2020 ಇಸವಿಯಲ್ಲಿ ಭಾರತದಲ್ಲಿರುವ ಅತ್ಯುತ್ತಮ ಉದ್ಯೋಗಗಳು

ನಿಮಗೆ ಇದು ತಿಳಿದಿದೆಯೇ?

ವಿಶ್ವ ಬ್ಯಾಂಕ್ ಅಂಕಿಅಂಶಗಳ (World Bank Data) ಅನುಸಾರ ಪ್ರತಿ ವರ್ಷ ಭಾರತದಲ್ಲಿ ಸರಿಸುಮಾರು  12 ಮಿಲಿಯನ್ ಯುವ ಜನತೆ ಭಾರತದ ಕಾರ್ಯಪಡೆಗೆ ಸೇರುತ್ತಾರೆ.

ಅಂದರೆ ಪ್ರತಿ ತಿಂಗಳಿಗೆ 1 ಮಿಲಿಯನ್ ಯುವಜನತೆಗೆ ಭಾರತ ಸರ್ಕಾರ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕು. ಅದು ಸಾಧ್ಯವೇ? ಅದರೊಂದಿಗೆ, ಇಂದಿನ ಮಷೀನ್ ಜೀವನದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಎಲ್ಲವೂ ಆಟೋಮ್ಯಾಟಿಕ್ ಅಥವಾ ಯಾಂತ್ರೀಕೃತ  ಆಗಿರುವುದರಿಂದ, ಮಾನವರು ಯಂತ್ರಗಳೊಂದಿಗೆ ಸ್ಪರ್ಧಿಸುವ ಪರಿಸ್ಥಿತಿ ಬಂದಿದೆ. 

ಇತ್ತೀಚಿಗೆ, ಸಾಮಾಜಿಕ  ಜಾಲತಾಣಗಳಲ್ಲಿ ಒಂದಾಗಿರುವ ವೃತ್ತಿಪರ ನೆಟ್ ವರ್ಕಿಂಗ್ ವೇದಿಕೆ, ಲಿಂಕ್ಡ್ ಇನ್ (LinkedIn), ಭಾರತದಲ್ಲಿ 2020 ಇಸವಿಯ ಅತ್ಯುತ್ತಮ  ಉದ್ಯೋಗಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆ ವರದಿಯ ಹೆಸರು “ದಿ ಲಿಂಕ್ಡ್ಇನ್ ಎಮರ್ಜಿಂಗ್ ಜಾಬ್ಸ್ 2020 (2020 ಇಸವಿಯ ಉದಯೋನ್ಮುಖ ಉದ್ಯೋಗಗಳು)”. ಈ ವರದಿಯ ಅನುಸಾರ ಹಲವಾರು ಉದ್ಯೋಗಗಳು ಅಕ್ಷರಶಃ ಯಂತ್ರಗಳಿಗೆ ಸಂಬಂಧಿತವಾಗಿವೆ. ಉದಾಹರಣೆಗೆ ಬ್ಲಾಕ್ ಚೈನ್ ಡೆವೆಲಪರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಪೆಷಲಿಸ್ಟ್ ಮತ್ತು ಜಾವಾಸ್ಕ್ರಿಪ್ಟ್ ಡೆವೆಲಪರ್ ವೃತ್ತಿಗಳು ಲಿಂಕ್ಡ್ಇನ್ ನ ಈ ವರದಿಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ  ಸ್ಥಾನವನ್ನು ಅಲಂಕರಿಸಿದೆ. 

ತಾಂತ್ರಿಕ ಉದ್ಯೋಗಗಳು ಈ ವರದಿಯಲ್ಲಿ ಅಗ್ರ ಸ್ಥಾನಗಳನ್ನು ಅಲಂಕರಿಸಿದ್ದರೂ, ಕಸ್ಟಮರ್ ಸಕ್ಸಸ್ ಸ್ಪೆಷಲಿಸ್ಟ್ ಅಥವಾ ಡಿಜಿಟಲ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್ ಮತ್ತು ಲೀಡ್ ಜನರೇಶನ್ ಸ್ಪೆಷಲಿಸ್ಟ್ ಗಳಂತಹ ತಾಂತ್ರಿಕೇತರ ಉದ್ಯೋಗಗಳು ಸಹ ಈ ವರ್ಷದ ಭಾರತದ ಅತ್ಯುತ್ತಮ ಉದ್ಯೋಗಗಳ ಪಟ್ಟಿಯಲ್ಲಿ ಗಮನಾರ್ಹ ಏರಿಕೆ ಕಂಡಿದೆ. 

ಲಿಂಕ್ಡ್ಇನ್ ನ ಈ ಪಟ್ಟಿಯ ಕುರಿತು ವಿಶ್ಲೇಷಿಸಿದ ರುಚಿ ಆನಂದ್ (ಭಾರತದ ಟ್ಯಾಲೆಂಟ್ ಸೊಲ್ಯೂಷನ್ಸ್ ಮತ್ತು ಲರ್ನಿಂಗ್ ಸೊಲ್ಯೂಷನ್ಸ್ ಮುಖ್ಯಸ್ಥರು), “ಈ ವರ್ಷದ ಉದಯೋನ್ಮುಖ ಉದ್ಯೋಗಗಳ ವರದಿಯು ಬದಲಾಗುತ್ತಿರುವ ಭಾರತದ ಆರ್ಥಿಕತೆಯ ಕಿಟಕಿಯಾಗಿದೆ” ಎನ್ನುವ ಹೇಳಿಕೆಯನ್ನು ಸಹ ನೀಡಿದ್ದಾರೆ.

2020 ಇಸವಿಯ ಭಾರತದಲ್ಲಿರುವ ಅತ್ಯುತ್ತಮ ಉದ್ಯೋಗಗಳು 

 • ಬ್ಲಾಕ್ ಚೈನ್ ಡೆವೆಲಪರ್

ಬ್ಲಾಕ್ ಚೈನ್ ಅನ್ನು ಸರಳವಾಗಿ ವಿವರಿಸಬೇಕು ಎಂದರೆ ಬ್ಲಾಕ್ ಚೈನ್ ವಿಕೇಂದ್ರೀಕೃತಗೊಂಡಿರುವ ಡಿಜಿಟಲ್ ಲೆಡ್ಜರ್ ಆಗಿದ್ದು, ಅದು ವಹಿವಾಟುಗಳನ್ನು ದಾಖಲಿಸಿಕೊಳ್ಳುವ  ಸಾಮರ್ಥ್ಯ ಹೊಂದಿದೆ. ಕ್ರಿಪ್ಟೋಕರೆನ್ಸಿ ವಹಿವಾಟುಗಳನ್ನು ದಾಖಲಿಸುವುದು ಇದರ ಜನಪ್ರಿಯ ಉಪಯೋಗಗಳಲ್ಲಿ ಒಂದಾದರೂ, ಬ್ಲಾಕ್ ಚೈನ್ ವಿವಿಧ ಬಗೆಯ ಮಾಹಿತಿಯನ್ನು ದಾಖಲಿಸಲು ಸಹ ಇದನ್ನು ಉಪಯೋಗಿಸಿಕೊಳ್ಳಬಹುದು. ಬ್ಲಾಕ್ ಚೈನ್ ಲೆಡ್ಜರ್ ನಲ್ಲಿ ಹೊಸ ಮಾಹಿತಿಯನ್ನು ಸೇರಿಸಬಹುದೇ ಹೊರತು ಹಳೆಯ ಮಾಹಿತಿಯನ್ನು ಮಾರ್ಪಡಿಸಲಾಗುವುದಿಲ್ಲ. ಸೇರಿಸುವ ಹೊಸ ಮಾಹಿತಿ ಮತ್ತು ಈಗಾಗಲೇ ಲಭ್ಯವಿರುವ ಮಾಹಿತಿಯನ್ನು ಬ್ಲಾಕ್ ಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.

ಬ್ಲಾಕ್ ಚೈನ್ ಡೆವೆಲಪರ್ ಬ್ಲಾಕ್ ಚೈನ್ ಪ್ರೋಟೋಕಾಲ್ ಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಈಗಾಗಲೇ ಲಭ್ಯವಿರುವ ಪ್ರೋಟೋಕಾಲ್ ಗಳನ್ನು ಉತ್ತಮಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅದರೊಂದಿಗೆ ಬ್ಲಾಕ್ ಚೈನ್ ಡೆವೆಲಪರ್ ಗಳು ಬ್ಲಾಕ್ ಚೈನ್ ವಾಸ್ತುಶಿಲ್ಪವನ್ನು ರೂಪಿಸುವ ಜವಾಬ್ದಾರಿಯನ್ನೂ ಹೊಂದಿರುತ್ತಾರೆ. ಬ್ಲಾಕ್ ಚೈನ್ ಡೆವೆಲಪರ್ ವೇತನ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ನ ವೇತನಕ್ಕಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚಾಗಿರುತ್ತದೆ. ನಿಮಗೆ ಬ್ಲಾಕ್ ಚೈನ್ ಡೆವೆಲಪರ್ ಉದ್ಯೋಗದಲ್ಲಿಯೇ   ವರ್ಷಕ್ಕಿಂತ ಹೆಚ್ಚು ಅನುಭವ ಇದ್ದರೆ, ನಿಮ್ಮ ವೇತನ ವರ್ಷಕ್ಕೆ ಕನಿಷ್ಠ 45 ಲಕ್ಷವಿರುತ್ತದೆ. ಭಾರತದ ಉತ್ತಮ ವೇತನವುಳ್ಳ ಉದ್ಯೋಗಗಳಲ್ಲಿ ಬ್ಲಾಕ್ ಚೈನ್ ಡೆವೆಲಪರ್ ಕೂಡ ಒಂದು.

 • ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸ್ಪೆಷಲಿಸ್ಟ್

2016 ರಲ್ಲಿ, ಅಮೆರಿಕಾದ ಜಾರ್ಜಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಗಣಕಯಂತ್ರ ವಿಜ್ಞಾನದ ಪ್ರಾಧ್ಯಾಪಕರಾದ ಅಶೋಕ್ ಗೋಯೆಲ್ ತಮ್ಮ ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಉತ್ತರಿಸಲು ಒಂದು ಯಂತ್ರವನ್ನು ತಯಾರಿಸಿದರು. ಆ ಯಂತ್ರಕ್ಕೆ “ಜಿಲ್ ವಾಟ್ಸನ್” ಎಂದು ನಾಮಕರಣ ಸಹ ಮಾಡಿದರು. ಆಶ್ಚರ್ಯ ಸಂಗತಿಯೆಂದರೆ ಈ ಯಂತ್ರ ತನ್ನ ವಿದ್ಯಾರ್ಥಿಗಳ ಪ್ರಶ್ನೆಗೆ ಎಷ್ಟು ಸರಾಗವಾಗಿ ಉತ್ತರಿಸುತ್ತಿತ್ತು ಎಂದರೆ ಉತ್ತರಿಸುತ್ತಿರುವುದು ಮಾನವನಲ್ಲ, ಒಂದು ಯಂತ್ರ ಎಂದು  ಯಾವ ವಿದ್ಯಾರ್ಥಿಗೂ ಅನುಮಾನ ಬಂದಿರಲಿಲ್ಲ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂದರೆ ಇದೇ!  

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸ್ಪೆಷಲಿಸ್ಟ್ ಉದ್ಯೋಗವೂ ಖಂಡಿತವಾಗಿಯೂ ಭಾರತದಲ್ಲಿ ಅತ್ಯುತ್ತಮ ಉದ್ಯೋಗಗಳಲ್ಲಿ ಒಂದು. ಏಕೆಂದರೆ ಇಂದಿನ ಡಿಜಿಟಲ್ ಇಂಡಿಯಾ ತರಹದ ಕಾರ್ಯಕ್ರಮದಲ್ಲಿ ಇದು ಖಂಡಿತವಾಗಿ ಉನ್ನತ ಸ್ಥಾನವನ್ನು ಅಲಂಕರಿಸಬಹುದು. 

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸ್ಪೆಷಲಿಸ್ಟ್ ಅಥವಾ ಕೃತಕ ಬುದ್ಧಿಮತ್ತೆ ತಜ್ಞರು ಕಂಪ್ಯೂಟರ್ ಗಳನ್ನು ಮಾನವರಂತೆ ಯೋಚಿಸುವಂತೆ ಮಾಡಲು ಪ್ರೋಗ್ರಾಮ್ ಮಾಡುತ್ತಾರೆ. ಕೆಲವು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಜ್ಞರು ಕಂಪ್ಯೂಟರ್ ಗಳನ್ನು ಮಾನವನ ಮನಸ್ಸು ಹಾಗೂ ಮೆದಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ಅರ್ಥೈಸಿಕೊಳ್ಳಲು ಬಳಸುತ್ತಾರೆ. ಉದಾಹರಣೆಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಜ್ಞರು ಮಾನವ ತನಗೆ ಪರಿಚವಿರುವವರನ್ನು ನೋಡಿದಾಗ ಹೇಗೆ ಅವನ ಮೆದುಳು ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ಅರ್ಥೈಸಿಕೊಳ್ಳಲು ಉಪಯೋಗಿಸಿಕೊಳ್ಳಬಹುದು. 

 • ಜಾವಾಸ್ಕ್ರಿಪ್ಟ್ ಡೆವೆಲಪರ್

ಇತ್ತೀಚಿನ ದಿನಗಳಲ್ಲಿ ಜಾವಾಸ್ಕ್ರಿಪ್ಟ್ ಯಾವುದೇ  ಸಂಸ್ಥೆಯ ಅಥವಾ ಕಂಪನಿಯ ಜೀವಾಳವಾಗಿದೆ. ಇದೇ ಕಾರಣದಿಂದಾಗಿ ಜಾವಾಸ್ಕ್ರಿಪ್ಟ್ ಡೆವೆಲಪರ್ ಉತ್ತಮ ವೇತನವುಳ್ಳ ಉದ್ಯೋಗಗಳಲ್ಲಿ ಒಂದಾಗಿದೆ.

ಯಾವುದೇ ವೆಬ್ಸೈಟ್ ಅಥವಾ ಯಾವುದೇ ರೀತಿಯ ಅಪ್ಲಿಕೇಶನ್ ಗಳನ್ನು ಮಾಡುತ್ತಿರುವ  ಯಾವುದೇ ಸ್ಟಾರ್ಟ್ ಅಪ್ ಅಥವಾ ಕಂಪನಿ ಗಳು ಯಾವಾಗಲೂ ಜಾವಾಸ್ಕ್ರಿಪ್ಟ್ ಜ್ಞಾನವನ್ನು ಹೊಂದಿರುವವರನ್ನು ತಮ್ಮಲ್ಲಿರುವ ಉದ್ಯೋಗಗಳಿಗಾಗಿ ಹುಡುಕುತ್ತಾರೆ. ಜಾವಾಸ್ಕ್ರಿಪ್ಟ್ ಕಂಪ್ಯೂಟರ್ ಭಾಷೆಯೂ ಅತ್ಯುತ್ತಮ ಉದ್ಯೋಗಗಳಲ್ಲಿ ಒಂದಾಗಿದ್ದು, ಇಂದಿನ ಕಾಲದಲ್ಲಿ ಈ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಇದೆ. ಅದೇ  ಕಾರಣದಿಂದಾಗಿ ಲಿಂಕ್ಡ್ ಇನ್ ನಲ್ಲಿ ಸಾವಿರಾರು ಜಾವಾಸ್ಕ್ರಿಪ್ಟ್  ಉದ್ಯೋಗಾವಕಾಶಗಳನ್ನು ಕಾಣಬಹುದು. HTML ಮತ್ತು CSS ವೆಬ್ಸೈಟ್ ಪುಟಗಳಿಗೆ ಸ್ಟೈಲಿಂಗ್ ನೀಡಿದರೆ, ಜಾವಾಸ್ಕ್ರಿಪ್ಟ್ ಅವುಗಳನ್ನು ಜೀವಂತಗೊಳಿಸುತ್ತದೆ. ಅದನ್ನು ಜೀವಂತಗೊಳಿಸಲು ಸಹಾಯ ಮಾಡುವುದೇ ಜಾವಾಸ್ಕ್ರಿಪ್ಟ್ ಡೆವೆಲಪರ್. ಜಾವಾಸ್ಕ್ರಿಪ್ಟ್ ಡೆವೆಲಪರ್ ಗೆ ಇಂದಿನ ಕಾಲದಲ್ಲಿ ಇರುವ ಅತಿಯಾದ ಬೇಡಿಕೆಯಿಂದಾಗಿ, ಇದು ಭಾರತದ ಅತ್ಯುತ್ತಮ ಉದ್ಯೋಗಗಳಲ್ಲಿ ಒಂದಾಗಿದೆ. ಅದರೊಂದಿಗೆ, ಇದು ಉತ್ತಮ ವೇತನವುಳ್ಳ ಉದ್ಯೋಗವೂ ಆಗಿದೆ.

 • ರೊಬೋಟಿಕ್ ಪ್ರೋಸೆಸ್ ಆಟೋಮೇಷನ್ ಕನ್ಸಲ್ಟೆಂಟ್

ಬಿಸಿನೆಸ್ ಪ್ರೋಸೆಸ್ ಆಟೋಮೇಷನ್ ಎಂದರೆ ಸಂಕೀರ್ಣ ವ್ಯವಹಾರ ಪ್ರಕ್ರಿಯೆಗಳ ತಂತ್ರಜ್ಞಾನವನ್ನು ಯಾಂತ್ರಿಕೃತಗೊಳಿಸುವುದು. ರೊಬೋಟಿಕ್ ಪ್ರೋಸೆಸ್ ಆಟೋಮೇಷನ್ ಎನ್ನುವುದು ಬಿಸಿನೆಸ್ ಪ್ರೋಸೆಸ್ ಆಟೋಮೇಷನ್ ತಂತ್ರಜ್ಞಾನದ ಬಗೆ. ಆದರೆ ಈ ಬಗೆಯ ಆಟೋಮೇಷನ್ ನಲ್ಲಿ ಸಾಫ್ಟ್ ವೆರ್ ರೋಬೋಟ್ ಅಥವಾ ಕೃತಕ ಬುದ್ಧಿಯುಳ್ಳ ಕಾರ್ಯಕರ್ತರನ್ನು ಉಪಯೋಗಿಸಲಾಗುತ್ತದೆ. 

ರೊಬೋಟಿಕ್ ಪ್ರೋಸೆಸ್ ಆಟೋಮೇಷನ್ ಕನ್ಸಲ್ಟೆಂಟ್ ಈ ಪ್ರಕ್ರಿಯೆಗೆ ಅಗತ್ಯವಿರುವ ರೋಬೋಟ್ ಗಳನ್ನು ವಿನ್ಯಾಸ ಮಾಡುವುದು, ಈಗಾಗಲೇ ಲಭ್ಯವಿರುವ ವಿನ್ಯಾಸವನ್ನು ಅಭಿವೃದ್ಧಿಗೊಳಿಸುವುದು, ಅದನ್ನು ಪರೀಕ್ಷಿಸುವುದು ಮತ್ತು ರೋಬೋಟ್ ಗಳನ್ನು ಪ್ರಕ್ರಿಯೆಯಲ್ಲಿ ಅನುಷ್ಠಾನಗೊಳಿಸುವುದು ರೊಬೋಟಿಕ್ ಪ್ರೋಸೆಸ್ ಆಟೋಮೇಷನ್ ಕನ್ಸಲ್ಟೆಂಟ್ ಕೆಲಸ ಜವಾಬ್ದಾರಿಗಳು. ಅದರೊಂದಿಗೆ, ಈಗಾಗಲೇ ಅತಿತ್ವದಲ್ಲಿರುವ ಪ್ರಕ್ರಿಯೆಯಲ್ಲಿ ಸುಧಾರಣೆಯ ಅವಕಾಶಗಳನ್ನು ಗುರುತಿಸಿ ಮತ್ತು ರೊಬೋಟಿಕ್ ಪ್ರೋಸೆಸ್ ಆಟೋಮೇಷನ್ ಸಾಫ್ಟ್ ವೆರ್ ಬಳಸಿ ಅಸ್ತಿತ್ವದಲ್ಲಿರುವ ಪ್ರಕ್ರಿಯೆಯನ್ನು ಯಾಂತ್ರೀಕೃತಗೊಳಿಸುವುದು ಸಹ ಈ ವೃತ್ತಿಯ ಜವಾಬ್ದಾರಿಯಾಗಿದೆ. 

ರೊಬೋಟಿಕ್ ಪ್ರೋಸೆಸ್ ಆಟೋಮೇಷನ್ ಕನ್ಸಲ್ಟೆಂಟ್ ಅಗತ್ಯ ಪ್ರಕ್ರಿಯೆಯ ನವೀಕರಣ, ದೋಷ ಪರಿಹಾರ ಮತ್ತು ಪ್ರಕ್ರಿಯೆ ಬದಲಾವಣೆಯಂತಹ ಯಾವುದೇ ಚಟುವಟಿಕೆಗಳನ್ನು ಹೊಂದಿರುವ ಯಾವುದೇ ಕಾರ್ಯಾಚರಣೆಗಳಿಗೆ ಬಂಬಲವನ್ನು ಒದಗಿಸುವುದು ಇವರ ಜವಾಬ್ದಾರಿಯಾಗಿರುತ್ತದೆ. ವ್ಯವಹಾರ ಅಗತ್ಯತೆಗಳು ಮತ್ತು ತಂತ್ರಜ್ಞಾನ ಪರಿಹಾರಗಳ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಿ, ಗ್ರಾಹಕರ ವ್ಯವಹಾರ ಅಗತ್ಯಗಳನ್ನು ಪೂರೈಸಲು ಪರಿಹಾರಗಳನ್ನು ರಚಿಸಲು ಸಹಾಯ ಮಾಡುವುದೂ ರೊಬೊಟಿಕ್ ಪ್ರೋಸೆಸ್ ಆಟೋಮೇಷನ್ ಕನ್ಸಲ್ಟೆಂಟ್ ಜವಾಬ್ದಾರಿ. 

 • ಬ್ಯಾಕ್-ಎಂಡ್ ಡೆವೆಲಪರ್

ಬ್ಯಾಕ್-ಎಂಡ್ ಡೆವಲಪ್ಮೆಂಟ್ ಅಂದರೆ ಸರ್ವರ್ ಕಡೆ ಮಾಡುವ ಅಭಿವೃದ್ಧಿ ಅಥವಾ ಡೆವಲಪ್ಮೆಂಟ್. ಬ್ಯಾಕ್ ಎಂಡ್ ಡೆವಲಪ್ಮೆಂಟ್ ಎಂದರೆ ವೆಬ್ಸೈಟ್ ಸಂಬಂಧಿತ ತೆರೆಮರೆಯ ಚಟುವಟಿಕೆಗಳು. ಉದಾಹರೆಣೆಗೆ ಈ ಚಟುವಟಿಕೆಗಳು ನಿಮ್ಮ ಖಾತೆಗೆ ಲಾಗಿನ್ ಆಗುವುದೇ ಆಗಿರಬಹುದು ಅಥವಾ ಆನ್ಲೈನ್ ಪೋರ್ಟಲ್ ನಿಂದ ಯಾವುದೊ ಒಂದು ವಸ್ತು ಖರೀದಿಸುವುದೇ ಆಗಿರಬಹುದು.

ಬ್ಯಾಕ್ ಎಂಡ್ ಡೆವೆಲಪರ್ ವೆಬ್ಸೈಟ್ ನ ಡೇಟಾಬೇಸ್, ಸ್ಕ್ರಿಪ್ಟಿಂಗ್ ಮತ್ತು ವೆಬ್ಸೈಟ್ ನ ವಾಸ್ತುಶಿಲ್ಪದ ಮೇಲೆ ಗಮನ ಹರಿಸಿ, ಅದರ ಕುರಿತಾಗಿ ಕೆಲಸ ಮಾಡುತ್ತಾರೆ. ಅಂದರೆ ಬ್ಯಾಕ್ ಎಂಡ್ ಡೆವೆಲಪರ್ ಆಗಿ ಕೆಲಸ ಮಾಡುವವರು ತಮ್ಮ ಡೇಟಾಬೇಸ್ ಕುರಿತಾಗಿ ಮಾಹಿತಿಯನ್ನು ಬ್ರೌಸರ್ ಗೆ ಸಂವಹನ ಮಾಡಲು ಸಹಾಯ ಮಾಡುತ್ತಾರೆ.

 • ಗ್ರೋಥ್ ಮ್ಯಾನೇಜರ್

ಪ್ರತಿ ಕಂಪನಿಗೆ ತನ್ನ ಆದಾಯ ಮತ್ತು ಲಾಭವನ್ನು ಹೆಚ್ಚಿಸುವುದು ಪ್ರಮುಖ ಉದ್ದೇಶಗಳಲ್ಲಿ ಒಂದಾಗಿರುತ್ತದೆ. ಹಾಗಾಗಿ, ಕಂಪನಿಯ ಪ್ರತಿ ಕಾರ್ಯವೂ ಈ ಮುಖ್ಯ ಉದ್ದೇಶವನ್ನು ಸಾಕಾರಗೊಳಿಸಲು ಸಹಾಯ ಮಾಡುವುದು ಅವುಗಳ  ಜವಾಬ್ದಾರಿ. ಮತ್ತು ಇದನ್ನು ಸಾಕಾರಗೊಳಿಸಲು ದಿಕ್ಕು ತೋರಿಸುವುದು ಗ್ರೋಥ್ ಮ್ಯಾನೇಜರ್ ನ ಜವಾಬ್ದಾರಿ. 

ಗ್ರೋಥ್ ಮ್ಯಾನೇಜರ್ ಅಥವಾ ಕಂಪನಿಯ ಬೆಳವಣಿಗೆಯ ವ್ಯವಸ್ಥಾಪಕ ಸಾಮಾನ್ಯವಾಗಿ ಕಂಪನಿಯ ಬೆಳವಣಿಗೆಯ ಮುಖ್ಯಸ್ಥ ಎಂದು ಕರೆಯಲ್ಪಡುತ್ತಾರೆ. ಈ ಉದ್ಯೋಗವು ಭಾರತದ ಅತ್ಯುತ್ತಮ ಉದ್ಯೋಗಗಳಲ್ಲಿ ಒಂದು ಏಕೆಂದರೆ ಈ ವೃತ್ತಿ ಕಂಪನಿಯ ಬೆಳವಣಿಗೆಯಲ್ಲಿ ಹೆಚ್ಚಿನ ಕೂಡುಗೆಯನ್ನು ನೀಡುತ್ತದೆ. ಗ್ರೋಥ್ ಮ್ಯಾನೇಜರ್ ಆದಾವರು ತನ್ನ ಕಂಪನಿಯ ಗ್ರಾಹಕರನ್ನು ಸ್ವಾಧೀನಪಡಿಸಿಕೊಂಡು ಮತ್ತು ಅವರನ್ನು ಉಳಿಸಿಕೊಳ್ಳಲು ಶಿಸ್ತುಬದ್ಧ ಅಭಿವೃದ್ಧಿಪರ ಯೋಜನಯೊಂದಿಗೆ ಸಹಾಯ ಮಾಡುತ್ತಾರೆ. ಅದರೊಂದಿಗೆ ಕಂಪನಿಯ ಸರಕುಗಳನ್ನು ಮತ್ತು ಸೇವೆಗಳನ್ನು ಹೆಚ್ಚಿನ ಆದಾಯಕ್ಕೆ ಮಾರಾಟ ಮಾಡಲು ಸಹಾಯ ಮಾಡುತ್ತಾರೆ. ಇದನ್ನು ಹೇಗೆ ಮಾಡುತ್ತಾರೆ? ಗ್ರೋಥ್ ಮ್ಯಾನೇಜರ್ ಆದವರು ತಮ್ಮ ಗ್ರಾಹಕರೊಂದಿಗೆ ಚರ್ಚಿಸಿ ಮತ್ತು ಅನಲಿಟಿಕ್ಸ್, ಅಪೇರೇಷನ್ಸ್, ಮಾರ್ಕೆಟಿಂಗ್ ತರಹದ ಇತರ ಆಂತರಿಕ  ಇಲಾಖೆಗಳೊಂದಿಗೆ ಚರ್ಚಿಸಿ, ಕಂಪನಿಯ ಬೆಳವಣಿಗೆಯ ಗುರಿಗಳನ್ನು ಸಾಧಿಸಲು ಮತ್ತು ಪ್ರಮುಖ ಕಾರ್ಯಕ್ಷಮತೆ ಸೂಚಕಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತಾರೆ. ಬೆಳವಣಿಗೆ ನಿರ್ವಹಣಾ ತಂಡವನ್ನು ನೇಮಕ ಮಾಡುವುದು ಮತ್ತು ನಿರ್ವಹಿಸುವುದು ಸಹ ಬೆಳವಣಿಗೆ ವ್ಯವಸ್ಥಾಪಕರ ಅಥವಾ ಗ್ರೋಥ್ ಮ್ಯಾನೇಜರ್ ನ ಕಾರ್ಯಜವಾಬ್ದಾರಿಗಳಲ್ಲಿ ಒಂದಾಗಿದೆ.

 • ಸೈಟ್ ರಿಲೈಯಬಿಲಿಟಿ ಇಂಜಿನಿಯರ್:

ಸೈಟ್ ರಿಲೈಯಬಿಲಿಟಿ ಇಂಜಿನಿಯರಿಂಗ್ ಎಂದರೆ ಸಾಫ್ಟ್ವೇರ್ ಇಂಜಿನಿಯರಿಂಗ್ ಅಂಶಗಳನ್ನು ಒಳಗೊಂಡಿರುವ ಒಂದು ವಿಭಾಗವಾಗಿದೆ. ಇದನ್ನು ಸಂಸ್ಥೆಯ ಮೂಲಸೌಕರ್ಯಗಳ ಕುರಿತು ಮತ್ತು ಸಂಸ್ಥೆಯ ಕಾರ್ಯಾಚರಣೆಗಳ ಸಮಸ್ಯೆಗಳನ್ನು ನಿವಾರಿಸಲು ಅನ್ವಯಿಸಲಾಗುತ್ತದೆ. ಈ ಕಾರ್ಯಕ್ಷೇತ್ರದ ಪ್ರಮುಖ ಉದ್ದೇಶಗಳೆಂದರೆ ವಿಶ್ವಾಸಾರ್ಹ ಸಾಫ್ಟ್ ವೆರ್ ವ್ಯವಸ್ಥೆಗಳನ್ನು ರಚಿಸುವುದು. ಬೆನ್ ಟ್ರೆಯ್ನೋರ್ (ಗೂಗಲ್ ನ ಸೈಟ್ ರಿಲೈಯಬಿಲಿಟಿ ಇಂಜಿನಿಯರ್) ಅನುಸಾರ “ಕಂಪನಿಯ ಕಾರ್ಯಾಚರಣೆಯನ್ನು ಇಂಜಿನಿಯರ್ ಗೆ ವಹಿಸಿದರೆ ಉಂಟಾಗುವ ಜವಾಬ್ದಾರಿಯೇ ಸೈಟ್ ರಿಲಿಯಬಿಲಿಟಿ ಇಂಜಿನಿಯರಿಂಗ್”.

ಸೈಟ್ ರಿಲೈಯಬಿಲಿಟಿ ಇಂಜಿನಿಯರ್ ವೃತ್ತಿ ಜವಾಬ್ದಾರಿಗಳು ಸಾಮಾನ್ಯವಾಗಿ ಡೇವ್- ಆಪ್ಸ್ ಗಿಂತ ಹೆಚ್ಚಿನದ್ದಾಗಿದೆ. ಸೈಟ್ ರಿಲೈಯಬಿಲಿಟಿ ಇಂಜಿನಿಯರ್ ಆನ್-ಕಾಲ್ ಮಾನಿಟರಿಂಗ್, ಕಾರ್ಯಕ್ಷಮತೆ, ಸಂಸ್ಥೆಯ ಸಾಮರ್ಥ್ಯ ಯೋಜನೆ ಮತ್ತು ವಿಪತ್ತು ಪ್ರಕ್ರಿಯೆಯಂತಹ ಕಾರ್ಯಾಚರಣೆಯ ಅಂಶಗಳಿಗೆ ಸ್ವಯಂಚಾಲಿತ ಪರಿಹಾರಗಳನ್ನು ಅಭಿವೃಸ್ಷಿಪಡಿಸುವ ಗುರಿಯನ್ನು ಹೊಂದಿರುತ್ತಾರೆ. ಇಂತಹ ಕಾರ್ಯಗಳು ಡೆವೊಪ್ಸ್ ನ ಪ್ರಮುಖ ಜವಾಬ್ದಾರಿಗಳಾದ ನಿರಂತರ ವಿತರಣೆ ಮತ್ತು ಮೂಲಸೌಕರ್ಯ ಯಾಂತ್ರೀಕೃತಗೊಳಿಸುವ ಕಾರ್ಯಗಳಿಗೆ ಪೂರಕವಾಗಿ ಸೈಟ್ ರಿಲೈಯಬಿಲಿಟಿ ಇಂಜಿನಿಯರ್ ಕಾರ್ಯನಿರ್ವಹಿಸುತ್ತಾರೆ.

ಸುಲಭವಾದ ವ್ಯಾಕರಣದಲ್ಲಿ ಹೇಳುವುದಾದರೆ ಸೈಟ್ ರಿಲೈಯಬಿಲಿಟಿ ಇಂಜಿನಿಯರ್ ಗಳು ಸಿಸ್ಟಮ್ ಎಂಜಿನಿಯರಿಂಗ್ ವಿಷಯಗಳಿಗೆ ಸಾಫ್ಟ್‌ವೇರ್ ಎಂಜಿನಿಯರಿಂಗ್ ಮನಸ್ಥಿತಿಯನ್ನು ಅನ್ವಯಿಸುವ ಮೂಲಕ ಅಭಿವೃದ್ಧಿ ಮತ್ತು ಕಾರ್ಯಾಚರಣೆಗಳ ನಡುವೆ ಸೇತುವೆಯನ್ನು ರಚಿಸುತ್ತಾರೆ.

 • ಕಸ್ಟಮರ್ ಸಕ್ಸಸ್ ಸ್ಪೆಷಲಿಸ್ಟ್

ಕಸ್ಟಮರ್ ಸರ್ವಿಸ್ ವೃತ್ತಿಯೊಂದಿಗೆ ಸುಲಭವಾಗಿ ಗೊಂದಲಕ್ಕೊಳಗಾಗುವ ಕಸ್ಟಮರ್ ಸಕ್ಸಸ್ ಸ್ಪೆಷಲಿಸ್ಟ್ ವಿಭಿನ್ನ ವೃತ್ತಿಯೇ ಆಗಿದೆ. 

2020ರ ಭಾರತದ ಅತ್ಯುತ್ತಮ ಉದ್ಯೋಗಗಳಲ್ಲಿ ಒಂದಾಗಿರುವ ಕಸ್ಟಮರ್ ಸಕ್ಸಸ್ ಸ್ಪೆಷಲಿಸ್ಟ್ ವೃತ್ತಿ ತಮ್ಮ ಕಂಪನಿಯ ವ್ಯವಹಾರದಲ್ಲಿ ಮತ್ತು ತಮ್ಮ ಗ್ರಾಹಕರೊಂದಿಗೆ ಪೂರ್ವಭಾವಿಯಾಗಿ ಕೆಲಸ ಮಾಡಿ, ತಮ್ಮ ಸಂಸ್ಥೆಯೊಂದಿಗೆ ಕೆಲಸ ಮಾಡುವ  ಎಲ್ಲರಿಗೂ ಸಮಗ್ರ ಪರಿಹಾರವನ್ನು ಒದಗಿಸುವಲ್ಲಿ ಸಹಾಯ ಮಾಡುತ್ತಾರೆ. ಅದರೊಂದಿಗೆ, ಅವರು ತಮ್ಮ ಗ್ರಾಹಕರಿಂದ ಹೆಚ್ಚಿನ ವ್ಯವಹಾರವನ್ನು ಗಳಿಸುವುದಷ್ಟೇ ಅಲ್ಲದೇ ಅವರಲ್ಲಿ ಹೆಚ್ಚಿನ ಸಮಯವನ್ನು ಹೂಡಿ ಗ್ರಾಹಕರ ತೃಪ್ತಿಗೆ ಮತ್ತು ಅವರ ವ್ಯವಹಾರದಲ್ಲಿ ಯಶಸ್ಸಿಗೆ ಕಾರಣರಾಗುತ್ತಾರೆ.

 • ಫುಲ್ ಸ್ಟ್ಯಾಕ್ ಇಂಜಿನಿಯರ್

ಫುಲ್ ಸ್ಟ್ಯಾಕ್ ಇಂಜಿನಿಯರ್ ಎಂದರೆ ಕೋಡಿಂಗ್ ನ ಫ್ರಂಟ್ ಎಂಡ್ ಮತ್ತು ಬ್ಯಾಕ್ ಎಂಡ್ ನಲ್ಲಿ ಪರಿಣತಿ ಹೊಂದಿರುವವರು. ವೆಬ್‌ಸೈಟ್‌ಗಳಲ್ಲಿ ಬಳಕೆದಾರರ ಸಂವಹನಗಳನ್ನು ವಿನ್ಯಾಸಗೊಳಿಸುವುದು, ವೆಬ್‌ಸೈಟ್ ಕಾರ್ಯಕ್ಕಾಗಿ ಸರ್ವರ್‌ಗಳು ಮತ್ತು ಡೇಟಾಬೇಸ್‌ಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಮೊಬೈಲ್ ಪ್ಲಾಟ್‌ಫಾರ್ಮ್‌ಗಳಿಗೆ ಕೋಡಿಂಗ್ ಮಾಡುವುದು ಈ ವೃತ್ತಿಯ ಪ್ರಾಥಮಿಕ ಜವಾಬ್ದಾರಿಗಳಾಗಿವೆ.

ಈ ವೃತ್ತಿಯ ಇತರ ಜವಾಬ್ದಾರಿಗಳೆಂದರೆ: ಯಾವುದೇ ಬಗೆಯ  ವೆಬ್ ಸೈಟ್ ನ ಫ್ರಂಟ್ ಎಂಡ್ ವಿನ್ಯಾಸ ರಚಿಸುವುದು. ವೆಬ್ ಪುಟಗಳಲ್ಲಿ ಬಳಕೆದಾರರಿಗೆ ಸಂವಹನ ಬಗೆಯನ್ನು ವಿನ್ಯಾಸಗೊಳಿಸುವುದು. ಬ್ಯಾಕ್ ಎಂಡ್ ವೆಬ್ ಸೈಟ್ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿ ಪಡಿಸುವುದು. ಕ್ರಿಯಾತ್ಮಕತೆಗಾಗಿ ಸರ್ವರ್ ಗಳು ಮತ್ತು ಡೇಟಾ ಬೇಸ್ ಗಳನ್ನು ರಚಿಸುವುದು. ಮೊಬೈಲ್ ಫೋನ್ ಗಳಿಗಾಗಿ ಕ್ರಾಸ್ ಪ್ಲಾಟ್ ಫಾರ್ಮ್ ಉತ್ತಮಗೊಳಿಸಲು ಪ್ರಯತ್ನಿಸುವುದು ಮತ್ತು ಅದನ್ನು ಯಶಸ್ವಿಗೊಳಿಸುವುದು. ಅಪ್ಲಿಕೇಶನ್ ಗಳ ಸ್ಪಂದಿಸುವಿಕೆಯನ್ನು ಪರೀಕ್ಷಿಸಿ, ಅಗತ್ಯವಿದ್ದಲ್ಲಿ ಅದನ್ನು ಸುಧಾರಿಸಲು ಅಗತ್ಯವಿರುವ ಕ್ರಮಗಳನ್ನು ಅಳವಡಿಸುವುದು. ವೆಬ್ ವಿನ್ಯಾಸ ವೈಶಿಷ್ಟ್ಯಗಳಿಗಾಗಿ ಗ್ರಾಫಿಕ್ ವಿನ್ಯಾಸಕರೊಂದಿಗೆ ಚರ್ಚಿಸಿ, ಅಗತ್ಯ ರೀತಿಯಲ್ಲಿ ಕೆಲಸ ಮಾಡುವುದು. ಒಂದು ಉತ್ಪನ್ನವನ್ನು ಅದನ್ನು ಸಿದ್ಧ ಪಡಿಸುವ  ಮೊದಲ ಹಂತದಿಂದ ಮಾರುಕಟ್ಟೆಗೆ ಹೋಗಲು ತಯಾರಾಗಿರುವ ಕೊನೆಯ ಹಂತದವರೆಗೆ ಸೂಕ್ತ ಯೋಜನೆಯ ಮೂಲಕ ಪರಿಕಲ್ಪಿಸುವುದು. API ಗಳನ್ನೂ ವಿನ್ಯಾಸಗೊಳಿಸುವುದು ಮತ್ತು ಅವುಗಳನ್ನು ಅಭಿವೃದ್ಧಿ ಪಡಿಸುವುದು ಸಹ ಫುಲ್ ಸ್ಟ್ಯಾಕ್ ಇಂಜಿನಿಯರ್ ಗಳ ವೃತ್ತಿ ಜವಾಬ್ದಾರಿಗಳಲ್ಲಿ ಒಂದು.

ಈ ವೃತ್ತಿ ಭಾರತದ ಅತ್ಯುತ್ತಮ ಉದ್ಯೋಗಗಳಲ್ಲಿ ಒಂದಾಗಲು ಕಾರಣ – ಈ ವೃತ್ತಿ ಕೇವಲ ತಾಂತ್ರಿಕತೆಗೆ ಸಂಬಂಧಪಟ್ಟದ್ದಲ್ಲ. ಈ ವೃತ್ತಿಯಲ್ಲಿ ಇರುವವರು ತಾಂತ್ರಿಕ ಮತ್ತು ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಶ್ರಮಿಸಬೇಕು. ಇದರಿಂದಾಗಿ ಈ ವೃತ್ತಿಯಲ್ಲಿರುವವರಿಗೆ ಹೆಚ್ಚಿನ ಬೇಡಿಕೆ ಇದೆ. ಈ ವೃತ್ತಿಯಲ್ಲಿ ಜಯ ಗಳಿಸಬೇಕು ಎಂದು ಬಯಸುವವರು ವೆಬ್ ಅಪ್ಲಿಕೇಶನ್ ಗಳು ಮತ್ತು ಪ್ರೋಗ್ರಾಮಿಂಗ್ ಭಾಷೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಸಹ ಅರಿವಿರಬೇಕು.

 • ರೊಬೊಟಿಕ್ಸ್ ಇಂಜಿನಿಯರ್ (ಸಾಫ್ಟ್  ವೇರ್)

ರೊಬೊಟಿಕ್ಸ್ ಇಂಜಿನಿಯರ್ ರೋಬೋಟ್ ಗಳ ವಿನ್ಯಾಸಕನಾಗಿದ್ದು, ರೋಬೋಟ್ ಗಳು ಮತ್ತು ರೋಬೋಟ್ ಗಳಿಗೆ ಸಂಬಂಧ ಪಟ್ಟ ವ್ಯವಸ್ಥೆಗಳನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಈ ರೋಬೋಟ್ ಗಳು  ಅಥವಾ ರೋಬೋಟಿಕ್ ವ್ಯವಸ್ಥೆಗಳು ಮನುಷ್ಯರಿಗೆ ಅಸಾಧ್ಯವಾದ ಅಥವಾ ಮನುಷ್ಯರು ಮಾಡಲು ಬಯಸದ ಕಾರ್ಯಗಳನ್ನು ಮಾಡಲು ಪರಿಣತಿ ಹೊಂದುವಂತೆ ಮಾಡುವುದೇ ರೊಬೊಟಿಕ್ಸ್ ಇಂಜಿನಿಯರ್ ಕೆಲಸ. ತಮ್ಮ ರೊಬೋಟಿಕ್ ಸೃಷ್ಟಿಗಳ ಮೂಲಕ ರೊಬೊಟಿಕ್ಸ್ ಇಂಜಿನಿಯರ್ ಉದ್ಯೋಗ ಕ್ಷೇತ್ರದಲ್ಲಿ ಸುರಕ್ಷತೆ, ಸುಲಭತೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಹಾಯ ಮಾಡುತ್ತಾರೆ. ಹೆಚ್ಚಾಗಿ ರೊಬೊಟಿಕ್ಸ್ ಇಂಜಿನಿಯರ್ ಗಳ ಉಪಯೋಗ ಉತ್ಪಾದನಾ ಉದ್ಯಮದಲ್ಲಿದೆ.

ಉನ್ನತ ವೇತನವುಳ್ಳ ರೊಬೊಟಿಕ್ಸ್ ಇಂಜಿನಿಯರ್ ಗಳ ವೃತ್ತಿ ಜವಾಬ್ದಾರಿಗಳು ಹೀಗಿವೆ: ರೋಬೋಟ್ ನ ನಿಯಂತ್ರಣ ಮತ್ತು ಯಾಂತ್ರಿಕೃತಗೊಳಿಸಲು ರೊಬೊಟಿಕ್ಸ್ ಸಾಫ್ಟ್ ವೆರ್ ರಚಿಸುವುದು. ಈ ವೃತ್ತಿ ಕರ್ತವ್ಯವನ್ನು ಸಾಧಿಸಲು ಸ್ವಯಂಚಾಲಿತ ಸಾಧನಗಳನ್ನು ನಿಯಂತ್ರಿಸುವ ಎಂಬೆಡೆಡ್ ಸಿಸ್ಟಮ್ ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಸಹ ಪ್ರಾವೀಣ್ಯತೆ ಹೊಂದುವುದು ರೋಬೋಟಿವ್ಸ್ ಇಂಜಿನಿಯರ್ ಗೆ ಅನಿವಾರ್ಯ ಅಗತ್ಯವಾಗಿದೆ. ಹೊಸ ಸಾಫ್ಟ್ ವೆರ್ ಅನ್ನು ನಿರ್ಮಿಸುವುದು ಅಥವಾ ಪ್ರಸ್ತುತ ಸಾಫ್ಟ್ ವೆರ್ ಅನ್ನು ಪರೀಕ್ಷಿಸುವುದು, ಸುಧಾರಿಸುವುದು ಅಥವಾ ಅದರಲ್ಲಿ ಏನಾದರೂ ತೊಂದರೆಗಳಿದ್ದರೆ, ಅದನ್ನು ಗುರುತಿಸಿ, ಅರ್ಥೈಸಿಕೊಂಡು, ಅದನ್ನು ಸರಿ ಪಡಿಸುವುದು ರೊಬೊಟಿಕ್ಸ್ ಇಂಜಿನಿಯರ್ ವೃತ್ತಿಪರರ ಜವಾಬ್ದಾರಿಗಳಲ್ಲಿ ಒಂದಾಗಿರುತ್ತದೆ. ಹೆಚ್ಚಿನ ರೊಬೊಟಿಕ್ಸ್ ಸಾಫ್ಟ್ ವೆರ್ ಇಂಜಿನಿಯರ್ ಗಳು ಉತ್ಪಾದನಾ ಉದ್ಯಮಕ್ಕೆ ಅಗತ್ಯವಿರುವ ರೋಬೋಟ್ ತಯಾರಿಸುವಲ್ಲಿ ಅಥವಾ ಅವುಗಳನ್ನು ಸುಧಾರಿಸುವತ್ತ ಕೆಲಸ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಉತ್ಪನ್ನ ಉತ್ಪಾದನೆಯಲ್ಲಿ ರೋಬೋಟ್ ಗಳ ಅಗತ್ಯತೆ ಹೆಚ್ಚಿರುವುದರಿಂದ, ರೊಬೊಟಿಕ್ಸ್ ಸಾಫ್ಟ್ ವೆರ್ ಇಂಜಿನಿಯರ್ ಗಳು ಈ ಕ್ಷೇತ್ರದ ಕಡೆ ಗಮನ ಹರಿಸುವುದು ಸಾಮಾನ್ಯ.

ರೊಬೊಟಿಕ್ಸ್ ಇಂಜಿನಿಯರ್ ಗಳು ರೊಬೊಟಿಕ್ಸ್ ಅನ್ನು ಬಳಸುವ ಇತರ ಕ್ಷೇತ್ರದಲ್ಲಿ ಸಹ ಕೆಳಸ ಮಾಡಬಹುದು. ಉದಾಹರಣೆಗೆ: ತಾಂತ್ರಿಕೇತರು ತಮ್ಮ ಉಪಕರಣಗಳನ್ನು ಜೋಡಿಸಲು ಬಳಸುವ ಯೂಸರ್ ಇಂಟರ್ಫೇಸ್ ತಯಾರಿಸುವುದು.

 • ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್

ಸಾಫ್ಟ್‌ವೇರ್ ವ್ಯವಸ್ಥೆಗಳು, ನೆಟ್‌ವರ್ಕ್‌ಗಳು ಮತ್ತು ದತ್ತಾಂಶ ಕೇಂದ್ರಗಳ ಅಭಿವೃದ್ಧಿ ಹಂತಗಳಲ್ಲಿ ಸುರಕ್ಷತೆಯನ್ನು ಒದಗಿಸುವ ಜವಾಬ್ದಾರಿಯನ್ನು ಸೈಬರ್ ಭದ್ರತಾ ತಜ್ಞರು (ಅಥವಾ  ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್) ಹೊಂದಿರುತ್ತಾರೆ. ಈ ವೃತ್ತಿಪರರ ಮೂಲ ಕರ್ತವ್ಯವೆಂದರೆ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ನಲ್ಲಿನ ದೋಷಗಳು ಮತ್ತು ಅಪಾಯಗಳನ್ನು ಶೋಧಿಸಬೇಕು. ಮತ್ತು  ಅದನ್ನು ಪರಿಶೀಲಿಸಿ, ಅಗತ್ಯ ರೀತಿಯಲ್ಲಿ ಸರಿಪಡಿಸಬೇಕು. ಅವರು ತಮ್ಮ ಸಾಫ್ಟ್ ವೆರ್ ಗಳಲ್ಲಿ ಯಾವುದೇ ಬಗೆಯ ದಾಳಿ ಮತ್ತು ಒಳನುಗ್ಗುವಿಕೆ ಗಳನ್ನು ನಿರ್ವಹಿಸಿ, ಮೇಲ್ವಿಚಾರಣೆ ಕೈಗೊಂಡು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.  ಭದ್ರತಾ ತಜ್ಞರು ಅಥವಾ ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್ ಸುರಕ್ಷತೆಯ ದುರ್ಬಲತೆಯನ್ನು ಮುಚ್ಚುವ ಮೂಲಕ ಸಂಭವನೀಯ ಬೆದರಿಕೆ ಅಥವಾ ಉಲ್ಲಂಘನೆಯ ಪ್ರಯತ್ನವನ್ನು ಗುರುತಿಸಲು ಸಹಾಯ ಮಾಡುತ್ತಾರೆ. ಅವರು ಫೈರ್‌ವಾಲ್‌ ಗಳನ್ನು ನೆಟ್‌ವರ್ಕ್ ಮೂಲಸೌಕರ್ಯಗಳಾಗಿ ನಿರ್ಮಿಸುತ್ತಾರೆ.

ಭದ್ರತಾ ತಜ್ಞರು ಅಥವಾ ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್ ಅವರ  ಇತರ ವೃತ್ತಿ ಕರ್ತವ್ಯಗಳ ಪಟ್ಟಿ ಇಲ್ಲಿದೆ: ಸಂಭಾವ್ಯ ಮತ್ತು ನಿಜವಾದ ಭದ್ರತಾ ಸಮಸ್ಯೆಗಳನ್ನು ಗುರುತಿಸುವ ಮತ್ತು ಪರಿಹರಿಸುವ ಮೂಲಕ ಮಾಹಿತಿ ವ್ಯವಸ್ಥೆಯ ಸ್ವತ್ತುಗಳನ್ನು ರಕ್ಷಿಸುತ್ತಾರೆ. ಈ ವೃತ್ತಿಪರರು ಪ್ರವೇಶ ಸವಲತ್ತುಗಳು, ನಿಯಂತ್ರಣ ರಚನೆಗಳು ಮತ್ತು ಸಂಪನ್ಮೂಲಗಳನ್ನು ವ್ಯಾಖ್ಯಾನಿಸುವ ಮೂಲಕ ಸಂಪೂರ್ಣ ವ್ಯವಸ್ಥೆಯನ್ನು ರಕ್ಷಿಸುತ್ತಾರೆ. ಅಸಹಜತೆಗಳನ್ನು ಗುರುತಿಸುವ ಮೂಲಕ ಸಮಸ್ಯೆಗಳನ್ನು ಗುರುತಿಸುವುದು; ಉಲ್ಲಂಘನೆಗಳನ್ನು ವರದಿ ಮಾಡುವುದು ಸಹ ಈ ವೃತ್ತಿ ಕಾರ್ಯ ಜವಾಬ್ದಾರಿಯಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ನಿರ್ಣಯಿಸುವ ಮೂಲಕ ಭದ್ರತಾ ಸುಧಾರಣೆಗಳನ್ನು ಕಾರ್ಯಗತಗೊಳಿಸುತ್ತದೆ; ಪ್ರವೃತ್ತಿಗಳನ್ನು ಮೌಲ್ಯಮಾಪನ ಮಾಡುವುದು; ಅವಶ್ಯಕತೆಗಳನ್ನು ನಿರೀಕ್ಷಿಸುವುದು ಈ ವೃತ್ತಿಯವರ ಜವಾಬ್ದಾರಿ. 

ಆವರ್ತಕ ಲೆಕ್ಕಪರಿಶೋಧನೆಯನ್ನು ನಡೆಸುವ ಮೂಲಕ ಭದ್ರತಾ ಉಲ್ಲಂಘನೆ ಮತ್ತು ಅಸಮರ್ಥತೆಯನ್ನು ನಿರ್ಧರಿಸುವುದು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅಥವಾ ಕೈಗೊಳ್ಳಲು ಸೂಚಿಸುವುದು ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್ ನ ಜವಾಬ್ದಾರಿ. ಭದ್ರತಾ ನಿಯಂತ್ರಣಗಳನ್ನು ಕಾರ್ಯಗತಗೊಳಿಸುವ ಮೂಲಕ ಮತ್ತು ನಿರ್ವಹಿಸುವ ಮೂಲಕ ವ್ಯವಸ್ಥೆಯನ್ನು ನವೀಕರಿಸುತ್ತಾರೆ ಈ ವೃತ್ತಿಪರರು. ಅದರೊಂದಿಗೆ, ತಮ್ಮ ಕಾರ್ಯಕ್ಷಮತೆ ವರದಿಗಳನ್ನು ಸಿದ್ಧಪಡಿಸಿ, ಅದನ್ನು ಬಳಕೆದಾರರಿಗೆ ಮಾಹಿತಿ ನೀಡುವುದು; ಸಿಸ್ಟಮ್ ಸ್ಥಿತಿಯನ್ನು ಸಂವಹನ ಮಾಡುವುದು ಸಹ ಇವರ ಕರ್ತವ್ಯ. ಇವೆಲ್ಲವುಗಳನ್ನು ಸಂಸ್ಥೆಯ ಮಾನದಂಡಗಳನ್ನು ಗಮನದಲ್ಲಿ ಇಟ್ಟುಕೊಂಡು, ಗುಣಮಟ್ಟದ ಸೇವೆಯನ್ನು ಈ ವೃತ್ತಿಪರರು ನೀಡುತ್ತಾರೆ. 

 • ಪೈಥಾನ್ ಡೆವೆಲಪರ್

ಪೈಥಾನ್‌ನ ಬಹುಮುಖತೆ, ಶಕ್ತಿಯುತ ಗ್ರಂಥಾಲಯಗಳು, ಉಪಯುಕ್ತತೆ ಮತ್ತು ಉತ್ಪಾದಕತೆ ಐಟಿ ಜಗತ್ತನ್ನು ಬದಲಿಸಿದೆ. ಅದೇ ಕಾರಣಗಳಿಗಾಗಿ, ಪೈಥಾನ್ ಡೆವಲಪರ್‌ಗಳಿಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.

ಸ್ಟ್ಯಾಟಿಸ್ಟಾದ ಸಂಶೋಧನೆಯ ಪ್ರಕಾರ, 2019 ರಲ್ಲಿ, ವಿಶ್ವಾದ್ಯಂತ ಸುಮಾರು 42% ಡೆವಲಪರ್‌ಗಳು ಪೈಥಾನ್ ಬಳಸುತ್ತಿದ್ದಾರೆ. ಮತ್ತು ಇತ್ತೀಚಿನ ವರದಿಯ ಪ್ರಕಾರ ಪೈಥಾನ್ ಸ್ಟಾಕ್ ಓವರ್‌ಫ್ಲೋ ದಟ್ಟಣೆಯನ್ನು ಆಧರಿಸಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಪ್ರೋಗ್ರಾಮಿಂಗ್ ಭಾಷೆಯಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ವೃತ್ತಿ ಭಾರತದ ಅತ್ಯುತ್ತಮ ಉದ್ಯೋಗಗಳಲ್ಲಿ ಒಂದಾಗಿದೆ. ಅದರೊಂದಿಗೆ ಇದು ಉನ್ನತ ವೇತನದ ಉದ್ಯೋಗವೂ  ಆಗಿದೆ. 

ಪೈಥಾನ್ ಎನ್ನುವುದು ವೆಬ್ ಮತ್ತು ಅಪ್ಲಿಕೇಶನ್ ಅಭಿವೃದ್ಧಿಗಾಗಿ ಡೈನಾಮಿಕ್ ಸೆಮ್ಯಾಂಟಿಕ್ಸ್ ಹೊಂದಿರುವ ವಸ್ತು-ಆಧಾರಿತ, ಬಹುಮುಖ, ಉನ್ನತ ಮಟ್ಟದ ಪ್ರೋಗ್ರಾಮಿಂಗ್ ಭಾಷೆಯಾಗಿದೆ. ಇದರ ವಿಶಿಷ್ಟ ಸಿಂಟ್ಯಾಕ್ಸ್ ಮತ್ತು ಮಾಡ್ಯುಲರ್ ಶೈಲಿಯ ವಿನ್ಯಾಸವು ಕಲಿಕೆಯನ್ನು ಒತ್ತಡರಹಿತವಾಗಿಸುತ್ತದೆ. ನೀವು ಡೆವೆಲಪರ್ ಆಗಿದ್ದರೇ, ನೀವು ಇತರ ಭಾಷೆಗಳಿಗಿಂತ ಪೈಥಾನ್ ಕೋಡ್ ಅನ್ನು ಸುಲಭವಾಗಿ ಓದಬಹುದು ಮತ್ತು ಅನುವಾದಿಸಬಹುದು. ಪೈಥಾನ್ ಭಾಷೆಯ ಹೆಚ್ಚಿನ ಉಪಯೋಗವೆಂದರೆ ಇದರ ಕೋಡ್ ಗಳನ್ನು ಬೇರೆ ಯೋಜನಗಳಲ್ಲಿ ಸಹ ಮರುಬಳಕೆ ಅಥವಾ ವಿಸ್ತಾರ ಮಾಡಬಹುದು. 

ಪೈಥಾನ್ ಡೆವೆಲಪರ್ ಗಳ ಪ್ರಮುಖ ವೃತ್ತಿ ಜವಾಬ್ದಾರಿಗಳ ಪಟ್ಟಿ ಇಲ್ಲಿದೆ: ಪರಿಣಾಮಕಾರಿ, ಸ್ಕೇಲೆಬಲ್ ಕೋಡ್ ಬರೆಯುವುದು ಪೈಥಾನ್ ಡೆವೆಲಪರ್ ಗಳ ಮುಖ್ಯ ಕಾರ್ಯ ಜವಾಬ್ದಾರಿ. ಸ್ಪಂದಿಸುವಿಕೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸಲು ಬ್ಯಾಕ್-ಎಂಡ್ ಘಟಕಗಳನ್ನು ಅಭಿವೃದ್ಧಿಪಡಿಸುವುದು ಸಹ  ಇವರು ನಿಭಾಯಿಸಬೇಕು. ಅದರೊಂದಿಗೆ, ಇಂಟರ್ಫೇಸ್ ಅಂಶಗಳನ್ನು ಅಪ್ಲಿಕೇಶನ್‌ಗಳಲ್ಲಿ ಸಂಯೋಜಿಸುವುದು ಪೈಥಾನ್ ಡೆವೆಲಪರ್ ಗಳ ಕೆಲಸಗಳು.

 • ಡಿಜಿಟಲ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್

ಡಿಜಿಟಲ್ ಮಾರ್ಕೆಟಿಂಗ್ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣುತ್ತಿರುವ ವೃತ್ತಿಗಳಲ್ಲಿ ಒಂದು. ಇದಕ್ಕೆ ಅಗತ್ಯವಿರುವ ವೃತ್ತಿ ಕೌಶಲ್ಯ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯಗಳು ಮತ್ತು ಅದಕ್ಕೆ ಪೂರಕವಾಗಿರುವ  ಕಾರ್ಯತಂತ್ರಗಳು. ಸೃಜನಾತ್ಮಕವಾಗಿ ಕಂಪನಿಯ ವೆಬ್ ಸೈಟ್ ಗಳು, ಪಾಡ್ ಕ್ಯಾಸ್ಟ್ ಗಳು, ಬ್ಲಾಗ್ ಗಳು, ಸಾಮಾಜಿಕ ಜಾಲತಾಣಗಳ ಪೇಜ್ ಗಳು ಮತ್ತು ಇತರ ಆನ್ಲೈನ್ ಮಾರ್ಕೆಟಿಂಗ್ ಪರಿಕರಗಳನ್ನು ನಿರ್ವಹಿಸುವುದೇ ಡಿಜಿಟಲ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್ ನ ಜವಾಬ್ದಾರಿ. ಡಿಜಿಟಲ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್ ಸಂಸ್ಥೆಯ ಅಥವಾ ಕಂಪನಿಯ ವಿವಿಧ ತಂಡಗಳೊಂದಿಗೆ ಚರ್ಚಿಸಿ, ಮಾರ್ಕೆಟಿಂಗ್, ಜಾಹೀರಾತು ಮತ್ತು ಪ್ರಚಾರಗಳಂತಹ ಚಟುವಟಿಕೆಗಳನ್ನು ಸಂಘಟಿಸಬೇಕು. ಅದರೊಂದಿಗೆ ತಮ್ಮ ಕಂಪನಿಯನ್ನು ಉತ್ತೇಜಿಸಲು ಮತ್ತು  ಗ್ರಾಹಕರನ್ನು ಆಕರ್ಷಿಸಲು ಸಹಾಯ ಮಾಡಬೇಕು. 

ಡಿಜಿಟಲ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್ ನ ಕಾರ್ಯ ಜವಾಬ್ದಾರಿಗಳು ಹೀಗಿರುತ್ತವೆ: ಸಂಸ್ಥೆಯ ಮಾರ್ಕೆಟಿಂಗ್ ಗುರಿಗಳೊಂದಿಗೆ ಹೊಂದಿಕೆಯಾಗುವಂತೆ ಡಿಜಿಟಲ್ ಮಾಧ್ಯಮ ಪ್ರಚಾರಗಳನ್ನು ವಿನ್ಯಾಸಗೊಳಿಸಿ, ಡಿಜಿಟಲ್ ವಿಷಯದ ರಚನೆಯನ್ನು ಸಂಯೋಜಿಸಬೇಕು (ಉದಾ. ವೆಬ್‌ಸೈಟ್, ಬ್ಲಾಗ್‌ಗಳು, ಪತ್ರಿಕಾ ಪ್ರಕಟಣೆಗಳು ಮತ್ತು ಪಾಡ್‌ಕಾಸ್ಟ್‌ಗಳು). ಅಂತ್ಯದಿಂದ ಕೊನೆಯವರೆಗೆ ಡಿಜಿಟಲ್ ಯೋಜನೆಗಳನ್ನು ನಿರ್ವಹಿಸಬೇಕು. ಬ್ರ್ಯಾಂಡ್ ಅರಿವು ಹೆಚ್ಚಿಸಲು ನಮ್ಮ ವೆಬ್ ಉಪಸ್ಥಿತಿಯನ್ನು ಸ್ಥಾಪಿಸುವುದು ಈ ವೃತ್ತಿಪರರ ಮುಖ್ಯ ಕರ್ತವ್ಯ. ಬ್ರಾಂಡ್ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮಾರ್ಕೆಟಿಂಗ್, ಮಾರಾಟ ಮತ್ತು ಉತ್ಪನ್ನ ಅಭಿವೃದ್ಧಿ ತಂಡಗಳೊಂದಿಗೆ ಸಂಪರ್ಕ ಸಾಧಿಸಬೇಕು. ಲಾಭದಾಯಕತೆಯನ್ನು ಹೆಚ್ಚಿಸಲು ನೇರ ಮತ್ತು ಡಿಜಿಟಲ್ ಮಾರುಕಟ್ಟೆ ವಿಧಾನಗಳನ್ನು ಸೂಚಿಸಿ ಮತ್ತು ಕಾರ್ಯಗತಗೊಳಿಸಬೇಕು. ರಿಟರ್ನ್ ಆನ್ ಇನ್ವೆಸ್ಟ್ಮೆಂಟ್ (ROI) ಮತ್ತು KPI ಗಳ ಬಗ್ಗೆ ಮೇಲ್ವಿಚಾರಣೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಡಿಜಿಟಲ್ ಮಾಧ್ಯಮದ ನವನವೀನ ಬಳವಣಿಗೆಗಳ ಬಗ್ಗೆ ಅರಿತಿರಬೇಕು. ಇವೆಲ್ಲ ಕಾರ್ಯ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಿದಲ್ಲಿ, ಈ ಕ್ಷೇತ್ರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಇದು ಉನ್ನತ ವೇತನದ ಉದ್ಯೋಗವಷ್ಟೇ ಅಲ್ಲದೇ, ನಿಮ್ಮ ವೃತ್ತಿ ಜೀವನಕ್ಕೆ ಸೂಕ್ತವಾದ ಯಶಸ್ಸನ್ನೂ ದೊರಕಿಸುತ್ತದೆ.

 • ಫ್ರಂಟ್ ಎಂಡ್ ಇಂಜಿನಿಯರ್

ಫ್ರಂಟ್-ಎಂಡ್ ಎಂಜಿನಿಯರ್ (ಅಥವಾ ಫ್ರಂಟ್-ಎಂಡ್ ವೆಬ್ ಡೆವಲಪರ್ ಅಥವಾ ಡಿಸೈನರ್ ಎಂದೂ ಕರೆಯುತ್ತಾರೆ) ವೆಬ್‌ಸೈಟ್‌ನ ಬಳಕೆದಾರರ ಇಂಟರ್ಫೇಸ್ ಅಂಶಗಳನ್ನು ಆಯ್ಕೆ ಮಾಡುತ್ತಾರೆ. ಅದರೊಂದಿಗೆ, ಅವರು ಅದರ ಸಂಬಂಧಿತ ಸ್ಥಾಪನೆ ಮತ್ತು ಪರೀಕ್ಷೆಯನ್ನೂ ನಡೆಸುತ್ತಾರೆ. ಫ್ರಂಟ್-ಎಂಡ್ ಡೆವಲಪರ್ ವೆಬ್ ಸೈಟ್ ನ ಕ್ರಿಯಾತ್ಮಕತೆಯ ಜೊತೆಗೆ ಸೈಟ್‌ನ ನೋಟ ಮತ್ತು ಭಾವನೆಯನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತಾರೆ. ಫ್ರಂಟ್-ಎಂಡ್ ಎಂಜಿನಿಯರ್‌ಗಳಿಗೆ, ವಿಶೇಷವಾಗಿ ಮೊಬೈಲ್ ಸಾಧನಗಳಲ್ಲಿ ಪ್ರವೇಶಿಸಬಹುದಾದ ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಾದ ಕೌಶಲ್ಯ ಹೊಂದಿರುವವರಿಗೆ, ಉದ್ಯೋಗದ ಬಗೆಗಿನ ನಿರೀಕ್ಷೆಗಳು ಬಲವಾಗಿರುತ್ತವೆ.

ಫ್ರಂಟ್ ಎಂಡ್ ಇಂಜಿನಿಯರ್ ಗಳ ವೃತ್ತಿ ಜವಾಬ್ದಾರಿಗಳ ಪಟ್ಟಿ ಇಲ್ಲಿದೆ: ವೆಬ್ ಪುಟಗಳ ರಚನೆ ಮತ್ತು ವಿನ್ಯಾಸವನ್ನು ನಿರ್ಧರಿಸುವುದು ಇವರ ಪ್ರಮುಖ ಜವಾಬ್ದಾರಿಗಳಲ್ಲಿ ಒಂದು. ಬಳಕೆದಾರರ ಅನುಭವದ ಅನುಸಾರ, ವೆಬ್ ಸೈಟ್ ನ ವಿನ್ಯಾಸಗಳನ್ನು ನಿರ್ಧರಿಸುವುದು ಇವರ ಕರ್ತವ್ಯ. ಬಳಕೆದಾರರ ಅನುಭವವನ್ನು ಹೆಚ್ಚಿಸಲು ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುವುದು ಸಹ ಫ್ರಂಟ್ ಎಂಡ್ ಇಂಜಿನಿಯರ್ ಮಾಡುವ ಕಾರ್ಯ ಜವಾಬ್ದಾರಿಗಳಲ್ಲಿ ಒಂದು. ಕ್ರಿಯಾತ್ಮಕ ಮತ್ತು ಸೌಂದರ್ಯದ ವಿನ್ಯಾಸದ ನಡುವೆ ಸಮತೋಲನವನ್ನು ಗುರುತಿಸಿ, ಅದಕ್ಕೆ ಅಗತ್ಯವಿರುವ ಕ್ರಮಗಳನ್ನು ಫ್ರಂಟ್ ಎಂಡ್ ಇಂಜಿನಿಯರ್ ಗಳು ತೆಗೆದುಕೊಳ್ಳುತ್ತಾರೆ. ವೆಬ್ ವಿನ್ಯಾಸವನ್ನು ಖಚಿತಪಡಿಸಿಕೊಳ್ಳುವುದು ಸ್ಮಾರ್ಟ್‌ಫೋನ್‌ಗಳಿಗೆ ಹೊಂದುವಂತೆ ಮಾಡುವುದು ಸಹ ಇವರ ಕರ್ತವ್ಯ. ಭವಿಷ್ಯದ ಬಳಕೆಗಾಗಿ ಮರುಬಳಕೆ ಮಾಡಬಹುದಾದ ಕೋಡ್ ಅನ್ನು ಈ ವೃತ್ತಿಯವರು ರಚಿಸುತ್ತಾರೆ. ಗರಿಷ್ಠ ವೇಗ ಮತ್ತು ಸ್ಕೇಲೆಬಿಲಿಟಿ ಇರುವವ  ವೆಬ್ ಪುಟಗಳನ್ನು ಫ್ರಂಟ್ ಎಂಡ್ ಇಂಜಿನಿಯರ್ ರಚಿಸುತ್ತಾರೆ. ವೆಬ್ ಪುಟಗಳನ್ನು ಬರೆಯಲು ವಿವಿಧ ಮಾರ್ಕ್ಅಪ್ ಭಾಷೆಗಳನ್ನು ಬಳಸುತ್ತಾರೆ. ವಿನ್ಯಾಸದುದ್ದಕ್ಕೂ ಬ್ರಾಂಡ್ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಈ ವೃತ್ತಿಯವರ ಉದ್ದೇಶ.

 • ಲೀಡ್ ಜನರೇಶನ್ ಸ್ಪೆಷಲಿಸ್ಟ್

ಎಂಟರ್‌ಪ್ರೈಸ್ ಖಾತೆ ವ್ಯವಸ್ಥಾಪಕರನ್ನು ಬೆಂಬಲಿಸಲು ಹೊಸ ಮಾರಾಟದ ನಿರೀಕ್ಷೆಗಳನ್ನು, ಅರ್ಹತೆ ಮತ್ತು ಉತ್ಪಾದನೆಗೆ ಸೇಲ್ಸ್ ಲೀಡ್ ಜನರೇಷನ್ ಸ್ಪೆಷಲಿಸ್ಟ್ ಜವಾಬ್ದಾರನಾಗಿರುತ್ತಾನೆ. ಒಳಬರುವ ಮಾರ್ಕೆಟಿಂಗ್ ಲೀಡ್‌ಗಳು, ಪ್ರಾಸ್ಪೆಕ್ಟ್ ಪಟ್ಟಿಗಳು, ಆವಿಷ್ಕಾರ ಮತ್ತು ವೈಯಕ್ತಿಕ ಸಂಶೋಧನೆ ಸೇರಿದಂತೆ ಅನೇಕ ಮೂಲಗಳಿಂದ ಹೊಸ ವ್ಯಾಪಾರ ಭವಿಷ್ಯವನ್ನು ಗುರುತಿಸಲು ಮತ್ತು ಅಭಿವೃದ್ಧಿಪಡಿಸಲು ಈ ವ್ಯಕ್ತಿಯು ಹೆಚ್ಚು ಪ್ರೇರಿತ, ಸ್ವಯಂ-ಸ್ಟಾರ್ಟರ್ ಆಗಿರುತ್ತಾನೆ. ನಿರ್ಧಾರ ತೆಗೆದುಕೊಳ್ಳುವವರನ್ನು ತಲುಪಲು ಡ್ರೈವ್ ಹೊಂದಿರುವ ಕ್ರಿಯಾತ್ಮಕ ವ್ಯಕ್ತಿತ್ವ ಈ  ಹುದ್ದೆಗೆ ಅತ್ಯಗತ್ಯ!