೀರ್ಘ ಸಮಯ ತೆಗೆದುಕೊಳ್ಳುವುದು

ಸೇಲ್ಸ್ ವೃತ್ತಿಪರರು ದೀರ್ಘ ಮಾರಾಟದ ಚಕ್ರಗಳೊಂದಿಗೆ (longer sales cycles) ವ್ಯವಹರಿಸುತ್ತಿದ್ದಾರೆ. ಈ ರೀತಿಯ ಸವಾಲು ಇತ್ತೀಚಿನ ದಿನಗಳಲ್ಲಿ ಸೇಲ್ಸ್ ವೃತ್ತಿಜೀವನದಲ್ಲಿ ಕಂಡು ಬರುತ್ತಿದೆ. ಇಂತಹ ಸವಾಲನ್ನು ಸೇಲ್ಸ್ ವೃತ್ತಿಪರರು ಅನಿವಾರ್ಯವಾಗಿ ಎದುರಿಸಬೇಕಾಗಿದೆ. ಅದಕ್ಕೆ ಕಾರಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದವರು ಅಗತ್ಯವಿರುವ ವಿಷಯದ ಬಗ್ಗೆ ನಿರ್ಧರಿಸಲು ದೀರ್ಘ ಕಾಲ ತೆಗೆದುಕೊಳ್ಳುವುದು. ಇದಕ್ಕೆ ಕಾರಣಗಳು ಹಲವಾರು – ಹೆಚ್ಚಿದ ಕೆಲಸದ ಹೊರೆ ಇರಬಹುದು ಅಥವಾ ಬಿಗಿಯಾದ ಬಜೆಟ್ ಗಳಿರಬಹುದು. ಈ ಎಲ್ಲಾ ಕಾರಣಗಳಿಂದಾಗಿ ಉತ್ಪನ್ನಗಳ ಅಥವಾ ಕಂಪನಿ ನೀಡುವ ಸೇವೆಗಳ ಮಾರಾಟ ಕಡಿಮೆಯಾಗುವುದು ಸಹಜ. ಇದನ್ನು ಹೇಗೆ ಪರಿಹರಿಸಬೇಕು?

ಈ ತೊಂದರೆಯನ್ನು ಮೆಟ್ಟಿ ನಿಂತು, ನಿಮ್ಮಸೇಲ್ಸ್ ವೃತ್ತಿಯಲ್ಲಿ ನೀವು ಯಶಸ್ಸು ಗಳಿಸಲು, ನೀವು ಸಂಭಾವ್ಯ ಗ್ರಾಹಕರ ಅಥವಾ ಲಭ್ಯವಿರುವ ಲೀಡ್ ಗಳನ್ನು ಸರಿಯಾಗಿ ಪೋಷಿಸುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಇದು ನಿಮ್ಮ ಸೇಲ್ಸ್ ಸೈಕಲ್ ಅಥವಾ ಸರಕು ಅಥವಾ ಸೇವೆಗಳ ಮಾರಾಟ ಚಕ್ರವನ್ನು ಕಡಿಮೆಗೊಳಿಸುತ್ತದೆ. ಮತ್ತು ಇದರಿಂದಾಗಿ ನಿಮ್ಮ ನೀರಿಕ್ಷಿತ ಗ್ರಾಹಕರನ್ನು ನಿಮ್ಮ ಕಂಪನಿ ಶಾಶ್ವತ ಗ್ರಾಹಕರಾಗಿ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇದ್ಕಕಾಗಿ ನೀವು ತೆಗೆದುಕೊಳ್ಳಬಹುದಾದ ಹಲವಾರು ಕ್ರಮಗಳಲ್ಲಿ ಕೆಲವು ಇಲ್ಲಿವೆ:

  • ನಿಮ್ಮ ಸಂಭಾವ್ಯ  ಕ್ಲಾಯಿಂಟ್ಸ್ ಅಥವಾ  ಗ್ರಾಹಕರನ್ನು ನಿರಂತರವಾಗಿ ನಿಮ್ಮ ಸಂಸ್ಥೆಯ ಅಭಿಯಾನಗಳಲ್ಲಿ ತೊಡಗಿಸಿಕೊಳ್ಳಿ. 
  • ನಿಮ್ಮ ಸಂಭಾವ್ಯ ಗ್ರಾಹಕರನ್ನು ಅಗತ್ಯ ರೀತಿಯಲ್ಲಿ ಪೋಷಿಸಿ. ಉದಾಹರಣೆಗೆ: ಇಮೇಲ್ ಅಭಿಯಾನ. 

ಇವುಗಳನ್ನು ಮಾಡುವುದರಿಂದ ನೀವು ನಿಮ್ಮ ಪೈಪ್ ಲೈನ್ ಅನ್ನು ತಯಾರಿಸಿ, ಅದರಲ್ಲಿರುವ  ಸಂಭಾವ್ಯ ಗ್ರಾಹಕರೊಂದಿಗಿನ ಒಪ್ಪಂದವನ್ನು ಶೀಘ್ರವಾಗಿ ಮತ್ತು ಯಶಸ್ವಿಯಾಗಿ ಪೂರೈಸಬಹುದು.

ಅರ್ಹ ಲೀಡ್ ಗಳನ್ನು ಗುರುತಿಸಿಕೊಳ್ಳುವುದು

ಸೇಲ್ಸ್ ವೃತ್ತಿ ಜೀವನದಲ್ಲಿ ಅರ್ಹ ಲೀಡ್ ಗಳನ್ನು ಹುಡುಕುವುದು ಮತ್ತುಗುರುತಿಸುವುದು ಅತ್ಯಂತ ಕಷ್ಟಕರವಾದ ಸವಾಲುಗಳಲ್ಲಿ ಒಂದು. ಇದನ್ನು ಸೂಕ್ತವಾಗಿ ಮಾಡಲು ಹಲವಾರು ಸೇಲ್ಸ್ ವೃತ್ತಿಪರರು ಹೆಣಗಾಡುತ್ತಾರೆ. ಇದರಿಂದಾಗಿಯೇ ವೃತ್ತಿಪರರ ಅಭಿವೃದ್ಧಿಗೆ ಕುತ್ತು ಸಹ ಉಂಟಾಗಬಹುದು. 

ಅನರ್ಹ ಲೀಡ್ ಗಳಿಗೆ ಸಂಸ್ಥೆಯ ಉತ್ಪನ್ನಗಳು ಅಥವಾ ಸೇವೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುವುದು ಸಮಯ ವ್ಯರ್ಥ ಮಾಡುವ ಕೆಲಸ. ಅದು ಸೇಲ್ಸ್ ವೃತ್ತಿಪರರ ಸಮಯ ಹಾಳು ಮಾಡುವುದಷ್ಟೇ ಅಲ್ಲದೇ, ಅವರ ಮಾಡುವ ಪ್ರಯತ್ನವೂ ವ್ಯರ್ಥವಾಗುತ್ತದೆ. ಹಾಗಿದ್ದರೆ, ನೀವು ನಿಮ್ಮ ಲೀಡ್ ಗಳು ಅರ್ಹರೇ? ಅಥವಾ ನಿಮ್ಮ ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಖರೀದಿಸಲು ಸಮರ್ಥರೇ ಎಂದು ಹೇಗೆ ಖಚಿತಪಡಿಸಿಕೊಳ್ಳಬೇಕು? ಅದಕ್ಕೆ ಉತ್ತರ ಇಲ್ಲಿದೆ.

ನಿಮ್ಮ ಲೀಡ್ ಗಳು ಹೇಗಿರಬೇಕು ಎನ್ನುವುದನ್ನು ನೀವು ಸ್ವತಃ ಅರ್ಥ ಮಾಡಿಕೊಳ್ಳಲು, ನಿಮ್ಮ ಆದರ್ಶ ಲೀಡ್ ಹೇಗಿರಬೇಕು ಎನ್ನುವುದರ ಕುರಿತು ಒಂದು ಲೀಡ್ ನ ಪ್ರೊಫೈಲ್ ಮಾಡಿಕೊಳ್ಳಿ. ನೀವು ನಿಜ ಜೀವನದಲ್ಲಿ ಗುರುತಿಸುವ ಎಲ್ಲಾ ಲೀಡ್ ಗಳನ್ನು ನಿಮ್ಮ ಈ ಆದರ್ಶ ಲೀಡ್ ಗಳಿಗೆ ಹೋಲಿಸಿ. ನಿಮ್ಮ ಲೀಡ್ ಗಳು ನಿಮ್ಮ ಆದರ್ಶ ಲೀಡ್ ಗಳಿಗೆ ಹೊಂದಿ ಕೊಳ್ಳುವುದಾದರೆ ಅಥವಾ ನಿಮ್ಮ ನೈಜ ಜೀವನದ ಲೀಡ್ ಗಳು ನಿಮ್ಮ ಆದರ್ಶ ಲೀಡ್ ರೀತಿಯೇ ಇದ್ದಾರೆ ಅನ್ನಿಸಿದರೆ, ನಿಮ್ಮ ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಅವರಿಗೆ ಮಾರಾಟ ಮಾಡಿ. ಇಲ್ಲವಾದಲ್ಲಿ, ಬೇರೆ ಸೂಕ್ತ ಲೀಡ್ ಗಳನ್ನು ಗುರುತಿಸಲು ಪ್ರಾರಂಭಿಸಿ.

ನಂಬಿಕೆ ಮತ್ತು ವಿಶ್ವಾಸಾರ್ಹತೆ ಬೆಳೆಸಿಕೊಳ್ಳಿ

ಅಮೆರಿಕಾದ ಬರಹಗಾರ ಮತ್ತು ಪ್ರಖ್ಯಾತಿ ಸೇಲ್ಸ್ ವೃತ್ತಿಪರ ಜಿಗ್ ಜಿಗ್ಲರ್ ಹೇಳಿರುವಂತೆ “ಜನರು ನಿನ್ನನ್ನು ಇಷ್ಟಪಟ್ಟರೆ, ಅವರು ನೀನು ಹೇಳುವುದನ್ನು ಕೇಳುತ್ತಾರೆ. ಆದರೆ, ಅವರು ನಿನ್ನನ್ನು ನಂಬಿದರೆ, ಅವರು ನಿನ್ನೊಂದಿಗೆ ವ್ಯವಹಾರ ಅಥವಾ ಬಿಸಿನೆಸ್ ಮಾಡಲು ತಯಾರಾಗುತ್ತಾರೆ.” 

ನಂಬಿಕೆ ಮತ್ತು ವಿಶ್ವಾಸಾರ್ಹತೆ ಎನ್ನುವುದು ಸೇಲ್ಸ್ ವೃತ್ತಿಜೀವನದಲ್ಲಿ ಅತ್ಯಂತ ಮುಖ್ಯವಾದದ್ದು. ನೀವು ನಿಮ್ಮ ಜೀವನದಲ್ಲಿ ಮತ್ತು ನಿಮ್ಮ ಸುತ್ತಮುತ್ತಲಿನ ಜನರಿಗೆ ವಿಶ್ವಾಸಾರ್ಹರು ಎಂದೆನಿಸದಿದ್ದರೆ, ನಿಮ್ಮ ಸೇಲ್ಸ್ ವೃತ್ತಿಜೀವನ ನೆಲ ಕಚ್ಚಿದಂತೆಯೇ! ವಾಸ್ತವವಾಗಿ ಮತ್ತು ದುರಾದೃಷ್ಟವಶಾತ್ – ಬಹುಪಾಲು ಖರೀದಿಗಾರರು ನಿಮ್ಮ ವಿಶ್ವಾಸಾರ್ಹತೆಯ ಕೊರತೆಯನ್ನು ಸುಲಭವಾಗಿ ಅರಿತುಕೊಳ್ಳುತ್ತಾರೆ. ಹಾಗಾಗಿ ಇದು ನಿಮ್ಮ ವೃತ್ತಿ ಜೀವನದ ಪ್ರಮುಖ ಮತ್ತು ನಿಮ್ಮ ಗೆಲುವಿಗೆ ದೊಡ್ಡ ಸವಾಲಾಗಬಹುದು. 

ನಿಮ್ಮ ಸೇಲ್ಸ್ ಗುರಿಗಳನ್ನು ತಲುಪಲು ಮತ್ತು ನಿಮ್ಮ ಸೇಲ್ಸ್ ಗಳನ್ನು ಸುಧಾರಿಸಲು, ನೀವು ಮಾಡಬೇಕಾದದ್ದು ಏನೆಂದರೆ ನೀವು ನಿಮ್ಮ ಗ್ರಾಹಕರು ನಿಮ್ಮನ್ನು ನಂಬುವಂತೆ ಮಾಡಬೇಕು. ನಿಮ್ಮ ಗ್ರಾಹಕರು ನಿಮ್ಮನ್ನು ನಂಬಿದರೆ ನಿಮ್ಮ ವಿಶ್ವಾಸಾರ್ಹತೆಯೂ ಹೆಚ್ಚುತ್ತದೆ. ಇದೇ ನಿಮ್ಮ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಮಾರಾಟ ಮಾಡುವ ದಾರಿ. ಇದರಿಂದ ನಿಮ್ಮ ಖರೀದಿಗಾರರು ನಿಮ್ಮೊಂದಿಗೆ ಆತ್ಮವಿಶ್ವಾಸದಿಂದ ಮತ್ತು ಸರಾಗವಾಗಿ ವ್ಯವಹರಿಸುತ್ತಾರೆ. ಹಾಗಿದ್ದರೆ, ನಿಮ್ಮ ಗ್ರಾಹಕರು ನಿಮ್ಮ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳುವಂತೆ ಮಾಡುವುದು ಹೇಗೆ? ಪ್ರಾಮಾಣಿಕವಾಗಿರಿ. ಪ್ರಾಮಾಣಿಕತೆ ಪ್ರತಿ ಸಲ ನಿಮ್ಮ ಹಿತಾಸಕ್ತಿಗೆ ಸಂಬಂಧಿಸದೇ ಇರಬಹುದು. ಆದರೆ ಅದು ನಿಮ್ಮ ಖರೀದಿಗಾರರಿಗೆ ಅಥವಾ ಸಂಭಾವ್ಯ ಗ್ರಾಹಕರಿಗೆ ನಿಮ್ಮ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. 

ನೀವು ನೀಡಿದ ಮಾತನ್ನು ಉಳಿಸಿಕೊಳ್ಳಿ. ಸತ್ಯವಾಗಿರಿ. ಮತ್ತು ನಿಮ್ಮ ಸರಕು ಅಥವಾ ಸೇವೆಗಳನ್ನು ಮಾರಾಟ ಮಾಡಲು ನಿಮ್ಮ ಕುಶಲತೆ ತಂತ್ರಗಳು ಅಥವಾ ಅಕ್ರಮನಾಶೀಲತೆಯನ್ನು ಬಳಸಬೇಡಿ. ಬದಲಾಗಿ, ನಿಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು, ನಿಮ್ಮ ಜ್ಞಾನವನ್ನು ಮತ್ತು ನಿಮ್ಮ ಅನಿಭವವನ್ನು ನಿಮ್ಮ ಸಂಭಾವ್ಯ ಗ್ರಾಹಕರೊಂದಿಗೆ ಹಂಚಿಕೊಳ್ಳಿ. ನಿಮ್ಮ ಜ್ಞಾನವನ್ನು ನಿಮ್ಮ ಖರಿದೆಗಾರರಿಗೆ ನಿಮ್ಮ ಬ್ಲಾಗ್ ಗಳ ಮೂಲಕ ಅಥವಾ ಸೆಮಿನಾರ್ ಗಳಲ್ಲಿ ಮಾತನಾಡುವ ಮೂಲಕ ಸಹ ತಿಳಿಸಕೊಡಬಹುದು. ಜನರಿಗೆ ನಿಮ್ಮ ಜ್ಞಾನದ ಬಗ್ಗೆ ಮತ್ತು ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಅರಿವಾದರೆ, ಅವರು ಖಂಡಿತವಾಗಿಯೂ ನಿಮ್ಮನ್ನು ನಂಬುತ್ತಾರೆ. ಇದರಿಂದ ನಿಮ್ಮ ಸೇಲ್ಸ್ ಗಳು ಹೆಚ್ಚಾಗಿ, ನಿಮ್ಮ ವೃತ್ತಿಯಲ್ಲಿ ನೀವೇ ಅಭಿವೃದ್ಧಿ ಕಾಣುತ್ತೀರಿ.

ನಿರಾಕರಣೆ 

ಸೇಲ್ಸ್ ವೃತ್ತಿಯಲ್ಲಿ ನಿರಾಕರಣೆಯನ್ನು ಎದುರಿಸುವುದು ಸುಲಭದ ಕೆಲಸವಲ್ಲ. ಏಕೆಂದರೆ ಸೇಲ್ಸ್ ವೃತ್ತಿಯಲ್ಲಿ ನೀವು ನಿಮ್ಮ ಸರಕು ಅಥವಾ ಸೇವೆಗಳನ್ನು ಖರೀದಿಸಲು ಒಪ್ಪಿಕೊಳ್ಳುವವರಿಗಿಂತ ಅದನ್ನು ಖರೀದಿಸಲು ನಿರಾಕರಿಸುವವರೇ ಹೆಚ್ಚು. ಈ ನಿರಾಕರಣೆಯ “ಇಲ್ಲ” ಎನ್ನುವ ಶಬ್ದ ದಿನದಲ್ಲಿ ನೂರಾರು ಬಾರಿ ಕೇಳಿದಾಗ, ಅದು ನಿಮ್ಮ ಮಾನಸಿಕ ಸ್ಥಿತಿಯನ್ನು ಏರುಪೇರುಗೊಳಿಸಲು ಪ್ರಾರಂಭಿಸುತ್ತದೆ.  ಅದರೊಂದಿಗೆ ನಿಮ್ಮ ನಿರ್ಧಾರಗಳ ಬಗ್ಗೆ ನೀವೇ ಅನುಮಾನ ಪಡುವಂತೆ ಆಗುತ್ತದೆ. ಆದರೆ ನೀವು ಇಂತಹ ಪರಿಸ್ಥಿತಿ ನಿಮ್ಮನ್ನು ನಿರುತ್ಸಾಹರಾಗುವಂತೆ ಮಾಡಲು ಅವಕಾಶ ಮಾಡಿಕೊಟ್ಟರೆ, ಅದು ಸೇಲ್ಸ್ ವೃತ್ತಿಯಲ್ಲಿ ನಿಮ್ಮ ಭವಿಷ್ಯವನ್ನೇ ಹಾಳು ಮಾಡಬಹುದು. ಅದರಿಂದಾಗಿ ನೀವು ಇಂತಹ ನಿರಾಕರಣೆಗಳನ್ನು ಮನಸ್ಸಿಗೆ ತೆಗೆದುಕೊಳ್ಳದೇ, ಕೊಡವಿ, ಮುನ್ನಡೆಯಬೇಕು. ಇಂತಹ ವೃತ್ತಿಜೀವನದ ನಿರಾಕರಣೆಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ ಇಂತಹ ನಿರಾಕರಣೆಗಳನ್ನು ನೀವು ಕಲಿಯಲು ಒಂದು ಬಗೆಯ ಅವಕಾಶ ಎಂದು ತಿಳಿದುಕೊಂಡರೆ, ಅದು ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಅವಕಾಶ ನೀಡಿ, ನಿಮ್ಮ ಮುಂದಿನ ಬಾರಿ ನಿಮ್ಮ ಸಂಭಾವ್ಯ ಗ್ರಾಹಕರನ್ನು ನಿಮ್ಮ ನಿಷ್ಠಾವಂತ ಗ್ರಾಹಕರಾಗಿ ಮಾಡಲು ಸಹಾಯ ಮಾಡಿ, ನಿಮ್ಮ ಸೇಲ್ಸ್ ವೃತ್ತಿ ಜೀವನದಲ್ಲಿ ನೀವು ಯಶಸ್ಸು ಕಾಣುವಂತೆ ಮಾಡುತ್ತದೆ.